• Home
  • »
  • News
  • »
  • astrology
  • »
  • Siddeshwar Swamiji: ಸರಳ ಸಂತ ಸಿದ್ದೇಶ್ವರ ಸ್ವಾಮೀಜಿ ಕಲಿಸಿದ ಬದುಕಿನ ಪಾಠಗಳಿವು

Siddeshwar Swamiji: ಸರಳ ಸಂತ ಸಿದ್ದೇಶ್ವರ ಸ್ವಾಮೀಜಿ ಕಲಿಸಿದ ಬದುಕಿನ ಪಾಠಗಳಿವು

 ಸಿದ್ದೇಶ್ವರ ಶ್ರೀ

ಸಿದ್ದೇಶ್ವರ ಶ್ರೀ

Siddeshwara Swamiji Speech: ಅಪಾರ ಭಕ್ತರು, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಿದ್ದೇಶ್ವರ ಶ್ರೀಗಳು ಸರಳವಾಗಿಯೇ ಬದುಕಿದವರು. ಅವರ ಸರಳತೆಯೇ ಎಲ್ಲರಿಗೂ ಮಾದರಿ. ಸಿದ್ದೇಶ್ವರ ಶ್ರೀಗಳು ಹೇಳಿದ ಬದುಕಿನ 10 ಪಾಠಗಳು ಇಲ್ಲಿದೆ.  

  • Share this:

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜ್ಞಾನಯೋಗಾಶ್ರಮದ (Jnanayogashrama) ಸಿದ್ದೇಶ್ವರ ಶ್ರೀಗಳು (Siddeshwara Swamiji) ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಸ್ವಾಮೀಜಿ ಪ್ರವಚನಕಾರರಾಗಿಯೂ ಪ್ರಸಿದ್ಧಿ ಗಳಿಸಿದ್ದರು.ಅವರು ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗೆ ಕಾರಣವಾಗುತ್ತಿತ್ತು.  ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ಅಪಾರ ಭಕ್ತರು, ಕೋಟ್ಯಾಂತರ ಅಭಿಮಾನಿಗಳನ್ನು (Fans)  ಹೊಂದಿರುವ ಸಿದ್ದೇಶ್ವರ ಶ್ರೀಗಳು ಸರಳವಾಗಿಯೇ ಬದುಕಿದವರು. ಅವರ ಸರಳತೆಯೇ ಎಲ್ಲರಿಗೂ ಮಾದರಿ. ಸಿದ್ದೇಶ್ವರ ಶ್ರೀಗಳು ಹೇಳಿದ ಬದುಕಿನ (Life)  ಪಾಠಗಳು ಇಲ್ಲಿದೆ.  


ಅನ್ಯಾಯದಿಂದ ಬದುಕುವುದು ಸುಲಭವಲ್ಲ


ಅನ್ಯಾಯ ಮತ್ತು ಪಾಪದ ದುಡ್ಡಿನಲ್ಲಿ ವೈಭೋಗದ ಜೀವನ ನಡೆಸುವುದು ಹುಲಿಯ ಮೇಲೆ ಕುಳಿತು ಸವಾರಿ ಮಾಡಿದಂತೆ. ನೋಡುವವರು ಭಯ ಪಡುವುದು ಕೇವಲ ಆತ ಕುಳಿತಿರುವ ಹುಲಿಯನ್ನು  ನೋಡಿ. ಜೀವನದ ಯಾವುದೇ ಕ್ಷಣದಲ್ಲಿ ಹುಲಿಯ ಮೇಲಿನಿಂದ ಕೆಳಗಿಳಿದರೆ ಸ್ವತಃ ಆ ಹುಲಿ ಆತನನ್ನ ತಿಂದು ಹಾಕುತ್ತದೆ. ಯಾಕೆಂದರೆ ಜೀವನ ಎಂಬ ಪಯಣದಲ್ಲಿ ಮಾಡಿದ ಪಾಪಗಳು ನಮ್ಮ ಜೊತೆಗೆ ಪಯಣಿಸುತ್ತಿರುತ್ತವೆ. ನಮ್ಮನ್ನ ನುಂಗಲು ಸೂಕ್ತ ಸಮಯಕ್ಕೆ  ಕಾಯುತ್ತಿರುತ್ತವೆ. ಮಾಡಿದ ಒಳ್ಳೆಯ ಕೆಲಸಗಳು ಶ್ರೀರಕ್ಷೆಯಾಗಿ ಸದಾ ನಮ್ಮನ್ನ ಕಾಯುತ್ತಿರುತ್ತದೆ.


ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ. ನಿನ್ನ ಪಾಡಿಗೆ ನೀನಿರು. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ.


ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆ ವಿಶ್ವ-ಚಿಂತನೆ ಹಾಗೂ ಸತ್ಯಶೋಧನೆಗಳಿಂದ ಅದರ  ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ.


ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂಥಹ ಜೀವನದಲ್ಲಿ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.


ಇದನ್ನೂ ಓದಿ: 'ಸರಳ ಸಂತ' ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? 'ಜ್ಞಾನಯೋಗಿ'ಯ ಜೀವನಗಾಥೆ ಇಲ್ಲಿದೆ ಓದಿ


ಯಾವುದೂ ಅಸಾಧ್ಯವಲ್ಲ, ಸಾಧನೆ ಮಾಡಲು ಮನಸ್ಸು ಬೇಕು. ಕಷ್ಟಗಳನ್ನು ತಡೆದುಕೊಳ್ಳುವ ಮನಸ್ಸು ಇರಬೇಕು. ಯಾವುದೇ ಸಾಧನೆ ಸಹ ಕಷ್ಟಗಳಿಲ್ಲದೇ ಆಗುವುದಿಲ್ಲ. ದೃಢತೆ ಬೇಕು, ಎಲ್ಲಾ ಕಷ್ಟಗಳನ್ನು ಎದುರಿಸುವ ಧೈರ್ಯಬೇಕು.
ಸಾಧನೆ ಮಾಡಲು ಪರಿಶ್ರಮ ಅಗತ್ಯ


ಯಾರ ಮಾತನ್ನು ಕೇಳದಂತೆ ಛಲ ಬೇಕು. ಅದರಿಂದ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ, ಜೀವನದ ಮೋಹದಲ್ಲಿ ಸಿಲುಕಿಕೊಂಡರೆ ಯಾವುದೂ ಸಾಧ್ಯವಾಗುವುದಿಲ್ಲ.


ಜೀವನದಲ್ಲಿ ಹಣಕ್ಕಿಂತ ಹೆಚ್ಚು ಪ್ರೀತಿಸಿಬೇಕಾಗಿದ್ದು, ಕೊಟ್ಟ ಮಾತನ್ನು ನಡೆಸಿಕೊಡುವುದು. ಜೀವನದಲ್ಲಿ ಸತ್ಯಾಚಾರವೇ ಬಹಳ ಮುಖ್ಯವಾಗುತ್ತದೆ. ಶ್ರದ್ಧೆಯಿಂದ ಹಾಗೂ ಬುದ್ದಿಯಿಂದ ಕೆಲಸ ಮಾಡಬೇಕು, ಆಗ ಮಾತ್ರ ನಮಗೆ ಫಲ ಸಿಗುತ್ತದೆ.


ನಾವು ಒಬ್ಬರನ್ನು ಕೆಟ್ವವರನ್ನು ಎಂದು ಪದೇ ಪದೇ ಹೇಳಬಾರದು. ಬದುಕಿನಲ್ಲಿ ಎಲ್ಲರೂ ಇರುತ್ತಾರೆ, ನಾವು ಜಾಸ್ತಿ ಹೇಳಿದಷ್ಟು ನಮ್ಮ ತಲೆ ಕೆಡುತ್ತದೆ. ಕೆಟ್ಟವರು ಒಳ್ಳೆಯವರು ಹೀಗೆ. ಮುಳ್ಳು ಹಾಗೂ ಹೂವು ಇರುತ್ತದೆ. ಹೊಲಸು ಇರುತ್ತದೆ ಸ್ವಚ್ಛತೆಯೂ ಇರುತ್ತದೆ. ಆದರೆ ನಾವು ಎಂಥಹವರ ಸಂಘ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು.


ನಾವು ಮಹಾನುಭಾವರ ಸಂಘ ಮಾಡಬೇಕು. ಯಾರ ಹತ್ತಿರ ಹೋದರೆ ಸಮಾಧಾನ ಆಗುತ್ತದೆ, ಯಾರ ಮಾತು ಕೇಳಿದರೆ ಮನಸ್ಸು ತಂಪಾಗುತ್ತದೆ. ಯಾರ ಸಂಗತಿಯಲ್ಲಿ ಸ್ವಲ್ಪ ಸಮಯ ಕಳೆದರೆ ಬದುಕು ಬದಲಾಗುತ್ತದೆ ಅವರ ಜೊತೆ ಗೆಳೆತನ ಮಾಡಬೇಕು.


ಹಿರಿಯರು ಅನುಭವದಿಂದ ಹೇಳುತ್ತಾರೆ. ಹಾಗಾಗಿ ಹೇಳುವ ವ್ಯಕ್ತಿಗಳು ಹೇಗಿದ್ದಾರೆ ಎಂದು ನೋಡುವ ಬದಲು ಅವರು ಹೇಳುವುದನ್ನು ಕೇಳಿದರೆ ನಮಗೆ ಹಿತವಾಗುತ್ತದೆ ಎಂದರೆ ಅದನ್ನು ಕಲಿಯಬೇಕು.


ಇದನ್ನೂ ಓದಿ: ಸಿದ್ದೇಶ್ವರ ಶ್ರೀ ಲಿಂಗೈಕ್ಯ, ಸೈನಿಕ ಸ್ಕೂಲ್ ಮೈದಾನದಲ್ಲಿಅಂತಿಮ ದರ್ಶನ ಆರಂಭ


ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಸಿಕ್ಕ ಸಿಕ್ಕ ಕಡೆ ಗೊತ್ತಿದೆ ಎಂದು ಮಾತನಾಡುತ್ತಾ ಹೋಗಬಾರದು. ಸಮಯ, ಕಾಲ ಹಾಗೂ ಸಂದರ್ಭ ನೋಡಿಕೊಂಡು ಮಾತನಾಡಬೇಕು. ಮಾತು ನಮ್ಮ ಕೈ ಒಳಗೆ ಇರಬೇಕು.  ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು