College Admissions: ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ನೀವು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ; ರಾಶಿಚಕ್ರದ ಮೂಲಕ ತಿಳ್ಕೊಳ್ಳಿ

ಪ್ರತಿಯೊಬ್ಬರ ಜೀವನವು ಏರಿಳಿತಗಳಿಂದ ತುಂಬಿರುತ್ತದೆ ಮತ್ತು ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಒತ್ತಡ ಮತ್ತು ನಿರಾಕರಣೆಯನ್ನು ವಿಶಿಷ್ಟ ರೀತಿಯಲ್ಲಿ ನಿಭಾಯಿಸುತ್ತದೆ. ಒತ್ತಡ ನಿರ್ವಹಣೆ ಮತ್ತು ಅವರ ಒತ್ತಡವನ್ನು ನಿವಾರಿಸುವ ಕೌಶಲ್ಯಗಳಿಗೆ ಬಂದಾಗ ವಿವಿಧ ರಾಶಿಚಕ್ರ ಚಿಹ್ನೆಗಳನ್ನು ಹೇಗೆ ನಿರ್ವಹಣೆ ಮಾಡುತ್ತವೆ ಎನ್ನುವುನ್ನು ಈ ಲೇಖನದಲ್ಲಿಂದು ಇಂದು ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಎಲ್ಲ ಕಡೆ ಕಾಲೇಜು (College) ಮತ್ತು ವಿಶ್ವವಿದ್ಯಾಲಯದ ಅರ್ಜಿಗಳು ನಡೆಯುತ್ತಿವೆ. ಕೆಲವು ವಿದ್ಯಾರ್ಥಿಗಳು ತಮ್ಮ ಕನಸಿನ ಕಾಲೇಜಿನಲ್ಲಿ ನಮ್ಮ ಹೆಸರು ಬರಬೇಕು ಎಂದು ಹಗಲು ರಾತ್ರಿ ನಿದ್ದೆಯಿಲ್ಲದೇ ಕಾಯುತ್ತಿರುತ್ಥಾರೆ. ಆದರೆ ಕೆಲವರು ತಮ್ಮ ಹೆಸರು ತಮ್ಮ ಇಷ್ಟದ ಕಾಲೇಜಿನಲ್ಲಿ ಬರದೇ ಇದ್ದರೆ ತುಂಬಾ ಒತ್ತಡಕ್ಕೆ ಒಳಗಾಗುತ್ತಾರೆ. ಪ್ರತಿಯೊಬ್ಬರ ಜೀವನವು (Life) ಏರಿಳಿತಗಳಿಂದ ತುಂಬಿರುತ್ತದೆ ಮತ್ತು ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಒತ್ತಡ (Stress) ಮತ್ತು ನಿರಾಕರಣೆಯನ್ನು ವಿಶಿಷ್ಟ ರೀತಿಯಲ್ಲಿ ನಿಭಾಯಿಸುತ್ತದೆ. ಒತ್ತಡ ನಿರ್ವಹಣೆ  ಮತ್ತು ಅವರ ಒತ್ತಡವನ್ನು ನಿವಾರಿಸುವ ಕೌಶಲ್ಯಗಳಿಗೆ ಬಂದಾಗ ವಿವಿಧ ರಾಶಿಚಕ್ರ ಚಿಹ್ನೆಗಳನ್ನು (Zodiac Signs) ಹೇಗೆ ನಿರ್ವಹಣೆ ಮಾಡುತ್ತವೆ ಎನ್ನುವುನ್ನು ಈ ಲೇಖನದಲ್ಲಿಂದು ಇಂದು ನೋಡೋಣ.

ಇಲ್ಲಿ 12 ರಾಶಿಚಕ್ರಗಳು ಹೇಗೆ ಒತ್ತಡವನ್ನು ನಿಭಾಯಿಸುತ್ತವೆ ಎಂಬುದನ್ನು ತಿಳಿಯೋಣ:

ಮೇಷ ರಾಶಿ
ಈ ರಾಶಿಯವರು ತಮ್ಮ ಗುರಿಯನ್ನು ತಲುಪಲು, ಅವರು ಏನೇ ಕಷ್ಟಗಳನ್ನು ಎದುರಿಸುವಾಗ ಕಠಿಣ ನಿಲುವು ತೆಗೆದುಕೊಳ್ಳುತ್ತಾರೆ. ಸಾಮಾಜಿಕ ಸಂವಹನ ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ಇವರಿಗೆ ಸಾಮಾಜಿಕ ಸಂವಹನವೇ ಬಹಳ ಇಷ್ವವಾದ ಕೆಲಸ ಆಗಿರುತ್ತದೆ. ಇವರು ತಮ್ಮ ಗುರಿ ಕಡೆ ವಿಶೇಷ ಗಮನ ಹರಿಸುತ್ತಾರೆ. ಅದರ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇವರಿಗೆ ಗುಂಪಿನಲ್ಲಿ ಗೋವಿಂದ ಎನ್ನುವರು ಇಷ್ಟವಾಗುವುದಿಲ್ಲ. ನಿಮ್ಮ ಒತ್ತಡ ನಿರ್ವಹಣೆಗೆ ನೀವು ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಿರಿ. ಆಗ ನಿಮ್ಮ ಒತ್ತಡ ಮಾಯವಾಗುತ್ತದೆ.

ವೃಷಭ ರಾಶಿ
ಈ ರಾಶಿ ಅವರು ತಮ್ಮ ಸ್ಥಿರ ಸ್ವಭಾವದಿಂದಾಗಿ, ಅವರು ತಮ್ಮ ಅಹಿತಕರ ಭಾವನೆಗಳನ್ನು ಜಯಿಸಲು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇತರ ಜನರೊಂದಿಗೆ ವ್ಯವಹರಿಸುವುದು ಅವರಿಗೆ ಒತ್ತಡ ಎನಿಸಬಹುದು. ಅವರು ಶಾಂತರೀತಿಯಿಂದ ಇರಲು ಮತ್ತು ತಮ್ಮ ಆಲೋಚನೆಗಳನ್ನು ಸಂಗ್ರಹಿಸಲು ಏಕಾಂಗಿಯಾಗಿ ಯೋಚಿಸಬೇಕು. ಅವರು ಒತ್ತಡ ನಿರ್ವಹಿಸಲು ಉತ್ತಮ ವಿಶ್ರಾಂತಿ ಪಡೆಯಲು ಪ್ರಶಾಂತ ವಾತಾವರಣದ ಅಗತ್ಯವಿದೆ. ಅವರು ಶಾಂತಿಯುತ ಪ್ರದೇಶದಲ್ಲಿ ವಾಕಿಂಗ್ ಹೋಗುವುದರಿಂದ ಒತ್ತಡ ಕಡಿಮೆ ಎನಿಸಿ ಉತ್ತಮ ಪ್ರಯೋಜನ ಪಡೆಯುತ್ತಾರೆ.

ಮಿಥುನ ರಾಶಿ
ಈ ರಾಶಿಯವರು ಹೆಚ್ಚಿನ ನರ ಶಕ್ತಿಯನ್ನು ಹೊಂದಿದ್ದಾರೆ. ಅವರ ಒತ್ತಡವನ್ನು ನಿವಾರಿಸುವ ಮೊದಲ ಹಂತವೆಂದರೆ ಹೊಸ ಅವಕಾಶಗಳು ಮತ್ತು ಮಾಹಿತಿಯನ್ನು ಹುಡುಕುವುದು. ಈ ಕೆಲಸವನ್ನು ಅವರು ಸೂಕ್ತವಾಗಿ ಮಾಡಿದರೆ ಅವರು ದೈನಂದಿನ ಜೀವನದ ಒತ್ತಡವನ್ನು ಸುಲಭವಾಗಿ ನಿವಾರಿಸಬಹುದು. ಈ ರಾಶಿ ಅವರು ಪ್ರಯಾಣ ಮಾಡುವುದರಿಂದಲೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಯಾವುದಾದರೂ ಉತ್ತಮ ಸಿನಿಮಾ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಒತ್ತಡದಲ್ಲಿದ್ದಾಗ, ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಲ್ಲದು. ಅವರು ತುಂಬಾ ಆತಂಕಗೊಂಡಾಗ, ಅವರು ತಮ್ಮ ನಿಕಟ ಗುಂಪಿನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಲ್ಲಿ ಸಾಂತ್ವನವನ್ನು ಹುಡುಕುತ್ತಾರೆ. ಅವರು ರುಚಿಕರ ಊಟವನ್ನು ತಯಾರಿಸುವ ಮೂಲಕ ಅಥವಾ ಆಪ್ತ ಸ್ನೇಹಿತರನ್ನು ಭೇಟಿ ಮಾಡುವ ಮೂಲಕ ತಮ್ಮ ಒತ್ತಡದಿಂದ ಹೊರಬರುತ್ತಾರೆ. ಇದರಿಂದ ಅವರ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: Foreign Trip: ಜಾತಕದಲ್ಲಿ ಈ ಯೋಗ ಇದ್ರೆ ಮಾತ್ರ ವಿದೇಶ ಪ್ರವಾಸ ಕನಸು ನನಸು

ಸಿಂಹ ರಾಶಿ
ಈ ರಾಶಿಯವರು ಒತ್ತಡವನ್ನು ಅನುಭವಿಸುತ್ತಿರುವಾಗ, ಅವರು ಕೇವಲ ತಮ್ಮ ಸಮಸ್ಯೆ ಬಗ್ಗೆ ಸುಮ್ಮನೆ ಯೋಚಿಸುತ್ತಾ ಕೂರುವ ಬದಲು, ಅವುಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಸೂಕ್ತವಾಗಿ ಯೋಚಿಸಬೇಕು. ನಂತರ ಹೊರಗಡೆ ಸುತ್ತಾಡಿ ಮತ್ತು ತಾಜಾ ಗಾಳಿಯನ್ನು ತೆಗೆದುಕೊಳ್ಳಬೇಕು. ಸಕಾರಾತ್ಮಕ ಅನುಭವಗಳಿಗೆ ಇದು ಅತ್ಯಂತ ಪ್ರಮುಖ ಕ್ರಿಯೆ ಆಗಿದೆ. ಯಾವುದೇ ಸವಾಲನ್ನು ನೀವು ಜಯಿಸಬೇಕೆಂದರೆ ಅದನ್ನು ಮೊದಲು ವಸ್ತುನಿಷ್ಠವಾಗಿ ನೋಡುವುದನ್ನು ರೂಢಿಸಿಕೊಳ್ಳಬೇಕು.

ಕನ್ಯಾ ರಾಶಿ
ಈ ರಾಶಿಯವರು ತಮ್ಮ ಸಮಸ್ಯೆಯಲ್ಲಿಯೇ ಹೆಚ್ಚು ಸಮಯ ಮುಳುಗಿದ್ದರೆ, ಇವರು ಸುಲಭವಾಗಿ ಹತಾಶೆಗೆ ಜಾರುವ ಸಂಭವ ಹೆಚ್ಚಿರುತ್ತದೆ. ಅವರು ಕಡಿಮೆ ಕುತೂಹಲ ಹೊಂದಿರುತ್ತಾರೆ. ಅವರಿಗೆ ವಿಶ್ರಾಂತಿ ಪಡೆಯಲು ಸಮಯವೇ ಇರುವುದಿಲ್ಲ. ಅಷ್ಟೊಂದು ಬ್ಯುಸಿ ವ್ಯಕ್ತಿ ಆಗಿರುತ್ತಾರೆ. ಇದರಿಂದ ಹೊರಗಡೆ ಬರಲು ಅವರಿಗೆ ಒಂದು ಹೊಸ ಗುರಿ ಬೇಕು, ಅದು ಅವರ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಉತ್ತಮವಾಗಿ ಬೆಳಕಿಗೆ ತರುತ್ತದೆ. ಇದನ್ನು ಸಾಧಿಸಲು ಅವರು ಉತ್ತಮವಾಗಿ ಸಮಯ ನಿರ್ವಹಣೆ ಮಾಡಲೇಬೇಕಾಗುತ್ತದೆ.

ತುಲಾ ರಾಶಿ
ಈ ರಾಶಿಯವರು ಒತ್ತಡದಲ್ಲಿದ್ದಾಗ, ಅವರ ಕೆಲಸ-ಜೀವನದ ಸಮತೋಲನವು ತೊಂದರೆಗೊಳಗಾಗುತ್ತದೆ ಮತ್ತು ಅವರು ಖಿನ್ನತೆಗೆ ಒಳಗಾಗುತ್ತಾರೆ. ಅವರಿಗೆ, ಅವರು ಇಷ್ಟಪಡುವ ವಿಷಯಗಳನ್ನು ಆನಂದಿಸುವುದನ್ನು ಹೊರತುಪಡಿಸಿ ಯಾವ ಕೆಲಸವನ್ನು ಮಾಡಿದರೂ ಸಹ ಅವರಿಗೆ ಒತ್ತಡ ಕಡಿಮೆ ಆಗುವುದಿಲ್ಲ. ಓದುವುದು ಅಥವಾ ಸಂಗೀತ ಕೇಳುವುದು ಮುಂತಾದ ಕೆಲಸಗಳನ್ನು ಮಾಡುವುದರಿಂದ ಆತಂಕವನ್ನು ನಿವಾರಿಸಬಹುದು. ಹೊಸ ಕಲಾತ್ಮಕ ಸಾಮರ್ಥ್ಯಗಳನ್ನು ಕಲಿಯುವುದು ಇನ್ನು ಉತ್ತಮ ಪರಿಣಾಮಗಳನ್ನು ಬೀರಬಹುದು. ಅವರು ತಮ್ಮನ್ನು ತಾವೇ ರೀಚಾರ್ಜ್ ಮಾಡಿಕೊಳ್ಳಲು ಕೆಲ ಸಮಯವನ್ನು ನೀಡಬೇಕು. ಆದರೆ ಜನರಿಂದ ದೂರವಿರಬಾರದು.

ಇದನ್ನೂ ಓದಿ:  Mom and Dad in Dream: ಕನಸಿನಲ್ಲಿ ತಂದೆ, ತಾಯಿ ಕಾಣಿಸಿಕೊಂಡರೆ ಶುಭವೋ, ಅಶುಭವೋ?

ವೃಶ್ಚಿಕ ರಾಶಿ
ಈ ರಾಶಿಯವರು ಒತ್ತಡದಲ್ಲಿದ್ದಾಗ ಅವರು ಜೀವನದ ಬಗ್ಗೆ ಮತ್ತು ಸಾವಿನಂತಹ ದೊಡ್ಡ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡು ಹಿಡಿಯುವಲ್ಲಿ ತಮ್ಮನ್ನು ತಾವು ಸಾಂತ್ವನಗೊಳಿಸಿಕೊಂಡು ಖಿನ್ನತೆಯಿಂದ ದೂರವಾಗಬಹುದು. ಅವರು ಕಷ್ಟದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುವುದು ಮತ್ತು ಅದರ ಮೂಲಕ ಕೆಲಸ ಮಾಡಲು ಆ ಸಮಯವನ್ನು ಮಾತ್ರ ಬಳಸುವುದು ಸಹ ಒತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ. ಅವರು ಆಧ್ಯಾತ್ಮದ ಸಾಹಿತ್ಯವನ್ನು ಓದಲು ಅಥವಾ ಹೊಸ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಬೇಕು. ಅವರು ಅಸಾಂಪ್ರದಾಯಿಕ ರೀತಿಯಲ್ಲಿ ಪರಿಹಾರಗಳನ್ನು ನ್ಯಾವಿಗೇಟ್ ಮಾಡಲು ಇಷ್ಟಪಡುತ್ತಾರೆ.

ಧನು ರಾಶಿ
ಈ ರಾಶಿಯವರು ಒತ್ತಡದಲ್ಲಿದ್ದಾಗ, ಅವರು ನಿರಾಶೆಗೊಂಡಾಗ ಯಾವುದೇ ಸಮಯದಲ್ಲಿ, ಅವರು ಸ್ವಲ್ಪ ಹೊತ್ತು ತಮ್ಮ ದೇಹವನ್ನು ದಂಡಿಸುತ್ತಾರೆ. ಇದು ಅವರಿಗೆ ಇಷ್ಟವಾದ ಕೆಲಸ. ಏಕೆಂದರೆ ಸ್ವಲ್ಪ ವ್ಯಾಯಾಮ ಮಾಡುವುದು ಮತ್ತು ಹೊಸ ಜನರೊಂದಿಗೆ ಬೆರೆಯುವುದು ಅವರಿಗೆ ಹೊಸ ವಿಷಯಗಳನ್ನು ಯೋಚಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ, ಅವರು ಸಕಾರಾತ್ಮಕ ಜನರೊಂದಿಗೆ ಸ್ನೇಹವನ್ನು ಹೊಂದಿರಬೇಕು. ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಕಳೆಯುವ ಸಮಯದಿಂದ ಅವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ.

ಮಕರ ರಾಶಿ
ಈ ರಾಶಿಯವರಿಗೆ ಚಟುವಟಿಕೆಯ ಕೊರತೆಯಿಂದ ಒತ್ತಡ ಬರುತ್ತದೆ. ಒತ್ತಡ ಒಂದು ಸಲ ಬಂದರೆ ತುಂಬಾ ದಿನಗಳ ಕಾಲ ಅವರನ್ನು ಕಾಡುತ್ತಿರುತ್ತದೆ. ಈ ರಾಶಿಯವರಿಗೆ ಜೀವನದಲ್ಲಿ ಬರುವ ಹೊಸ-ಹೊಸ ಸವಾಲುಗಳೆಂದರೆ ಬಹಳ ಇಷ್ಟ. ಈ ರಾಶಿಯಲ್ಲಿ ಜನಿಸಿದ ಯಾರಾದರೂ ಬಹಳಷ್ಟು ಶ್ರಮ ಪಡುತ್ತಾರೆ. ಅವರು ಪಕ್ಕಾ ವಾಸ್ತವಿಕವಾದಿಗಳು ಆಗಿರುತ್ತಾರೆ. ಅವರು ದಿನಚರಿ ಬರೆಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

ಕುಂಭ ರಾಶಿ
ಈ ರಾಶಿಯವರಿಗೆ ಒತ್ತಡವು ಮಾನಸಿಕವಾಗಿ ಅವರನ್ನು ಬಹಳಷ್ಟು ಕುಗ್ಗಿಸುತ್ತದೆ. ಆದರೆ ಅವರು ದೈನಂದಿನ ಜೀವನದ ಒತ್ತಡದಿಂದ ತಮ್ಮ ಗಮನವನ್ನು ಬೇರೆಡೆ ಸೆಳೆಯಲು ಇಷ್ಟಪಡುತ್ತಾರೆ. ಅವರ ರಾಶಿ ಬೌದ್ಧಿಕ ಚಿಹ್ನೆಯಾಗಿರುವುದರಿಂದ, ಏಕಾಂಗಿಯಾಗಿ ಸಮಯ ಕಳೆಯುವುದು ಮತ್ತು ಮಾನಸಿಕ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವುದು ಅವರಿಗೆ ಹೆಚ್ಚು ಪುನರುಜ್ಜೀವನಗೊಳಿಸುವ ಅನುಭವವಾಗಿದೆ ಎಂದು ಅವರು ಕಂಡುಕೊಳ್ಳುತ್ತಾರೆ. ನಿಮ್ಮ ಜೊತೆ ನೀವು ಮಾತನಾಡುವುದರಿಂದ ನೀವು ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮುತ್ತೀರಿ.

ಇದನ್ನೂ ಓದಿ: Dream Meaning: ರಾತ್ರಿ ಈ ಕನಸು ಕಂಡಿದ್ರೆ, ಯಾರಿಗೂ ಹೇಳಬೇಡಿ; ಇಲ್ಲಾಂದ್ರೆ ಹಣ ಕಳ್ಕೊತ್ತೀರಿ

ಮೀನ ರಾಶಿ
ಈ ರಾಶಿಯವರು, ತಮ್ಮ ಸೃಜನಶೀಲ ಸಾಮರ್ಥ್ಯಗಳನ್ನು ನಿರಂತರವಾಗಿ ಬಳಸುತ್ತಾರೆ. ಅವರು ಯಾವುದಕ್ಕೂ ಜಾಸ್ತಿ ಚಿಂತೆ ಮಾಡುವುದಿಲ್ಲ. ಮಾಡಿದರೆ ಅದು ಉತ್ತಮ ಚಿಂತನೆ ಆಗಿರುತ್ತದೆ. ಅವರಲ್ಲಿನ ಉದ್ವೇಗವನ್ನು ಕಡಿಮೆ ಮಾಡಲು, ಅವರು ಈ ಸಾಮರ್ಥ್ಯವನ್ನು ಉತ್ತಮವಾಗಿ ಬಳಕೆಗೆ ತರಬಹುದು. ಅವರು ಒತ್ತಡವನ್ನು ನಿವಾರಿಸಲು ಮತ್ತು ಅವರ ಸೃಜನಶೀಲತೆಯಲ್ಲಿ ಸಮಾಧಾನವನ್ನು ಕಂಡುಕೊಳ್ಳಲು ಸಮರ್ಥರಾಗಿದ್ದಾರೆ. ಧ್ಯಾನ, ಕನಸುಗಳ ದೃಶ್ಯೀಕರಣ ಮತ್ತು ಸೃಜನಶೀಲ ಕ್ರಿಯೆಯಾದ ಚಿತ್ರಕಲೆಯಂತಹ ಹಲವಾರು ಕೌಶಲ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು. ಅದರ ಜೊತೆ ಯಾವುದೇ ಕೆಲಸ ಮಾಡಿದರೂ ಅದು ನಿರಂತರವಾಗಿರಬೇಕು. ಆಗ ಮಾತ್ರ ನಿಮ್ಮ ಕೆಲಸದಲ್ಲಿ ನೀವು ಉತ್ತಮ ಯಶಸ್ಸು ಪಡೆಯಬಹುದು.

ಅಂತಿಮವಾಗಿ, ಈ ಎಲ್ಲ ರಾಶಿಗಳ ಬಗ್ಗೆ ತಿಳಿದಿರಿ ಅಲ್ವಾ, ಒತ್ತಡ ಎಲ್ಲರಿಗೂ ಇದ್ದಿದ್ದೆ. ಅದನ್ನು ಒಬ್ಬರಿಗಿಂತ ಇನ್ನೊಬ್ಬರು ಬೇರೆ ತಮ್ಮ ಕೌಶಲ್ಯಗಳಿಂದ ಗೆಲ್ಲುತ್ತಾರೆ. ಆದರೆ ಎಲ್ಲರಿಗೂ ಒತ್ತಡ ಸಾಮಾನ್ಯ ಎಂಬ ಪಾಠವನ್ನು ನೀವು ಇಲ್ಲಿ ಕಲಿಯಬೇಕು.
Published by:Ashwini Prabhu
First published: