ಮನೆಯಲ್ಲಿ(Home) ಯಾವುದೇ ಒಂದು ಸಮಸ್ಯೆ(Problem) ಇದ್ದರೂ ಸಾಕು ಅದು ನಮ್ಮ ಜೀವನದ(Life ಮೆಲೆ ತುಂಬಾನೇ ಪರಿಣಾಮ ಬೀರತ್ತೆ. ಮಾನಸಿಕವಾಗಿ(Mentally) ನಮ್ಮನ್ನ ಕುಗ್ಗಿಸುತ್ತೆ. ಇನ್ನು ಮನೆಯ ಒಬ್ಬ ಸದಸ್ಯ(Family Member) ಯಾವುದಾದರೂ ಒಂದು ಸಮಸ್ಯೆ(Problem) ಅನುಭವಿಸಿದರೆ ಅದರ ಪರಿಣಾಮ ಮನೆಯಲ್ಲಿರುವ ಇತರರ ಮೇಲೂ ಬೀರುತ್ತೆ. ಇನ್ನು ಮನೆಯಲ್ಲಿ ಸಮಸ್ಯೆಗಳು ಸಾಮಾನ್ಯ. ಆದ್ರೆ ಕೆಲವರಿಗೆ ಸಮಸ್ಯೆ ಅನ್ನುವುದು ಬೆಂಬಿಡದ ಬೇತಾಳನಂತೆ ಕಾಡುತ್ತೆ. ಅದೆಷ್ಟೋ ಸಲ ನಮ್ಮ ಮನೆಯಲ್ಲಿ ಸಮಸ್ಯೆಗಳಿದ್ರೂ ಅದಕ್ಕೆ ಸರಿಯಾದ ಪರಿಹಾರ ನಮಗೆ ಗೊತ್ತೇ ಇರುವುದಿಲ್ಲ.. ಕೆಲವೊಮ್ಮೆ ದೀರ್ಘಕಾಲದಿಂದ ಅನಾರೋಗ್ಯ(Health) ಕಾಡುತ್ತಿದ್ದಿರಬಹುದು, ಹಣದ ಸಮಸ್ಯೆ,(Financial Problem) ಕುಟುಂಬ ಕಲಹ(Family Problem), ಮದುವೆಯಾಗದೇ(Marriage) ಇರುವುದು ಹೀಗೆ ನಾನಾ ತೊಂದರೆಗಳಿರಬಹುದು. ಅದಕ್ಕೆ ಪರಿಹಾರ ಗೊತ್ತಿಲ್ಲದೆ ಸಮಸ್ಯೆಯನ್ನ ಅನುಭವಿಸುತ್ತಲೇ ಇರುತ್ತೇವೆ. ಇದಕ್ಕೆಲ್ಲಾ ಕಾರಣ ಮನೆಯ ವಾಸ್ತುದೋಷ, ಶನಿ ದೋಷ ಅಥವಾ ಯಾವುದಾದರೂ ನಕಾರಾತ್ಮಕ ಶಕ್ತಿ ನಮ್ಮನ್ನು ಕಾಡಬಹುದು. ಆಗ ಇದಕ್ಕೆಲ್ಲ ಕೆಲವು ತಂತ್ರಗಳ ಪ್ರಯೋಗ ಸಮಸ್ಯೆಯನ್ನು ಬಗೆಹರಿಸುವಲ್ಲಿ ನೆರವಾಗಬಹುದು. ಹೌದು ಹೀಗೆ ದಿನವು ಕಾಡುವ ಸಣ್ಣ ಪುಟ್ಟ ತೊಂದರೆಗಳಿಂದ ಅಥವಾ ಆರ್ಥಿಕ ಸಮಸ್ಯೆಯಿಂದ ದೂರವಾಗಲು ನಾವು ಹೇಳುವ ಈ ಪ್ರಯೋಗ ಸಹಕಾರಿಯಾಗಲಿದೆ..
ಸಕಲ ಸಮಸ್ಯೆಗಳಿಗೂ ಕಲ್ಲುಪ್ಪನ್ನು ಪರಿಹಾರ
ಹಣಕಾಸು ಹೆಚ್ಚಾಗಿ ಖರ್ಚಾಗ ಬಾರದು, ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಅನ್ನೋದು ನೆಲೆಸಬೇಕು ಎನ್ನುವುದಾದರೆ ಕಲ್ಲುಪ್ಪಿನಿಂದ ನೀವು ಈ ಕೆಲಸ ಮಾಡಲೇಕು..
ಇದನ್ನೂ ಓದಿ: ನಿಮ್ಮ ದೇಹದ ತೂಕಕ್ಕೂ ಉಪ್ಪಿಗೂ ಏನು ಸಂಬಂಧ? ಇಲ್ಲಿದೆ ನೋಡಿ
1) ಕಲ್ಲುಪ್ಪಿನಿಂದ ಮಹಾಲಕ್ಷ್ಮಿ ಅನುಗ್ರಹ: ಪ್ರತಿ ತಿಂಗಳು ಬರುವ ಸಂಬಳದ ದುಡ್ಡನ್ನು ಮನೆಗೆ ತಂದ ನಂತರ ಮೊದಲನೆಯದಾಗಿ, ಒಂದು ಬಟ್ಟಲಿಗೋ ಪಾತ್ರೆಗೋ ಅಥವಾ ಒಂದು ತಟ್ಟೆಗೋ ಒಂದು ಸ್ವಲ್ಪ ಕಲ್ಲುಪ್ಪನ್ನು ಹಾಕಿ ನೀವು ದೇವರ ಕೋಣೆಯಲ್ಲಿ ಇಡಬೇಕು. ಬಳಿಕ ಕಲ್ಲುಪ್ಪಿನ ಮೇಲೆ ನೀವು ಸಂಪಾದನೆ ಮಾಡಿಕೊಂಡು ಬಂದಿರುವಂತಹ ಆ ಒಂದು ಹಣವನ್ನು ದುಡ್ಡನ್ನು ಇಡಬೇಕಾಗುತ್ತದೆ, ಇಡಿ ರಾತ್ರಿ ಕಲ್ಲುಪ್ಪಿನ ಮೇಲೆ ಇರಬೇಕು ತದನಂತರ ಆ ಒಂದು ದುಡ್ಡನ್ನು ಮಾರನೆಯ ದಿನ ನೀವು ಆ ದುಡ್ಡನ್ನು ತೆಗೆದುಕೊಂಡು ಖರ್ಚು ಮಾಡಲು ಆರಂಭಿಸಬೇಕು.
ಈ ಒಂದು ಕೆಲಸವನ್ನು ಪ್ರತಿ ತಿಂಗಳು ನೀವು ಮಾಡುತ್ತಾ ಬಂದ್ರೆ ವಿಶೇಷವಾಗಿ ನಿಮಗೆ ಇರತಕ್ಕಂತಹ ದೃಷ್ಟಿದೋಷಗಳು, ನಿಮ್ಮ ಮನೆಗೆ ಇರತಕ್ಕಂತಹ ದೃಷ್ಟಿ ದೋಷಗಳು ಕಳೆದು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಪ್ರಾಪ್ತಿಯಾಗುತ್ತೆ..
2) ನಕಾರಾತ್ಮಕ ಶಕ್ತಿಗಳ ನಿವಾರಣೆ: ಮೊದಲನೆಯದಾಗಿ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಕಲುಪ್ಪನ್ನು ಹಾಕಬೇಕು. ಬಲಗೈ ಹಾಗೂ ಎಡಗೈಯಲ್ಲಿ ಒಂದೊಂದು ಮುಷ್ಠಿ ಕಲ್ಲುಪ್ಪನ್ನು ತೆಗೆದುಕೊಂಡು ಗಾಜಿನ ಪಾತ್ರೆಗೆ ಹಾಕಿ. ಈ ಪಾತ್ರೆಯನ್ನು ಒಂದು ತಟ್ಟೆಯ ಮೇಲಿಟ್ಟು, ನಿಮ್ಮ ಸ್ನಾನ ಗೃಹದ ಒಂದು ಮೂಲೆಯಲ್ಲಿಡಿ. ಅಂದ ಹಾಗೆ ಯಾವಾಗ ಬೇಕಾದ್ರೂ ಇದನ್ನು ಮಾಡುವ ಹಾಗಿಲ್ಲ, ಪ್ರತಿ ಶನಿವಾರ ಮಾತ್ರ ಮಾಡಬೇಕು. ಮನೆಯಲ್ಲಿ ಮೊದಲು ಸ್ನಾನ ಮಾದಿದವರ ಕೈಲಿ ಈ ಕೆಲಸ ಮಾಡಿಸಿ. ಪ್ರತಿ ಶನಿವಾರ ಹಾಕಿಟ್ಟ ಉಪ್ಪನ್ನು ಕಸಕ್ಕೆ ಹಾಕಿ ಮತ್ತೆ ಹೊಸ ಉಪ್ಪನ್ನು ಇದೇ ಕ್ರಮಾನುಸಾರ ಹಾಕಿಡಿ. ಕಲ್ಲುಪ್ಪನ್ನು ಹೀಗೆ ಮನೆಯಲ್ಲಿ ಇಡುವುದರಿಂದ ಅದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕ ಆಲೋಚನೆಗಳನ್ನು ನಮಗೆ ನೀಡುತ್ತದೆ.
ಇದನ್ನೂ ಓದಿ: ಒಂದು ಚಿಟಿಕೆ ಸಮುದ್ರ ಉಪ್ಪಿನಿಂದ ಸಿಗುವ ಅನೇಕ ಪ್ರಯೋಜನಗಳನ್ನು ತಿಳಿಯಿರಿ
3) ದೃಷ್ಟಿ ದೋಷ ನಿವಾರಣೆ: ಕಲ್ಲುಪ್ಪು ಬಳಸಿಕೊಂಡು ಈ ಒಂದು ತಂತ್ರವನ್ನು ಮಾಡಬೇಕಾಗುತ್ತೆ. ಈ ಒಂದು ಕೆಂಪು ವಸ್ತ್ರಕ್ಕೆ ಕಲ್ಲುಪ್ಪನ್ನು ತುಂಬಿಸಿ ಮನೆಯ ಹೊರ ಭಾಗದಲ್ಲಿ ಬಾಗಿಲ ಮೇಲೆ ಮಧ್ಯ ಭಾಗದಲ್ಲಿ ಒಂದು ಕಲ್ಲುಪ್ಪಿನ ಮೂಟೆಯನ್ನು ಕಟ್ಟಬೇಕು. ಪ್ರತಿ ಅಮಾವಾಸ್ಯೆ ಪ್ರತಿ ಹುಣ್ಣಿಮೆಯ ದಿನ ಒಂದು ಮೂಟೆಯನ್ನಬದಲಾಯಿಸುತ್ತ ಇರಬೇಕು.
ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ದಾರಿದ್ರ ದೇವತೆಯ ಲಕ್ಷಣಗಳು ಕಳೆದುಹೋಗಿ ಸುಖ-ಶಾಂತಿ-ನೆಮ್ಮದಿ ಅನ್ನೋದು ಶಾಶ್ವತವಾಗಿ ನೆಲೆಸುತ್ತದೆ ಯಾವುದೇ ರೀತಿಯಾದಂತಹ ದೃಷ್ಟಿದೋಷಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ.
ಗಂಡ ಹೆಂಡತಿ ನಡುವೆ ಪ್ರೀತಿ ವಾತ್ಸಲ್ಯ ಅನ್ನೋದು ಹೆಚ್ಚಾಗುತ್ತೆ ಹಣಕಾಸಿನ ಸಮಸ್ಯೆಗಳು ಕಳಿತಾ ಬರುತ್ತದೆ ನೀವು ಸಂಪಾದನೆ ಮಾಡಿದಂತಹ ದುಡ್ಡು ನಿಮ್ಮ ಕೈಯಲ್ಲಿ ಸ್ಥಿರವಾಗಿ ನಿಲ್ಲಬೇಕು ನಾಲ್ಕು ಜನರಂತೆ ಬದುಕಿ ಬಾಳಬೇಕು ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣಬೇಕು ಅಂದರೆ ಈ ತಂತ್ರ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ