ಗ್ರಹಣ ಖಗೋಳ ಲೋಕದ ವಿಸ್ಮಯ. ಈ ಬಾರಿ ಎರಡು ಸೂರ್ಯಗ್ರಹಣ (Solar Eclipse) ಮತ್ತು 2 ಚಂದ್ರಗ್ರಹಣಗಳು ಘಟಿಸಲಿವೆ. ಈ ನಿಟ್ಟಿನಲ್ಲಿ ಇದೇ ಏಪ್ರಿಲ್ ತಿಂಗಳಿನಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಅಪರೂಪದ ಹೈಬ್ರಿಡ್ ಸೂರ್ಯಗ್ರಹಣವಾಗಿದೆ. ಆದರೆ ದುರಾದೃಷ್ಟವಶಾತ್ ಇದು ಎಲ್ಲಾ ಕಡೆಯೂ ನೋಡಲು ಸಿಗುವುದಿಲ್ಲ. ಮುಖ್ಯವಾಗಿ ಭಾರತದಲ್ಲಿ ಈ ಸೂರ್ಯಗ್ರಹಣ ಕಾಣುವುದಿಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು (Scentist). ಹಾಗಾದ್ರೆ ಈ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ? ಯಾವ ದೇಶಗಳಲ್ಲಿ ಕಾಣುತ್ತದೆ? ಇದಕ್ಕೆ ಸೂತಕ ಆಚರಣೆ ಅನ್ವಯವಾಗುತ್ತಾ? ಈ ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ.
ಏಪ್ರಿಲ್ 20, 2023 ವರ್ಷದ ಮೊದಲ ಸೂರ್ಯಗ್ರಹಣ
ಇದೇ ತಿಂಗಳು ವೈಶಾಖ ಮಾಸದ ಅಮಾವಾಸ್ಯೆಯೆಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಎಲ್ಲರ ಚಿತ್ತ ಖಗೋಳ ಲೋಕದತ್ತ ಹರಿದಿದೆ. ಏಪ್ರಿಲ್ 20 ನೇ ತಾರೀಕಿನ ಬೆಳಿಗ್ಗೆ ಗ್ರಹಣ ಸಂಭವಿಸಲಿದೆ.
ಎಷ್ಟು ಗಂಟೆಗೆ ಗ್ರಹಣ?
ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರ ಬೆಳಿಗ್ಗೆ 7 ಗಂಟೆ 4 ನಿಮಿಷಕ್ಕೆ ಸಂಭವಿಸಲಿದ್ದು ಮಧ್ಯಾಹ್ನ 12.29 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಜೊತೆಗೆ ಸೂತಕ ಆಚರಣೆ ಅನ್ವಯವಾಗುತ್ತದೆ ಎನ್ನುವುದು ಜ್ಯೋತಿಷಿಗಳ ಅನಿಸಿಕೆ.
ಎಲ್ಲಿ ಗೋಚರವಾಗುತ್ತೆ?
2023 ಗ್ರಹಣವು ಆಸ್ಟ್ರೇಲಿಯಾ, ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ, ಪೆಸಿಫಿಕ್ ಓಷನ್, ಅಂಟಾರ್ಟಿಕ, ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ.
ಎರಡನೇ ಸೂರ್ಯಗ್ರಹಣ ಯಾವಾಗ?
ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 14 , 2023 ರಂದು ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗಲಿದೆ. ಕಟಕ, ತುಲಾ, ಮಕರ ಮತ್ತು ಮೇಷರಾಶಿ ಚಕ್ರಗಳ ಮೇಲೆ ಈ ಗ್ರಹಣ ಪರಿಣಾಮ ಬೀರುತ್ತದೆ. ಇನ್ನೂ ಈ ಗ್ರಹಣದ ಸಮಯದಲ್ಲಿ ಸೂತಕವು ಅನ್ವಯಿಸುತ್ತದೆ.
ಸೂರ್ಯಗ್ರಹಣ ವೀಕ್ಷಣೆಗೆ ಏನೆಲ್ಲಾ ಮುನ್ನೆಚ್ಚರಿಕೆ ಬೇಕು?
ಸೂರ್ಯನ ಪ್ರಖರ ಕಿರಣಗಳನ್ನು ಸಮರ್ಪಕವಾಗಿ ಸಂರಕ್ಷಿಸದಿದ್ದಲ್ಲಿ ಕಣ್ಣುಗಳಿಗೆ ಶಾಶ್ವತವಾಗಿ ಹಾನಿಯಾಗುತ್ತದೆ. ಈ ನಿಟ್ಟಿನಲ್ಲಿ ಕಪ್ಪು ಪಾಲಿಮರ್, ಅಲ್ಯುಮಿನೈಸ್ಡ್ ಮೈಲಾರ್ ಅಥವಾ ಶೇಡ್ ಸಂಖ್ಯೆ 14 ರ ವೆಲ್ಡಿಂಗ್ ಗ್ಸಾಸ್ನಂತಹ ಸರಿಯಾದ ಫಿಲ್ಟರ್ಗಳನ್ನು ಬಳಸುವುದು ಸೂರ್ಯಗ್ರಹಣವನ್ನು ವೀಕ್ಷಿಸುವ ಸುರಕ್ಷಿತ ಮಾರ್ಗವಾಗಿದೆ. ಈ ಫಿಲ್ಟರ್ಗಳನ್ನು ಕಣ್ಣುಗಳು ಅಥವಾ ಕ್ಯಾಮಾರ ಲೆನ್ಸ್ನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಇರಿಸಬೇಕು.
ಸೂರ್ಯನ ಕಿರಣಗಳು, ಸಾಮಾನ್ಯ ಸನ್ಗ್ಲಾಸ್ ಅಥವಾ ಮನೆಯಲ್ಲಿ ತಯಾರಿಸಿದ ಫಿಲ್ಟರ್ಗಳು ಸೂರ್ಯನನ್ನು ವೀಕ್ಷಿಸಲು ಸುರಕ್ಷಿತವಲ್ಲ. ಏಕೆಂದರೆ ಅವುಗಳು ಸಾಖಷ್ಟು ರಕ್ಷಣೆ ನೀಡುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.
ಹೀಗೂ ಗ್ರಹಣ ನೋಡಬಹುದು
ಸೂರ್ಯಗ್ರಹಣವನ್ನು ವೀಕ್ಷಿಸುವ ಮತ್ತೊಂದು ವಿಧಾನವೆಂದರೆ ದೂರದರ್ಶಕವನ್ನು ಬಳಸಿಕೊಂಡು ವೈಟ್ಬೋರ್ಡ್ನಲ್ಲಿ ಸೂರ್ಯನ ಚಿತ್ರವನ್ನು ಪ್ರದರ್ಶಿಸುವುದು. ಈ ವಿಧಾನವು ದೂರದರ್ಶಕವನ್ನು ಸೂರ್ಯನ ಕಡೆಗೆ ತೋರಿಸುವುದನ್ನು ಒಳಗೊಂಡಿರುತ್ತದೆ. ಹಾಗೂ ವೈಟ್ಬೋರ್ಡ್ನಲ್ಲಿ ಸೂರ್ಯನ ಚಿತ್ರವು ಗೋಚರಿಸುವವರೆಗೆ ಗಮನವನ್ನು ಸರಿಹೊಂದಿಸುತ್ತದೆ. ಈ ತಂತ್ರ ಸೂರ್ಯನನ್ನು ನೇರವಾಗಿ ನೋಡದೆ ಗ್ರಹಣವನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.
ಚಂದ್ರಗ್ರಹಣಕ್ಕೆ ಫಿಲ್ಟರ್ ಬೇಡ
ಚಂದ್ರಗ್ರಹಣದ ಸಮಯದಲ್ಲಿ ವಿಶೇಷ ಫಿಲ್ಟರ್ಗಳ ಅಗತ್ಯವಿಲ್ಲದೆ ಬರಿಗಣ್ಣಿನಿಂದ ಅಥವಾ ಬೈನಾಕ್ಯುಲರ್ಗಳು ಇಲ್ಲವೇ ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸುವುದು ಸುರಕ್ಷಿತವಾಗಿದೆ. ಏಕೆಂದರೆ ಚಂದ್ರಗ್ರಹಣ ಸಮಯದಲ್ಲಿ ಚಂದ್ರನು ತನ್ನ ಬೆಳಕನ್ನು ಉತ್ಪಾದಿಸುವುದಿಲ್ಲ. ಬದಲಿಗೆ ಭೂಮಿಯ ವಾತಾವರಣದಿಂದ ವಕ್ರೀಭವನಗೊಂಡ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ.
ಸಂಕ್ಷಿಪ್ರವಾಗಿ ಹೇಳುವುದಾದರೇ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸೂಕ್ತವಾದ ಫಿಲ್ಟರ್ ಬಳಸುವುದು ಅಗತ್ಯ. ಈ ಸುರಕ್ಷತಾ ಕ್ರಮವನ್ನು ಅನುಸರಿಸುವ ಮೂಲಕ ನಿಮ್ಮ ಕಣ್ಣುಗಳಿಗೆ ಅಪಾಯವನ್ನುಂಟು ಮಾಡದೆ ನೀವು ಸೂರ್ಯಗ್ರಹಣದ ಚಮತ್ಕಾರವನ್ನು ಆನಂದಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ