Negative Energy: ಮನೆಯಲ್ಲಿ ಕಾಣಿಸುವ ಈ ಲಕ್ಷಣ ನೆಗೆಟಿವ್ ಎನರ್ಜಿಯ ಸೂಚನೆಯಂತೆ

ವಾಸ್ತು

ವಾಸ್ತು

Vastu Tips: ನಿಮಗೆ ಸ್ಫೂರ್ತಿ ಮತ್ತು ಸಂತೋಷವನ್ನು ಉಂಟು ಮಾಡದ ಭೌತಿಕ ಸರಕುಗಳನ್ನು ನೀವು ಸಂಗ್ರಹಿಸಿದರೆ, ನೀವು ನಿಮ್ಮ ಮತ್ತು ವಸ್ತುಗಳ ನಡುವೆ ನಕಾರಾತ್ಮಕ ಶಕ್ತಿಯನ್ನು ಹಾದು ಹೋಗಲು ಅನುಮತಿಸುತ್ತಿದ್ದೀರಿ ಎಂದರ್ಥ. ಆ ನಕಾರಾತ್ಮಕ ಶಕ್ತಿಯು ನಂತರ ಆ ಜಾಗವನ್ನು ತುಂಬುತ್ತದೆ.

  • Trending Desk
  • 5-MIN READ
  • Last Updated :
  • Share this:

ಕೆಲವರು ತುಂಬಾ ದುಡ್ಡು ಖರ್ಚು (Money) ಮಾಡಿ ಐಷಾರಾಮಿಯಾಗಿರುವ ಮನೆಯೆನೋ (Home) ಕಟ್ಟಿಸಿಕೊಳ್ಳುತ್ತಾರೆ, ಆದರೆ ಅಲ್ಲಿ ಹೋದ ನಂತರ ಅವರ ಮನಸ್ಸಿಗೆ ನೆಮ್ಮದಿ, ಸಂಸಾರದಲ್ಲಿ ಸುಖ ಶಾಂತಿ ಎಳ್ಳಷ್ಟೂ ಇರುವುದಿಲ್ಲ. ‘ಏನೋ ನೋಡಿ ಹಣ ಖರ್ಚು ಮಾಡಿ ಮನೆಯನ್ನ ಕಟ್ಟಿಸಿಕೊಂಡ್ರೆ ನೆಮ್ಮದಿನೇ ಇಲ್ಲ ಕಣ್ರೀ’ ಅಂತ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು, ನಾವು ದಿನವಿಡೀ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರೆ ನಮಗೆ ಒಂದು ರೀತಿಯ ನೆಮ್ಮದಿ ಅಂತ ಅನ್ನಿಸಬೇಕು. ಆದರೆ ಅದೆಷ್ಟೋ ಬಾರಿ ಕೆಲ ಮನೆಗಳಿಗೆ (house) ಹೋದಾಗ ನಮಗೆ ತುಂಬಾನೇ ಸಕಾರಾತ್ಮಕವಾದ ವಾತಾವರಣ ಅಲ್ಲಿದೆ ಅಂತ ಅನ್ನಿಸುತ್ತದೆ. ಇನ್ನೂ ಕೆಲವು ಮನೆಗಳಿಗೆ ಹೋದರೆ ಅಲ್ಲಿ ಒಂದು ನಿಮಿಷ ಸಹ ನೆಮ್ಮದಿಯಿಂದ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಅಂತ ಹೇಳಬಹುದು. ಇದಕ್ಕೆ ಹುಡುಕುತ್ತಾ ಹೋದಂತೆ ಅನೇಕ ರೀತಿಯ ಕಾರಣಗಳು ನಮಗೆ ಸಿಗುತ್ತಾ ಹೋಗುತ್ತವೆ.


ಮನೆಯನ್ನು ವಾಸ್ತು ಪ್ರಕಾರವಾಗಿ ಕಟ್ಟಿಸಿದರೆ ಅಲ್ಲಿ ಬಾಗಿಲು, ಕಿಟಕಿಗಳಿಂದ ಒಳ್ಳೆಯ ಗಾಳಿ, ಬೆಳಕು ಮನೆಯೊಳಗೆ ಪ್ರವೇಶಿಸುತ್ತೆ ಅಂತ ಅನೇಕರು ಹೇಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಈ ಮನೆಗಳಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ಆ ಶಕ್ತಿಯನ್ನು ನಾವು ಮೊದಲು ಅರ್ಥ ಮಾಡಿಕೊಂಡು ಅದನ್ನು ಮನೆಯಿಂದ ಹೊಡೆದೊಡಿಸಿ ಮನೆಯಲ್ಲಿ ಸಕಾರಾತ್ಮಕತೆಯನ್ನು ತರಲು ಕೆಲವು ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು.


ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಅಂತ ತಿಳಿಸುತ್ತವೆ ಈ 13 ಚಿಹ್ನೆಗಳು


ನಿಮ್ಮ ಜೀವನದಲ್ಲಿ ಏನೋ ಒಂದು ರೀತಿಯ ಅಸಮಾಧಾನ, ಕೆಟ್ಟ ಭಾವನೆ ಇದ್ದರೆ ಮತ್ತು ಅದು ಏಕೆ ಇದೆ ಅಂತ ನಿಮಗೆ ಅರ್ಥವಾಗದೆ ಇದ್ದರೆ, ಅಲ್ಲಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಆಳವಾಗಿ ಹುದುಗಿರಬಹುದು ಅಂತ ಮೊದಲು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೇಗೆ ಕಂಡು ಹಿಡಿಯುವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಮನೆಯಲ್ಲಿ ಬಹಳಷ್ಟು ಗೊಂದಲವಾಗುವುದು


ನಿಮ್ಮ ಮನಸ್ಸಿನಲ್ಲಿ ಏನಾಗುತ್ತದೆಯೋ ಅದು ನಿಮ್ಮ ಹೊರಗಿನ ಪ್ರಪಂಚದ ಮೇಲೆ ಸಹ ಪರಿಣಾಮ ಬೀರಬಹುದು. ನಿಮಗೆ ದುಃಖ ಅಥವಾ ಕೋಪ ಬಂದರೆ, ನಿಮ್ಮ ಚರ್ಮದ ಮೇಲೆ ಆ ಭಾವನೆ ದದ್ದುಗಳಾಗುವುದರೊಂದಿಗೆ ಪ್ರತಿಬಿಂಬಿಸುತ್ತದೆ. ನೀವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಮತ್ತು ವ್ಯಾಯಾಮ ಮಾಡದಿದ್ದರೆ, ನಿಮ್ಮ ಮನಸ್ಥಿತಿ ಸಕಾರಾತ್ಮಕ ಭಾವನೆಯನ್ನು ಅನುಭವಿಸಲು ಹೆಣಗಾಡುತ್ತದೆ.


ನಮ್ಮ ಮನೆಯಲ್ಲೂ ಸಹ ಇದೇ ರೀತಿಯಾಗಿರುತ್ತದೆ, ಒಳಗೆ ಮತ್ತು ಹೊರಗೆ ಏನಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸುತ್ತವೆ. ಮನೆಯಲ್ಲಿ ವಿಷಯಗಳು ತುಂಬಾನೇ ಗೊಂದಲ ಅಂತ ಅನ್ನಿಸಲು ಶುರುವಾದಾಗ ಅಲ್ಲಿ ನಕಾರಾತ್ಮಕವಾದ ಶಕ್ತಿ ಇದೆ ಅಂತ ತಿಳಿದುಕೊಳ್ಳಬೇಕು.


ಮನೆಯಲ್ಲಿ ಬಹುಶಃ ಯಾವ ವಿಷಯವೂ ಸಹ ಸರಿಯಾಗಿ ನಡೆಯುತ್ತಿಲ್ಲ ಅಂತಾದರೆ ಅಲ್ಲಿ ನಕಾರಾತ್ಮಕ ಶಕ್ತಿ ಇದೆ ಅಂತ ಅರ್ಥ. ಸಾಮಾನ್ಯವಾಗಿ ಹುರುಪಿನಿಂದ ತುಂಬಿದ ಮನೆಯಲ್ಲಿ ಈ ರೀತಿಯ ಗೊಂದಲಗಳು ಕಂಡು ಬರುವುದಿಲ್ಲ.


ಮನೆಯಲ್ಲಿ ಒಂದು ರೀತಿಯ ದುರ್ವಾಸನೆ ಬರುತ್ತದೆ


ಗೊಂದಲವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಕೇತವಾಗಿರುವುದರಿಂದ ಮತ್ತು ಆ ಪ್ರದೇಶವನ್ನು ಸ್ವಚ್ಛವಾಗಿಡಲು ಕಷ್ಟವಾಗುವುದರಿಂದ, ಇದು ಮನೆಯಲ್ಲಿ ಕೆಟ್ಟ ವಾಸನೆಗೂ ಸಹ ಕಾರಣವಾಗಬಹುದು.


ಆದಾಗ್ಯೂ, ನಕಾರಾತ್ಮಕ ಶಕ್ತಿಯು ದುರ್ವಾಸನೆ ಬೀರಲು ಗೊಂದಲವನ್ನು ಕಂಡು ಹಿಡಿಯಬೇಕಾಗಿಲ್ಲ. ನಕಾರಾತ್ಮಕ, ಅಂಟಿಕೊಂಡಿರುವ ಶಕ್ತಿಯು ಆಗಾಗ್ಗೆ ತೇವವಾದ ಅಥವಾ ಒದ್ದೆಯಾದ ವಾಸನೆಯನ್ನು ನೀಡುತ್ತದೆ. ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಮನೆ ತಾಜಾ ಮತ್ತು ನೈಸರ್ಗಿಕ ವಾಸನೆಯನ್ನು ಹೊಂದಿರುತ್ತದೆ, ಆದರೆ ನಕಾರಾತ್ಮಕ ಶಕ್ತಿಯಿಂದ ತುಂಬಿದ ಮನೆ ಮೂಗಿಗೆ ಅಂಟಿಕೊಳ್ಳುತ್ತದೆ.


ವಾದ-ವಿವಾದಗಳು ಹೆಚ್ಚಾಗುತ್ತದೆ. 


ಈ ನಿರ್ದಿಷ್ಟ ಪರಿಸ್ಥಿತಿಯು ಒಂದು ವಿಷವರ್ತುಲಕ್ಕೆ ಕಾರಣವಾಗುತ್ತದೆ. ವಾದ-ವಿವಾದಗಳು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಬಹುದು, ಆದರೆ ನಕಾರಾತ್ಮಕ ಶಕ್ತಿಯು ವಾದಗಳನ್ನು ಸಹ ಉಂಟು ಮಾಡಬಹುದು.


ನಿಮ್ಮೊಂದಿಗೆ ವಾಸಿಸುವ ಇತರರೊಂದಿಗೆ ಅಥವಾ ನೀವು ಫೋನ್ ನಲ್ಲಿದ್ದಾಗ ಮನೆಯಲ್ಲಿ ಹೆಚ್ಚು ವಾಗ್ವಾದಗಳು ಇರುವುದನ್ನು ನೀವು ಗಮನಿಸಿದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದರ ಸಂಕೇತ ಅದಾಗಿರುತ್ತದೆ.
ದುಃಸ್ವಪ್ನಗಳು , ನಿದ್ರಾಹೀನತೆ


ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೇಗೆ ಕಂಡು ಹಿಡಿಯುವುದು ಎಂದು ನಿಮ್ಮ ನಿದ್ರೆಯ ಮಾದರಿಗಳನ್ನು ನೋಡಿ ತಿಳಿದುಕೊಳ್ಳಬಹುದು.


ಧ್ಯಾನವು ನಮ್ಮ ಮನಸ್ಸನ್ನು ನಿಧಾನಗೊಳಿಸುವ ಮತ್ತು ವಿಶ್ರಾಂತಿ ಪಡೆಯುವ ಸಮಯವಾಗಿರುವಂತೆ, ನಿದ್ರೆಯು ದೇಹ, ಮನಸ್ಸು ಮತ್ತು ಆತ್ಮಕ್ಕೆ ಅದನ್ನು ಮಾಡುತ್ತದೆ. ನಿದ್ರಾಹೀನತೆ ಅಥವಾ ದುಃಸ್ವಪ್ನಗಳಿಂದ ನಿಮ್ಮ ನಿದ್ರೆ ಪದೇ ಪದೇ ಹಾಳಾಗುತ್ತಿದ್ದರೆ, ಅಲ್ಲಿ ನಕಾರಾತ್ಮಕ ಶಕ್ತಿ ಇದೆ ಅಂತ ಅರ್ಥ.


ನೀವು ಆರ್ಥಿಕವಾಗಿ ಹೆಣಗಾಡುತ್ತಿರುತ್ತೀರಿ


ನೀವು ಸದಾ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿಕೊಂಡು ಹಣ ಖರ್ಚಾಗುತ್ತಿದ್ದರೆ, ಅಲ್ಲಿ ನಿಮಗೆ ಆರ್ಥಿಕವಾಗಿ ತೊಂದರೆ ಆಗುತ್ತಿರುತ್ತದೆ. ಹಾಗಿದ್ದಾಗ ಮನೆಯಲ್ಲಿ ಶಾಂತಿ ಮತ್ತು ನೆಮಾಡಿ ಇರುವುದಿಲ್ಲ. ಇದೆಲ್ಲಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಎಂಬುದರ ಸೂಚಕಗಳಾಗಿವೆ ಅಂತ ಹೇಳಬಹುದು.


ಮನೆಯಲ್ಲಿ ಸಕಾರಾತ್ಮಕವಾಗಿ ಯೋಚಿಸಲು ತೊಂದರೆ ಆಗುವುದು


ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಮತ್ತೊಂದು ಆವರ್ತಕ ಚಿಹ್ನೆಯೆಂದರೆ ನೀವು ಅಲ್ಲಿದ್ದಾಗ ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯವಾಗದೆ ಇರುವುದು ಅಂತ ಹೇಳಬಹುದು.


ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯ ವಾತಾವರಣವನ್ನು ವ್ಯಾಪಿಸಿದರೆ, ಅದು ನಿರಂತರವಾಗಿ ನಿಮ್ಮ ಆಲೋಚನೆಗಳನ್ನು ಸಹ ಆಕ್ರಮಿಸುತ್ತದೆ. ನೀವು ಅಕ್ಷರಶಃ ನಕಾರಾತ್ಮಕತೆಯಲ್ಲಿ ಉಸಿರಾಡುತ್ತೀರಿ ಅಂತ ತಿಳಿದುಕೊಳ್ಳಬಹುದು. ಅಲ್ಲದೆ ಈ ಯೋಚನೆಗಳು ನಿಮ್ಮ ನಿಮ್ಮ ಮೆದುಳಿಗೆ ನೇರವಾಗಿ ಹೋಗಿ ಸೇರುತ್ತವೆ.


ಮನೆಯಲ್ಲಿ ನಿಮಗೆ ತುಂಬಾನೇ ಆಯಾಸವಾಗುತ್ತದೆ


ದಣಿದು ಮನೆಗೆ ಬರುವುದು ಸರಿ, ಆದರೆ ಮನೆಯಲ್ಲಿ ಇದ್ದಾಗ ಸಹ ನಿಮಗೆ ಆಯಾಸ ಆದರೆ, ಆ ಮನೆಯಲ್ಲಿ ಸಮಸ್ಯೆ ಇದೆ ಅಂತ ಅರ್ಥ. ಮನೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ನಿಮಗೆ ಆಯಾಸ ಅಂತ ಅನ್ನಿಸುವುದು ಮತ್ತು ಉತ್ಸಾಹ ಬಾರದೇ ಇರುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.


ಮನೆಯಲ್ಲಿ ಕೆಲವೊಮ್ಮೆ ಕಪ್ಪು ಛಾಯೆಗಳನ್ನು ನೋಡುತ್ತೀರಿ


ಸಾಮಾನ್ಯವಾಗಿ ನೀವು ಮನೆಯಲ್ಲಿ ಇದ್ದಾಗ ನಿಮಗೆ ಯಾವುದೋ ಒಂದು ಕಪ್ಪು ಛಾಯೆ ನೋಡಿದ ಅನುಭವವಾಗುತ್ತದೆ. ಈ ರೀತಿಯಾಗಿರುವ ಕಪ್ಪು ನೆರಳುಗಳು ನಿಮ್ಮೊಂದಿಗೆ ಮನೆಯಲ್ಲಿ ವಾಸಿಸುವ ಕಪ್ಪು ಅಸ್ತಿತ್ವ ಅಥವಾ ಆತ್ಮವನ್ನು ಸೂಚಿಸಬಹುದು.


ನೀವು ಆಧ್ಯಾತ್ಮಿಕ ವಿದ್ಯಮಾನಗಳನ್ನು ನಂಬುತ್ತೀರೋ ಇಲ್ಲವೋ, ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯು ಕತ್ತಲೆ ಪ್ರದೇಶಗಳನ್ನು ಉಂಟು ಮಾಡುತ್ತದೆ, ಅದನ್ನು ಬೆಳಕು ಮಾತ್ರ ಶುದ್ಧೀಕರಿಸಬಹುದು ಮತ್ತು ಪುನರುಜ್ಜೀವನಗೊಳಿಸಬಹುದು.


ಮನೆಯಲ್ಲಿ ಸಾಕಷ್ಟು ಒತ್ತಡವಿರುತ್ತದೆ


ನೀವು ಮನೆಯ ಹೊಸ್ತಿಲನ್ನು ದಾಟಿದರೆ ಮಾತ್ರ ಆ ವಿಚಿತ್ರವಾದ ಒತ್ತಡ ನಿಮ್ಮಿಂದ ದೂರವಾಗುತ್ತದೆ. ಮನೆಯಲ್ಲಿ ಇರುವಷ್ಟು ಸಮಯ ಆ ವಿವರಿಸಲು ಸಾಧ್ಯವಾಗದ ಒತ್ತಡ ನಿಮ್ಮ ಮೇಲೆ ಇರುತ್ತದೆ ಅಥವಾ ನಿಮ್ಮ ಅನುಭವಕ್ಕೆ ಬರುತ್ತದೆ ಅಂತ ಹೇಳಬಹುದು. ಮನೆಯಲ್ಲಿ ಸಣ್ಣ ವಿಷಯಗಳಿಗೆ ಪ್ರತಿಕ್ರಿಯಿಸುವುದು ಮತ್ತು ಭಯಭೀತರಾಗುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಚಿಹ್ನೆಗಳಾಗಿವೆ.


ಇದನ್ನೂ ಓದಿ: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ


ಮನೆಯಲ್ಲಿ ತಪ್ಪು ತಿಳುವಳಿಕೆಗಳು ಹೆಚ್ಚಾಗುತ್ತವೆ


ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಮನೆ ಪ್ರೀತಿ, ಸಾಮರಸ್ಯ ಮತ್ತು ತಿಳುವಳಿಕೆಯನ್ನು ಹೊರಸೂಸುತ್ತದೆ. ಮನೆಯಲ್ಲಿ ಎಲ್ಲರ ನಡುವೆ ಕೋಪ ಕುದಿಯುವಾಗ, ನಿಸ್ಸಂದೇಹವಾಗಿ ಅಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ ಅಂತ ಹೇಳಬಹುದು.


ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಶಾಂತಿ ಮತ್ತು ತಾಳ್ಮೆಯ ಬದಲು ಅಲ್ಲಿ ಕೋಪ ಮತ್ತು ಅಸೋಯೆ ತುಂಬಿರುತ್ತದೆ ಮತ್ತು ಈ ಗುಣಗಳು ಪರಸ್ಪರರಲ್ಲಿ ತಪ್ಪು ತಿಳಿವಳಿಕೆಯನ್ನು ಹುಟ್ಟು ಹಾಕುತ್ತವೆ ಅಂತ ಹೇಳಬಹುದು.


ಮನೆಯಲ್ಲಿ ವಿಶ್ರಾಂತಿ ಪಡೆಯಲು ಕಷ್ಟವಾಗುತ್ತದೆ


ಮನೆ ಎಂದರೆ ನಮಗೆ ಮೊದಲು ನೆನಪಿಗೆ ಬರುವುದೇ ವಿಶ್ರಾಂತಿ ಪಡೆಯುವ ಸ್ಥಳ ಅಂತ. ಅಂತಹದರಲ್ಲಿ ಮನೆಯಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ಆಗದೆ ಇದ್ದಾಗ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಅಂತ ಅರ್ಥವಾಗುತ್ತದೆ.


ಇದು ಬಹುಶಃ ನೀವು ನಿಮ್ಮ ಮನೆಗೆ ಆದ್ಯತೆ ನೀಡುತ್ತಿಲ್ಲ ಮತ್ತು ಅದಕ್ಕೆ ಅಗತ್ಯವಿರುವ ಸಮಯೋಚಿತ ಆರೈಕೆಯನ್ನು ನೀಡುತ್ತಿಲ್ಲ ಎಂದು ಸೂಚಿಸುತ್ತದೆ.


ಮನೆಯಲ್ಲಿ ಪ್ರೇರೇಪಣೆಯಿಲ್ಲದ ಹಾಗೆ ಅನ್ನಿಸುತ್ತದೆ


ಮನೆಯಲ್ಲಿ ಒಂದು ರೀತಿಯ ಸಕಾರಾತ್ಮಕ ಶಕ್ತಿ ಇದ್ದಾಗ, ಮನೆಯಲ್ಲಿ ಒಂದು ರೀತಿಯ ಉತ್ಸಾಹ, ಸ್ಪೂರ್ತಿ ಸಿಗುತ್ತದೆ. ಅದೇ ಮನೆಯಲ್ಲಿ ನಕಾರಾತ್ಮಕತೆ ಮನೆ ಮಾಡಿದಾಗ, ಅಲ್ಲಿ ಯಾವುದೇ ರೀತಿಯ ಪ್ರೇರಣೆ ಸಿಗುವುದಿಲ್ಲ. ಇದು ಕೇವಲ ಮಲಗುವ ಸ್ಥಳಕ್ಕೆ ಸೀಮಿತವಾಗಿಲ್ಲ. ಆದ್ದರಿಂದ ಮನೆಯಲ್ಲಿ ವಿಷಯಗಳು ಮಂದವಾಗಿರುವುದನ್ನು ನೀವು ಗಮನಿಸಿದಾಗ, ನಕಾರಾತ್ಮಕತೆಯನ್ನು ಪರಿಹರಿಸಲು ಪ್ರಾರಂಭಿಸಿ.


ಇದನ್ನೂ ಓದಿ: ಅಪ್ಪಿ-ತಪ್ಪಿ ರಾಹುಕಾಲದಲ್ಲಿ ಈ ಕೆಲಸಗಳನ್ನು ಮಾಡ್ಬೇಡಿ


ನಿಮಗೆ ಸ್ಫೂರ್ತಿ ಮತ್ತು ಸಂತೋಷವನ್ನು ಉಂಟು ಮಾಡದ ಭೌತಿಕ ಸರಕುಗಳನ್ನು ನೀವು ಸಂಗ್ರಹಿಸಿದರೆ, ನೀವು ನಿಮ್ಮ ಮತ್ತು ವಸ್ತುಗಳ ನಡುವೆ ನಕಾರಾತ್ಮಕ ಶಕ್ತಿಯನ್ನು ಹಾದು ಹೋಗಲು ಅನುಮತಿಸುತ್ತಿದ್ದೀರಿ ಎಂದರ್ಥ. ಆ ನಕಾರಾತ್ಮಕ ಶಕ್ತಿಯು ನಂತರ ಆ ಜಾಗವನ್ನು ತುಂಬುತ್ತದೆ.


ನೀವು ನಕಾರಾತ್ಮಕ ಶಕ್ತಿಯನ್ನು ನಿಮ್ಮ ಮನೆಯನ್ನು ಆಕ್ರಮಿಸಲು ಬಿಟ್ಟರೆ, ನಕಾರಾತ್ಮಕತೆಯ ಇನ್ನಷ್ಟು ಅಪಾಯಕಾರಿ ಚಿಹ್ನೆಗಳನ್ನು ನೀವು ನೋಡಲು ಪ್ರಾರಂಭಿಸಬಹುದು. ಆದ್ದರಿಂದ ಈ ನಕಾರಾತ್ಮಕತೆಯನ್ನು ಹೊಡೆದೊಡಿಸಿ ಸಕಾರಾತ್ಮಕ ಶಕ್ತಿಯಿಂದ ಅದನ್ನು ತುಂಬಿರಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು