• Home
  • »
  • News
  • »
  • astrology
  • »
  • Shravana Masa: ಶುರುವಾಗಲಿದೆ ಶ್ರಾವಣ ಮಾಸ! ಯಾವ ಪೂಜೆ, ವ್ರತ ಮಾಡಿದರೆ ಶ್ರೇಯಸ್ಕರ?

Shravana Masa: ಶುರುವಾಗಲಿದೆ ಶ್ರಾವಣ ಮಾಸ! ಯಾವ ಪೂಜೆ, ವ್ರತ ಮಾಡಿದರೆ ಶ್ರೇಯಸ್ಕರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರಾವಣ ಮಾಸ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ. ಹಾಗಾದರೆ ಶ್ರಾವಣದಲ್ಲಿ ಕೈಗೊಳ್ಳುವ ಧಾರ್ಮಿಕ ಕೆಲಸ ಕಾರ್ಯಗಳೇನು? ಇಲ್ಲಿದೆ ಸವಿವರ.

  • Share this:

ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ ಅನ್ನೋ ಮಾತಿದೆ. ಶ್ರಾವಣ ಮಾಸ ಬಂತು ಅಂದ್ರೆ ಒಳ್ಳೆಯ (Good) ದಿನಗಳು ಅಂತಾನೇ ಅರ್ಥ. ಒಂದು ತಿಂಗಳುಗಳ ಕಾಲ ದೇವಸ್ಥಾನ (Temple), ಮನೆಗಳಲ್ಲಿ (Home) ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಈ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಲು ಸರಿಯಾದ ಸಮಯ ಎಂದು ಹೇಳಲಾಗುತ್ತದೆ. ಅಂತೆಯೇ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಈ ಮಾಸದಲ್ಲಿ (Shravan Masa) ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ. ಪರಶಿವನಿಂದ ಬ್ರಹ್ಮ, ಬ್ರಹ್ಮನಿಂದ ದಕ್ಷ, ದಕ್ಷನಿಂದ ಮನು, ಮನುವಿನಿಂದ ರಾಜರು,ಪ್ರಜೆಗಳು, ಪ್ರಜೆಗಳಲ್ಲಿ, ಸ್ತ್ರೀ-ಪುರುಷರೆಂಬ ಎರಡು ವರ್ಗ, ಪ್ರಜೆಗಳು ಸೌಖ್ಯದಿಂದ ಬಾಳಿ ಬದುಕಲೆಂದು ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಪರ್ವತ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿಂದ ಈ ಸಷ್ಟಿಯು ಸಮೃದ್ಧವಾಗುತ್ತದೆ.  


ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು
ನಾಗ ಚೌತಿ
ನಾಗ ಪಂಚಮಿ
ಪುತ್ರದಾ ಏಕಾದಶಿ
ರಕ್ಷಾಬಂಧನ
ರಾಘವೇಂದ್ರ ಸ್ವಾಮಿಗಳ ಆರಾಧನೆ
ಗೋಕುಲಾಷ್ಟಮಿ
ಅಜ ಏಕಾದಶಿ
ಕಲ್ಕಿ ಜಯಂತಿ
ಶ್ರೀ ವರಮಹಾಕ್ಷ್ಮೀ ಪೂಜೆ
ಮಂಗಳ ಗೌರಿ ವ್ರತ
ಶ್ರಾವಣ ಶನಿವಾರ
ಋಗ್ಉಪಾಕರ್ಮ
ಯಜುರುಪಾಕರ್ಮ
ಶಿರಿಯಾಳ ಷಷ್ಠೀ
ಶ್ರೀ ಕೃಷ್ಣ ಜನ್ಮಾಷ್ಟಮಿ


ಶ್ರಾವಣ ಮಾಸದಲ್ಲಿ ಯಾವ ಪೂಜೆ, ವ್ರತ ಮಾಡ್ತಾರೆ?
ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗೆರೆದು, ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತಿದೆ ಎಂಬ ನಂಬಿಕೆ. ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮಿ ಮಹಾ ಪೂಜಾ ವ್ರತ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತ, ಮಂಗಳಗೌರಿ ವ್ರತ.


ಇದನ್ನೂ ಓದಿ: Diet Tips: ಶ್ರಾವಣ ಮಾಸದಲ್ಲಿ ಯಾವ ಪದಾರ್ಥಗಳನ್ನು ಸೇವಿಸಬಾರದು? ಏನು ತಿನ್ನಬೇಕು?


ವಿದ್ಯಾಬುದ್ಧಿ ವೃದ್ಧಿಗಾಗಿ ಸರಸ್ವತಿ ಮಹಾಪೂಜೆ, ನಾಡಹಬ್ಬ ನಾಗಪಂಚಮಿ, ನಾಗದೇವತೆಗೆ ಹಾಲೆರೆಯುವದು, ಸಹೋದರಿಯರ ರಕ್ಷಾಬಂಧನ, ಶ್ರೀಕಷ್ಣ ಜನ್ಮಾಷ್ಟಮಿ ಆಚರಣೆಗೆ ಈ ಮಾಸವೇ ಪ್ರಧಾನವಾಗಿದೆ. ಶ್ರಾವಣ ಸೋಮವಾರಕ್ಕೆ ಅಗ್ರ ಸ್ಥಾನವನ್ನು ಕಲ್ಪಿಸಲಾಗಿದ್ದು, ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.


ಶ್ರಾವಣ ಮಾಸದಲ್ಲಿ ಯಾವ ದಿನ, ಯಾವ ಪೂಜೆ?
ಸೋಮವಾರದಂದು ಪರಶಿವನನ್ನು ತಪ್ಪದೇ ಆರಾಧಿಸಬೇಕು. ಮಂಗಳವಾರ, ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡಬೇಕು. ಬುಧವಾರ, ಭಗವಾನ್ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಈ ದಿನ ಆರಾಧಿಸಬೇಕು. ಗುರುವಾರ, ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸಬೇಕು. ಶುಕ್ರವಾರದಂದದು ಲಕ್ಷ್ಮಿ ಮತ್ತು ತುಳಸಿಯನ್ನು ಭಕ್ತಿಯಿಂದ ಪೂಜಿಸಬೇಕು. ಶನಿವಾರವನ್ನು, ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರವೆಂದು ಕರೆಯಲಾಗುತ್ತದೆ. ಈ ದಿನ ಸಂಪತ್ತನ್ನು ಪಡೆದುಕೊಳ್ಳಲು ಶನೇಶ್ವರನನ್ನು ಆರಾಧಿಸಬೇಕು.


ಶ್ರಾವಣ ಮಾಸದಲ್ಲಿ ಯಾವ ಮಂತ್ರ ಪಠಿಸಬೇಕು?
ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು, ಶಿವ ಮಂತ್ರಗಳನ್ನು 108 ಬಾರಿ ಅಥವಾ ಅದಕ್ಕೂ ಹೆಚ್ಚು ಬಾರಿ ಮಂತ್ರಗಳನ್ನು ಪಠಿಸಿದ್ರೆ ಒಳ್ಳೆಯದು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.


ಓಂ ನಮಃ ಶಿವಾಯ, ಮಹಾಮೃತ್ಯುಂಜಯ ಮಂತ್ರ, ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ರುದ್ರ ಗಾಯತ್ರಿ ಮಂತ್ರ: ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ, ತನ್ನೋ ರುದ್ರ ಪ್ರಚೋದಯಾತ್


ಶ್ರಾವಣದಲ್ಲಿ ಶಿವನನ್ನು ಆರಾಧಿಸಿ
ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲ ಸಿಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರಿಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು.


ಇದನ್ನೂ ಓದಿ: Astrology: ಮೂರು ರಾಶಿಯವರಿಗೆ ಶ್ರಾವಣದ ಮೊದಲ ಶನಿವಾರ ತುಂಬಾ ವಿಶೇಷ, ಸಿಗಲಿದೆ ಶನಿದೇವರ ಕೃಪೆ


ಮಂಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮುತ್ತದೆ ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ. ಅದಕ್ಕೆ ಶಿವನ್ನು ಹೆಚ್ಚು ಆರಾಧಿಸುತ್ತಾರೆ.

Published by:Savitha Savitha
First published: