Sleeping Vastu: ಈ ದಿಕ್ಕಿನತ್ತ ತಲೆ ಹಾಕಿ ಮಲಗಿದರೆ ನಿಮ್ಮ ಮನೆಗೆ ಹಣದ ಹೊಳೆಯೇ ಹರಿದು ಬರುತ್ತೆ!

ಯಾವುದೋ ಒಂದು ದಿಕ್ಕಿಗೆ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ದಿಕ್ಕಿಗೆ ತಲೆ ಮಾಡಿ ಮಲಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿದ್ದೆ (Sleep) ಇಲ್ಲದಿದ್ದರೆ ಮನುಷ್ಯನ ಆರೋಗ್ಯ (Health) ಹದಗೆಡುತ್ತದೆ. ಇಡೀ ದಿನ ಕೆಲಸ ಮಾಡಿ ದಣಿದು, ಸುಸ್ತಾದ ದೇಹಕ್ಕೆ ಸರಿಯಾದ ರೀತಿಯಲ್ಲಿ ವಿಶ್ರಾಂತಿ (Rest) ಸಿಗೋದೆ ರಾತ್ರಿ ಮಲಗಿ 8 ಗಂಟೆಗಳವರೆಗೆ ಚೆನ್ನಾಗಿ ನಿದ್ದೆ ಮಾಡಿದಾಗ. ನಿದ್ದೆ ಅರ್ಧಂಬರ್ಧ ಆದರೆ, ನಿದ್ದೆಗೆಟ್ಟರೆ ಮನುಷ್ಯ ಕುಂದುತ್ತಾನೆ. ಯಾವುದೇ ಚಟುವಟಿಕೆಗಳನ್ನು (Activities) ಮಾಡಲು ಉತ್ಸಾಹ  ಇರುವುದಿಲ್ಲ. ನಿರಾಸಕ್ತಿ ತುಂಬಿರುತ್ತದೆ. ದೇಹ ಆ್ಯಕ್ಟಿವ್ ಆಗಿರುವುದಿಲ್ಲ. ದೇಹಕ್ಕೆ (Body) ಊಟದಿಂದ ಎಷ್ಟು ಎನರ್ಜಿ ಸಿಗುತ್ತದೆಯೋ ಅಷ್ಟೇ ಎನರ್ಜಿ ನಿದ್ದೆ ಮಾಡುವುದರಿಂದ ಸಿಗುತ್ತದೆ. ಇನ್ನು ಈ ನಿದ್ದೆ ಮಾಡೋದು ಒಕೆ. ಆದ್ರೆ ನಿದ್ದೆ ಮಾಡೋದಕ್ಕೂ ಕೂಡ ಕೆಲ ನಿಯಮಗಳಿವೆ. ಎಲ್ಲೆಂದರಲ್ಲಿ, ಹೇಗೆ ಬೇಕೋ ಹಾಗೆ ಮಲಗೋದಲ್ಲ. ನಾವು ಮಲಗುವ ದಿಕ್ಕು ಸರಿಯಾಗಿರಬೇಕು ಅನ್ನುತ್ತೆ ವಾಸ್ತುಶಾಸ್ತ್ರ (Vaastu shastra).

    ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಮಲಗುವುದು ಬಹಳ ಮುಖ್ಯ. ಯಾವುದೋ ಒಂದು ದಿಕ್ಕಿಗೆ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ದಿಕ್ಕಿಗೆ ತಲೆ ಮಾಡಿ ಮಲಗಬೇಕು. ಯಾವ ದಿಕ್ಕಿಗೆ ಕಾಲು ಮಾಡಿ ಮಲಗಬೇಕು..? ಇದರಿಂದ ಏನಾಗುತ್ತದೆ ಎಂಬುದನ್ನು ನೋಡೋಣ.

    ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿದರೆ: ವಾಸ್ತುಶಾಸ್ತ್ರದ ಪ್ರಕಾರ ಇದು ಮಲಗಲು ಸರಿಯಾದ ದಿಕ್ಕು. ಅದರಲ್ಲೂ ನೀವು ಉತ್ತರ ಗೋಳಾರ್ಧದಲ್ಲಿ ಇದ್ದರೆ ಈ ದಿಕ್ಕಿನಲ್ಲಿ ತಲೆ ಮಾಡಿ ನಿದ್ದೆ ಮಾಡಿದರೆ ಸಂತೋಷ, ಐಶ್ವರ್ಯ ನಿಮಗೆ ಪ್ರಾಪ್ತಿಯಾಗುತ್ತದೆ. ಒಳ್ಳೆಯ ನಿದ್ದೆಯನ್ನು ನೀವು ಮಾಡುತ್ತೀರಿ. ದಕ್ಷಿಣ ದಿಕ್ಕು  ಧನಾತ್ಮಕ ಶಕ್ತಿಯೊಂದಿಗೆ ಬೆಸೆದುಕೊಂಡಿದ್ದು, ಈ ಕಡೆ ತಲೆ ಇಟ್ಟು ನಿದ್ದೆ ಮಾಡಿದರೆ ಜೀವನದ ಬಗ್ಗೆ ನಂಬಿಕೆ ಹುಟ್ಟಿ ನೆಮ್ಮದಿ ಹೆಚ್ಚುತ್ತದೆ.

    ಇದನ್ನೂ ಓದಿ: ಈ 4 ರಾಶಿಯವರು ಜವಾಬ್ದಾರಿಯುತ ವ್ಯಕ್ತಿಗಳು: ಡೇಟಿಂಗ್ ಮಾಡಲು ಈ ವ್ಯಕ್ತಿಗಳು ಫರ್ಪೆಕ್ಟ್ ಮ್ಯಾಚ್ ಅಂತೆ!

    ಇನ್ನು ನೀವು ದಕ್ಷಿಣಾರ್ಧದಲ್ಲಿದ್ದರೆ ಆಗ ಈ ದಿಕ್ಕಿಗೆ ತಲೆ ಹಾಕಲೇಬಾರದು. ನಾವು ದಕ್ಷಿಣಕ್ಕೆ ತಲೆ ಹಾಕಿದಾಗ ಕಾಲು ಉತ್ತರಕ್ಕಿರುತ್ತದೆ. ಹಸು, ಜಿಂಕೆ ಮುಂತಾದ ಪ್ರಾಣಿಗಳು ಮಲಗುವಾಗ ಪ್ರಾಕೃತಿಕವಾಗಿಯೇ ತಮ್ಮ ದೇಹವನ್ನು ಇದೇ ರೀತಿಯಾಗಿ ಇಟ್ಟುಕೊಳ್ಳುತ್ತವಂತೆ. ದಕ್ಷಿಣಕ್ಕೆ ತಲೆ ಹಾಕಿ ಮಲಗಿದಾಗ, ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗೂ ನಿದ್ದೆಯ ಗುಣಮಟ್ಟ ಚೆನ್ನಾಗಿರುತ್ತದೆ.

    ಉತ್ತರಕ್ಕೆ ತಲೆ ಮಾಡಿ ಮಲಗಿದರೆ: ಉತ್ತರಕ್ಕೆ ತಲೆ ಹಾಕಿದರೆ, ಆಗ ಭೂಮಿಯ ಮ್ಯಾಗ್ನೆಟಿಕ್ ಪೋಲ್ ಎನರ್ಜಿ ಹಾಗೂ ನಮ್ಮ ದೇಹದ ಎನರ್ಜಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹರಿಯಲಾರಂಭಿಸುತ್ತದೆ. ಇದರಿಂದ ತಲೆನೋವು, ರಕ್ತದೊತ್ತಡ, ಹೃದಯದಿಂದ ಮೆದುಳಿಗೆ ಹೋಗುವ ನರಗಳು ಸೂಕ್ಷ್ಮವಾಗಿದ್ದು ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಿಸುವ ಶಕ್ತಿ ಕಡಿಮೆಯಾಗುತ್ತದೆ.

    ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ರಕ್ತವು ಹೆಚ್ಚಾಗಿ ನಿಮ್ಮ ತಲೆಯತ್ತ ಹರಿಯಲಾರಂಭಿಸುತ್ತದೆ. ರಕ್ತದಲ್ಲಿ ಐರನ್ ಕಂಟೆಂಟ್ ಇದ್ದು ನಾರ್ಥ್ ಪೋಲ್‌ನಲ್ಲಿ ಹೆಚ್ಚು ಸ್ಟ್ರಾಂಗ್ ಆಗಿರುವ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಬ್ಲಡ್ಡನ್ನು ಮೇಲಿನ ದಿಕ್ಕಿಗೆ ಎಳೆಯಲಾರಂಭಿಸುತ್ತದೆ. ರಕ್ತದ ಹರಿವು ಹೆಚ್ಚಾದಲ್ಲಿ ಹ್ಯಾಮರೇಜ್ ಇಲ್ಲವೇ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತದೆ. ಸರಿಯಾಗಿ ನಿದ್ದೆ ಬರದೆ, ಕೆಟ್ಟ ಕನಸುಗಳು ಬೀಳುವ ಸಮಸ್ಯೆಗಳು ಉಂಟಾಗುತ್ತವೆ.

    ಪೂರ್ವ ತಲೆ ಹಾಕಿದರೆ: ವಾಸ್ತುಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಶಕ್ತಿಯ ಮೂಲ. ಮಲಗಲು ಉತ್ತಮ ದಿಕ್ಕು. ಈ ದಿಕ್ಕಿನತ್ತ ತಲೆ ಮಾಡಿ ಮಲಗಿದರೆ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚುತ್ತದೆ. ಪೂರ್ವ ದಿಕ್ಕಿಗೆ ತಲೆ ಮಾಡಿ ನಿದ್ದೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ.

    ಇದನ್ನೂ ಓದಿ: ಹಿಂದೂ ಸಂಪ್ರದಾಯಲ್ಲಿ ಹೆಣ್ಣು ಮಕ್ಕಳಿಗೆ ಸ್ಮಶಾನಕ್ಕೆ ಪ್ರವೇಶವಿಲ್ಲ, ಅದರ ಹಿಂದಿನ ಕಾರಣ ಇದು

    ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ: ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಗಳಿಂದ ವ್ಯಕ್ತಿಯನ್ನು ದೂರವಿಡುತ್ತದೆ.
    Published by:renukadariyannavar
    First published: