ನಮ್ಮ ದೇಶದ ರಸ್ತೆಯ (Road) ಇಕ್ಕೆಲಗಳಲ್ಲಿ ದೇವಸ್ಥಾನಗಳಿದೆ (temple). ಬಹುತೇಕ ಪ್ರತಿ ಹಳ್ಳಿ (Village) ಹಾಗೂ ಪಟ್ಟಣಗಳಲ್ಲಿ ದೇವಸ್ಥಾನವಿರುತ್ತದೆ. ಜನರಿಗೆ ದೇವರ (God) ಮೇಲೆ ಅಚಲವಾದ ನಂಬಿಕೆ. ತಮ್ಮ ಕಷ್ಟಗಳನ್ನು ಪರಿಹರಿಸುವ ಹಾಗೂ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿ ಈ ದೇವರು ಎಂದು ಜನ ಪ್ರತಿದಿನ ಪೂಜಿಸುತ್ತಾರೆ. ನಮ್ಮ ದೇಶದಲ್ಲಿ (Country) ಲಕ್ಷಗಟ್ಟಲೆ ದೇವಸ್ಥಾನಗಳಿದ್ದು, ಆ ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಇಷ್ಟೆಲ್ಲಾ ದೇವಾಲಯಗಳಿದ್ದರೂ ಕೆಲವು ದೇವಾಲಯಗಳು ಬಹಳ ಪ್ರಸಿದ್ಧವಾಗಿರುತ್ತದೆ. ಏಕೆಂದರೆ ಈ ದೇವಾಲಯಗಳು ಬಹಳ ವಿಶೇಷ ಶಕ್ತಿಯನ್ನು ಹೊಂದಿರುತ್ತವೆ. ಅಂಥಹ ಒಂದು ದೇವಾಲಯ ಬಿಹಾರದಲ್ಲಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಿಹಾರದಲ್ಲಿದೆ ಈ ದೇವಸ್ಥಾನ
ಹೌದು, ಬಿಹಾರದ ಪೂರ್ಣಿಯಾ ಜಿಲ್ಲೆ ಒಂದು ಭವ್ಯವಾದ ದೇವಾಲಯವನ್ನು ಹೊಂದಿದ್ದು, ಅದೇ ಶಿತ್ಲಾ ಮಾತಾ ದೇವಸ್ಥಾನ. ಪೂರ್ಣೆಯಾ ಜಿಲ್ಲೆ ಬಿಲ್ಲೋರಿಯ ಶ್ರೀ ಕೃಷ್ಣ ಪುರಿ ವಾರ್ಡ್ ನಂ. 44ರಲ್ಲಿ ಈ ದೇವಾಲಯವಿದ್ದು, ಇಲ್ಲಿನ ದೇವಿಯ ದರ್ಶನ ಮಾಡಿದರೆ ಸಿಡುಬು, ಅಮ್ಮ ಸೇರಿದಂತೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ.
1948ರಲ್ಲಿ ಈ ಮಾತಾ ಶಿತ್ಲಾ ಮಂದಿರ ನಿರ್ಮಾಣವಾಗಿದ್ದು, ದಡಾರ ಸಾಂಕ್ರಾಮಿಕ ರೋಗದಿಂದ ಪೂರ್ಣಿಯಾ ಮತ್ತು ಸೀಮಾಂಚಲ್ ಪ್ರದೇಶಗಳಲ್ಲಿ ಸಾವಿರಾರು ಜನರು ತೊಂದರೆಗೊಳಗಾದಾಗ ಈ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂದು ಮಂದಿರ ಸಮಿತಿ ಅಧ್ಯಕ್ಷ ಪ್ರಮೋದ್ ದೇವನಾಥ್ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ ದಡಾರ ಕಾಯಿಲೆ ಅಲ್ಲಿನ ಜನರ ಪ್ರಾಣಕ್ಕೆ ಕುತ್ತಾಗಿತ್ತು. ಜನರು ಬಹಳ ಪರದಾಡತೊಡಗಿದ್ದರು. ಆದರೆ ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದ ನಂತರ ದಡಾರ ಗುಣವಾಯಿತು. ಅದಕ್ಕಾಗಿಯೇ ಅಂದಿನಿಂದ ಸಿಡುಬು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳು ಈ ದೇವಾಲಯಕ್ಕೆ ಬರುತ್ತಾರೆ. ದೇವಿಯ ದರ್ಶನ ಮಾಡಿದ ನಂತರ ಅವರ ಕಾಯಿಲೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.
ಗ್ರಾಮಸ್ಥರು ಸಹ ಈ ದೇವಿಯ ಪವಾಡಗಳ ಬಗ್ಗೆ ಮಾತನಾಡಿದ್ದು, ಶೀತಲಾ ದೇವಿಯ ಪಾದದ ನೀರು ತುಂಬಾ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ದೇವಿಯ ದರ್ಶನದಿಂದ ಇತರ ಆರೋಗ್ಯ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
ದಡಾರ ಹಾಗೂ ಇತರ ಚರ್ಮರೋಗಗಳಿಗೆ ಸಿಗಲಿದೆ ಮುಕ್ತಿ
ಈ ದೇವಾಲಯದಲ್ಲಿ ಪೂಜೆಯ ನಂತರ ದೇವಸ್ಥಾನದ ಅರ್ಚಕರು ದೇವಿಯ ಪಾದಗಳಿಂದ ನೀರನ್ನು ತೆಗೆದುಕೊಂಡು ದಡಾರ ಪೀಡಿತರು ಮತ್ತು ಚರ್ಮ ರೋಗಗಳಿಂದ ಬಳಲುತ್ತಿರುವವರ ಮೇಲೆ ಸಿಂಪಡಿಸುತ್ತಾರೆ. ಕೆಲವೇ ಗಂಟೆಗಳಲ್ಲಿ ಅವರ ರೋಗ ಗುಣವಾಗುತ್ತವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಈ ಪವಾಡದ ಕಾರಣದಿಂದ ಬಿಹಾರ ಹಾಗೂ ಬೇರೆ ರಾಜ್ಯಗಳಿಂದಲ್ಲ ಮಾತ್ರವಲ್ಲದೇ ವಿದೇಶದಿಂದಲೂ ಅನೇಕರು ಇಲ್ಲಿಗೆ ದೇವಿಯ ದರ್ಶನಕ್ಕೆ ಬರುತ್ತಾರೆ.
ಇದನ್ನೂ ಓದಿ: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!
ಪ್ರತಿ ವರ್ಷ ಶೀತಲ ಪೂಜೆಯ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಬಿಹಾರ, ಯುಪಿ ಜೊತೆಗೆ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಿಂದ ಸಾಕಷ್ಟು ಜನ ಭಕ್ತಾಧಿಗಳು ತಾಯಿಯ ದರ್ಶನಕ್ಕೆ ಬರುತ್ತಾರೆ. ಅಮ್ಮನ ದರ್ಶನದಿಂದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ಸರ್ವ ಭಕ್ತಾಧಿಗಳ ನಂಬಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ