• Home
  • »
  • News
  • »
  • astrology
  • »
  • Sabarimala Temple: ಶಬರಿಮಲೆಗೆ ಹರಿದು ಬಂದ ಜನಸಾಗರ, ಬರೋಬ್ಬರಿ 225 ಕೋಟಿ ಆದಾಯ ಸಂಗ್ರಹ

Sabarimala Temple: ಶಬರಿಮಲೆಗೆ ಹರಿದು ಬಂದ ಜನಸಾಗರ, ಬರೋಬ್ಬರಿ 225 ಕೋಟಿ ಆದಾಯ ಸಂಗ್ರಹ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sabarimala Temple Close: ಈ ಬಾರಿ ಜನ ಹೆಚ್ಚಿರುವ ಕಾರಣ ಸಹ ದರ್ಶನಕ್ಕೆ ಸಮಯ ಹೆಚ್ಚು ಬೇಕಾಗಿದ್ದು, ಜನರಿಗೆ ಸರಿಯಾಗಿ ದರ್ಶನ ಸಿಗಬೇಕು ಎನ್ನುವ ಕಾರಣದಿಂದ ಭಕ್ತರ ಸಂಖ್ಯೆಯನ್ನು ದಿನ್ಕಕೆ 90 ಸಾವಿರಕ್ಕೆ ಮಿತಿಗೊಳಿಸಲಾಗಿದೆ.

  • Share this:

ಮಂಗಳವಾರ (Tuesday) ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ (Sabarimala Temple) ಅಯ್ಯಪ್ಪ ದೇವರ ಮಂಡಲ ಪೂಜೆ (Mandal Pooja) ನಡೆಸಲಾಗಿದ್ದು, ದೇವರ ಆಶೀರ್ವಾದ ಪಡೆಯಲು ಸಾವಿರಾರು ಜನರು ಭಾಗವಹಿಸಿದ್ದರು. ಇನ್ನು ವಾರ್ಷಿಕ ಸಂಪ್ರಾಯದಂತೆ ಇನ್ನೆರಡು ದಿನ ದೇವಾಲಯವನ್ನು ಮುಚ್ಚಲಾಗುತ್ತದೆ. ನಿನ್ನೆ ಮಧ್ಯಾಹ್ನ ಗುಡ್ಡದ ದೇಗುಲದಲ್ಲಿ ಮಂಡಲ ಪೂಜೆ ನಡೆದಿದ್ದು, ಸೋಮವಾರ (Monday)  ಸಂಜೆ ದೇವಸ್ಥಾನ ಸಂಕೀರ್ಣದಿಂದ ತಂದಿದ್ದ ಥಂಕ ಅಂಗಿಯಿಂದ (ಚಿನ್ನದ ಆಭರಣಗಳು) ಅಲಂಕರಿಸಿದ ನಂತರ ಪ್ರಧಾನ ಅರ್ಚಕ ಕಂದರಾರು ರಾಜೀವ ಅವರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ನಿನ್ನೆ 2.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆದಿದ್ದು, ಸಂಜೆ ಭಕ್ತರಿಗೆ ದರ್ಶನಕ್ಕೆ ಅವಕಾಶಕೊಟ್ಟು ನಂತರ ಮುಚ್ಚಲಾಗಿದೆ.


2 ದಿನಗಳ ಕಾಲ ದೇವಾಲಯ ಬಂದ್


ಕಲಭಾಭಿಷೇಕದ ನಿಮಿತ್ತ ಬೆಳಗ್ಗೆ 9.30ಕ್ಕೆ ಮಂಟಪದಲ್ಲಿ ತಂತ್ರಿ ಬ್ರಹ್ಮಕಲಶ ಪೂಜೆ ನೆರವೇರಿಸಿದರು. ರಾತ್ರಿ 10 ಗಂಟೆಗೆ ಅತ್ತಳ  ಪೂಜೆ ಮತ್ತು ಹರಿವರಾಸನದ ನಂತರ ದೇವಾಲಯವನ್ನು ಮುಚ್ಚಲಾಯಿತು. ಇನ್ನು ಕಳೆದ ತಿಂಗಳಷ್ಟೇ ದೇವಸ್ಥಾನದ ಆಡಳಿತ ಮಂಡಲಿಯು ಮಂಡಲ ಪೂಜೆಗೆ ಮುಂಚಿತವಾಗಿ ಬುಕ್ ಮಾಡಲು ಅವಕಾಶ ನೀಡಿತ್ತು.


ಪಶ್ಚಿಮ ಘಟ್ಟಗಳ ಭಾಗ ಹಾಗೂ ಸೊಂಪಾದ ಕಾಡುಗಳು ಮತ್ತು 18 ಬೆಟ್ಟಗಳಿಂದ ಆವೃತವಾಗಿರುವ ದೇವಾಲಯದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯು ನವೆಂಬರ್ 17 ಅಥವಾ ಮಲಯಾಳಂ ಯುಗದ ವೃಶ್ಚಿಕಂ 1 ರಂದು ಪ್ರಾರಂಭವಾಗುತ್ತದೆ. 41 ದಿನಗಳ ಮಂಡಲ ಪೂಜೆ ಮಹೋತ್ಸವ ಡಿಸೆಂಬರ್ 27 ರಂದು ಮುಕ್ತಾಯಗೊಂಡಿದೆ.


ಇದು ಶಬರಿಮಲೆ ತೀರ್ಥಯಾತ್ರೆಯ ಮೊದಲ ಹಂತವಾಗಿದ್ದು ಇನ್ನು ಎರಡನೇ ಹಂತವಾದ ಮಕರವಿಳಕ್ಕು ಸಮಾರಂಭಕ್ಕಾಗಿ ದೇಗುಲವನ್ನು ಎರಡು ದಿನಗಳ ಕಾಲ ಮುಚ್ಚಲಾಗುತ್ತದೆ. ಮತ್ತು ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಮತ್ತೆ ತೆರೆಯಲಾಗುತ್ತದೆ.


ಇದನ್ನೂ ಓದಿ: ಶ್ರೀಮಂತ ತಿರುಪತಿ ತಿಮ್ಮಪ್ಪನ ಸಾಲ ಎಷ್ಟಿದೆ ಗೊತ್ತಾ? ಬಾಲಾಜಿಯ ಋಣಭಾರದ ಕಥೆ ಇಲ್ಲಿದೆ ಓದಿ


ಕೇರಳದ ಪಥನಂತಿಟ್ಟ ಜಿಲ್ಲೆಯ ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ನಾಲ್ಕು ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಹಾಗೂ ಕಷ್ಟಕರವಾದ ಟ್ರೆಕ್ಕಿಂಗ್ ಮೂಲಕ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಇನ್ನು ಕಾಡಿನ ಮೂಲಕ, ಪಂಬಾ ನದಿಯನ್ನು ದಾಟಿ ಈ ದೇವಾಲಯಕ್ಕೆ ಹೋಗಬೇಕು. ಈ ಬಾರಿ ಜನವರಿ 20 ರ ತನಕ ಯಾತ್ರಿಗಳಿಗೆ ಅವಕಾಶ ನೀಡಲಾಗಿದೆ.  ಜನವರಿ 20ರಂದು ದೇವಾಲಯ ಕ್ಲೋಸ್​ ಮಾಡಲಾಗುತ್ತದೆ.


ಈ ಬಾರಿ ಹರಿದು ಬಂದ ಜನಸಾಗರ


ಕಳೆದ 2 ವರ್ಷದಿಂದ ಕೊರೊನಾ ಕಾರಣದಿಂದ ಹಲವಾರು ಜನರಿಗೆ ಶಬರಿಮಲೆ ಯಾತ್ರೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ವರ್ಷ ಹೆಚ್ಚಿನ ಜನರು ಯಾತ್ರೆ ಕೈಗೊಂಡಿದ್ದು, ಕಳೆದ ಸುಮಾರು 39 ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಅಂದಾಜು 30 ಸಾವಿರ ಜನರು ಯಾತ್ರೆ ಕೈಗೊಂಡಿದ್ದಾರೆ.


ಕೇವಲ ಒಂದು ತಿಂಗಳ ಸಮಯದಲ್ಲಿ ಸುಮಾರು 225 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.  ಇನ್ನು ಮಾಹಿತಿಯ ಪ್ರಕಾರ ಡಿಸೆಂಬರ್ 25ರವರೆಗೆ ಶಬರಿಮಲೆಗೆ ಯಾತ್ರೆ ಕೈಗೊಂಡಿರುವವರ ಜೊತೆ ಹಾಗೆಯೇ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 30 ಲಕ್ಷ ಎನ್ನಲಾಗುತ್ತಿದ್ದು, ಈ 39 ದಿನಗಳಲ್ಲಿ ಬಂದ ಆದಾಯದಲ್ಲಿ ಸುಮಾರು 70.10 ಕೋಟಿ ದೇಣಿಗೆ ರೂಪದಲ್ಲಿ ಬಂದಿದೆ ಎಂದು ದೇವಾಲಯ ತಿಳಿಸಿದೆ.


ಇದನ್ನೂ ಓದಿ: ಹೊಸವರ್ಷದಲ್ಲಿ ಈ 4 ರಾಶಿಯವರಿಗೆ ಗುರುದೆಸೆಯಂತೆ


ಈ ಬಾರಿ ಜನ ಹೆಚ್ಚಿರುವ ಕಾರಣ ಸಹ ದರ್ಶನಕ್ಕೆ ಸಮಯ ಹೆಚ್ಚು ಬೇಕಾಗಿದ್ದು, ಜನರಿಗೆ ಸರಿಯಾಗಿ ದರ್ಶನ ಸಿಗಬೇಕು ಎನ್ನುವ ಕಾರಣದಿಂದ ಭಕ್ತರ ಸಂಖ್ಯೆಯನ್ನು ದಿನ್ಕಕೆ 90 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಅಲ್ಲದೇ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ದೇವಸ್ವಂ ಬೋರ್ಡ್​ ಸಕಲ ಸಿದ್ಧತೆ ಮಾಡಿಕೊಂಡಿದೆ.

Published by:Sandhya M
First published: