ರಾತ್ರಿ ಹೊತ್ತು ಮಲಗಿದ್ದಾಗ ಕನಸುಗಳು ಬೀಳುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಆ ಕನಸುಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ ಮತ್ತು ಹಾಗೆ ಕನಸುಗಳು ಬಿದ್ದರೆ ಅದರ ಅರ್ಥವೇನು (Dreams Meaning) k= ತಿಳಿದುಕೊಳ್ಳುವುದು ತುಂಬಾನೇ ಒಂದು ಕುತೂಹಲಕಾರಿಯಾದ ವಿಷಯ. ಕೆಲವೊಬ್ಬರಿಗೆ ಕನಸಿನಲ್ಲಿ ಒಂದು ನಿರ್ದಿಷ್ಟವಾದ ಅಥವಾ ಅಸ್ಪಷ್ಟವಾದ ಸನ್ನಿವೇಶ ಮತ್ತು ಸಂದರ್ಭಗಳ ದೃಶ್ಯಗಳು ಬಂದರೆ, ಇನ್ನೂ ಕೆಲವರಿಗೆ ಈ ಪ್ರಾಣಿ (Animal IN Dreams) ಪಕ್ಷಿಗಳು ಕನಸಿನಲ್ಲಿ ಬರುತ್ತವೆ ಪ್ರತಿಯೊಂದು ಕನಸಿಗೂ ಅದರದೇ ಆದ ಒಂದು ಅರ್ಥವಿರುತ್ತದೆ ಎಂದು ಕನಸಿನ ತಜ್ಞರು ಹೇಳುತ್ತಾರೆ.
ಇಲ್ಲಿ ಒಂದು ಪ್ರಾಣಿ ನಿಮ್ಮ ಕನಸಿನಲ್ಲಿ ಪದೇ ಪದೇ ಬರುತ್ತಿದ್ದರೆ, ಅದರ ಅರ್ಥ ಏನು ಅಂತ ವಿವರವಾಗಿ ತಿಳಿಸಿದ್ದಾರೆ ನೋಡಿ ತಜ್ಞರು. ಅದು ಯಾವ ಪ್ರಾಣಿ ಅಂತೀರಾ?
ನೀವು ಇತ್ತೀಚೆಗೆ ಈ ಕರಡಿಗಳ ಬಗ್ಗೆ ಸಾಕಷ್ಟು ಕನಸು ಕಾಣುತ್ತಿದ್ದರೆ, ಈ ಕನಸುಗಳು ನಿಮಗೆ ಏನು ಹೇಳಲು ಪ್ರಯತ್ನಿಸುತ್ತಿವೆ ಎಂದು ನೀವು ಆಶ್ಚರ್ಯಪಡುತ್ತಿರಬಹುದು. ಕಂದು ಬಣ್ಣದ ಕರಡಿಗಳಿಂದ ಹಿಡಿದು ಪಾಂಡಾ ಕರಡಿಗಳವರೆಗೆ, ಏನೆಲ್ಲಾ ಅರ್ಥವನ್ನು ತಿಳಿಸುತ್ತವೆ ಅಂತ ತಜ್ಞರು ವಿವರವಾಗಿ ಇಲ್ಲಿ ಹೇಳಿದ್ದಾರೆ ನೋಡಿ.
ಕರಡಿಗಳ ಬಗ್ಗೆ ಕನಸುಗಳು ಎಂದರೇನು ಅರ್ಥ?
ವೃತ್ತಿಪರ ಕನಸಿನ ವ್ಯಾಖ್ಯಾನಕಾರ ಲಾರಿ ಲೊವೆನಬರ್ಗ್ ಪ್ರಕಾರ, ನಿಮ್ಮ ನಿರ್ದಿಷ್ಟ ಕನಸಿನ ನಿರ್ದಿಷ್ಟ ಅರ್ಥವನ್ನು ನೀವು ಮಾತ್ರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದಾದರೂ, ಸಾಮಾನ್ಯವಾಗಿ ಕರಡಿ ಕನಸುಗಳಲ್ಲಿ ಕೆಲವು ಸಾಮಾನ್ಯ ವಿಷಯಗಳಿವೆ. ಅವರು ಮೈಂಡ್ ಬಾಡಿ ಗ್ರೀನ್ಗೆ ನೀಡಿದ ಸಂದರ್ಶನದಲ್ಲಿ “ನಮ್ಮ ಕನಸಿನಲ್ಲಿ ಬರುವ ಪ್ರಾಣಿಗಳಲ್ಲಿ ಕರಡಿಗಳು ತುಂಬಾನೇ ಸಾಮಾನ್ಯವಾಗಿ ಮತ್ತು ಹೆಚ್ಚು ಕನಸುಗಳಲ್ಲಿ ಬರುವ ಪ್ರಾಣಿ” ಎಂದು ಹೇಳಿದ್ದಾರೆ.
ಹೆಚ್ಚು ಜನಕ್ಕೆ ಕರಡಿಯೇ ಕನಸಲ್ಲಿ ಬರುತ್ತಂತೆ!
ತಮ್ಮ ಬಳಿ ಬರುವ ಕ್ಲೈಂಟ್ ಗಳಲ್ಲಿ ಹೆಚ್ಚಿನವರು ಕರಡಿ ಕನಸಿನಲ್ಲಿ ಬಂದಿರುವ ಬಗ್ಗೆ ಹೇಳುತ್ತಾರೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಕನಸಿನಲ್ಲಿ ಹೆಚ್ಚಾಗಿ ಕರಡಿಗಳು ಬಂದರೆ ಅದರರ್ಥ ನಾವು ಯಾರನ್ನಾದರೂ "ಅತಿಯಾಗಿ ಸಹಿಸಿಕೊಳ್ಳುವ" ವಿಷಯಕ್ಕೆ ಅದು ಸಂಬಂಧಿಸಿರುತ್ತದೆ ಎಂದು ಅವರು ಹೇಳುತ್ತಾರೆ.
7 ಸಾಮಾನ್ಯ ಕರಡಿ ಕನಸುಗಳು ಮತ್ತು ಅವುಗಳ ಅರ್ಥಗಳು:
1. ಕಪ್ಪು ಅಥವಾ ಕಂದು ಕರಡಿಗಳ ಕನಸು
ಕಪ್ಪು ಮತ್ತು ಕಂದು ಕರಡಿಗಳು ನಮ್ಮ ಕನಸಿನಲ್ಲಿ ಬಂದಿದ್ದವು ಅಂತ ಅನೇಕ ಜನರು ಲಾರಿ ಲೊವೆನಬರ್ಗ್ ಅವರಿಗೆ ಹೇಳುತ್ತಾರಂತೆ. ತನ್ನ ಕ್ಲೈಂಟ್ಗಳಿಗೆ ಕನಸಿನಲ್ಲಿ ಸಾಮಾನ್ಯವಾಗಿ ಈ ಬಣ್ಣದ ಕರಡಿಗಳು ಹೆಚ್ಚಾಗಿ ಬಂದಿವೆಯಂತೆ.
ಏಕೆಂದರೆ ಇವು ಉತ್ತರ ಅಮೆರಿಕಾದಲ್ಲಿ ನಾವು ಸಾಮಾನ್ಯವಾಗಿ ಯೋಚಿಸುವ ಕರಡಿಗಳಾಗಿವೆ. ಅವರ ಪ್ರಕಾರ, ಕರಡಿ ದೊಡ್ಡದಾಗಿದ್ದರೆ, ಅಥವಾ ಹೆಚ್ಚು ಕರಡಿಗಳು ಇದ್ದಷ್ಟೂ, ನೀವು ಅತಿಯಾದ ಭಯವನ್ನು ಅನುಭವಿಸುತ್ತಿದ್ದೀರಿ ಅಂತ ಅರ್ಥ. ಹೀಗೆ ಕನಸು ಬೀಳುವುದು ಅತಿರೇಕದ ಪರಿಸ್ಥಿತಿಯನ್ನು ಎದುರಿಸುತ್ತೀರಿ ಎಂಬ ಅರ್ಥ ಸಹ ಬರುತ್ತದೆ ಎಂದು ಲಾರಿ ಲೊವೆನಬರ್ಗ್ ಅವರು ಹೇಳುತ್ತಾರೆ.
2. ಹಿಮ ಕರಡಿಗಳ ಕನಸು
ಈಗ, ನೀವು ಹಿಮಕರಡಿಗಳ ಬಗ್ಗೆ ಕನಸು ಕಾಣುತ್ತಿದ್ದರೆ, ವ್ಯಾಖ್ಯಾನವು ಸ್ವಲ್ಪ ಬದಲಾಗುತ್ತದೆ ಎಂದು ಲಾರಿ ಲೊವೆನ್ಬರ್ಗ್ ಹೇಳುತ್ತಾರೆ. ಹಿಮ ಕರಡಿಗಳು ಆರ್ಕ್ಟಿಕ್ ಹವಾಮಾನದಲ್ಲಿ ವಾಸಿಸುತ್ತಿರುವುದರಿಂದ, ನೀವು ಬೇರೆಯವರ ವ್ಯಕ್ತಿತ್ವವನ್ನು ಅತಿಯಾಗಿ ಸಹಿಸಿಕೊಳ್ಳುತ್ತಿದ್ದೀರಿ ಅನ್ನೋ ಅರ್ಥ ಬರುತ್ತದೆ ಎಂದು ಅವರು ವಿವರಿಸುತ್ತಾರೆ. ನಿಮಗೆ ತೊಂದರೆಯನ್ನು ಉಂಟು ಮಾಡುವ ಪರಿಸ್ಥಿತಿಯನ್ನು ಇನ್ನೂ ಶಾಂತವಾಗಿಯೇ ನಿಭಾಯಿಸುತ್ತಿದ್ದೀರಿ ಅಂತ ಅರ್ಥ ಎಂದು ಹೇಳುತ್ತಾರೆ.
3. ಪಾಂಡಾ ಕರಡಿಗಳ ಕನಸು
ಕನಸುಗಳು ಬೇರೆ ಏನನ್ನಾದರೂ ಪ್ರತಿನಿಧಿಸಲು ಸಾಂಕೇತಿಕತೆ ಮತ್ತು ಪದಪ್ರಯೋಗವನ್ನು ಬಳಸುವ ಮಾರ್ಗವನ್ನು ಹೊಂದಿವೆ. ಪಾಂಡಾ ಕರಡಿಯ ವಿಷಯದಲ್ಲಿ, ಲಾರಿ ಲೊವೆನಬರ್ಗ್ ಹೇಳುತ್ತಾರೆ. ಇದು ಕಪ್ಪು-ಬಿಳುಪು ಸಮಸ್ಯೆಯೊಂದಿಗೆ ನಿಮ್ಮನ್ನು ಎದುರಿಸುತ್ತಿರುವ ಕೆಲವು ಪರಿಸ್ಥಿತಿ ಅಥವಾ ವ್ಯಕ್ತಿಯ ಬಗ್ಗೆ ಮಾತನಾಡುತ್ತದೆ ಎಂದು ಹೇಳುತ್ತಾರೆ.
4. ಕರಡಿ ಮರಿಗಳ ಕನಸು
ಕರಡಿ ಮರಿಗಳ ಬಗ್ಗೆ ಕನಸು ಕಾಣುವುದು ಸಂದರ್ಭವನ್ನು ಅವಲಂಬಿಸಿ ಕೆಲವು ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ ಎಂದು ಲಾರಿ ಲೊವೆನಬರ್ಗ್ ಹೇಳುತ್ತಾರೆ. ಇದು "ಮಾಮಾ ಕರಡಿ" ಎಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂದರ್ಭದಲ್ಲಿ ಈ ಮರಿಗಳು ನಿಮ್ಮ ಸ್ವಂತ ಮಕ್ಕಳನ್ನು ಪ್ರತಿನಿಧಿಸಬಹುದು ಅಥವಾ ನೀವು ಅವರನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ನೀವು ಭಾವಿಸುತ್ತೀರಿ.
ಮಾಮಾ ಕರಡಿ ಹತ್ತಿರದಲ್ಲಿದೆ ಎಂದು ನೀವು ಭಾವಿಸಿದರೆ ಮತ್ತು ನೀವು ಭಯಭೀತರಾಗಿದ್ದರೆ, ಇದು ಅತಿರೇಕದ ವ್ಯಕ್ತಿತ್ವದ ವ್ಯಕ್ತಿಯ ಸಾಮಾನ್ಯ ವ್ಯಾಖ್ಯಾನಕ್ಕೆ ಕಾರಣವಾಗಬಹುದು ಎಂದು ಲಾರಿ ಲೊವೆನಬರ್ಗ್ ಅವರು ವಿವರಿಸುತ್ತಾರೆ.
ಕೊನೆಯದಾಗಿ, ಫಲವತ್ತತೆ ಸಮಸ್ಯೆಗಳನ್ನು ಅನುಭವಿಸುತ್ತಿರುವ ಮಹಿಳೆಯರ ಕನಸಿನಲ್ಲಿ ಈ ಕರಡಿ ಮರಿಗಳು ಹೆಚ್ಚಾಗಿ ಬರುತ್ತವೆ ಎಂದು ಅವರು ಹೇಳುತ್ತಾರೆ, ಆದ್ದರಿಂದ ಫಲವತ್ತತೆ ಮತ್ತು ಮಕ್ಕಳ ಪಾಲನೆಯ ಸುತ್ತಲಿನ ವಿಷಯಗಳು ಖಂಡಿತವಾಗಿಯೂ ಈ ಮರಿ ಕರಡಿಗಳು ಅರ್ಥೈಸಬಹುದು.
5. ಅಪಾಯಕಾರಿ ಕರಡಿಗಳ ಕನಸು
ನಿಮ್ಮ ಕನಸುಗಳಲ್ಲಿ ಏನಾಗುತ್ತದೆ ಎಂಬುದರ ಹೆಚ್ಚಿನ ಸಂದರ್ಭ, ಮತ್ತು ಅದಕ್ಕಿಂತ ಮುಖ್ಯವಾಗಿ, ಆ ಕನಸುಗಳಲ್ಲಿ ನೀವು ಹೇಗೆ ಭಾವಿಸುತ್ತೀರಿ, ಎಂಬಂಶಗಳು ನಿಜವಾಗಿಯೂ ಏನನ್ನು ಅರ್ಥೈಸುತ್ತವೆ ಎಂಬುದನ್ನು ಕಂಡು ಹಿಡಿಯಲು ಉತ್ತಮ ಮಾರ್ಗಗಳಾಗಿವೆ.
ಬಹಳ ಅಪಾಯಕಾರಿ ಕರಡಿ ಅಥವಾ ಕರಡಿಗಳ ವಿಷಯದಲ್ಲಿ, ನೀವು ದೂರದಲ್ಲಿರುವ ಅಸ್ಪಷ್ಟ ಕಪ್ಪು ಕರಡಿಯ ಬಗ್ಗೆ ಸ್ವಲ್ಪ ಚಿಂತಿತರಾಗಿರುವುದಿಲ್ಲ ಎಂದರೆ ನೀವು ಒತ್ತಡದ ಕನಸಿನ ಅಪಾಯದ ಮೋಡ್ ನಲ್ಲಿದ್ದೀರಿ ಎಂದು ಲಾರಿ ಲೊವೆನಬರ್ಗ್ ಅವರು ಹೇಳುತ್ತಾರೆ.
ಮತ್ತೆ, ಕರಡಿ ಹೆಚ್ಚು ಕ್ರೂರ ಅಥವಾ ಹೆಚ್ಚು ಕರಡಿಗಳು ಇದ್ದಷ್ಟೂ, ನಿಮ್ಮ ಜೀವನದಲ್ಲಿ ಕೆಲವು ಅತಿರೇಕದ ಶಕ್ತಿಯ ಪರಿಣಾಮಗಳನ್ನು ನೀವು ಅನುಭವಿಸುತ್ತೀರಿ ಎಂದು ಅರ್ಥ ಎಂದು ಹೇಳಿದರು.
6. ಸ್ನೇಹಪರ ಕರಡಿಗಳ ಕನಸು
ಈ ಹಂತದಲ್ಲಿ ನೀವು ಆಶ್ಚರ್ಯ ಪಡುತ್ತಿರಬಹುದು.. ಯಾವುದಾದರೂ ಕರಡಿಗೆ ಸಂಬಂಧಪಟ್ಟಂತಹ ಸಕಾರಾತ್ಮಕ ಕನಸುಗಳಿವೆಯೇ ಅಂತ? ಲಾರಿ ಲೊವೆನಬರ್ಗ್ ಪ್ರಕಾರ ಆ ರೀತಿಯ ಸಕಾರಾತ್ಮಕ ಕನಸುಗಳು ಇವೆಯಂತೆ.
ನೀವು ಕನಸಿನಲ್ಲಿ ಸ್ನೇಹಪರ ಕರಡಿಯೊಂದಿಗೆ ವ್ಯವಹರಿಸುತ್ತಿದ್ದರೆ, ತನ್ನ ಪಾಡಿಗೆ ತಾನು ಇರುವಂತಹ ಕರಡಿಯ ಕನಸನ್ನು ನೋಡಿದರೆ ಅಥವಾ ನೀವು ಒಂದು ಕರಡಿಯನ್ನು ರಕ್ಷಿಸುತ್ತಿದ್ದರೆ, ಅದು ನಿಮಗೆ ಒಮ್ಮೆ ಹೆದರಿಕೆ ಆಗುವ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳುತ್ತಾರೆ.
7. ತಟಸ್ಥ ಕರಡಿಗಳ ಕನಸು
ಕೊನೆಯದಾಗಿ, ನಾವು ತಟಸ್ಥ ಕರಡಿಗಳ ಕನಸನ್ನು ಹೊಂದಿದ್ದೇವೆ ಅಂತ ಹೇಳಬಹುದು, ಅದು ಕೆಲವು ವಿಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತದೆ. ಹೆಚ್ಚು ಸ್ಪಷ್ಟವಾಗಿ, ಲಾರಿ ಲೊವೆನಬರ್ಗ್ ಹೇಳುತ್ತಾರೆ, ತಟಸ್ಥ ಕರಡಿ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳುವ ನಿಮ್ಮ ಸ್ವಂತ ಅಗತ್ಯವನ್ನು ಪ್ರತಿನಿಧಿಸುತ್ತದೆ ಎಂದು.
ಇದನ್ನೂ ಓದಿ: Astrology Effect: ನಿಮ್ಮ ಲವ್ ಲೈಫ್ ಮೇಲೆ ಈ ಘಟನೆಗಳಿಂದ ಎಫೆಕ್ಟ್ ಬೀಳುತ್ತೆ ಹುಷಾರ್!
ಅದರಾಚೆಗೆ, ಕರಡಿಗಳು ಕೆಲವೊಮ್ಮೆ ನಿಮ್ಮ ಆರ್ಥಿಕತೆಯನ್ನು ಪ್ರತಿನಿಧಿಸಬಹುದು ಎಂದು ಅವರು ಹೇಳುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀವು ಒತ್ತಡದಲ್ಲಿದ್ದರೆ ಮತ್ತು ಮಲಗುವ ಕರಡಿಯ ಕನಸು ಕಾಣುತ್ತಿದ್ದರೆ, ಅದು ಖರ್ಚನ್ನು ಕಡಿಮೆ ಮಾಡುವ ಸಂಕೇತವಾಗಿದೆ ಎಂದು ಅವರು ಹೇಳುತ್ತಾರೆ.
ಈ ರೀತಿಯ ಕನಸುಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬಹುದು?
ಯಾವುದೇ ಕನಸನ್ನು ಅರ್ಥೈಸುವುದು ಎಂದರೆ ನಿಮ್ಮ ಕನಸಿನ ಮನಸ್ಸಿನಲ್ಲಿ ಯಾವ ನಿಜ ಜೀವನದ ಸನ್ನಿವೇಶವು ಪ್ರವೇಶಿಸುತ್ತಿದೆ ಎಂಬುದನ್ನು ಗುರುತಿಸುವುದು, ಮತ್ತು ಇದಲ್ಲದೆ, ಕನಸಿನಲ್ಲಿ ನೀವು ಹೇಗೆ ಭಾವಿಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ನೀವು ಎಲ್ಲಿ ಮತ್ತು ಯಾವಾಗ ಯಾವ ರೀತಿ ಭಾವಿಸುತ್ತೀರಿ ಎಂಬುದನ್ನು ಗುರುತಿಸುವುದು. ಆದ್ದರಿಂದ ಕರಡಿಗಳ ವಿಷಯಕ್ಕೆ ಬಂದಾಗ, ಕರಡಿ ನಿಮ್ಮನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆಯೇ ಎಂದು ನೀವು ಕಂಡು ಹಿಡಿಯಬೇಕು.
ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀವು ಒತ್ತಡದಲ್ಲಿದ್ದರೆ ಮತ್ತು ಮಲಗುವ ಕರಡಿಯ ಕನಸು ಕಾಣುತ್ತಿದ್ದರೆ, ಅದು ಖರ್ಚನ್ನು ಕಡಿಮೆ ಮಾಡುವ ಸಂಕೇತವಾಗಿದೆ.
ಏಕೆಂದರೆ ಅವು ಹೆಚ್ಚಾಗಿ ನಮ್ಮ ಜೀವನದಲ್ಲಿ ಅತಿರೇಕದ ಜನರನ್ನು ಪ್ರತಿನಿಧಿಸುತ್ತವೆ. ಕರಡಿಯ ನಡವಳಿಕೆ, ಸ್ವಭಾವವನ್ನು ಹೋಲುವ ಜನರು ನಿಮ್ಮ ಸುತ್ತಮುತ್ತಲು ಇದ್ದಾರೆಯೇ ಅಂತ ನೋಡಿಕೊಳ್ಳಿ. ಇಲ್ಲವೇ ನೀವು ಈಗ ವ್ಯವಹರಿಸುತ್ತಿರುವ ನಿಮ್ಮ ಹತ್ತಿರದ ಯಾರಿಗಾದರೂ ಇದು ಸರಿಹೊಂದುತ್ತದೆಯೇ ಎಂದು ಸಹ ನೋಡಿಕೊಳ್ಳಿ ಎಂದು ಅವರು ವಿವರಿಸುತ್ತಾರೆ.
ಇದನ್ನೂ ಓದಿ: Numerology: ನಿಮ್ಮ ಹೆಸರು W ಅಕ್ಷರದಿಂದ ಶುರುವಾದ್ರೆ ಜೀವನ ಹೀಗಿರಲಿದೆಯಂತೆ ನೋಡಿ
ಅಲ್ಲಿಂದ, ನೀವು ಕನಸಿನಿಂದ ಮೊದಲು ಎಚ್ಚರಗೊಂಡಾಗ ನಿಮಗೆ ಹೇಗೆ ಅನಿಸುತ್ತದೆ ಅಥವಾ ಅದರಲ್ಲಿ ನೀವು ಹೇಗೆ ಭಾವಿಸುತ್ತೀರಿ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಅವರು ಹೇಳುತ್ತಾರೆ. ಕರಡಿ ನಿಮ್ಮನ್ನು ಭಯಭೀತಗೊಳಿಸಿದೆಯೇ? ಬಲಿಪಶು ಆದ ಭಾವನೆ ತರುತ್ತದೆಯೇ? ಮೃದುವಾದ ಭಾವನೆ ಬರುತ್ತದೆಯೇ? ನಿಮ್ಮ ಜೀವನದಲ್ಲಿ ಯಾರಾದರೂ ಅಥವಾ ಏನಾದರೂ ನಿಮಗೆ ಅದೇ ರೀತಿ ಅನ್ನಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ