Sleepless Night: ಈ 4 ರಾಶಿಯವರಿಗೆ ರಾತ್ರಿ ನಿದ್ದೆಗೆಡುವುದೆಂದರೆ ದೊಡ್ಡ ವಿಷಯವೇ ಅಲ್ಲವಂತೆ

ನಿದ್ದೆ ಬಿಟ್ಟು ರಾತ್ರಿ ಕಾಲ ಕಳೆಯುವ ಈ ಬುದ್ಧಿ ನಮ್ಮ ರಾಶಿ ಚಿಹ್ನೆಗಳಿಗೂ ಸಂಬಂಧಿಸಿದೆ ಎಂಬುವುದು ನಿಮಗೆ ಗೊತ್ತೇ? ಯಾವ ರಾಶಿಯವರಿಗೆ ರಾತ್ರಿ ನಿದ್ದೆ ಬಿಟ್ಟು ತಮ್ಮ ನೆಚ್ಚಿನ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಇಷ್ಟವಾಗುತ್ತದೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನೀವು ಇದೇ ರಾಶಿಗೆ ಸೇರಿದ್ದೀರಾ? ಓದಿ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಇಂಟರ್ನೆಟ್ ಕಾಲದಲ್ಲಿ, ವಿಭಿನ್ನ ಬಗೆಯ ಆಕರ್ಷಣೆಗಳ ಕಾರಣದಿಂದ ಬಹಳಷ್ಟು ಮಂದಿ ತಡ ರಾತ್ರಿಯವರೆಗೆ (Late Night) ಎಚ್ಚರವಿರುವುದು ಸಾಮಾನ್ಯವಾಗಿದೆ. ಎಷ್ಟೋ ಮಂದಿ ಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಂತಹ ಬ್ಯುಸಿ ಬದುಕನ್ನು ಹೊಂದಿರುತ್ತಾರೆ. ಕೆಲವರಿಗೆ ಕೆಲಸದ ಒತ್ತಡಗಳ (Stress) ಕಾರಣ ತಡ ರಾತ್ರಿಯವರೆಗೆ ಎಚ್ಚರ ಇರುವುದು ಅನಿವಾರ್ಯವಾದರೇ, ಇನ್ನು ಕೆಲವರಿಗೆ ಯಾವುದೇ ಕೆಲಸವಿಲ್ಲದಿದ್ದರೂ, ಹಾಗೇ ಸುಮ್ಮನೇ ಅಥವಾ ಮೋಜು ಮಸ್ತಿಗಾಗಿ ರಾತ್ರಿಯಿಡೀ ಎಚ್ಚರ ಇರುವುದು ಇಷ್ಟವಾಗುತ್ತದೆ. ನಗರ ಪ್ರದೇಶಗಳಲ್ಲಂತೂ ಇದು ಸಾಮಾನ್ಯ. ಹೀಗೆ ರಾತ್ರಿಯಿಡಿ ಎಚ್ಚರವಿದ್ದು, ಕಾಲಹರಣ ಮಾಡುವವರನ್ನು ‘ಗೂಬೆ’ಗಳೆಂದು (Owl) ಅಥವಾ’ ನಿಶಾಚರಿ’ಗಳೆಂದು ಅಡ್ಡ ಹೆಸರಿನಿಂದ ಕರೆಯುವುದೂ ಉಂಟು.

ಅಂತವರು, ಬೆಳಗ್ಗೆ ಎಂತಹ ಪ್ರಮುಖ ಸಂದರ್ಶನ ಅಥವಾ ಕಾರ್ಯಕ್ರಮವೇ ಇರಲಿ, ಹಿಂದಿನ ರಾತ್ರಿ ಎಚ್ಚರವಿದ್ದು ತಮ್ಮ ಸ್ವಂತ ಸಮಯ ಕಳೆಯುವ ವಿಷಯದಲ್ಲಿ ಮಾತ್ರ ರಾಜಿ ಆಗುವುದಿಲ್ಲ.  ನಿದ್ದೆ ಬಿಟ್ಟು ರಾತ್ರಿ ಕಾಲ ಕಳೆಯುವ ಈ ಬುದ್ಧಿ ನಮ್ಮ ರಾಶಿ ಚಿಹ್ನೆಗಳಿಗೂ ಸಂಬಂಧಿಸಿದೆ ಎಂಬುವುದು ನಿಮಗೆ ಗೊತ್ತೇ? ಯಾವ ರಾಶಿಯವರಿಗೆ ರಾತ್ರಿ ನಿದ್ದೆ ಬಿಟ್ಟು ತಮ್ಮ ನೆಚ್ಚಿನ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಇಷ್ಟವಾಗುತ್ತದೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನೀವು ಇದೇ ರಾಶಿಗೆ ಸೇರಿದ್ದೀರಾ? ಓದಿ ನೋಡಿ.

1. ಮೇಷ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಇದು ಹಿಂಸಾತ್ಮಕ ಫೊರ್ಸ್ ಹೊಂದಿರುವ ಗ್ರಹವೆಂದು ಪರಿಗಣಿಸಲ್ಪಟ್ಟಿದೆ. ಈ ರಾಶಿ ಚಿಹ್ನೆಯಲ್ಲಿ ಜನಿಸಿದವರು ಅಡ್ರಿನಲೈನ್ ರಶ್ ಹೊಂದಿರುತ್ತಾರೆ. ಮೋಜು ಮಸ್ತಿಗಾಗಿ ರಾತ್ರಿಯೆಲ್ಲಾ ಹೊರಗೆ ಇರುವುದು ಇವರಿಗಿಷ್ಟ. ಪಾರ್ಟಿಗಳಿಗೆ ಹೋಗುವುದು ಎಂದರೆ ಈ ರಾಶಿಯವರಿಗೆ ಬಹು ಇಷ್ಟ, ಅದಲ್ಲದೆ, ತಡ ರಾತ್ರಿ ಡ್ರೈವ್‍ಗೆ ಹೋಗುವುದರಲ್ಲಿ ಖುಷಿಯನ್ನು ಕಾಣುತ್ತಾರೆ ಇವರು. ಏಕೆಂದರೆ, ಅದು ಅವರ ಅಡ್ರಿನಾಲ್ ರಶ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಇದೇ ರೀತಿ ಸಮಯ ಕಳೆಯುವುದು ಅವರಿಗಿಷ್ಟ.

ಇದನ್ನೂ ಓದಿ:  Palmistry: ಮದುವೆ ಬಗ್ಗೆ ನಿರಾಸಕ್ತಿ ಹೊಂದುತ್ತಾರೆ ಕೈಯಲ್ಲಿ ಈ ರೇಖೆ ಪ್ರಭಾವ ಕಡಿಮೆ ಇದ್ರೆ

2. ಮೀನ
ಈ ರಾಶಿಯವರು ಶ್ರೀಮಂತ ಕಲ್ಪನೆಗಳನ್ನು ಹೊಂದಿರುತ್ತಾರೆ. ಮತ್ತು ಆ ತಮ್ಮ ಶ್ರೀಮಂತ ಕಲ್ಪನಾ ಶಕ್ತಿಯನ್ನು ಆನ್ವೇಶಿಸಲು, ತಡ ರಾತ್ರಿಯವರೆಗೆ ನಿದ್ದೆ ಬಿಟ್ಟು ಎಚ್ಚರವಾಗಿ ಇರುವುದನ್ನು ತಡೆಯಲು ಇವರಿಂದ ಸಾಧ್ಯವಾಗುವುದಿಲ್ಲ. ಮೀನ ರಾಶಿಯವರು ರಾತ್ರಿಯಲ್ಲಿ ತಮ್ಮ ಬಿಡುವಿನ ಸಮಯವನ್ನು ಸೃಜನಾತ್ಮಕ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಗಳನ್ನು ಪರಿಶೀಲಿಸಲು ಅಥವಾ ತಮ್ಮ ನೆಚ್ಚಿನ ವೆಬ್‍ಸರಣಿಯ ಸಂಚಿಕೆಗಳನ್ನು ವೀಕ್ಷಿಸಲು ಬಳಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ.

3. ಮಿಥುನ
ಮಿಥುನ ರಾಶಿಯವರು ಉದ್ದೇಶಪೂರ್ವಕವಾಗಿ ತಡ ರಾತ್ರಿಯವರೆಗೆ ಎಚ್ಚರ ಇರಲು ಬಯಸುತ್ತಾರೆ ಎಂದಲ್ಲ, ಹಾಗೆ ಮಾಡದೇ ಇರಲು ಅವರಿಂದ ಸಾಧ್ಯವಾಗುವುದಿಲ್ಲ. ರಾತ್ರಿ ಮಲಗಲೆಂದು ದಿಂಬಿಗೆ ತಲೆ ಇಟ್ಟ ಕೂಡಲೇ, ಅವರು ತಮ್ಮ ಹಿಂದಿನ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು ಆರಂಭಿಸುತ್ತಾರೆ ಮತ್ತು ಅದ್ಭುತವಾದ ಆಲೋಚನೆಗಳಲ್ಲಿ ಮುಳುಗಿ ಹೋಗುತ್ತಾರೆ, ಆದ್ದರಿಂದ ನಿದ್ದೆ ದೂರ ಹೋಗುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಫೀನಿಕ್ಸ್ ಪಕ್ಷಿಯ ಫೋಟೋವನ್ನು ಈ ದಿಕ್ಕಿಗೆ ಇಟ್ಟರೆ ಹಣವೋ ಹಣ

ಮಿಥುನ ರಾಶಿಯಲ್ಲಿ ಹುಟ್ಟಿದವರಿಗೆ ರಾತ್ರಿಗಳಲ್ಲಿ ಅದ್ಭುತವಾದ ಆಲೋಚನೆಗಳು ಮತ್ತು ಉಪಾಯಗಳು ಹೊಳೆಯುವುದರಿಂದ, ಅವರು ಶೈಕ್ಷಣಿಕವಾಗಿಯೂ ಕೂಡ ಪ್ರತಿಭಾನ್ವಿತರಾಗಿರುತ್ತಾರೆ.

4. ಧನು ರಾಶಿ
ಈ ರಾಶಿಯವರು ಹಠಾತ್ ಪ್ರವೃತ್ತಿ ಮತ್ತು ಸಾಹಸಮಯ ಗುಣವನ್ನು ಹೊಂದಿರುತ್ತಾರೆ. ಧನು ರಾಶಿಯಲ್ಲಿ ಹುಟ್ಟಿದವರು, ಯಾವುದನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲವನ್ನು ಆನಂದಿಸುವ, ಅನುಭವಿಸುವ ಬಯಕೆ ಅವರಿಗಿರುತ್ತದೆ. ತಮ್ಮ ಅಸ್ಥವ್ಯಸ್ಥ ವೇಳಾ ಪಟ್ಟಿಯಿಂದಾಗಿ ಧನು ರಾಶಿಯವರು ಹೆಚ್ಚು ಅವಧಿಯ ನಿದ್ರೆಯನ್ನು ಪಡೆಯುವುದಿಲ್ಲ.

ಈ ರಾಶಿಯವರು ವಿನೋದವನ್ನು ಇಷ್ಟಪಡುವ ಜೀವಿಗಳು; ನಿದ್ರೆ ಮಾಡುವುದರಿಂದ ಯಾವುದಾದರೂ ವಿನೋದ ಕಳೆದು ಹೋಗುತ್ತದೆ ಎಂಬ ಚಿಂತೆ ಇರುವುದರಿಂದ, ಬೆಳಗ್ಗೆ ಎರಡು ಗಂಟೆಯ ವೇಳೆಯಲ್ಲೂ ಸ್ನೇಹಿತರ ಜೊತೆ ಇರುವುದನ್ನು ಇವರ ಒಲ್ಲೆ ಎನ್ನಲಾರರು.
Published by:Ashwini Prabhu
First published: