ನಮ್ಮಲ್ಲಿ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಅಂತ ಹೇಳುವುದಕ್ಕೆ ಮತ್ತು ಕಂಡುಕೊಳ್ಳುವುದಕ್ಕೆ ಅನೇಕ ರೀತಿಯ ಮಾನದಂಡಗಳು ಇವೆ. ಅದರಲ್ಲಿ ಈ ಜ್ಯೋತಿಷ್ಯ ಸಹ ಒಂದು, ಇನ್ನೂ ಜ್ಯೋತಿಷ್ಯ (Astrology) ಅಂತ ಹೇಳಿದ ತಕ್ಷಣ ನಮಗೆಲ್ಲಾ ನೆನಪಾಗುವುದು ಈ ರಾಶಿಚಕ್ರ ಚಿಹ್ನೆಗಳು (Sign) ಅಂತ ಹೇಳಬಹುದು. ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಜನರು ತಮ್ಮದೇ ಆದಂತಹ ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಧನು (Sagittarius Zodiac) ರಾಶಿಯು ರಾಶಿಚಕ್ರದ ಒಂಬತ್ತನೇ ಚಿಹ್ನೆಯಾಗಿದ್ದು, ಈ ಚಿಹ್ನೆಯ ಅಡಿಯಲ್ಲಿ ಜನಿಸಿದ ವ್ಯಕ್ತಿಗಳು ಸಾಹಸ ಮತ್ತು ಆಶಾವಾದಿ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ.
ಧನು ರಾಶಿಯವರು ತುಂಬಾನೇ ಉತ್ಸಾಹವನ್ನು ಹೊಂದಿರುವವರಾಗಿರುತ್ತಾರೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ತುಂಬಾನೇ ಇಷ್ಟಪಡುವವರಾಗಿರುತ್ತಾರೆ ಅಂತ ಹೇಳಬಹುದು. ಧನು ರಾಶಿಯ ಸೂರ್ಯ ರಾಶಿಯ ಜನ್ಮ ದಿನಾಂಕಗಳು ನವೆಂಬರ್ 22 ಮತ್ತು ಡಿಸೆಂಬರ್ 21 ರ ನಡುವೆ ಇರುತ್ತವೆ. ಈ ರಾಶಿಚಕ್ರ ಚಿಹ್ನೆಯ ಬಗ್ಗೆ ಮತ್ತು ಅವರು ಸಾಮಾನ್ಯವಾಗಿ ಜೀವನದ ವಿವಿಧ ಆಯಾಮಗಳಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ಕೆಲವು ವಿವರಗಳು ಇಲ್ಲಿವೆ ನೋಡಿ.
ಧನು ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ ನೋಡಿ..
ಧನು ರಾಶಿಯವರನ್ನು ಹೆಚ್ಚಾಗಿ ತಾತ್ವಿಕ ಮತ್ತು ಬುದ್ಧಿಜೀವಿ ಎಂದು ವಿವರಿಸಲಾಗುತ್ತದೆ. ಅವರು ಕಲಿಕೆ ಮತ್ತು ಹೊಸ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಇವರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ಕಂಫರ್ಟ್ ಝೋನ್ ನಿಂದ ಆಚೆ ಬರಲು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಧನು ರಾಶಿಯವರು ಪ್ರಾಮಾಣಿಕರು ಮತ್ತು ನೇರವಾಗಿರುತ್ತಾರೆ.
ಇದನ್ನೂ ಓದಿ:Vastu Plants for Home: ಮನೆಯಲ್ಲಿ ಈ ಸಸ್ಯಗಳಿದ್ರೆ ದುಷ್ಟಶಕ್ತಿ ನಿಮ್ಮ ಜೊತೆಯಲ್ಲಿದ್ದಂತೆ!
ಪ್ರೀತಿ ಮತ್ತು ಸಂಬಂಧಗಳ ವಿಚಾರದಲ್ಲಿ ಈ ರಾಶಿಯವರು ಹೇಗೆ?
ಇನ್ನೂ ಪ್ರೀತಿ ಮತ್ತು ಸಂಬಂಧಗಳ ವಿಚಾರಕ್ಕೆ ಬಂದರೆ ಧನು ರಾಶಿಯವರು ತುಂಬಾನೇ ಭಾವೋದ್ರಿಕ್ತ ಮತ್ತು ರೋಮ್ಯಾಂಟಿಕ್ ಆಗಿರುತ್ತಾರೆ. ಅವರು ತಮ್ಮ ಸಂಗಾತಿಯವರೊಂದಿಗೆ ತುಂಬಾನೇ ಪ್ರಾಮಾಣಿಕ ಮತ್ತು ಮುಕ್ತರಾಗಿರುತ್ತಾರೆ, ಮತ್ತು ಅವರು ಯಾವಾಗಲೂ ಸಂಬಂಧವನ್ನು ರೋಮಾಂಚಕವಾಗಿಡುವ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಧನು ರಾಶಿಯವರು ಸ್ವಲ್ಪಮಟ್ಟಿಗೆ ಹೆದರಿಕೆಯುಳ್ಳವರಾಗಿರುತ್ತಾರೆ. ಅವರು ತಮ್ಮ ಸ್ವಾತಂತ್ರ್ಯ ಮತ್ತು ಇತರರ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ.
ಸ್ವಲ್ಪ ನಕಾರಾತ್ಮಕವಾಗಿರುತ್ತಂತೆ ಧನು ರಾಶಿಯವರ ವ್ಯಕ್ತಿತ್ವದ ಗುಣಲಕ್ಷಣಗಳು
ಧನು ರಾಶಿಯವರು ಇತರೆ ರಾಶಿಚಕ್ರ ಚಿಹ್ನೆಯಂತೆ, ಅವರು ಸಹ ಸ್ವಲ್ಪ ಮಟ್ಟಿಗೆ ನಕಾರಾತ್ಮಕ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಅಂತ ಹೇಳಬಹುದು. ಅದು ಕೆಲವೊಮ್ಮೆ ಇವರಿಗೆ ಸಮಸ್ಯಾತ್ಮಕವಾಗಬಹುದು. ಧನು ರಾಶಿಯ ಅತಿದೊಡ್ಡ ನಕಾರಾತ್ಮಕ ಗುಣಲಕ್ಷಣವೆಂದರೆ ಅವರ ಮಾತುಗಳು ಇತರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸದೆ ಮಾತನಾಡುವುದು.
ಈ ಗುಣದಿಂದ ಇವರು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಅನಗತ್ಯ ಅಪಾಯಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಧನು ರಾಶಿಯವರು ಸುಲಭವಾಗಿ ಬೇಸರಗೊಳ್ಳುತ್ತಾರೆ, ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬದ್ಧತೆಯ ಕೊರತೆಗೆ ಕಾರಣವಾಗಬಹುದು.
ಧನು ರಾಶಿಯವರಿಗೆ ಈ ಕೆಲಸಗಳು ಸೂಕ್ತವಾಗಿರುತ್ತವೆ..
ಧನು ರಾಶಿಯವರು ಕಠಿಣ ಪರಿಶ್ರಮಿಗಳು ಮತ್ತು ಸದಾ ಹೊಸ ವಿಷಯಗಳನ್ನು ಕಲಿಯಲು ಬಯಸುವುದರಿಂದ ಅವರು ಬೋಧನೆ, ಬರವಣಿಗೆ ಮತ್ತು ಪ್ರಕಟಣೆಯಂತಹ ಕ್ಷೇತ್ರಗಳಲ್ಲಿ ಉತ್ಕೃಷ್ಟರಾಗಿರುತ್ತಾರೆ, ಅಲ್ಲಿ ಅವರು ತಮ್ಮ ಜ್ಞಾನ ಮತ್ತು ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.
ಧನು ರಾಶಿಯವರು ಒಳ್ಳೆಯ ಉದ್ಯಮಿಗಳು ಸಹ ಆಗಬಹುದು ಮತ್ತು ಅವರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸುವಲ್ಲಿ ಅಥವಾ ಮಾರ್ಕೆಟಿಂಗ್ ಮತ್ತು ಜಾಹೀರಾತು ಕ್ಷೇತ್ರದಲ್ಲಿಯು ಸಹ ಕೆಲಸ ಮಾಡಿ ಯಶಸ್ಸನ್ನು ಗಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ