ಸ್ವಂತ ಮನೆ (Home) ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಸ್ವಂತ ಮನೆಯಲ್ಲಿ ವಾಸಿಸುವುದು ಬೇರೆಯದೇ ಆನಂದವನ್ನು ನೀಡುತ್ತದೆ. ನಿಮ್ಮದೇ ಮನೆಯಲ್ಲಿ ನಿಮ್ಮ ಕುಟುಂಬದ ಜೊತೆಗೆ ನೀವು ವಾಸಿಸಿದರೆ ಅದೊಂದು ಸುಂದರ (Beautiful) ಕುಟುಂಬದ ಭಾವನೆಯನ್ನು ಮೂಡಿಸುತ್ತದೆ. ಆದರೆ ಮನೆಯನ್ನು ಹೊಂದುವುದು ಮಾತ್ರ ಮುಖ್ಯವಲ್ಲ. ಬದಲಾಗಿ ಅದೇ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯಿಂದ ಬಾಳ್ವೆ ನಡೆಸುವುದೂ ಅಷ್ಟೇ ಮುಖ್ಯ. ಮನೆಯ ಸದಸ್ಯರು ಆರೋಗ್ಯದಿಂದ, ನೆಮ್ಮದಿಯಿಂದ ಇದ್ದಾಗ ಮಾತ್ರ ಪ್ರತಿಯೊಬ್ಬರ ಮನಸ್ಸೂ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಕೆಲವೊಮ್ಮೆ ಇದಕ್ಕೆ ವಿರುದ್ಧವಾದ ಸಂದರ್ಭಗಳು ಎದುರಾಗುತ್ತವೆ. ಮನೆ (Home) ಹಾಗೂ ಕುಟುಂಬದವರ (Family) ಮನಸ್ಸು ಅಶಾಂತಿಯಿಂದ ಕೂಡಿರುತ್ತದೆ. ಬರೀ ಕೆಡುಕಾಗಲು ಆರಂಭವಾಗುತ್ತವೆ.
ಅದಕ್ಕೆ ಕಾರಣ ನಕಾರಾತ್ಮಕ ಶಕ್ತಿ ಮನೆಯಲ್ಲಿ ತುಂಬಿಕೊಂಡಿರುವುದು. ಆದ್ದರಿಂದ ಮನೆಯಲ್ಲಿ ಅಂಥ ನಕಾರಾತ್ಮಕ ಶಕ್ತಿ ಇದೆಯೇ ಎಂದು ಕಂಡುಹಿಡಿಯುವುದು ಬಹಳ ಮುಖ್ಯ. ಹಾಗಿದ್ದರೆ ಅದನ್ನು ಕಂಡುಹಿಡಿಯುವುದು ಹೇಗೆ ? ಕೆಲವಷ್ಟು ಚಿಹ್ನೆಗಳ ಮೂಲಕ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ ಎಂದು ಕಂಡುಹಿಡಿಯಬಹುದು.
ಈ ಕುರಿತಾಗಿ ವಾಸ್ತು ತಜ್ಞರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಸಾಬೀತುಪಡಿಸುವ ಚಿಹ್ನೆಗಳ ಯಾವವು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ the worldoftarotwithkanika ಎಂಬ ಪೇಜ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಳಾಗಿದೆ.
ನಕಾರಾತ್ಮಕ ಶಕ್ತಿಯ ಚಿಹ್ನೆಗಳು
*ನೀವು ಗಾಢನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡರೆ ಅದು ನಕಾರಾತ್ಮಕ ಶಕ್ತಿ ಇದೆ ಎಂಬುದರ ಚಿಹ್ನೆಯಾಗಿದೆ.
*ನೀವು ಮನೆಯಲ್ಲಿ ನೆಟ್ಟಂತಹ ಸಸ್ಯಗಳು ಪದೇ ಪದೇ ಸಾಯುತ್ತಿದ್ದರೆ ಅದನ್ನು ನಕಾರಾತ್ಮಕ ಶಕ್ತಿ ಎನ್ನಲಾಗುತ್ತದೆ.
*ನಿಮ್ಮ ಮನೆಯ ಮೂಲೆಗಳಲ್ಲಿ ಜೇಡಗಳು ಹೆಚ್ಚಾಗಿ ಕಾಣಿಸಿಕೊಂಡರೆ ಅದು ನೆಗೆಟಿವ್ ಎನರ್ಜಿಯಾಗಿದೆ.
*ನೀವು ಆಗಾಗ್ಗೆ ಮನೆಯಲ್ಲಿ ವಸ್ತುಗಳನ್ನು ಕಳೆದುಕೊಳ್ಳುತ್ತಲೇ ಇದ್ದರೆ ಅದು ನಕಾರಾತ್ಮಕ ಶಕ್ತಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಸಂಖ್ಯೆ 8ಕ್ಕೆ 1 ಹಾಗೂ 2 ರ ಜೊತೆ ಸಂಬಂಧ ಹೀಗಿರಲಿದೆ
*ಮನೆಯಲ್ಲಿ ಕುಟುಂಬ ಸದಸ್ಯರಿಗೆ ನಿರಂತರ ತಲೆನೋವು ಕಾಣಿಸಿಕೊಂಡರೆ, ಅದರಿಂದ ಅವರು ಹೆಚ್ಚು ನೋವು ಅನುಭವಿಸುತ್ತಿದ್ದರೆ ಅದು ನಕಾರಾತ್ಮಕ ಶಕ್ತಿಯಾಗಿದೆ.
*ಆಗಾಗ್ಗೆ ನಲ್ಲಿಗಳಿಂದ ನೀರು ಸೋರಿಕೆಯಾಗಲು ಪ್ರಾರಂಭಿಸಿದರೆ ಅದು ಒಳ್ಳೆಯ ಲಕ್ಷಣವಲ್ಲ.
*ಆಗಾಗ್ಗೆ ಕಿಟಕಿಗಳು ಮತ್ತು ಬಾಗಿಲುಗಳು ಕೆರಳಿಸುವ ಶಬ್ದಗಳನ್ನು ಮಾಡಿದರೆ ಅದು ನಕಾರಾತ್ಮಕ ಶಕ್ತಿ ಎನಿಸಿಕೊಳ್ಳುತ್ತದೆ.
*ನಿಮ್ಮ ಕೈಯ್ಯಿಂದ ಆಗಾಗ್ಗೆ ಹಾಲು ಚೆಲ್ಲುತ್ತಿದ್ದರೆ ಅದು ನೆಗೆಟಿವ್ ಎನರ್ಜಿ ಎಂದು ಹೇಳಲಾಗುತ್ತದೆ.
*ಕುಟುಂಬದಲ್ಲಿ ಸದಸ್ಯರ ಮಧ್ಯೆ ಅತಿಯಾದ, ಅನಗತ್ಯ ವಾದಗಳು ನಡೆಯುತ್ತಿದ್ದರೆ ಅದು ನಕಾರಾತ್ಮಕ ಶಕ್ತಿಯ ಚಿಹ್ನೆಯಾಗಿದೆ.
ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಪರಿಹಾರಗಳು
ತಜ್ಞರು ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಪರಿಹಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಮನೆಯಿಂದ ನೆಗೆಟಿವ್ ಎನರ್ಜಿ ಹೊರಹಾಕಬಹುದು ಎಂದು ಹೇಳಿದ್ದಾರೆ.
*ನಿಮ್ಮ ವಾಶ್ ರೂಂನಲ್ಲಿ ಒಂದು ಬಟ್ಟಲಿನಲ್ಲಿ ಕರ್ಪೂರವನ್ನು ಇರಿಸಿ.
*ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ ಇರಿಸಿ.
View this post on Instagram
*ಆಗಾಗ ನೆಲ ಒರೆಸುವ ನೀರಿಗೆ ಒಂದು ಚಿಟಿಕೆ ಸಮುದ್ರದ ಉಪ್ಪನ್ನು ಸೇರಿಸಿ ನೆಲವನ್ನು ಒರೆಸಿ.
ಇದನ್ನೂ ಓದಿ: Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ
*ಕರ್ಪೂರ ಮತ್ತು ಲವಂಗವನ್ನು ಸುಡಿ. ಅದರ ಪರಿಮಳವು ಮನೆಯಲ್ಲಿ ಹರಡಿದರೆ ಅದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.
* ಸೇಜ್ ಎಲೆಗಳನ್ನುನ ಸುಡಿ. ಇದು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುತ್ತದೆ.
*ರಕ್ಷಣೆಗಾಗಿ ಹೀಲಿಂಗ್ ಸ್ಫಟಿಕಗಳನ್ನು ಧರಿಸಿ.
*ಮನೆಯನ್ನು ಕಿಟಕಿ, ಬಾಗಿಲುಗಳನ್ನು ಆಗಾಗ್ಗೆ ತೆರೆದಿಡಿ. ಇದರಿಂದ ತಾಜಾ ಗಾಳಿ ಮನೆಯೊಳಗೆ ಬರುತ್ತದೆ.
*ಮನೆಯನ್ನು ಆದಷ್ಟು ಸ್ವಚ್ಛವಾಗಿಡಿ. ಇದರಿಂದ ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ಧನಾತ್ಮಕತೆ ತುಂಬಿಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ