Sabrimala: ಶಬರಿಮಲೆಯ 18 ಮೆಟ್ಟಿಲುಗಳ ಧಾರ್ಮಿಕ ಮಹತ್ವ ಇದು!

ಈ 18 ಮೆಟ್ಟಿಲು ಧಾರ್ಮಿಕ ಮಹತ್ವ ಹೊಂದಿದ್ದು, ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಲೌಕಿಕ ಬಯಕೆಗಳಿಂದ ದೂರವಿರಲು ಸಹಾಯ ಮಾಡುತ್ತದೆ

 ಶಬರಿಮಲೆ

ಶಬರಿಮಲೆ

  • Share this:
    ಮಕರ ಸಂಕ್ರಾಂತಿಯಂದು (Makar Sankranti) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa) ಜ್ಯೋತಿ ಮೂಲಕ ದರ್ಶನ ನೀಡುತ್ತಾರೆ. ಈ ಮಕರ ಜ್ಯೋತಿಯ ದರ್ಶನಕ್ಕಾಗಿ ಅಯ್ಯಪ್ಪನ ಭಕ್ತರು ಕಾದು ಕುಳಿತಿರುತ್ತಾರೆ. ಇನ್ನು ಶಬರಿ ಮಲೆಯಲ್ಲಿ ಮೂಡುವ ಈ ಜ್ಯೋತಿಯನ್ನು (Jyothi) ನೇರವಾಗಿ ಕಣ್ತುಂಬಿಕೊಳ್ಳಲು ವಿವಿಧ ರಾಜ್ಯಗಳ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. 41ದಿನಗಳ ಕಠಿಣ ವ್ರತವನ್ನು ನಡೆಸಿದ ಭಕ್ತರು ಇರುಮುಡಿ ಹೊತ್ತು ಶಬರಿಮಲೆಗೆ ಹೋಗುತ್ತಾರೆ. ಕಾಡು ಮೇಡುಗಳ ಈ ಪ್ರಯಾಣ ಸುಲಭದಲ್ಲ. ಇದಾದ ಬಳಿಕ ದೇವರ ದರ್ಶನಕ್ಕೆ ಮುನ್ನ 18 ಪವಿತ್ರ ಮಟ್ಟಿಲುಗಳನ್ನು (18 Steps) ಹತ್ತಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಈ 18 ಮೆಟ್ಟಿಲುಗಳು ದೇವರ ದರ್ಶನಕ್ಕೆ ಇರುವ ಮಾರ್ಗ ಅಷ್ಟೇ ಅಲ್ಲ, ಧಾರ್ಮಿಕ- ಲೌಕಿಕ ಜೀವನ ಸಾರವನ್ನು ಹೊಂದಿದೆ.

    ಶಬರಿಮಲೆಯ 18 ಮೆಟ್ಟಿಲು ಹತ್ತುವುದು ಪ್ರತಿಯೊಬ್ಬ ಅಯ್ಯಪ್ಪ ಭಕ್ತರ ಕೋರಿಕೆ. ಈ ಮೆಟ್ಟಿಲುಗಳು ಒಂದೊಂದು ಅರ್ಧವನ್ನು ಹೊಂದಿದ್ದು, ಜೀವನ ಸಾರವನ್ನು ತಿಳಿಸುತ್ತದೆ. ಈ ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಪಥಿನೆಟ್ಟಂ ಪಾಡಿಯನ್ನು (18 ಮೆಟ್ಟಿಲುಗಳ ಹಾಡು) ಪಠಿಸಬೇಕು.

    ಮೆಟ್ಟಿಲು ಹತ್ತುವ ನಿಯಮ
    ಈ 18ಮೆಟ್ಟಿಲನ್ನು ಎಲ್ಲಾ ವ್ರತಾಧಾರಿಗಳು ಹತ್ತುವಂತಿಲ್ಲ. 41ದಿನಗಳ ಕಠಿಣ ನಿಯಮ ಪಾಲಿಸಿದವರು ಮಾತ್ರ ಈ ಮೆಟ್ಟಿಲು ಹತ್ತಲು ಅರ್ಹರಾಗಿದ್ದು, ಆ ದೈವಿಕ ಅನುಭವ ಪಡೆಯುತ್ತಾರೆ. ಇನ್ನು ಈ ಮೆಟ್ಟಿಲು ಹತ್ತುವಾಗ ಬಲಗಾಲಿನಿಂದ ತಮ್ಮ ನಡಿಗೆ ಶುರು ಮಾಡಬೇಕು. ತಲೆಯ ಮೇಲೆ ಇರುಮುಡಿ ಇರಬೇಕು. ಕಾಲಿಗೆ ಪಾದರಕ್ಷೆಯಂತೂ ಇರಲೇಬಾರದು.

    ಈ 18 ಮೆಟ್ಟಿಲು ಧಾರ್ಮಿಕ ಮಹತ್ವ ಹೊಂದಿದ್ದು, ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಲೌಕಿಕ ಬಯಕೆಗಳಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ಭಕ್ತರು ನಂಬುತ್ತಾರೆ.

    18 ಪವಿತ್ರ ಮೆಟ್ಟಿಲುಗಳ ಸಂಕೇತ
    ಮೊದಲ ಐದು ಮೆಟ್ಟಿಲುಗಳನ್ನು ಪಂಚೇಂದ್ರಿಯಗಳು ಎಂದು ಕರೆಯಲಾಗುತ್ತದೆ: ಅವು ದೃಷ್ಟಿ, ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶದ ಐದು ಮಾನವ ಇಂದ್ರಿಯಗಳನ್ನು ಸಂಕೇತಿಸುತ್ತವೆ.

    ಮುಂದೆ ಅಷ್ಟರಾಗಗಳು ಅಂದರೆ ಎಂಟು ಮೆಟ್ಟಿಲುಗಳು ಭಾವನೆಗಳನ್ನು ಸೂಚಿಸುತ್ತವೆ: ಕ್ರೋಧ , ಕಾಮ , ಲೋಭ , ಮೋಹ , ಅಸೂಯ , ಹೆಗ್ಗಳಿಕೆ, ಮದ ಮತ್ತು ಮತ್ಸರ ಸಂಕೇತಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವಾಗ ಜಪ ಮಾಡುವುದು ಜಗತ್ತಿನಲ್ಲಿ ನೋವನ್ನು ಉಂಟುಮಾಡುವ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

    ಇದನ್ನು ಓದಿ: ಮೋಕ್ಷ ಸಂಪಾದಿಸಲು ವೈಕುಂಠ ಏಕಾದಶಿಯಂದು ತಪ್ಪದೇ ಈ ಕಾರ್ಯ ಮಾಡಿ

    ಮುಂದಿನ ಮೂರು ಮೆಟ್ಟಿಲುಗಳು, ಸತ್ವ (ಒಳ್ಳೆಯತನ ಅಥವಾ ಶುದ್ಧತೆ), ರಜಸ್ (ಉತ್ಸಾಹ) ಮತ್ತು ತಮಸ್ (ಜಡತ್ವ ಅಥವಾ ಮಂದತನ) ಎಂಬ ಮೂರು ಮಾನವ ಗುಣಗಳನ್ನು ಪ್ರತಿನಿಧಿಸುತ್ತವೆ.

    ಕೊನೆಯ ಎರಡು ಹಂತಗಳು ವಿದ್ಯಾ (ಜ್ಞಾನ) ಮತ್ತು ಅದರ ವಿರುದ್ಧವಾದ ಅವಿದ್ಯೆಯನ್ನು (ಅಜ್ಞಾನ) ಪ್ರತಿನಿಧಿಸುತ್ತವೆ.

    ಪಂಚಲೋಹದಿಂದ ನಿರ್ಮಾಣವಾಗಿರುವ ಮೆಟ್ಟಿಲು
    ಮೆಟ್ಟಿಲುಗಳು ಮೂಲತಃ ಕಲ್ಲಿನಿಂದ ನಿರ್ಮಾಣವಾಗಿದ್ದು, ನಂತರದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ತವರದ ವಿಶೇಷ ಮಿಶ್ರಣವಾದ ಪಂಚಲೋಹದಿಂದ ಮುಚ್ಚಲಾಯಿತು.

    ಇದನ್ನು ಓದಿ:  ಮಕರ ಸಂಕ್ರಾಂತಿ ಹಬ್ಬ ಜ.14 ಅಥವಾ 15; ಇಲ್ಲಿದೆ ಗೊಂದಲಗಳಿಗೆ ಉತ್ತರ

    ಇನ್ನೊಂದು ಸಂಕೇತ

    ಇನ್ನು ಈ ಮಟ್ಟಿಲುಗಳು ಅಯ್ಯಪ್ಪನ ಮತ್ತೊಂದು ಶಕ್ತಿ ಸಕೇಂತ ಎಂದು ನಂಬಲಾಗಿದೆ. ಅಯ್ಯಪ್ಪ 18 ಆಯುಧಗಳ ಬಳಕೆಯಲ್ಲಿ ನುರಿತಿದ್ದರು. ಅವರು ಇಲ್ಲಿ ಬಂದು ನೆಲೆಸುವಾಗ   ಪ್ರತಿಯೊಂದು ಆಯುಧಗಳನ್ನು ಪ್ರತಿ ಮೆಟ್ಟಿಲಲ್ಲಿ ಸಮರ್ಪಿಸಿ ಕೊನೆಯ ಹದಿನೆಂಟನೇ ಮೆಟ್ಟಿಲಲ್ಲಿ ಶರಣಾಗುತ್ತಾರೆ ಎಂದು ನಂಬಲಾಗಿದೆ.

    ಇದರ ಜೊತೆಗೆ ಇರುವ ಮತ್ತೊಂದು ನಂಬಿಕೆ ಎಂದರೆ, ಶಬರಿಮಲೆಯ ಸುತ್ತಲಿನ 18 ಬೆಟ್ಟಗಳನ್ನು ಈ ಮೆಟ್ಟಿಲುಗಳು ಪ್ರತಿನಿಧಿಸುತ್ತವೆ ಎಂದು ಕೆಲವರು ನಂಬುತ್ತಾರೆ.
    Published by:Seema R
    First published: