Champa Shashti: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಚಂಪಾ ಷಷ್ಠಿ ಸಂಭ್ರಮ, ಈ ಹಬ್ಬದ ಹಿನ್ನೆಲೆ, ವೈಶಿಷ್ಟ್ಯ ಏನು?

Kukke Subramanya: ಸುಬ್ರಹ್ಮಣ್ಯದಲ್ಲಿ ನೆಲೆ ನಿಂತಿರುವ ಕಾರ್ತಿಕೇಯ ಸ್ವಾಮಿಯನ್ನ ನಾಗ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ದಿ ಹೊಂದಿದೆ

ಸುಬ್ರಹ್ಮಣ್ಯ

ಸುಬ್ರಹ್ಮಣ್ಯ

 • Share this:
  ಹಿಂದೂ ಪುರಾಣಗಳ(Hindu mythology) ಪ್ರಕಾರ ಪ್ರತಿಯೊಂದು ಹಬ್ಬಗಳಿಗೆ(Festival) ಮಹತ್ವದ ಸ್ಥಾನವಿದೆ.. ಪ್ರತಿಯೊಬ್ಬ ದೇವರ(God) ಹೆಸರಿನಲ್ಲಿ ವಿವಿಧ ಆಚರಣೆಗಳು, ದೇಶದ ವಿವಿಧೆಡೆ ನಡೆಯುತ್ತಲೇ ಇರುತ್ತವೆ.. ಅದ್ರಲ್ಲೂ ಮಾರ್ಗಶಿರ ಮಾಸದಲ್ಲಿ ಬರುವ ಚಂಪಾಷಷ್ಠಿ ಹಿಂದೂಗಳ(Hindu) ಪಾಲಿಗೆ ವಿಶಿಷ್ಟವಾದ ಹಬ್ಬ.. ಕರ್ನಾಟಕ(Karnataka)ಮಾತ್ರವಲ್ಲದೇ ಕೇರಳ(Kerala) ಮಹಾರಾಷ್ಟ್ರದಲ್ಲಿ(Maharashtra) ಅದ್ದೂರಿಯಾಗಿ ಆಚರಣೆ ಮಾಡುವ ಈ ಚಂಪಾ ಷಷ್ಠಿ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ಕರ್ನಾಟಕದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.. ಚಂಪಾ ಷಷ್ಠಿಯ(Champa Shashti) ದಿನ ಶಿವನ ಮಗನಾದ ಸುಬ್ರಮಣ್ಯ ಸ್ವಾಮಿಯ ಪೂಜೆ ಮಾಡುವುದರಿಂದ ಹಲವು ಸಮಸ್ಯೆಗಳು ದೂರಾಗುತ್ತದೆ ಎಂಬ ನಂಬಿಕೆಯಿದೆ.ಕಾರ್ತಿಕೇಯ, ಸ್ಕಂದ, ಮುರುಗನ್, ವೇಲನ್ ಕುಮಾರ್ ಹೀಗೆ ನಾನಾ ಹೆಸರಿನಿಂದ ನಾನಾ ಭಾಗಗಳಲ್ಲಿ ಕರೆಯಲ್ಪಡುವ ಸುಬ್ರಹ್ಮಣ್ಯ ಸ್ವಾಮಿಯನ್ನು ಚಂಪಾ ಷಷ್ಠಿಯಂದು ಸಂಪ್ರದಾಯ ಬದ್ಧವಾಗಿ ಪೂಜೆ ಮಾಡುವುದರಿಂದ ಸರ್ಪದೋಷದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಹಿಂದೂ ಪುರಾಣಗಳಲ್ಲಿ ಇದೆ.

  ಚಂಪಾ ಷಷ್ಠಿಯ ಹಿನ್ನೆಲೆಯೇನು..?

  ಹಿಂದೂ ಪುರಾಣಗಳ ಪ್ರಕಾರ, ಚಂಪಾ ಷಷ್ಠಿ ಶಿವ ಮತ್ತು ಕಾರ್ತಿಕೇಯನಿಗೆ ಸಮರ್ಪಿತವಾಗಿದೆ.. ಬ್ರಹ್ಮನಿಂದ ವರ ಪಡೆದ ಮಣಿ ಮತ್ತು ಮಲ್ಲ ಎಂಬ ರಾಕ್ಷಸರು ದೇವತೆಗಳು ಹಾಗೂ ಮನುಷ್ಯರಿಗೆ ಕಿರುಕುಳ ನೀಡಲು ಆರಂಭಿಸಿದರು. ಇವನ ಕಾಟದಿಂದ ಮುಕ್ತಿ ನೀಡುವಂತೆ ದೇವಾನುದೇವತೆಗಳು ಶಿವನ ಬಳಿಬಂದು ಬೇಡಿಕೊಂಡಾಗ ಶಿವ ಇವರನ್ನ ಸಂಹಾರ ಮಾಡುವ ನಿರ್ಣಯಕ್ಕೆ ಬಂದು, ಸಹಚರರ ಜೊತೆ ಮಣಿ ಚೂರ್ಣ ಎಂಬ ಪರ್ವತಕ್ಕೆ ಬಂದನಂತೆ..ಅಲ್ಲಿ ಭೈರವನ ರೂಪ ಧರಿಸಿ ಮಾರ್ಗಶಿರ ಮಾಸದ ಮೊದಲ ದಿನದಂದು ಮತು ಮಲ್ಲನ ವಿರುದ್ಧ ಹೋರಾಟ ಪ್ರಾರಂಭ ಮಾಡಿದರಂತೆ..ಇಬ್ಬರು ರಾಕ್ಷಸರಿಗೂ ಮತ್ತು ಶಿವನಿಗೆ ಸತತ ಆರು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಮಣಿ ಹಾಗೂ ಮಹಾಶಿವನ ಕಾಲಿನ ಮೇಲೆ ಬಿದ್ದು ಸಾವನ್ನಪ್ಪಿದರು.. ಹೀಗಾಗಿ ಆರನೇ ದಿನ ರಾಕ್ಷಸರ ಸೋಲು ಉಂಟಾಗಿದ್ದರಿಂದ ಚಂಪಾ ಷಷ್ಠಿ ಆಚರಣೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ..

  ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿಯೂ ಎಡೆಸ್ನಾನಕ್ಕೆ ಅವಕಾಶವಿಲ್ಲ

  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಆಚರಣೆ ನಡೆದಿದ್ದು ಹೇಗೆ..?

  ಹಿಂದೂ ಪುರಾಣದ ಪ್ರಕಾರ ದಕ್ಷನ 13 ಜನ ಮಕ್ಕಳು ಋಷಿ ಕಶ್ಯಪ ಮುನಿಯ ಪತ್ನಿಯರು.. ಕೃಷಿ ಕಶ್ಯಪನ ಪತ್ನಿಯರಲ್ಲಿ ಇಬ್ಬರಾದ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ವಿಷಯ ವಿನುತಾಳ ಮಗ ಗರುಡನಿಗೆ ತಿಳಿದಾಗ ಕದ್ರುವಿನ ಮಕ್ಕಳು ಸರ್ಪದ ಮೇಲೆ ಗರುಡ ಸೇಡುತೀರಿಸಿಕೊಳ್ಳಲು ಆರಂಭ ಮಾಡುತ್ತಾನೆ... ಪ್ರಾಣ ಭೀತನಾದ ಕದ್ರುವಿನ ಮಗ ವಾಸುಕಿ ಭೂಲೋಕಕ್ಕೆ ಓಡಿಬಂದು ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ಅಡಗಿಕೊಳ್ಳುತ್ತಾನೆ.

  ಇತ್ತ ವಾಸುಕಿ ಅಡಗಿಕೊಂಡಿರುವ ವಿಷಯ ತಿಳಿದು ಬಂದಾಗ ವಾಸುಕಿ ಹಾಗೂ ಗರುಡನ ಮಧ್ಯೆ ಘೋರ ಯುದ್ಧ ನಡೆಯುತ್ತದೆ. ಹೇಗೆ ಸ್ಥಳಕ್ಕೆ ಬಂದ ಕಶ್ಯಪ ಮಹರ್ಷಿ ಯುದ್ಧ ತಡೆಯುತ್ತಾನೆ. ಅಲ್ಲದೆ ವಾಸುಕಿಗೆ ಶಿವನ ಕುರಿತು ತಪಸ್ಸು ಮಾಡುವಂತೆ ಹೇಳಿ ಕಶ್ಯಪ ಮಹರ್ಷಿ ಅಲ್ಲಿಂದ ತೆರಳುತ್ತಾರೆ. ಶಿವನ ಕುರಿತು ತಪಸ್ಸು ನಡೆಸಿದ ವಾಸುಕಿಗೆ ಶಿವ ಪ್ರತ್ಯಕ್ಷನಾಗಿ ನಮಗ ಸುಬ್ರಹ್ಮಣ್ಯ ಸ್ವಾಮಿ ಜನಿಸುವ ವರೆಗೂ ನೀನು ಇಲ್ಲಿಯೇ ಇದ್ದು ತಪಸ್ಸು ಆಚರಿಸಿ ಎಂದು ಹೇಳುತ್ತಾನಂತೆ.. ಕೊನೇಗೆ ಸುಬ್ರಹ್ಮಣ್ಯಸ್ವಾಮಿಯ ಜನನದ ಬಳಿಕ, ಸುಬ್ರಮಣ್ಯ ತಾರಕಾಸುರನನ್ನು ಕೊಂದ ಆಯುಧ ಹಿಡಿದುಕೊಂಡು ಬಂದು ಧಾರಾ ನದಿಯಲ್ಲಿ ಒಂದು ತೊಳೆಯುತ್ತಾನಂತೆ.. ಇಷ್ಟೇ ಅಲ್ಲದೆ ಇಂದ್ರನ ಮಗಳಾದ ದೇವಸೇನೆ ಯೊಂದಿಗೆ ಓಡಿಬಂದು ಕುಮಾರಧಾರಾ ನದಿ ತಟದಲ್ಲಿ ಚಂಪಾ ಷಷ್ಠಿಯಂದು ಮದುವೆ ಆಗುತ್ತಾನಂತೆ.. ಹೀಗಾಗಿ ಕುಕ್ಕೆಸುಬ್ರಹ್ಮಣ್ಯದಲ್ಲಿ ಪ್ರತಿವರ್ಷ ಚಂಪಾ ಷಷ್ಠಿಯನ್ನು ಮಾರ್ಗಶಿರ ಮಾಸದಲ್ಲಿ ಆಚರಣೆ ಮಾಡಲಾಗುತ್ತದೆ.

  ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮಕ್ಕೆ ಬಂದರು ವಿಶೇಷ ಅತಿಥಿಗಳು; ಯಾರಿವರು?

  ಇನ್ನು ಸುಬ್ರಹ್ಮಣ್ಯದಲ್ಲಿ ನೆಲೆ ನಿಂತಿರುವ ಕಾರ್ತಿಕೇಯ ಸ್ವಾಮಿಯನ್ನ ನಾಗ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ದಿ ಹೊಂದಿದೆ
  Published by:ranjumbkgowda1 ranjumbkgowda1
  First published: