• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Sri Rama Navami: ಈ ಹಬ್ಬವನ್ನು ಎಲ್ಲೆಲ್ಲಿ ಹೇಗೆಲ್ಲಾ ಆಚರಿಸ್ತಾರೆ ಗೊತ್ತಾ? ದಿನದ ವಿಶೇಷ ಹೀಗಿದೆ

Sri Rama Navami: ಈ ಹಬ್ಬವನ್ನು ಎಲ್ಲೆಲ್ಲಿ ಹೇಗೆಲ್ಲಾ ಆಚರಿಸ್ತಾರೆ ಗೊತ್ತಾ? ದಿನದ ವಿಶೇಷ ಹೀಗಿದೆ

ರಾಮ ನವಮಿ

ರಾಮ ನವಮಿ

ರಾಮ ನವಮಿಯ ವಿಶೇಷ ಏನು ಮತ್ತು ಯಾವ ಯಾವ ಪ್ರದೇಶಗಳಲ್ಲಿ ಹೇಗೆಲ್ಲಾ ರಾಮನಿಗೆ ಪೂಜೆ ಮಾಡ್ತಾರೆ ಎಂಬುದರ ಬಗ್ಗೆ ತಿಳಿಯೋಣ.

  • Share this:
  • published by :

ಭಾರತ (India) ಒಂದು ವೈವಿಧ್ಯಮಯವಾದ ದೇಶ. ಇಲ್ಲಿ ಹಲವು ಮತಗಳ ಜನರಿದ್ದು ಅವರವರ ಸಂಪ್ರದಾಯಗಳಿಗೆ ತಕ್ಕಂತೆ ವಿವಿಧ ಉತ್ಸವ ಆಚರಣೆಗಳನ್ನು ಮಾಡುತ್ತಿರುತ್ತಾರೆ. ಅದರಂತೆ ಬಹುಸಂಖ್ಯೆಯಲ್ಲಿರುವ ಹಿಂದುಗಳು ತಮ್ಮ ಧರ್ಮದನುಸಾರ ಹಲವು ವಿವಿಧ ಹಬ್ಬಹರಿದಿನಗಳನ್ನು (Festival) ಆಚರಿಸುತ್ತಾರೆ. ಸಾಮಾನ್ಯವಾಗಿ ಹಿಂದುಗಳಲ್ಲಿ ಸಾಕಷ್ಟು ಬಗೆಯ ಹಬ್ಬಗಳ ಉಪಸ್ಥಿತಿ ಇರುವುದನ್ನು ನೋಡಬಹುದು. ಗಣೇಶ ಚತುರ್ಥಿಯಾಗಲಿ, ದೀಪಾವಳಿಯಾಗಲಿ ಸಾಕಷ್ಟು ಥಳುಕು ಬಳುಕಿನಿಂದ ಕೂಡಿರುತ್ತದೆ. ಅದರಂತೆ ಆಂಜನೆಯ ಸ್ವಾಮಿಗೆ ಮುಡಿಪಾದ, ಶಿವನಿಗೆ ಮುಡಿಪಾದ ಹಲವು ಉತ್ಸವಗಳೂ ಇಲ್ಲಿವೆ. ಈ ನಿಟ್ಟಿನಲ್ಲಿ ಶ್ರೀ ರಾಮದೇವರಿಗೆ ಮುಡಿಪಾದ ಉತ್ಸವವಾದ (Celebration) ಶ್ರೀರಾಮನವಮಿಯೂ ತನ್ನದೆ ಆದ ವಿಶೇಷತೆ ಹೊಂದಿದೆ ಎನ್ನಬಹುದು.


ವಿಷ್ಣು ಭಗವಾನರ ಸಾಕ್ಷಾತ ಅವತಾರ ಎಂದೇ ನಂಬಲಾಗುವ ಹಾಗೂ ಮರ್ಯಾದಾ ಪುರುಷೋತ್ತಮ ಎಂಬ ಬಿರುದಾಂಕಿತದಿಂದ ಕರೆಯಲಾಗುವ ಶ್ರೀರಾಮ ದೇವರು ಹುಟ್ಟಿದ ದಿನವನ್ನೆ ರಾಮನವಮಿ ಎಂದು ಆಚರಿಸಲಾಗುತ್ತದೆ ಹಾಗೂ ಹಿಂದುಗಳ ಪಾಲಿಗೆ ಈ ದಿನ ಬಲು ಶುಭ ಹಾಗೂ ಸಮೃದ್ಧಿದಾಯಕವಾಗಿದೆ.


ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲಾಗುವ ಈ ರಾಮನವಮಿ ಈ ವರ್ಷ ಅಂದರೆ 2023 ರಲ್ಲಿ ಇಂದು ಅಂದರೆ ಮಾರ್ಚ್ 30 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಭಕ್ತರು ದಿನವಿಡಿ ಉಪವಾಸ ಮಾಡುತ್ತ ಶ್ರೀರಾಮನಾಮ ಜಪಿಸುತ್ತಿರುತ್ತಾರೆ. ಅಲ್ಲದೆ ಇಂದು ರಾಮನ ದೇವಾಲಯಗಳಿಗೆ ಭೇಟಿ ನೀಡಿ ರಾಮನನ್ನು ಪ್ರಾರ್ಥಿಸಿ ಪುನೀತರಾಗುತ್ತಾರೆ.


ನಮ್ಮ ದೇಶದಲ್ಲಿ ರಾಮನ ದೇವಾಲಯಗಳು ನೂರಾರು ನಗರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ವಿವಿಧ ನಗರಗಳಲ್ಲಿ ರಾಮನವಮಿಯನ್ನು ಆಯಾ ಪ್ರದೇಶಗಳ ಹಿಂದಿರುವ ಸಂಸ್ಕೃತಿ ಸಂಪ್ರದಾಯಗಳಂತೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ರಾಮಜನ್ಮ ಸ್ಥಳ ಎಂದು ನಂಬಲಾಗಿರುವ ಅಯೋಧ್ಯೆಯಲ್ಲಿ ಈ ದಿನವನ್ನು ಬಲು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎನ್ನಬಹುದು.


ರಾಮನವಮಿಯ ಮಹತ್ವ


ನವಮಿ ಎಂಬುದು ಹಿಂದು ಸಂಪ್ರದಾಯದಲ್ಲಿ ಸಾಕಷ್ಟು ಪವಿತ್ರತೆಯನ್ನು ಪಡೆದಿದೆ. ಕೋಟ್ಯಂತ ಹಿಂದುಗಳು ಈ ದಿನವನ್ನು ಬಲು ಶ್ರದ್ಧಾ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಶ್ರೀ ರಾಮದೇವರು ಮಾನವ ರೂಪದಲ್ಲಿದ್ದ ವಿಷ್ಣು ಭಗವಾನರ ಏಳನೇ ಅವತಾರ ಎಂದು ಹೇಳಲಾಗಿದ್ದು ರಾಮನನ್ನು ಅತಿ ಭಕ್ತಿಯಿಂದ ಪೂಜಿಸಲಾಗುತ್ತದೆ.


ಶ್ರೀರಾಮ ದೇವರು ರಾಜ ದಶರಥ ಹಾಗೂ ರಾಣಿ ಕೌಶಲ್ಯೆಯ ಹಿರಿಯ ಪುತ್ರ ಹಾಗೂ ಅಪ್ಪನ ಸಿಂಹಾಸನವನ್ನೇರಬೇಕಾಗಿದ್ದ ವಾರಸುದಾರ. ಆದರೆ, ಶ್ರೀರಾಮರು ಎಂದಿಗೂ ಅಪ್ಪನೊಂದಿಗೆ ಮಗನು ಬಾಳುವಂತೆ ಬಾಳಲಾಗಲಿಲ್ಲ. ಕಾರಣ ವನವಾಸಕ್ಕೆ ತೆರಳಬೇಕಾಯಿತು.


ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿದ ರಾಮ ದೇವರು ದಯೆ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಮನದಲ್ಲೆಲ್ಲ ಒಡಗೂಡಿಸಿಕೊಂಡಿದ್ದರು. ಹಾಗಾಗಿಯೇ ರಾಮದೇವರನ್ನು ಮರ್ಯಾದಾ ಪುರುಷೋತ್ತಮ ಎಂತಲೂ ಕರೆಯಲಾಗುತ್ತದೆ.


ರಾಮನವಮಿ ಎಲ್ಲೆಲ್ಲಿ ಹೇಗೆಲ್ಲ ಆಚರಿಸಲಾಗುತ್ತದೆ?


ಅಯೋಧ್ಯಾ: ರಾಮದೇವರ ಜನ್ಮಸ್ಥಳವಾದ ಅಯೋಧ್ಯಾದಲ್ಲಿ ರಾಮನವಮಿ ಉತ್ಸವವನ್ನು ಬಲು ಸಡಗರ ಹಾಗೂ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಮನೆ ಅಂಗಡಿಗಳೆಲ್ಲದರ ಮುಂದೆ ದೀಪಗಳನ್ನು ಬೆಳಗಲಾಗುತ್ತದೆ. ದೇವಸ್ಥಾನಗಳಲ್ಲಿ ವಿಶೇಷವಾದ ಅಲಂಕಾರ ಮಾಡಲಾಗುತ್ತದೆ. ಮಂಟಪಗಳನ್ನು ಹಾಕಲಾಗುತ್ತದೆ. ಅದ್ದೂರಿಯಾದ ಮೆರವಣಿಗೆಯನ್ನು ನಡೆಸಲಾಗುತ್ತದೆ.


ದಿನವಿಡೀ ಭಕ್ತರು ಉಪವಾಸವಿದ್ದು ರಾಮನ ಭಜನೆ ಹಾಗೂ ಕೀರ್ತನೆಗಳಲ್ಲಿ ಮುಳುಗುತ್ತಾರೆ. ಸರ್ಕಾರವು ಈ ಬಾರಿ ಅಯೋಧ್ಯೆಯಲ್ಲಿ ರಾಮಾಯಣ ಕಾನ್ ಕ್ಲೇವ್ ಹಾಗೂ ರಾಮಲೀಲಾ ಕಾರ್ಯಕ್ರಮಗಳನ್ನು ಈ ಉತ್ಸವಾರ್ಥ ಆಯೋಜಿಸಿದೆ.


ಭದ್ರಾಚಲಂ, ತೆಲಂಗಾಣ


ತೆಲಂಗಾಣ ರಾಜ್ಯದಲ್ಲಿರುವ ಭದ್ರಾಚಲಂ ತನ್ನಲ್ಲಿರುವ ಸೀತಾರಾಮಚಂದ್ರ ದೇವಸ್ಥಾನಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿಯೂ ಸಹ ರಾಮನವಮಿಯ ಸಂಭ್ರಮವು ವಿಶೇಷವಾಗಿ ಮನೆ ಮಾಡಿರುತ್ತದೆ ಹಾಗೂ ಇದನ್ನು ನೀವು ಕಣ್ತುಂಬಿಕೊಳ್ಳಬೇಕೆಂದಿದ್ದಲ್ಲಿ ಈ ದಿನ ಭದ್ರಾಚಲಂಗೆ ಭೇಟಿ ನೀಡಬೇಕು.


ಇಲ್ಲಿನ ದೇವಸ್ಥಾನವನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ. ದೀಪಗಳಿಂದ ಪೂರ್ಣ ದೇವಸ್ಥಾನವನ್ನು ಬೆಳಗಲಾಗುತ್ತದೆ. ದಿನವಿಡಿ ರಾಮದೇವರಿಗೆ ಪೂಜಾ ವಿಧಿ ವಿಧಾನಗಳು ನೆರವೇರಿಸಲ್ಪಡುತ್ತವೆ. ಭದ್ರಾಚಲಂ ಹಾಗೂ ಸುತ್ತಮುತ್ತಲಿನ ಸ್ಥಳಗಳಿಂದ ಸಾವಿರಾರು ರಾಮಭಕ್ತರು ಈ ದಿನದಂದು ಭದ್ರಾಚಲಂಗೆ ಭೇಟಿ ನೀಡುತ್ತಾರೆ.


ರಾಮೇಶ್ವರಂ, ತಮಿಳುನಾಡು


ಭಾರತದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ತಮಿಳುನಾಡಿನ ರಾಮೇಶ್ವರಂ ಸಹ ಒಂದು. ರಾಮನು ಲಂಕೆಯ ರಾವಣನೊಂದಿಗೆ ಯುದ್ಧ ಮಾಡಲು ಹೋಗುವಾಗ ವಾನರ ಸೇನೆಯು ರಾಮನಾಮದ ಶಕ್ತಿಯ ಸಾರುತ್ತ ನೀರಿನಲ್ಲಿ ಕಲ್ಲುಗಳನ್ನು ತೇಲಿಸುತ್ತ ರಾಮಸೇತು ಕಟ್ಟಿದ ಸ್ಥಳ ಇದಾಗಿದ್ದು ವರ್ಷವಿಡೀ ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.ರಾಮನಿಗೆ ಈ ಹೆಸರು ಇಟ್ಟಿರುವುದರ ಹಿಂದೆಯೂ ಇದೆ ಒಂದು ಕಥೆ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ


ಇದನ್ನೂ ಓದಿ: ಈ ರಾಶಿಯವರು ಅಪ್ಪಿ - ತಪ್ಪಿನೂ ಸಾಲ ಕೊಡ್ಬೇಡಿ, ಬೀದಿಗೆ ಬರ್ತೀರ


ಲಂಕೆಗೂ ತೆರಳುವ ಮುನ್ನ ಶ್ರೀರಾಮನು ಸ್ವತಃ ಇಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಶಿವನನ್ನು ಆರಾಧಿಸಿದ್ದ. ಆದ್ದರಿಂದಲೇ ಈ ಸ್ಥಳಕ್ಕೆ ರಾಮೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ರಾಮದೇವರು ಹಾಗೂ ಶಿವನನ್ನು ಪೂಜಿಸಲು ಈ ದಿನದಂದು ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.


ಸೀತಾಮರಿ, ಬಿಹಾರ್


ಬೀಹಾರ ರಾಜ್ಯದಲ್ಲಿರುವ ಸೀತಾಮರಿ ಭಾರತದಲ್ಲಿ ಅಯೋಧ್ಯಾ, ಭದ್ರಾಚಲಂ ಹಾಗೂ ರಾಮೇಶ್ವರಂ ನಂತರದಲ್ಲಿ ಶ್ರೀರಾಮನಿಗಾಗಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಥಳವಾಗಿದೆ. ಮೂಲದಲ್ಲಿ ರಾಮನ ಪತ್ನಿ ಹಾಗೂ ದೇವಿ ಸ್ವರೂಪವಾದ ಸೀತಾಮಾತೆಯು ಜನಿಸಿದ್ದು ಇಲ್ಲೇ ಎನ್ನಲಾಗಿದೆ. ಹಾಗಾಗಿಯೇ ಇದು ಸೀತಾಮರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಇಲ್ಲಿರುವ ಜಾನಕಿ ಮಂದಿರದಲ್ಲಿ ಸೀತಾಮಾತೆಯು ಮುಖ್ಯ ದೇವಿಯಾಗಿದ್ದು ರಾಮನವಮಿಯನ್ನು ಇಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ.




ನವಮಿ ತಿಥಿ ಪ್ರಾರಂಭ : ಮಾರ್ಚ್ 29, 2023 - ರಾತ್ರಿ 9:09
ನವಮಿ ತಿಥಿ ಅಂತ್ಯ : ಮಾರ್ಚ್ 30, 2023 - ರಾತ್ರಿ 11:32


ಶುಭಮುಹೂರ್ತ:

top videos


    ಬೆಳಗ್ಗೆ 6:14 ರಿಂದ 7:47 ಗಂಟೆವರೆ
    ಬೆಳಗ್ಗೆ 10:53 ಗಂಟೆಯಿಂದ 3:31ರವರೆಗೆ

    First published: