• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Sankashti chaturthi 2023: ಈ ಬಾರಿಯ ಸಂಕಷ್ಟ ಚೌತಿಯ ಮಹತ್ವವೇನು? ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ಶುಭ ಇಲ್ಲಿದೆ ನೋಡಿ

Sankashti chaturthi 2023: ಈ ಬಾರಿಯ ಸಂಕಷ್ಟ ಚೌತಿಯ ಮಹತ್ವವೇನು? ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ಶುಭ ಇಲ್ಲಿದೆ ನೋಡಿ

ಗಣಪತಿ

ಗಣಪತಿ

ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ, ವಿಘ್ನಗಳನ್ನು ಕಳೆದು ಒಳಿತು ಮಾಡುವ ಗಣೇಶನಿಗೆ ಸಮರ್ಪಿತವಾದ ಈ ದಿನದಂದು ಹಲವು ಭಕ್ತರು ಹಲವು ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.

  • Trending Desk
  • 2-MIN READ
  • Last Updated :
  • Share this:

ಹಿಂದೂ ಧರ್ಮದಲ್ಲಿ (Hindu Religion) ಮೊದಲ ಪೂಜೆ ವಿಘ್ನ ನಿವಾರಕ ಗಣೇಶನಿಗೆ. ಹೀಗಾಗಿ ಹಿಂದೂಗಳಿಗೆ ಸಂಕಷ್ಟ ಚತುರ್ಥಿ ವಿಶೇಷ ಮತ್ತು ಪೂಜನೀಯ ದಿನವಾಗಿದೆ. ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ, ವಿಘ್ನಗಳನ್ನು ಕಳೆದು ಒಳಿತು ಮಾಡುವ ಗಣೇಶನಿಗೆ ಸಮರ್ಪಿತವಾದ ಈ ದಿನದಂದು ಹಲವು ಭಕ್ತರು ಹಲವು ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಸಂಕಷ್ಟ ಚತುರ್ಥಿಯನ್ನು ಹಿಂದೂ ಚಂದ್ರನ ಕ್ಯಾಲೆಂಡರ್ (Moon Calender) ಪ್ರಕಾರ ಕೃಷ್ಣ ಪಕ್ಷ ಹುಣ್ಣಿಮೆಯ ನಂತರ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಮಾಘ ಮಾಸದ ಕೃಷ್ಣ ಪಕ್ಷದ ಸಂಕಷ್ಟ ಚತುರ್ಥಿಯನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.


ಈ ಬಾರಿ ಮಾಘ ಮಾಸದ ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ಉಪವಾಸವನ್ನು ಫೆಬ್ರವರಿ 9 ರ ಗುರುವಾರ ಆಚರಿಸಲಾಗುತ್ತಿದೆ. ಈ ದಿನದಂದು ಭಕ್ತರು ಉಪವಾಸ ಕೈಗೊಳ್ಳುವ ಮೂಲಕ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನದಂದು ಭಕ್ತರು ಕೇಳಿಕೊಳ್ಳುವ ಎಲ್ಲಾ ಇಷ್ಟಾರ್ಥಗಳನ್ನು ಗಣೇಶ ಈಡೇರಿಸುತ್ತಾನೆ ಎಂಬ ದೊಡ್ಡ ನಂಬಿಕೆ ಭಕ್ತರಲ್ಲಿದೆ.


ಇಷ್ಟೇಲ್ಲಾ ಪೂಜನೀಯ ವಿಶೇಷತೆಗಳನ್ನು ಹೊಂದಿರುವ ಸಂಕಷ್ಟ ಚತುರ್ಥಿಯ ಶುಭ ಮುಹೂರ್ತ, ಪೂಜೆ ವಿಧಾನ, ಮತ್ತು ಮಹತ್ವದ ಕುರಿತು ತಿಳಿದುಕೊಳ್ಳೋಣ.


ಸಂಕಷ್ಟ ಚತುರ್ಥಿ: ಶುಭ ಮುಹೂರ್ತ
ಆರಂಭ: 06:23 AM, ಫೆಬ್ರವರಿ 9
ಅಂತ್ಯ: 7:58 AM, ಫೆಬ್ರವರಿ 10


ಸಂಕಷ್ಟ ಚತುರ್ಥಿ: ಮಹತ್ವ
'ಸಂಕಷ್ಟಿ' ಎಂಬುದು ಸಂಸ್ಕೃತ ಪದವಾಗಿದ್ದು, ದುಃಖಗಳಿಂದ ಮುಕ್ತಿ ಎಂದು ಅರ್ಥ. ಈ ದಿನದಂದು ಗಣಪತಿಯನ್ನು ಪ್ರಾರ್ಥಿಸಿದರೆ ತಮ್ಮ ಜೀವನದಲ್ಲಿನ ಎಲ್ಲಾ ಅಡೆತಡೆಗಳು ಮತ್ತು ದುರದೃಷ್ಟಗಳು ನಿವಾರಣೆಯಾಗುತ್ತವೆ ಎಂಬುವುದು ಭಕ್ತರ ನಂಬಿಕೆ.


ಕಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ನೆರವೇರಿಸಿ ಆರೋಗ್ಯ ಭಾಗ್ಯ ಫಲಿಸಲು, ಸಂಪತ್ತನ್ನು ವೃದ್ಧಿಸಿಕೊಳ್ಳಲು ಗಣೇಶನನ್ನು ಈ ದಿನದಂದು ವಿಶೇಷವಾಗಿ ಮೊರೆ ಹೋಗಲಾಗುತ್ತದೆ.


ಇದನ್ನೂ ಓದಿ: ನಿಮ್ಮ ಕನಸಿನಲ್ಲಿ ಕರಡಿಗಳು ಬಂದ್ರೆ ಹೀಗೆಲ್ಲ ಆಗುತ್ತಂತೆ!


ಬ್ರಹ್ಮ ವೈವರ್ತ ಪುರಾಣದ ಪ್ರಕಾರ, ಗಣೇಶನು ಸ್ವಯಂ ಪ್ರಜ್ಞೆ ಮತ್ತು ಬುದ್ಧಿವಂತಿಕೆಯ ಅಭಿವ್ಯಕ್ತಿ. ಆದುದರಿಂದ ಆತನನ್ನು ಪೂಜಿಸುವುದರಿಂದ ಬುದ್ಧಿಶಕ್ತಿಯು ಲಭಿಸುತ್ತದೆ ಎಂಬುವುದು ಹಿಂದೂಗಳ ದೊಡ್ಡ ನಂಬಿಕೆ.


ಸಂಕಷ್ಟ ಚತುರ್ಥಿ: ಪೂಜೆ ವಿಧಿ ವಿಧಾನ
- ಭಕ್ತರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ, ಉಪವಾಸ ಇದ್ದು ಗಣೇಶನನ್ನು ಪ್ರಾರ್ಥಿಸುತ್ತಾರೆ.
- ಗಣಪನ ವಿಗ್ರಹದ ಮುಂದೆ ಎಣ್ಣೆ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಶ್ಲೋಕಗಳನ್ನು ಪಠಿಸುತ್ತಾರೆ. ದೇವರ ವಿಗ್ರಹದ ಮುಂದೆ ವ್ರತ ಕಥಾವನ್ನು ಸಹ ಓದಲಾಗುತ್ತದೆ.
- ಅನೇಕ ಭಕ್ತರು ಈ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ವೇಳೆ ಹಣ್ಣುಗಳನ್ನು, ನೀರನ್ನು, ಹಣ್ಣಿನ ರಸವನ್ನು ತೆಗೆದುಕೊಳ್ಳಬಹುದು. ಚಂದ್ರನ ದರ್ಶನದ ನಂತರ ಈ ಉಪವಾಸವನ್ನು ಮುರಿದು ಆಹಾರ ಸೇವಿಸುತ್ತಾರೆ.
- ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕದಂತಹ ನೈವೇದ್ಯವನ್ನು ತಯಾರಿಸಿ ಗಣೇಶನಿಗೇ ನೈವೇದ್ಯ ಮಾಡಲಾಗುತ್ತದೆ. ಆರತಿಯ ನಂತರ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಗುತ್ತದೆ.
- ಇದು ಧರ್ಮನಿಷ್ಠೆಯ ದಿನ. ಆದ್ದರಿಂದ ಭಕ್ತರು ಸಹ ಈ ದಿನ ತಂಬಾಕು ಮತ್ತು ಮದ್ಯಪಾನದಿಂದ ದೂರವಿರಬೇಕು.
- ಸಂಜೆ ಚಂದ್ರ ದರ್ಶನದ ನಂತರ ಪೂಜೆ ನಡೆಯುತ್ತದೆ. ಗಣೇಶನ ಪ್ರತಿಮೆಗೆ ತಾಜಾ ಹೂವುಗಳು ಮತ್ತು ದೂರ್ವಾ ಹುಲ್ಲು ಅರ್ಪಿಸಲಾಗುತ್ತದೆ. ಉಪವಾಸ ಆಚರಿಸುವವರು ರಾತ್ರಿ ದೀಪ ಹಚ್ಚಿದ ನಂತರ ಚಂದ್ರನನ್ನು ನೋಡಿ ಉಪವಾಸ ಮುರಿಯುತ್ತಾರೆ.
- ಉಪವಾಸವನ್ನು ಆಚರಿಸುವಾಗ, ಭಕ್ತರು ಓಂ ಗನ್ ಗಣಪತಯೇ ನಮಃ ಮತ್ತು ಓಂ ವಕ್ರತುಂಡಾಯ ಹಂ ಎಂಬ ಈ ಮಂತ್ರಗಳನ್ನು ಪಠಿಸಬೇಕು.
ಎಲ್ಲಿ ಈ ಹಬ್ಬ ಹೆಚ್ಚು ಆಚರಿಸಲಾಗುತ್ತದೆ?


ಹಬ್ಬವನ್ನು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.

First published: