Palm Lines: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಶನಿ ರಿಂಗ್ ಶುಭವೋ - ಅಶುಭವೋ?

ಕೈಯಲ್ಲಿ ಅನೇಕ ಗೆರೆಗಳು ಇವೆ. ಒಂದೊಂದು ಗೆರೆಯು ಒಂದೊಂದು ರೀತಿಯಲ್ಲಿ ವ್ಯಕ್ತಿಯ ಭವಿಷ್ಯ ಹೇಳುತ್ತವೆ. ಹಾಗೆಯೇ ಹಸ್ತಸಾಮುದ್ರಿಕ ಜಗತ್ತಿನಲ್ಲಿ ಶನಿ ರಿಂಗ್ ಎಂದು ಕರೆಯಲ್ಪಡುವ ಒಂದು ಗುರುತು ಇದೆ. ಇಂದು ಅಂಗೈಯಲ್ಲಿ ಕಂಡು ಬರುವ ಶನಿ ರಿಂಗ್ ಕುರಿತು ನಾವು ಇಲ್ಲಿ ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಂಗೈ ರೇಖೆಗಳು (Palm Lines) ಅದೃಷ್ಟದ ಸಂಕೇತ (Symbol of Good Luck) ಎಂದು ಹೇಳಿದ್ದನ್ನು ನೀವು ಕೇಳಿರಬಹುದು. ಭವಿಷ್ಯ (Future) ಹೇಳುವವರು ಅಂಗೈ ರೇಖೆಗಳನ್ನು ನೋಡಿ ವ್ಯಕ್ತಿ ಹೇಗೆ? ಆತನ ಜೀವನದಲ್ಲಿ ಬರುವ ಕಷ್ಟ, ಲಾಭ ಸೇರಿದಂತೆ ಇತ್ಯಾದಿ ವಿವರಣೆ ನೀಡಲಾಗುತ್ತದೆ. ಹಾಗೆಯೇ ಅಂಗೈ ರೇಖೆಗಳು ವ್ಯಕ್ತಿಯಿಂದ ವ್ಯಕ್ತಿಯಲ್ಲಿ ವಿಭಿನ್ನವಾಗಿ ಇರುತ್ತವೆ. ಅದೃಷ್ಟಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳು ಕೈಯ ರೇಖೆಗಳಲ್ಲಿ ಅಡಗಿರುತ್ತವೆ. ಭವಿಷ್ಯವಾಣಿ ನುಡಿಯುವವರು ವ್ಯಕ್ತಿಯ ಕೈಯ ರೇಖೆಗಳನ್ನು ನೋಡಿಯೇ ಹೇಳುತ್ತಾರೆ. ಅಂಗೈಯಲ್ಲಿ ಇರುವ ವಿವಿಧ ರೇಖೆಗಳು ಮತ್ತು ಗುರುತುಗಳು ಶುಭ ಮತ್ತು ಅಶುಭದ ಸಂಕೇತಗಳು ಆಗಿವೆ.  

    ಹಸ್ತಸಾಮುದ್ರಿಕ ಜಗತ್ತಿನಲ್ಲಿ 'ಶನಿ ರಿಂಗ್'

    ಕೈಯಲ್ಲಿ ಅನೇಕ ಗೆರೆಗಳು ಇವೆ. ಒಂದೊಂದು ಗೆರೆಯು ಒಂದೊಂದು ರೀತಿಯಲ್ಲಿ ವ್ಯಕ್ತಿಯ ಭವಿಷ್ಯ ಹೇಳುತ್ತವೆ. ಹಾಗೆಯೇ ಹಸ್ತಸಾಮುದ್ರಿಕ ಜಗತ್ತಿನಲ್ಲಿ 'ಶನಿ ರಿಂಗ್' ಎಂದು ಕರೆಯಲ್ಪಡುವ ಒಂದು ಗುರುತು ಇದೆ. ಇಂದು ಅಂಗೈಯಲ್ಲಿ ಕಂಡು ಬರುವ ಶನಿ ರಿಂಗ್ ಕುರಿತು ನಾವು ಇಲ್ಲಿ ತಿಳಿಯೋಣ.

    ಶನಿ ಉಂಗುರದ ಅರ್ಥವಾದ್ರೂ ಏನು? ಅಂಗೈಯಲ್ಲಿ ಈ ಉಂಗುರ ಎಲ್ಲಿದೆ? ಮತ್ತು ಅದರಿಂದ ಯಾವ ಫಲಿತಾಂಶ ಸಿಗುತ್ತದೆ ಎಂಬುದರ ಕುರಿತು ಇಲ್ಲಿ ನಾವು ವಿವರವಾಗಿ ನೋಡೋಣ.

    ಇದನ್ನೂ ಓದಿ: ಇಂತಹ ವಾಚ್ ಧರಿಸುವುದು ಭಾರಿ ಅದೃಷ್ಟ ತರುತ್ತಂತೆ! ಓದಿ ಜ್ಯೋತಿಷ್ಯ ಸಲಹೆ

     ಕೈಯ ಮಧ್ಯದ ಬೆರಳಿನ ಕೆಳಗೆ ಅರ್ಧ ವೃತ್ತಾಕಾರದ ಗೆರೆ

    ಅಂಗೈ ಮಧ್ಯದ ಬೆರಳಿನ ಕೆಳಗೆ ಅರ್ಧ ವೃತ್ತಾಕಾರದ ರೀತಿಯಲ್ಲಿ ಶನಿ ಪರ್ವತವನ್ನು ಸುತ್ತುವರೆದಿರುವ ರೇಖೆಯನ್ನು 'ಶನಿ ಉಂಗುರ' ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಶನಿ ಉಂಗುರ ಕೈಯಲ್ಲಿ ಇರುವುದು ಅಶುಭವೆಂದು ಹೇಳಲಾಗುತ್ತದೆ.

    ಈ ಶನಿ ಉಂಗುರ ಯಾರ ಅಂಗೈಯಲ್ಲಿ ಇರುತ್ತದೆಯೋ ಅಂತಹ ಜನರು ಸಂತೋಷ ಮತ್ತು ಆನಂದದಾಯಕ ಜೀವನದಿಂದ ವಂಚಿತರಾಗುತ್ತಾರೆ. ಅಂತಹ ಜನರು ದುಃಖ ಸ್ವಭಾವ ಹೊಂದಿರುತ್ತಾರೆ ಎಂದು ಹೇಳಲಾಗಿದೆ.

    ಕೈಯಲ್ಲಿ ಶನಿ ಉಂಗುರ ಇರುವ ಜನರು ಜೀವನದಲ್ಲಿ ಹಲವು ಸಮಸ್ಯೆ, ಏಳುಬೀಳು ಎದುರಿಸಬೇಕಾಗುತ್ತದೆ. ಕಷ್ಟ, ನಷ್ಟ, ಸವಾಲು ಮತ್ತು ನಿರಾಶೆ ಕೈಯಲ್ಲಿ ಶನಿ ರಿಂಗ್ ಇರುವ ಜನರಲ್ಲಿ ನಿರಂತರವಾಗಿ ಮುಂದುವರೆಯುತ್ತದೆ. ಅವರ ಮಾತು ಮತ್ತು ಕೃತಿ ಹಾಗೂ ಜೀವನಶೈಲಿ ಹೊಂದಿಕೆ ಆಗಲ್ಲ. ಈ ಜನರು ತುಂಬಾ ಮಾತನಾಡುತ್ತಾರೆ. ಮತ್ತು ತುಂಬಾ ಕಡಿಮೆ ಕೆಲಸ ಮಾಡುತ್ತಾರೆ. ಇನ್ನು ಯಾರ ಕೈಯಲ್ಲಿ ಶನಿ ಉಂಗುರವಿದೆಯೋ ಅವರಲ್ಲಿ ಸಣ್ಣ ತಲೆ ರೇಖೆ ಇದ್ದರೆ, ಅಂತಹ ಜನರು ಒಂಟಿಯಾಗಿ ವಾಸಿಸಲು ಇಷ್ಟ ಪಡುತ್ತಾರೆ.

    ಶನಿ ಉಂಗುರ ಏನು ಹೇಳುತ್ತದೆ?

    ಅಂಗೈಯಲ್ಲಿ ಶನಿಯ ಉಂಗುರದ ಅತ್ಯಂತ ಸ್ಪಷ್ಟ ಮತ್ತು ಆಳವಾದ ರೇಖೆಯು ವ್ಯಕ್ತಿಯು ಬುದ್ಧಿವಂತ ಎಂದು ಹೇಳುತ್ತದೆ. ಅಂತಹ ಜನರು ತುಂಬಾ ಶಾಂತ ಸ್ವಭಾವ ಹೊಂದಿರುತ್ತಾರೆ. ಮತ್ತು ತಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲ್ಲ. ಈ ಜನರು ಸ್ನೇಹಿತರು ಮತ್ತು ಸಂಬಂಧಿಕರಿಂದ ದೂರವಿರುತ್ತಾರೆ. ಈ ಗುರುತು ಸಾಮಾನ್ಯವಾಗಿ ಅಪರಾಧಿಗಳು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವರ ಅಂಗೈಯಲ್ಲಿ ಕಂಡು ಬರುತ್ತದೆ.

    ಅಂಗೈಯಲ್ಲಿನ ಶನಿಯ ಉಂಗುರವು ಸ್ಪಷ್ಟವಾಗಿಲ್ಲ ಅಥವಾ ಸ್ಪಷ್ಟವಾಗಿಲ್ಲದಿದ್ದರೆ, ಅಂತಹ ಜನರು ಸಂವಹನದಲ್ಲಿ ದುರ್ಬಲ ಮತ್ತು ಸಿನಿಕತನ ಹೊಂದಿರ್ತಾರೆ. ಈ ಜನರು ಒಂಟಿಯಾಗಿರಲು ಇಷ್ಟ ಪಡ್ತಾರೆ. ಮದುವೆಯಾಗಲ್ಲ. ಸ್ವಚ್ಛ ಮತ್ತು ಆಳವಾದ ಗೆರೆ ಹೊಂದಿರುವವರಿಗಿಂತ ಭಿನ್ನವಾಗಿ, ಈ ಜನರು ಆತ್ಮಹತ್ಯೆ ಮತ್ತು ಅಪರಾಧದಿಂದ ದೂರವಿರುತ್ತಾರೆ.

    ಇದನ್ನೂ ಓದಿ: ಈ ಬಾರಿ ಭೀಮನ ಅಮಾವಾಸ್ಯೆ ದಿನ ರೂಪುಗೊಂಡಿದೆ 3 ವಿಶೇಷ ಯೋಗ

    ಅಂಗೈಯಲ್ಲಿ ಶನಿಯ ಉಂಗುರದ ಗೆರೆ ಒಡೆದರೆ ಚಿಂತೆಯಿಲ್ಲ. ಹೆಡ್ ಲೈನ್ ಅಂದರೆ ಹೆಬ್ಬೆರಳು ಬಲವಾಗಿದ್ದರೆ, ವ್ಯಕ್ತಿಯು ಸಮಸ್ಯೆ ಎದುರಿಸಬೇಕಾಗಿಲ್ಲ. ಶನಿಯ ಉಂಗುರವು ಅರ್ಧ ವೃತ್ತದ ಬದಲು ಮುಳ್ಳಿನಂತಿದ್ದರೆ ಮತ್ತು ದುರ್ಬಲವಾದ ಹೆಬ್ಬೆರಳು ಅಥವಾ ತಲೆ ರೇಖೆಯ ಜೊತೆಗೆ ದುರ್ಬಲ ಹೆಬ್ಬೆರಳು ಇದ್ದರೆ ಅದು ಅಶುಭ ಸಂಕೇತ. ಹತಾಶೆ, ಸಿನಿಕತನ ಮತ್ತು ಕಡಿಮೆ ಸೌಕರ್ಯವನ್ನು ಹೊಂದಿರುತ್ತಾರೆ.
    Published by:renukadariyannavar
    First published: