Astrology: ಕುಂಭರಾಶಿಗೆ ಶನಿ ಪ್ರವೇಶದಿಂದ ಬದಲಾಗಲಿದೆ ಈ 3 ರಾಶಿಯವರ ಅದೃಷ್ಟ

Zodiac sign: 2022 ರಲ್ಲಿ ಶನಿ ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.. ಮೇಷ ರಾಶಿಯವರು ಯಾರು ಆಡಳಿತ ಇಲಾಖೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಂತವರಿಗೆ ಸಂಪೂರ್ಣ ಮಂಗಳಕರವಾಗಿರಲಿದೆ

ಶನಿ

ಶನಿ

 • Share this:
  ಜ್ಯೋತಿಷ್ಯದಲ್ಲಿ(Astrology) ಶನಿ ಸಂಚಾರಕ್ಕೆ(Shani Sanchara) ತುಂಬಾ ಮಹತ್ವವಿದೆ. ಶನಿ ಸಂಚಾರದ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೂ ಇರುತ್ತದೆ. ಈ ಸಂಚಾರ ಕೆಲವೊಂದು ರಾಶಿಗೆ ಒಳಿತು ಮಾಡಿದರೆ ಇನ್ನು ಕೆಲವೊಂದು ರಾಶಿಗಳಿಗೆ ಈ ಸಂಚಾರ ಸಮಯ(Time) ಕಷ್ಟವಾಗಿರುತ್ತದೆ.  ಅದರಲ್ಲೂ ಹೊಸ ವರ್ಷಾರಂಭಕ್ಕೆ(New Year)ಕೆಲವೇ ದಿನಗಳು ಬಾಕಿ ಇರುವಾಗಲೇ ಬರೋಬ್ಬರಿ 30 ವರ್ಷಗಳ ಬಳಿಕ ಈತನ ಸಂಚಾರ ಬದಲಾವಣೆ ಮಾಡಲು ಸಿದ್ಧವಾಗಿದ್ದಾನೆ.. 2022 ರಲ್ಲಿ ತಾನಿರುವ ರಾಶಿಯಿಂದ(Zodiac sign) ಕುಂಭರಾಶಿಗೆ ಬರಲು ಶನಿ ಸಿದ್ಧವಾಗಿದ್ದಾನೆ.ಶನಿ ಕುಂಭ ರಾಶಿ ಪ್ರವೇಶ ಮಾಡುವುದರಿಂದ ಹಲವು ರಾಶಿಗಳಿಗೆ ಲಾಭವಾದರೆ ಇನ್ನೂ ಹಲವು ರಾಶಿಗಳಿಗೆ ಸಂಕಷ್ಟ ಶುರುವಾಗಲಿದೆ..

  ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ರಾಶಿ ಬದಲಾವಣೆಯಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು, ಶನಿಯ ಪ್ರಕೋಪಕ್ಕೆ ಒಳಗಾದರೆ ಇನ್ನು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಶನಿಯ ಕೃಪಾ ಕಟಾಕ್ಷವಿರಲಿದೆ. ಹೀಗಾಗಿ 2022 ರಲ್ಲಿ ಶನಿಯ ಕೃಪೆಯು 3 ರಾಶಿಯ ಚಿಹ್ನೆಗಳ ಮೇಲೆ ಅಪಾರ ಕೃಪೆ ಹರಿಸುತ್ತಾನೆ. ಆ ಹಾಗಿದ್ರೆ 3 ರಾಶಿಗಳು ಯಾವುವು ಅನ್ನೋದನ್ನ ನೋಡೋದಾದ್ರೆ

  1)ಮೇಷ ರಾಶಿ(Aries): 2022 ರಲ್ಲಿ ಶನಿ ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.. ಮೇಷ ರಾಶಿಯವರು ಯಾರು ಆಡಳಿತ ಇಲಾಖೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಂತವರಿಗೆ ಸಂಪೂರ್ಣ ಮಂಗಳಕರವಾಗಿರಲಿದೆ.. ಸಂಪೂರ್ಣ ಶನಿದೇವನ ಕೃಪೆ ಮೇಷ ರಾಶಿಯವರ ಮೇಲೆ ಬರುವುದರಿಂದ ಕಾನೂನು ಇಂಧನ ಉದ್ಯಮದಲ್ಲಿ ಕೆಲಸ ಮಾಡುವವರು ಉತ್ತಮ ಸ್ಥಾನ ಪಡೆಯಲಿದ್ದಾರೆ.. ಜೊತೆಗೆ ಅವರ ಆದಾಯವು ಹೆಚ್ಚಳವಾಗಲಿದೆ.. ಇನ್ನು ಮೇಷ ರಾಶಿಯವರು ಪಡುವ ಕಷ್ಟಕ್ಕೆ ತಕ್ಕಂತೆ ಈ ಸಲ ಪ್ರತಿಫಲ ಸಿಗಲಿದೆ.. ಉದ್ಯೋಗಿಗಳಿಗೆ 2022 ರಲ್ಲಿ ಕುಂಭ ರಾಶಿ ಭವಿಷ್ಯ ಪ್ರವೇಶ ಮಾಡುವುದರಿಂದ ಸಾಕಷ್ಟು ಪ್ರಗತಿ ಕಾಣಲಿದ್ದಾರೆ.. ಯಾರೋ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಂಡಿರುತ್ತಾರೋ ಅಂತವರು ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ ಪಡೆದು ಯಶಸ್ಸು ಕಾಣಲಿದ್ದಾರೆ..

  ಇದನ್ನೂ ಓದಿ: ಹಿಂದೂಗಳ ಪಾಲಿನ ಪವಿತ್ರ ಚಿಹ್ನೆ ಸ್ವಸ್ತಿಕ್ ನ ಅರ್ಥ ಏನು ಗೊತ್ತಾ..?

  2)ವೃಷಭ ರಾಶಿ(Taurus): ಹೊಸವರ್ಷದಲ್ಲಿ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ವೃಷಭ ರಾಶಿಯವರಿಗೂ ಸಾಕಷ್ಟು ಲಾಭವಾಗಲಿದೆ.. ಶನಿದೇವನ ಕೃಪೆ ವೃಷಭ ರಾಶಿಯವರ ಮೇಲೆ ಇರಲಿದೆ. ಯಾವಾಗ ಶನಿ ವೃಷಭ ರಾಶಿಯವರ ಮೇಲೆ ತನ್ನ ಕೃಪೆ ತೋರಿದ ತಕ್ಷಣ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ.. ಉದ್ಯೋಗಿಗಳು ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಕಾಣಲಿದ್ದು ಅವರಿಗೆ ಮತ್ತಷ್ಟು ಉತ್ತಮ ಅವಕಾಶಗಳು ಒದಗಿ ಬರಲಿದೆ.. ಉದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುವ ಕಾಲ ಬಂದಿದ್ದು ಅವರ ಚಿಂತೆಗಳು ದೂರಾಗಲಿವೆ.. ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ವೃಷಭ ರಾಶಿಯವರ ಹಣಕಾಸಿನ ಸ್ಥಿತಿ ಶನಿದೇವನ ಕೃಪೆಯಿಂದ ಮತ್ತಷ್ಟು ಉತ್ತಮ ಆಗಲಿದೆ. 2022 ರಲ್ಲಿ ವೃಷಭ ರಾಶಿಯವರು ಹೊಸ ವಾಹನ,ಭೂಮಿ,ಹೊಸಮನೆಯ ಖರೀದಿಯ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

  ಇದನ್ನೂ ಓದಿ: ಜೀವನದ ಯಶಸ್ಸಿಗೆ ಕೃಷ್ಣನ ಭಗವದ್ಗೀತೆಯ ಈ 5 ಸಾಲು ನೆನಪಿರಲಿ

  3)ಧನು ರಾಶಿ(Sagittarius): ಹೊಸವರ್ಷದ ಆರಂಭದಲ್ಲಿ ಶನಿದೇವನು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಧನು ರಾಶಿಯವರ ಭವಿಷ್ಯ ಕೂಡ ಬದಲಾಗಲಿದೆ.. ಪ್ರಮುಖವಾಗಿ ಹಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಧನು ರಾಶಿಯವರು ಪ್ರಗತಿ ಕಾಣಲಿದ್ದಾರೆ.. ವ್ಯಾಪಾರ ಮಾಡುತ್ತಿರುವವರು ತಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಿನ ಆದಾಯ ಕಂಡುಕೊಳ್ಳಲಿದ್ದಾರೆ.. ಆಸ್ತಿ ಹಾಗೂ ಜಮೀನುಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವವರಿಗೆ ಇದು ಉತ್ತಮ ಕಾಲವಾಗಿದೆ.. ಜೊತೆಗೆ ವ್ಯವಹಾರಗಳಲ್ಲಿ ಅವರಿಗೆ ಉತ್ತಮ ಅವಕಾಶ ಸಿಗಲಿದೆ.. ಅವಿವಾಹಿತ ಆದವರಿಗೆ ಶುಭಸುದ್ದಿ ಬರಲಿದ್ದು ಶೀಘ್ರವೇ ಕಂಕಣಭಾಗ್ಯ ಕೂಡಿ ಬರಲಿದೆ.. ಏಪ್ರಿಲ್ 29 ರ ನಂತರ, ಶನಿಯು ರಾಶಿಚಕ್ರದ ಎರಡನೇ ಮನೆಯಲ್ಲಿ ಸಾಗುತ್ತಾನೆ. ಈ ಸಂದರ್ಭದಲ್ಲಿ ಹಣ ಮತ್ತು ಲಾಭ ಅಧಿಕವಾಗಲಿದೆ.
  Published by:ranjumbkgowda1 ranjumbkgowda1
  First published: