Sankashti Chaturthi: ನಾಳೆ ಅಂಗಾರಕ ಸಂಕಷ್ಟಿ; ಈ ಪೂಜಾ ವಿಧಿ ವಿಧಾನ ಪಾಲಿಸಿ ಗಣೇಶನ ಪೂಜಿಸಿ

ಪ್ರತಿ ತಿಂಗಳು ಸಂಕಷ್ಟಿ ಮಾಡಲು ಸಾಧ್ಯವಾಗದವರು ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ.

ಗಣೇಶ

ಗಣೇಶ

  • Share this:
    ಗಣೇಶನಿಗೆ ಪೂಜೆಗಳಲ್ಲಿ ಅಗ್ರಸ್ಥಾನ. ಗಣೇಶನನ್ನು ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ. ಸಂಕಷ್ಟಿ (Sankashti Chaturthi) ಎಂದರೆ ಕಷ್ಟಗಳಿಂದ ಮುಕ್ತಿ. ಇಂತಹ ಕಷ್ಟಗಳಿಂದ ನಿವಾರಣೆ ಪಡೆಯುವದಕ್ಕೆ ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಆಚರಣೆ ಮಾಡಲಾಗುವುದು. ಈ ವ್ರತ ಅನುಸರಿಸುವುದರಿಂದ ಗಣೇಶನು (Lord Ganesha) ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿ ನವೆಂಬರ್ 23 ರಂದು (ಮಂಗಳವಾರ) ಬಂದಿದೆ. ಅಂಗಾಕರ ಸಂಕಷ್ಟಿಯ ಈ ದಿನದಂದು  ಗಣಪತಿಯನ್ನು ಪೂಜಿಸಿ ಸುಖಮಯ ಜೀವನಕ್ಕಾಗಿ ಆಶೀರ್ವಾದ ಪಡೆಯಬೇಕು . 

    ಒಂದು ವರ್ಷದಲ್ಲಿ ಸುಮಾರು 13 ಸಂಕಷ್ಟಿ ಚತುರ್ಥಿಗಳು ಇರುತ್ತವೆ. ಪ್ರತಿಯೊಂದು ಸಂಕಷ್ಟಿ ಚತುರ್ಥಿಗೂ ವಿಭಿನ್ನ ಮಹತ್ವವಿದೆ . ಪ್ರತಿ ತಿಂಗಳು ಸಂಕಷ್ಟಿ ಮಾಡಲು ಸಾಧ್ಯವಾಗದವರು ಅಂಗಾರಕ ಸಂಕಷ್ಟ ಚತುರ್ಥಿ ಆಚರಿಸಿದರೆ ಸಾಕು 21 ವ್ರತಗಳು ಮಾಡಿದ ಪುಣ್ಯ ಪ್ರಾಪ್ತವಾಗಲಿದೆ ಎಂಬ ನಂಬಿಕೆ ಇದೆ. ಅಂಗಾರಕ ಅಂದರೆ ಮಂಗಳವಾರ ಬರುವ ಈ ಸಂಕಷ್ಟಿಯ ವ್ರತದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ.

    ಸಂಕಷ್ಟ ಚತುರ್ಥಿ ತಿಥಿ, ಮುಹೂರ್ತ
    ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ಥಿ ಪ್ರಾರಂಭವಾಗುತ್ತದೆ - 22 ನವೆಂಬರ್ 2021 (ಸೋಮವಾರ) ರಾತ್ರಿ 10:26 ಕ್ಕೆ,
    ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ಥಿ ಕೊನೆಗೊಳ್ಳುತ್ತದೆ - 24 ನವೆಂಬರ್ 2021 (ಬುಧವಾರ) ಮಧ್ಯಾಹ್ನ 12:55 ರವರೆಗೆ
    ಚಂದ್ರೋದಯ ಸಮಯ - 23 ನವೆಂಬರ್ (ಮಂಗಳವಾರ) ರಾತ್ರಿ 8.27 ಕ್ಕೆ

    ಸಂಕಷ್ಟ ಚತುರ್ಥಿ ಮಹತ್ವ
    ಸಂಕಷ್ಟಿಯ ಸಂಸ್ಕೃತ ಅರ್ಥವೆಂದರೆ ತೊಂದರೆಯನ್ನು ಕಳೆದುಕೊಳ್ಳುವವನು ಅಥವಾ ಅಡೆತಡೆಗಳು ಮತ್ತು ಪ್ರತಿಕೂಲವಾದ ಸಮಯಗಳಿಂದ ಮುಕ್ತಿ ಪಡೆಯುವುದು ಎಂದು ಅರ್ಥ. ಸಂಕಷ್ಟ ಚತುರ್ಥಿ ಗಣೇಶನನ್ನು ಮೆಚ್ಚಿಸಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶಿವನು ತನ್ನ ಮಗ ಗಣೇಶನನ್ನು ಎಲ್ಲಾ ದೇವರುಗಳಲ್ಲಿ ಶ್ರೇಷ್ಠ ಎಂದು ಘೋಷಿಸಿದನು. ಯಾವುದೇ ಆಚರಣೆಯನ್ನು ಪ್ರಾರಂಭಿಸುವ ಮೊದಲು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆ ಆಗುತ್ತದೆ.

    ಇದನ್ನು ಓದಿ: ಯಾವ ದೇವರಿಗೆ ಯಾವ ಹೂವು ಪ್ರಿಯ; ಇಲ್ಲಿದೆ ಮಾಹಿತಿ

    ಅಂಗಾರಕ ಸಂಕಷ್ಟ ಚತುರ್ಥಿ ಎಂದರೆ
    ಅಂಗಾರಕ ಎಂದರೆ ಮಂಗಳವಾದದ್ದು ಎಂದು ಅರ್ಥ. ಮಂಗಳ ಉಂಟುಮಾಡುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಚತುರ್ಥಿ ಎನ್ನಲಾಗುತ್ತದೆ. ಈ ಅಂಗಾಕರ ಸಂಕಷ್ಟ ಚತುರ್ಥಿಯಂದು ಉಪವಾಸವಿದ್ದು, ಗಣೇಶನ ಪೂಜಿಸಿದರೆ, ನಾವು ಮಾಡಿಕೊಂಡ ಸಂಕಲ್ಪಗಳು ನೆರವೇರುತ್ತದೆ ಎಂಬ ಪ್ರತೀತಿ ಇದೆ.

    ಇದನ್ನು ಓದಿ: ಈ ಸಿಂಪಲ್​ ಚೀನೀ ವಾಸ್ತು ಶಾಸ್ತ್ರ ಪಾಲಿಸಿ ಸಾಕು; ಆಮೇಲೆ ನೋಡಿ ಬದಲಾವಣೆ

    ಪೂಜಾ ವಿಧಾನ
    ಬೆಳಗ್ಗೆ ಬೇಗ ಎದ್ದು ಗಣೇಶನಿಗೆ ಪೂಜಿಸಬೇಕು. ಇಡೀ ದಿನ ಉಪವಾಸವನ್ನು ಆಚರಿಸಿ ಏಕೆಂದರೆ ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
    ದಿನದಲ್ಲಿ ಯಾವುದೇ ರೂಪದಲ್ಲಿ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಸೇವಿಸ ಬಾರದು
    ಸಂಜೆ ಗಣಪತಿಯನ್ನು ಗರಿಕೆ, ಹೂವುಗಳು, ಧೂಪದ್ರವ್ಯಗಳನ್ನು ಅರ್ಪಿಸಿ, ಮಂಗಳಾರತಿ ಮಾಡಬೇಕು.
    ಸಂಪೂರ್ಣ ಪೂಜಾ ವಿಧಾನವನ್ನು ಅನುಸರಿಸಿ ಗಣೇಶ ಮಂತ್ರಗಳನ್ನು ಪಠಿಸಿ.
    ಗಣಪತಿ ಮೋದಕ ಮತ್ತು ಲಡ್ಡುಗಳನ್ನು ನೈವೇದ್ಯ ಮಾಡಿ.
    ಚಂದ್ರೋದಯದ ನಂತರ ಉಪವಾಸವನ್ನು ಮುರಿಯಿರಿ. ಚಂದ್ರ ದರ್ಶನವು ತುಂಬಾ ಶುಭಕರ. ಆದ್ದರಿಂದ, ಚಂದ್ರನು ಗೋಚರಿಸಿದಾಗ, ಅರ್ಘ್ಯವನ್ನು ಅರ್ಪಿಸಿ
    Published by:Seema R
    First published: