• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Dream: ಈ ರೀತಿಯ ಕನಸು ನಿಮಗೆ ಬೀಳ್ತಾ ಇದ್ಯಾ? ಹಾಗಿದ್ರೆ ಅದಕ್ಕೆ ಹಿಂದಿನ ಜನ್ಮದ ಸಂಬಂಧ ಇರಬಹುದು!

Dream: ಈ ರೀತಿಯ ಕನಸು ನಿಮಗೆ ಬೀಳ್ತಾ ಇದ್ಯಾ? ಹಾಗಿದ್ರೆ ಅದಕ್ಕೆ ಹಿಂದಿನ ಜನ್ಮದ ಸಂಬಂಧ ಇರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಕನಸುಗಳನ್ನ ಆಧಾರವಾಗಿ ಇಟ್ಟುಕೊಂಡು, ಹಿಂದಿನ ಬದುಕು ಹೇಗಿತ್ತು ಅನ್ನೋದನ್ನೂ ಕೂಡ ಹೊರಹಾಕಿದ್ದಾರೆ. ಹಾಗಿದ್ರೆ, ಯಾವ ಕನಸುಗಳು ತಮ್ಮ ಪೂರ್ವಜನ್ಮದ ಕಹಾನಿಯನ್ನ ಹೇಳುತ್ತವೇ.

  • Share this:

ಕ್ರೇಜಿಸ್ಟಾರ್ ರವಿಚಂದ್ರನ್ (Crazy Star Ravichandran) ಮಾತ್ರವಲ್ಲ, ನಿದ್ರೆಗೆ ಜಾರಿದ ಮೇಲೆ ಪ್ರತಿಯೊಬ್ಬರೂ ಕನಸುಗಾರರೇ.. ಅದ್ರಲ್ಲೂ ಕೆಲವರಿಗೆ ಒಂದೇ ರೀತಿಯ ಕನಸುಗಳು ಪದೇ ಪದೇ ಬೀಳುತ್ತಿರುತ್ತವೆ. ಅಂತಹ ಕನಸುಗಳ ಹಿಂದೆ ಪೂರ್ವಜನ್ಮವೂ ಅಡಗಿದೆ. ಕನಸು ಯಾರ್ ಕಾಣಲ್ಲ ಹೇಳಿ? ಎಲ್ರೂ ಕೂಡ ಕಾಣ್ತಾರೆ. ಮುಂಜಾನೆ ಕಾಣುವ ಕನಸು (Dream) ನನಸಾಗುತ್ತೆ ಅನ್ನೋ ಮಾತಿದೆ. ಕನಸಿನಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ, ಅವರ ಆಯುಸ್ಸು ಹೆಚ್ಚಾಗುತ್ತೆ ಅನ್ನೋ ಮಾತಿಗೆ. ಹೀಗೆ, ಒಬ್ಬೊಬ್ಬರು ಒಂದು ರೀತಿಯ ನಂಬಿಕೆಗಳನ್ನ ಕನಸಿನ ಮೇಲೆ ಕಟ್ಟಿಕೊಂಡಿದ್ದಾರೆ. ಕೆಲವು ಮನಶಾಸ್ತ್ರಜ್ಞರು (Psychologist) ಕನಸುಗಳ ಮೇಲೆ ದೀರ್ಘವಾದ ಅಧ್ಯಯನ ನಡೆಸಿದ್ದು, ಕೆಲವೊಂದು ವಿಷಯಗಳನ್ನ ಹೊರಹಾಕಿದ್ದಾರೆ. ಅದ್ರಲ್ಲೂ, ಕೆಲವು ಕನಸುಗಳನ್ನ ಆಧಾರವಾಗಿ ಇಟ್ಟುಕೊಂಡು, ಹಿಂದಿನ ಬದುಕು ಹೇಗಿತ್ತು ಅನ್ನೋದನ್ನೂ ಕೂಡ ಹೊರಹಾಕಿದ್ದಾರೆ. ಹಾಗಿದ್ರೆ, ಯಾವ ಕನಸುಗಳು ತಮ್ಮ ಪೂರ್ವಜನ್ಮದ ಕಹಾನಿಯನ್ನ ಹೇಳುತ್ತವೇ.


ಕನಸಿನಲ್ಲಿ ಬರುವ ವಿಷ್ಯಗಳ ಮೇಲೆ ನಮ್ಮ ಹಿಂದಿನ ಜನ್ಮವನ್ನ ಹೇಗೆ ಕಲ್ಪಿಸಿಕೊಳ್ಳೋದು ಅನ್ನೋದನ್ನ ಈ ಏಳು ಸಂಗತಿಗಳ ಆಧಾರದ ಮೇಲೆ ತಿಳಿದುಕೊಳ್ಳಬಹುದು. ಸುಂದರವಾದ ಕನಸು, ಉಗ್ರವಾದ ಕನಸು, ಕನಸಲ್ಲಿ ಕೋಪಗೊಂಡಂತೆ, ಕನಸಲ್ಲಿ ಯಾರನ್ನೋ ಕಳೆದುಕೊಂಡಂತೆ, ಕನಸಲ್ಲಿ ಯಾರೋ ದೂರಾದಂತೆ.. ಕನಸಲ್ಲಿ ಎಲ್ಲಿಗೆ ಒಂಟಿಯಾಗಿ ತೆರಳಿದಂತೆ, ಹೀಗೆ ಹತ್ತಾರು ರೀತಿಯ ಕನಸುಗಳು ಪ್ರತಿಯೊಬ್ಬರನ್ನೂ ಕಾಡುತ್ತವೆ.


ಆದರೆ ಕನಸುಗಳು ಎಷ್ಟೊತ್ತು ಬೀಳುತ್ತವೆ, ಎಷ್ಟೊತ್ತು ಕಾಡುತ್ತವೇ ಅನ್ನೋದರ ಸ್ಪಷ್ಟತೆ ಇರೋದಿಲ್ಲ. ಕೆಲ ಕನಸುಗಳು ಬೆಳಗಾಗುವಷ್ಟರಲ್ಲಿ ಮರೆತುಹೋಗಿದ್ರೆ, ಮತ್ತಷ್ಟು ಕನಸುಗಳು ಅನೇಕ ವರ್ಷಗಳ ತನಕವೂ ಕಾಡುತ್ತವೆ. ಹೀಗೆ, ಕನಸುಗಳ ಹಿಂದೆ ದೊಡ್ಡ ದೊಡ್ಡ ಕಹಾನಿಯೇ ಇದೆ. ಹಾಗೆ, ಕನಸುಗಳು ನಮ್ಮ ಪೂರ್ವಜನ್ಮದ ಸೂಚನೆಯನ್ನೂ ಕೊಡತ್ತವೆ ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ.


ಸ್ಥಳ ಮತ್ತು ಜನರು ಪದೇ ಪದೇ ಕನಸಿನಲ್ಲಿ ಬರುತ್ತಿದ್ದಾರಾ?


ಯಾವುದೇ ಒಂದು ಜಾಗ ಮತ್ತು ವ್ಯಕ್ತಿಗಳು ನಮ್ಮ ಸದ್ಯದ ಬದುಕಿನಲ್ಲಿ ಬಹುಮುಖ್ಯಪಾತ್ರವನ್ನ ವಹಿಸುತ್ತಾರೆ. ಆದ್ರೆ ಕೆಲವೊಮ್ಮೆ ನಾವು ಕೆಲ ವ್ಯಕ್ತಿಗಳು ಮತ್ತು ನಿರ್ಧಿಷ್ಟ ಜಾಗವನ್ನ ಮರೆತುಬಿಟ್ಟಿರುತ್ತೇವೆ. ಆದರೆ ಕನಸುಗಳು ನಮ್ಮನ್ನು ಮತ್ತೆ ಮತ್ತೆ ಸದ್ಯ ನೆನಪಿನಲ್ಲಿ ಇರುವ ಜಾಗ ಹಾಗೂ ಮರೆತು ಹೋಗಿರುವ ಜಾಗವನ್ನ ಒಂದಾದ ಮೇಲೆ ಒಂದರಂತೆ ನೆನಪಿಸುತ್ತೆ.


ನಮಗೆ ಪರಿಚಯದ ವ್ಯಕ್ತಿಗಳು ಕನಸಿನಲ್ಲಿ ಬಿದ್ದ ತಕ್ಷಣ ನಮಗೆ ನೆನಪಾಗುತ್ತಾರೆ. ಆದರೆ ಕನಸಿನಲ್ಲಿ ಅವರು ಬೇರೆ ರೀತಿಯೇ ಬಿಂಬಿತರಾಗಿರುತ್ತಾರೆ. ಇದು ಕೂಡ ಹಿಂದಿನ ಜನ್ಮದಲ್ಲಿ ಅವರ ಪಾತ್ರ ಇತ್ತು ಅನ್ನೋದರ ಸೂಚಕ ಎನ್ನಲಾಗುತ್ತೆ.


ಕನಸಿನಲ್ಲಿ ನಿಮ್ಮ ನಡೆ ಮತ್ತು ಇರುವಿಕೆ ಬೇರೆಯದೇ ರೀತಿ ಇರುತ್ತದೆ


ಇದು ಕೂಡ ಅಷ್ಟೇ. ನಾವು ಸದ್ಯ ಇರುವಂತೆ ಕನಸಿನಲ್ಲಿ ಇರುವುದಿಲ್ಲ.. ಕೆಲವೊಂದು ಕನಸುಗಳಲ್ಲಿ ನಾವು ಬೇರೆಯದೇ ರೀತಿಯಲ್ಲಿ ನಮಗೆ ಅಶ್ಚರ್ಯ ಉಂಟಾಗುವಂತೆ ಕಾಣುತ್ತಿರುತ್ತೇವೆ. ಇದು ಕೂಡ ಪೂರ್ವಜನ್ಮದ ಒಂದು ಪ್ರತಿಬಿಂಬ.


ಇದನ್ನೂ ಓದಿ: ರಾತ್ರಿ ಬೀಳೋ ಕನಸಿನ ಹಿಂದೆನೂ ಇದ್ಯಂತೆ ದೊಡ್ಡ ರಹಸ್ಯ! ಇಲ್ಲಿದೆ ಫುಲ್​ ಡೀಟೇಲ್ಸ್


ನಿಮ್ಮ ಮುಖ ಮಾತ್ರ ಅದೇ ಆಗಿರುತ್ತೆ. ಆದರೆ ನಿಮ್ಮ ನಡವಳಿಕೆ, ಸ್ವಭಾವ ಸಂಪೂರ್ಣ ಬದಲಾಗಿರುತ್ತದೆ. ಯಾವ ಕನಸಿನಲ್ಲಿ ನೀವು ನೀವಾಗಿ ಇರುವುದಿಲ್ಲವೋ, ಅದು ಕೂಡ ನಿಮ್ಮ ಪೂರ್ವ ಜನ್ಮದ ಒಂದು ಛಾಯೆ ಅಂತ ಹೇಳಿದರೆ ಅದು ತಪ್ಪಾಗುವುದಿಲ್ಲ.


ಒಂದೇ ರೀತಿಯ ಕನಸುಗಳು ಪದೇ ಪದೇ ಬೀಳುತ್ತಿರುತ್ತದೆ


ಕೆಲವೊಂದು ಕನಸುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿರುತ್ತದೆ. ಆವಾಗಾವಾಗ ನಿಮಗೆ ಬೀಳುತ್ತಿರುತ್ತದೆ. ಅದು ಒಂದೇ ರೀತಿಯ ಸ್ಥಳ ಆಗಿರಬಹುದು. ಅಥವಾ ಒಂದೇ ರೀತಿಯ ವ್ಯಕ್ತಿಗಳು ಆಗಿರಬಹುದು. ಮೇಲಿಂದ ಮೇಲೆ ನಿಮ್ಮ ಕನಸಿನಲ್ಲಿ ಬೀಳುತ್ತಿರುತ್ತಾರೆ.


ನಮ್ಮ ಇಂದಿನ ಕ್ರಿಯೆಗಳು ನಮ್ಮ ಭವಿಷ್ಯವನ್ನ ನಿರ್ಧರಿಸುತ್ತವೆ. ಹಾಗೇ, ಕನಸಿನಲ್ಲಿ ಕೆಲವೊಂದು ವಿಷ್ಯಗಳು ಮತ್ತೆ ಮತ್ತೆ ನಿಮಗೆ ಕಾಡುತ್ತಿರುತ್ತವೆ. ಆಗಿಂದ ಆಗೇ ನೆನಪಿನಲ್ಲಿ ಉಳಿಯುವಂತೆ ಕನಸು ಬೀಳುತ್ತಿರುತ್ತದೆ. ಇದರ ಅರ್ಥ ಆ ವಿಷ್ಯ ನಿಮ್ಮ ಹಿಂದಿನ ಬದುಕಿನಲ್ಲಿ ಈಗಾಗಲೇ ನಡೆದು ಹೋಗಿದೆ ಎಂದು.


ನಿಮಗೆ ಆಗಿರುವ ಅಪಘಾತ, ಗಾಯಗಳು ಕೂಡ ಕನಸಿನ ಭಾಗವಾಗಿರುತ್ತದೆ


ನಿಮ್ಮ ಪೂರ್ವಜನ್ಮವನ್ನ ಗುರುತಿಸೋದಕ್ಕೆ ಈ ಅಂಶವನ್ನ ಗುರುತಿಸಿಕೊಳ್ಳಿ. ಸದ್ಯ ನಿಮಗೆ ಎಲ್ಲಿಯಾದರೂ ಅಪಘಾತ ಆಗಿದ್ರೆ, ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗಿದ್ರೆ, ಆ ನೋವು, ಅಪಘಾತ ನಡೆದ ಸ್ಥಳ ನಿಮ್ಮ ಕನಸಿನಲ್ಲಿ ಒಮ್ಮೆಯಾದರೂ ಬೀಳುತ್ತದೆ.


ಆದರೆ ಕನಸಿನಲ್ಲಿ ನಿಮಗೆ ಗೋಚರಿಸುವ ಸ್ಥಳದಲ್ಲಿ ಅಪಘಾತ ಆಗುವುದಿಲ್ಲ. ಇದರ ಅರ್ಥ ನೀವು ಆ ಜಾಗವನ್ನ ಹಿಂದಿನ ಕಾಲದಲ್ಲಿ ನೋಡಿದ್ದೀರಿ ಅಂತ ಅಂದುಕೊಳ್ಳಬಹುದು.


ನಿಮ್ಮ ಕನಸುಗಳಲ್ಲಿ ನಿರಂತರವಾಗಿ ಕೆಲವೊಂದು ಕೊರತೆಗಳು ಕಾಡುತ್ತವೆ


ಎಲ್ಲ ಕನಸುಗಳು ಕೂಡ ಪೂರ್ಣವಲ್ಲ. ಕೆಲವೊಂದು ಕನಸುಗಳು ಅರ್ಧಕ್ಕೆ ಕೊನೆಗೊಳ್ಳುತ್ತವೆ. ಹೋಗುತ್ತಿರುವ ದಾರಿ ಅರ್ಧಕ್ಕೆ ಮುಗಿದು ಹೋಗುತ್ತದೆ. ಪಯಣದಲ್ಲಿ ಯಾರೋ ಏಕಾಏಕಿ ಮಾಯವಾಗಿ ಹೋಗುತ್ತಾರೆ. ಇದು ಕೂಡ ಹಿಂದಿನ ಜನ್ಮದ ಒಂದು ನೆನಪಿನ ಭಾಗವೇ ಆಗಿದೆ.


ಪದೇ ಪದೇ ಒಂದು ಸ್ಥಳದ ಬಗ್ಗೆ ನಿಮಗೆ ಅರ್ಧಂಬರ್ಧ ವಿಷ್ಯಗಳು ಕನಸಿನಲ್ಲಿ ಗೋಚರ ಆಗುವುದು. ಯಾವುದೋ ಪ್ರಯಾಣದ ಬಗ್ಗೆ ಪೂರ್ಣ ಮಾಹಿತಿ ಕನಸಿನಲ್ಲಿ ಸಿಗದೇ ಹೋಗುವುದು ಕೂಡ ಹಿಂದಿನ ಜನ್ಮದಲ್ಲಿ ಆ ಸ್ಥಳ ನಿಮ್ಮ ಬದುಕಿನ ಭಾಗ ಆಗಿತ್ತು ಅನ್ನೋದರ ಸಂದೇಶವೇ ಆಗಿದೆ.


ಈಗಾಗಲೇ ಘಟಿಸಿರುವ ವಿಷಯಗಳು ಕನಸಿನಲ್ಲಿ ಬೀಳುತ್ತೆ


ಈ ರೀತಿ ಬಹುತೇಕರ ಕನಸಿನಲ್ಲಿ ಆಗಿರುತ್ತೆ. ಈಗಾಗಲೇ ನಿಮ್ಮ ಜೀವನದಲ್ಲಿ ನಡೆದಿರುವ ಘಟನೆಗಳು ಕನಸಿನಲ್ಲಿ ಮತ್ತೆ ಬೀಳುತ್ತೆ. ಅದು ವಿಚಿತ್ರವಾದ ಭಾವನೆಯೇ ಆಗಿರಬಹುದು.


ಇದನ್ನೂ ಓದಿ: ಮನೆಯಲ್ಲಿಈ ಹೂವು ಒಂದಿದ್ರೆ ಸಾಕು, ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ! ಇಲ್ಲಿದೆ ನೋಡಿ ಸಲಹೆಗಳು


ಆ ಕನಸು ನಮ್ಮ ಮನಸಿನಲ್ಲಿ ಹೆಚ್ಚು ಕಾಲ ಉಳಿಯಬಾರದು ಅಂತ ನೀವು ಅಂದುಕೊಳ್ಳಬಹುದು. ಆದರೆ ಇದು ಕೂಡ ನಿಮ್ಮ ಹಿಂದಿನ ಜೀವನದ ಒಂದು ಘಟನೆ ಆಗಿರೋದ್ರಲ್ಲಿ ಅನುಮಾನ ಇರೋದಿಲ್ಲ. ಇದು ಒಂದು ರೀತಿ ನಿಮ್ಮ ಪೂರ್ವ ಜನ್ಮ ನಿಮ್ಮನ್ನು ಎಚ್ಚರಿಸಿದಂತೆ.


ನಿಮ್ಮ ಸದ್ಯ ವಯಸ್ಸಿಗಿಂತಲೂ ಹೆಚ್ಚಿಗೆ ವಯಸ್ಸಾಗಿರುತ್ತೆ!


ಇದಕ್ಕೆ ಹೇಳೋದು ಆತ್ಮಕ್ಕೆ ಚಿರಾಯು ಅಂತ. ನಮ್ಮ ದೇಹದಲ್ಲಿರುವ ಉಸಿರು ಹಾರಿ ಹೋದರೂ, ಆತ್ಮ ಜೀವಂತವಾಗಿಯೇ ಇರುತ್ತದೆ. ಆತ್ಮ ಅನ್ನೋದು 10 ಲಕ್ಷ ವರ್ಷಗಳ ಕಾಲ ಜೀವಿಸುತ್ತಿರುತ್ತದೆ ಅನ್ನೋ ಮಾತಿದೆ.


ಕಾಲನಂತರದಲ್ಲಿ ಆತ್ಮವೂ ತನ್ನಿಂದ ತಾನೇ ಅಳಿಸಿಹೋಗುತ್ತದೆ. ಕೆಲವೊಂದು ಕನಸುಗಳಲ್ಲಿ ಸದ್ಯದ ವಯಸ್ಸಿಗಿಂತಲೂ ಹೆಚ್ಚು ವಯಸ್ಸಿನವರಂತೆ ನಮ್ಮ ಅನುಭವಕ್ಕೆ ಬರುತ್ತದೆ. ಇದು ಆತ್ಮವೂ ಮತ್ತೆ ಕನಸಿನಲ್ಲಿ ಜೀವಿಸುತ್ತಿದೆ ಅನ್ನೋದರ ಸೂಚನೆ.


ಒಟ್ನಲ್ಲಿ, ಕನಸು ಬರೀ ಕನಸಾಗಿ ಇರೋದಿಲ್ಲ. ಅದಕ್ಕೆ ಹತ್ತಾರು ಅರ್ಥಗಳು ಇರುತ್ತದೆ. ನೂರಾರು ಸೂಚನೆಗಳು ಕನಸಿನ ಹಿಂದೆ ಇರುತ್ತೆ. ಕೆಲವೊಂದು ಕನಸುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಸೂಚನೆಯಂತೆ ಇರುತ್ತವೆ. ಮತ್ತಷ್ಟು ಕನಸುಗಳು ನಮ್ಮ ಹಿಂದಿನ ಜನ್ಮದ ಪಳಯುಳಿಕೆ ಆಗಿರುತ್ತವೆ. ಇದು ಆತ್ಮವೂ ಮತ್ತೆ ಕನಸಿನಲ್ಲಿ ಜೀವಿಸುತ್ತಿದೆ ಅನ್ನೋದರ ಸೂಚನೆ.

First published: