ಪುತ್ತೂರಿನಲ್ಲಿ ನಡೆಯಲಿದೆ ಚರಿತ್ರೆಯಲ್ಲಿ ಹಿಂದೆಂದೂ ನಡೆಯದ  ಯಾಗ, ಕೋವಿಡ್​​​ ಸಂಕಷ್ಟ ನಿವಾರಣೆಗಾಗಿ ಈ‌ ಹೋಮ

ಕೊರೋನಾ ಎನ್ನುವ ಮಹಾಮಾರಿಯಿಂದ ನಲುಗಿರುವ ವಿಶ್ವವನ್ನು ಪ್ರಕೃತಿಯ ಮೂಲಕ ರಕ್ಷಿಸಲು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದ ಉದಯಗಿರಿ ಅನ್ನಪೂರ್ಣೇಶ್ವರಿ  ದೇವಸ್ಥಾನ ನಿರ್ಧರಿಸಿದೆ. ಇದಕ್ಕಾಗಿ ಡಿಸೆಂಬರ್ 14 ರಿಂದ 19 ರ ವರೆಗೆ ಐದು ದಿನಗಳ ಕಾಲ ನಡೆಸಲಾಗುವುದು.

ಯಾಗಕ್ಕೆ ಸಿದ್ದತೆ

ಯಾಗಕ್ಕೆ ಸಿದ್ದತೆ

  • Share this:
ಪುತ್ತೂರು (ಡಿ. 11): ದುಷ್ಟ ಶಕ್ತಿಗಳ ಅಟ್ಟಹಾಸ, ಪಾಕೃತಿಕ ವಿಕೋಪಗಳು ಹೆಚ್ಚಾದ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಯಜ್ಞಗಳ (yagna) ಮೊರೆ ಹೋಗುತ್ತಿದ್ದದ್ದು ಸಾಮಾನ್ಯ. ಆದರೆ ಇಂದಿನ ಕಲಿಯುಗದಲ್ಲಿ  ತಂತ್ರಜ್ಞಾನದ ಮೂಲಕ ಎಲ್ಲವನ್ನೂ ನಿಯಂತ್ರಿಸುವ ನಮಗೆ ಪ್ರಾಕೃತಿಕ ವಿಕೋಪ, ಭೀಕರ ರೋಗಗಳನ್ನು ಸಮರ್ಪಕವಾಗಿ ನಿಭಾಯಿಸಲಾಗದೆ ಹೆಣಗಾಡುತ್ತಿದ್ದೇವೆ. ಈ ಕಾರಣಕ್ಕಾಗಿಯೋ ಏನೋ ದೇಶದ ಹಲವು ಕಡೆಗಳಲ್ಲಿ ಜನ ಇಂದು ಮತ್ತೆ ಮಹರ್ಷಿಗಳು ನಡೆಸುತ್ತಿದ್ದಂತಹ ಯಜ್ಞ, ಯಾಗಾದಿಗಳ ಮೊರೆ ಹೋಗುತ್ತಿದ್ದಾರೆ.  ಇಂಥಹುದೇ ಒಂದು ಯಾಗಕ್ಕೆ ಇದೀಗ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು, ಧಾರ್ಮಿಕ ಚರಿತ್ರೆಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಯಾಗವನ್ನು ನಡೆಸಲಾಗುತ್ತಿದೆ.

ಸೋಂಕು ನಿಯಂತ್ರಣಕ್ಕೆ ಯಾಗ ನಡೆಸಲು ಸಿದ್ದತೆ

ಪ್ರಕೃತಿಯನ್ನು ಸಮತೋಲನದಲ್ಲಿಡುವಂತಹ, ಭೀಕರ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವಂತಹ ಶಕ್ತಿ ಯಾಗಾಧಿಗಳಿಗೆ ಇವೆ ಎನ್ನುವುದನ್ನು ಪುರಾಣ ಇತಿಹಾಸಗಳು ಹೇಳುತ್ತದೆ. ಇದಕ್ಕೆ ಪೂರಕವಾಗಿ ಯಜ್ಞ ಕುಂಡಗಳಿಗೆ ಅರ್ಘ್ಯ ಮಾಡುವಂತಹ ವಸ್ತುಗಳನ್ನು ಬೆಂಕಿಯಲ್ಲಿ ಸುಟ್ಟಲ್ಲಿ ವಾತಾವರಣದಲ್ಲಿರುವ ರೋಗಾಣುಗಳ ನಿಯಂತ್ರಣ ಸಾಧ್ಯ ಎನ್ನುವುದನ್ನು ವಿಜ್ಞಾನ ಕೂಡಾ ಇದೀಗ ಒಪ್ಪಿಕೊಂಡಿದೆ. ಕೊರೊನಾ ಎನ್ನುವ ಮಹಾಮಾರಿಯಿಂದ ನಲುಗಿರುವ ವಿಶ್ವವನ್ನು ಪ್ರಕೃತಿಯ ಮೂಲಕ ರಕ್ಷಿಸಲು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದ ಉದಯಗಿರಿ ಅನ್ನಪೂರ್ಣೇಶ್ವರಿ  ದೇವಸ್ಥಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಐದು ದಿನಗಳ ಕಾಲ ನಡೆಯಲಿರುವ ಗಣಪತಿಯಾಗ

ಡಿಸೆಂಬರ್ 14 ರಿಂದ 19 ರ ವರೆಗೆ ಐದು ದಿನಗಳ ಕಾಲ ನಡೆಯುವ ಈ ಯಾಗಕ್ಕೆ ತ್ರಿಮಧುರಪೂರಿತ ಲಕ್ಷ ನಾರಿಕೇಳ ಗಣಪತಿಯಾಗ ಎಂದು ಕರೆಯಲಾಗಿದೆ. ಧಾರ್ಮಿಕ ಚರಿತ್ರೆಯ ಇತಿಹಾಸದಲ್ಲಿ ವಿಶ್ವದ ಯಾವ ಭಾಗದಲ್ಲೂ ನಡೆಯದಂತಹ ಈ ಯಾಗವನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನಡೆಸಲಾಗುತ್ತಿದೆ. ವಿಶ್ವಕ್ಕೆ ಬಂದಿರುವಂತಹ ಗ್ರಹಚಾರ ಹಾಗೂ ಮುಂದೆ ಬರಲಿರುವ ಗ್ರಹಚಾರಗಳನ್ನು ದೂರ ಮಾಡಲು ಪ್ರಕೃತಿಯಂತಹ ದೇವರ ಸಾನಿಧ್ಯಗಳಿಂದ ಮಾತ್ರ ಸಾಧ್ಯ. ಯಾಗದ ಮೂಲಕ ಹೊರಡುವ ಹೊಗೆ ಪ್ರಕೃತಿಯಲ್ಲಿ ಲೀನವಾಗಿ ವಾತಾವರಣವನ್ನು ಪರಿಶುದ್ಧವಾಗುವಂತೆ, ಪ್ರಪಂಚದಲ್ಲಿರುವ ದುರಿತಗಳು ದೂರವಾಗಿ ಶುದ್ಧವಾಗಲಿ ಎನ್ನುವ ಮುಖ್ಯ ಉದ್ಧೇಶದಿಂದ ಈ ಯಾಗವನ್ನು ಮಾಡಲಾಗುತ್ತಿದೆ.

ಇದನ್ನು ಓದಿ: ಮದುವೆ ವಿಚಾರದಲ್ಲಿ ಈ ತಪ್ಪು ಮಾಡಿದರೆ ಜೀವನ ಪರ್ಯಂತ ಸಂಕಷ್ಟ ಎನ್ನುತ್ತಾರೆ ಚಾಣಕ್ಯ

1008 ತೆಂಗಿನ ಕಾಯಿಯ ಅಷ್ಟ ದ್ರವ್ಯ ಗಣಪತಿ ಹೋಮ

ಈ ಯಾಗಕ್ಕೆ ಲಕ್ಷ ಒಣ ತೆಂಗಿನ ಕಾಯಿ, 750 ಕಿಲೋದಷ್ಟು ಬೆಲ್ಲ, ಸುಮಾರು 350 ಕಿಲೋ ತುಪ್ಪ, ಸುಮಾರು 300 ಕಿಲೋ ಜೇನುತುಪ್ಪ ವನ್ನು ಬೆಂಕಿಗೆ ಅರ್ಘ್ಯ ಮಾಡುವ ಮೂಲಕ ಈ ಯಾಗವನ್ನು ಮಾಡಲಾಗುತ್ತದೆ. 1008 ಕಾಯಿಗಳ ಯಾಗವನ್ನು 20 ಕುಂಡಗಳಲ್ಲಿ ಮಾಡುವ ಮೂಲಕ, ದಿನಕ್ಕೆ 20 ಸಾವಿರ ಯಾಗದಂತೆ ಐದು ದಿನಗಳಲ್ಲಿ 1 ಲಕ್ಷ ಯಾಗವನ್ನು ಮಾಡಲು ತೀರ್ಮಾನಿಸಲಾಗಿದೆ.

ಇದನ್ನು ಓದಿ: ಚಾಣಕ್ಯನ ಪ್ರಕಾರ ಇವರೇ ಅಂತೆ ನಿಜವಾದ ಸ್ನೇಹಿತರು; ಎಂದಿಗೂ ಇವರನ್ನು ಕಳೆದುಕೊಳ್ಳಬಾರದಂತೆ

ಅಲ್ಲದೆ ಯಾಗದ ಕೊನೆಯ ದಿನ 1008 ತೆಂಗಿನ ಕಾಯಿಯ ಅಷ್ಟ ದ್ರವ್ಯ ಗಣಪತಿ ಹೋಮವನ್ನು ನಡೆಸುವ ಮೂಲಕ ಯಾಗವನ್ನು ಸಮಾಪ್ತಿ ಮಾಡಲಾಗುತ್ತದೆ. ಸುಮಾರು 125 ಮುಖ್ಯ ವೈಧಿಕರು ಸೇರಿ ಈ ಯಾಗವನ್ನು ಮಾಡಲಿದ್ದು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಯಾಗದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಯಾಗದ ನೇತೃತ್ವ ವಹಿಸಿರುವ ಪ್ರೀತಂ ಪುತ್ತೂರಾಯ ಮಾಹಿತಿ ನೀಡಿದ್ದಾರೆ.

ದೇವರ ಮೊರೆಯಿಂದ ಸಮಸ್ಯೆ ದೂರ

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಹೊರತಾಗಿಯೂ ಒಂದು ಶಕ್ತಿ ಇದೆ ಮತ್ತು ಅದನ್ನು ದೈವಿಕ ಶಕ್ತಿ ಎಂದು ಆಸ್ತಿಕರು ನಂಬಿಕೊಂಡು ಬರುತ್ತಿದ್ದಾರೆ. ಹೋಮ, ಹವನಗಳನ್ನು ಮಾಡುವ ಮೂಲಕ ದೇವರು ಧುರಿತ ನಿವಾರಿಸುತ್ತಾರೆ ಎನ್ನುವ ನಂಬಿಕೆಯಿಂದ ಇಂಥ ಯಾಗಗಳನ್ನು ಮಾಡಲಾಗುತ್ತಿದ್ದು, ಪುತ್ತೂರು ಕೂಡಾ ಇಂಥಹುದೇ ಒಂದು ಯಾಗಕ್ಕೆ ಸಾಕ್ಷಿಯಾಗಲಿದೆ.
Published by:Seema R
First published: