• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology Tips: ಮಿಥುನ ರಾಶಿಯವರಿಗೆ ಲೈಫ್ ಪಾರ್ಟನ್​ ಇವರಂತೆ, ಮೇಡ್​ ಫಾರ್ ಈಚ್​ ಅದರ್​!

Astrology Tips: ಮಿಥುನ ರಾಶಿಯವರಿಗೆ ಲೈಫ್ ಪಾರ್ಟನ್​ ಇವರಂತೆ, ಮೇಡ್​ ಫಾರ್ ಈಚ್​ ಅದರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಿಥುನ ರಾಶಿಯು ಮೇಷ  ರಾಶಿಯವರ ಜೊತೆ ಅವರ ಗ್ರಹಗಳ ಸ್ಥಾನದಿಂದಾಗಿ ನಿಜವಾಗಿಯೂ ಹೊಂದಿಕೆಯಾಗುತ್ತದೆ ಎಂದು ಹೇಳಬಹುದು.

  • Trending Desk
  • 5-MIN READ
  • Last Updated :
  • Share this:

ಜ್ಯೋತಿಷ್ಯ ಶಾಸ್ತ್ರದ (Astrology Tips) ಪ್ರಕಾರ ಪ್ರೀತಿಯ ವಿಷಯದಲ್ಲಿ ರಾಶಿಗನುಗುಣವಾಗಿ ಕೆಲವೊಂದು ಅಂಶಗಳು ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತವೆ. ಕೆಲವೊಂದು ರಾಶಿಗಳು ಅಷ್ಟೇನೂ ಕೂಡುವುದಿಲ್ಲ. ಮಿಥುನ ರಾಶಿಯವರಿಗೆ ಯಾವೆಲ್ಲ ರಾಶಿಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ಬೇರೆ ರಾಶಿಯವರ ಜೊತೆ ಪ್ರೀತಿ, ಸಂಬಂಧ ಹೇಗಿರುತ್ತವೆ ಅನ್ನೋದ್ರ ಬಗ್ಗೆ ಪ್ರಸಿದ್ಧ ಜ್ಯೋತಿಷಿ ಚಿರಾಗ್ ಬೇಜಾನ್ ದಾರುವಾಲಾ ಅವರು ವಿವರಿಸುತ್ತಾರೆ. ಮಿಥುನ ರಾಶಿಯು ಮೇಷ  ರಾಶಿಯವರ ಜೊತೆ ಅವರ ಗ್ರಹಗಳ ಸ್ಥಾನದಿಂದಾಗಿ ನಿಜವಾಗಿಯೂ ಹೊಂದಿಕೆಯಾಗುತ್ತದೆ ಎಂದು ಹೇಳಬಹುದು. ಮೇಷ ರಾಶಿಯವರು ಜೀವನದಲ್ಲಿ ಕೆಲವು ನಿರ್ದಿಷ್ಟ ನಿಯಮಗಳು (Rules) ಮತ್ತು ತತ್ವಗಳ ಬಗ್ಗೆ ಬಲವಾದ ನಂಬಿಕೆಯುಳ್ಳವರಾಗಿರುತ್ತಾರೆ. ಇತ್ತ ಮಿಥುನ ರಾಶಿಯವರು ಘನತೆ ಮತ್ತು ಕ್ರಮಬದ್ಧತೆಯಿಂದ ಬದುಕುವ ಜನರಾಗಿರುತ್ತಾರೆ.


ಹಾಗಾಗಿ ಮಿಥುನ ಹಾಗೂ ಮೇಷ ರಾಶಿಯ ನಡುವಿನ ಸಂಬಂಧವು ಬೇಗ ಮುಂದುವರಿದು ಮದುವೆಗೆ ಪರಿವರ್ತನೆಯಾಗುವ ಸಾಧ್ಯತೆಯಿದೆ.


ಮಿಥುನ ರಾಶಿಯವರು ತಮ್ಮ ವೃತ್ತಿಪರ ವಲಯ ಮತ್ತು ಕುಟುಂಬದ ವಿಷಯದಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರೆ, ಮೇಷ ರಾಶಿಯವರು ಎಲ್ಲಾ ರೀತಿಯ ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿಯಾಗಿರುತ್ತಾರೆ.


ಆದ್ರೆ ಮಿಥುನ ರಾಶಿಯ ಕ್ರೋಧದ ಸಮಸ್ಯೆಗಳನ್ನು ಮೇಷ ರಾಶಿಯವರು ನಿಭಾಯಿಸಲು ಸಾಧ್ಯವಿಲ್ಲ ಎಂಬ ಒಂದು ಅಂಶವನ್ನು ಬಿಟ್ಟರೆ ಈ ಎರಡೂ ರಾಶಿಗಳು ಉತ್ತಮವಾಗಿ ಹೊಂದಾಣಿಕೆಯಾಗುತ್ತವೆ.


2) ಮಿಥುನ – ವೃಷಭ: ಮಿಥುನ ಮತ್ತು ವೃಷಭ ರಾಶಿಯವರು ವಿಭಿನ್ನ ದೋಣಿಗಳಲ್ಲಿ ಒಂದೇ ಗಮ್ಯಸ್ಥಾನವನ್ನು ತಲುಪಲು ಪ್ರಯತ್ನಿಸುತ್ತಿರುವ ಇಬ್ಬರು ವ್ಯಕ್ತಿಗಳಂತೆ ಕಂಡುಬರುತ್ತಾರೆ.


ಸಂಬಂಧದಲ್ಲಿ ಪ್ರಯತ್ನಗಳನ್ನು ಪ್ರತಿಪಾದಿಸುವುದು ಯಾವಾಗಲೂ ವೃಷಭ ರಾಶಿಯವರಿಗೆ ಸುಲಭವಾಗಿರುತ್ತದೆ. ಈ ರಾಶಿಗಳ ಸಂಯೋಜನೆಯ ಹೊಂದಾಣಿಕೆಯು ಒಟ್ಟಾರೆಯಾಗಿ 50 - 60 ಎನ್ನಬಹುದು.


ಹೆಚ್ಚು ಗಮನ ಹರಿಸಬೇಕಾದ ವಿಷಯಗಳು ವೃಷಭ ರಾಶಿಯಿಂದ ನಿರ್ಲಕ್ಷಿಸಲ್ಪಡುತ್ತವೆ. ಆದರೆ ಮಿಥುನ ರಾಶಿಯು ಅದೇ ಪ್ರಮಾಣದ ಪ್ರೀತಿಯಿಂದ ಎಲ್ಲವನ್ನೂ ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ.


ಇದನ್ನೂ ಓದಿ: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ


ಬೇರೆಯವರೊಂದಿಗಿನ ಸಂಬಂಧದೊಂದಿಗೆ ತಮ್ಮ ಸಂಬಂಧವನ್ನು ಹೋಲಿಸುವುದು ಇವರು ಮಾಡುವ ದೊಡ್ಡ ತಪ್ಪು. ಆದ್ರೆ ಮನಸ್ಸು ಮಾಡಿದರೆ ಇದನ್ನು ಸುಧಾರಿಸಬಹುದು ಎಂಬುದಾಗಿ ಪ್ರಸಿದ್ಧ ಜ್ಯೋತಿಷಿ ಚಿರಾಗ್ ಬೇಜಾನ್ ದಾರುವಾಲಾ ಹೇಳುತ್ತಾರೆ.


3) ಮಿಥುನ - ಮಿಥುನ : ಮಿಥುನ ಮತ್ತು ಮಿಥುನ ರಾಶಿಗಳು ಗ್ರಹಗಳ ಸ್ಥಾನವನ್ನು ಒಳಗೊಂಡಂತೆ ಸಾಮಾನ್ಯವಾದ ಅನೇಕ ವಿಷಯಗಳನ್ನು ಹಂಚಿಕೊಂಡರೂ ಇದು ಅಪರೂಪದ ಕಾಂಬಿನೇಷನ್ ಎಂದು ಹೇಳಬಹುದು.


ಎಲ್ಲವನ್ನೂ ಸ್ಪಷ್ಟವಾದ ವಾದಕ್ಕೆ ತರುವುದು ಯಾವಾಗಲೂ ಮಿಥುನ ರಾಶಿಯವರಿಗೆ ಉತ್ತಮ ಮಾರ್ಗವಾಗಿದೆ. ಇದು ಅವರ ಯಶಸ್ವಿ ಸಂಬಂಧಕ್ಕೆ ಕಾರಣವಾಗಿದೆ.


ಭಾವನಾತ್ಮಕ ಬಂಧಗಳು ಸಮಯದೊಂದಿಗೆ ಬಲಗೊಳ್ಳುತ್ತವೆ. ಎರಡೂ ಚಿಹ್ನೆಗಳಿಂದ ಯಾವುದಾದರೂ ವಿಷಯದ ಮೇಲೆ ಬಿಗಿತ ಉಂಟಾಗುತ್ತದೆ. ಇದು ಇಬ್ಬರ ನಡುವಿನ ಹೊಂದಾಣಿಕೆಯ ಸಮಸ್ಯೆಗಗಳಾಗಿ ಕಾಡಬಹುದು.


ಇಬ್ಬರಲ್ಲಿ ಯಾರೂ ವಿಷಯಗಳನ್ನು ಬಿಡಲು ಪ್ರಯತ್ನಿಸುವುದಿಲ್ಲ. ಜೊತೆಗೆ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹೇರಲು ಪ್ರಯತ್ನಿಸುತ್ತಾರೆ. ಇವಿಷ್ಟರ ಹೊರತಾಗಿ, ಅವರ ಸಂಬಂಧವನ್ನು ಯಾವ ಅಂಶವೂ ಹಾಳುಮಾಡುವುದಿಲ್ಲ.


4) ಮಿಥುನ – ಕರ್ಕ: ಪ್ರಣಯ ಸಂಬಂಧದಲ್ಲಿ ಮಿಥುನ ಹಾಗೂ ಕರ್ಕಾಟಕ ರಾಶಿಯವರು ತಮ್ಮನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯಲು ಪ್ರಯತ್ನಿಸುತ್ತಾರೆ.


ಮಿಥುನ ಮತ್ತು ಕರ್ಕಾಟಕ ರಾಶಿಯವರು ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಹೀಗಾಗಿ ಉತ್ತಮ ಜೋಡಿಯಾಗುವುದಿಲ್ಲ ಎಂದು ಹೇಳಬಹುದು.


ಕರ್ಕಾಟಕ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಹೆಚ್ಚು ಹಿಡಿತ ಹೊಂದಿರುತ್ತಾರೆ. ಆದರೆ ಮಿಥುನ ರಾಶಿಯವರು ಸಂದರ್ಭಗಳಿಗಿಂತ ಹೆಚ್ಚಾಗಿ ನಂಬಿಕೆಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ.


ಪ್ರಣಯದ ಗ್ರಾಫ್ ಯಾವಾಗಲೂ ಮೇಲಕ್ಕಿಂತ ಹೆಚ್ಚು ಕೆಳಗೆ ಹೋಗುತ್ತದೆ. ಆದ್ದರಿಂದ ಡೇಟಿಂಗ್ ಮಾಡುವಾಗ ವಿಷಯಗಳು ಸರಿಯಾಗಿದ್ದರೂ ಸಹ ಈ ಎರಡೂ ರಾಶಿಯವರು ಮದುವೆಯಾಗುವುದು ಸೂಕ್ತವಲ್ಲ.


5) ಮಿಥುನ – ಸಿಂಹ: ಸಿಂಹ ರಾಶಿಯವರು ಒಂದು ರೀತಿಯಲ್ಲಿ ಉಗ್ರ ಸ್ವಭಾವದವರಾಗಿದ್ದರೆ ಮಿಥುನ ಮೃದು ಸ್ವಭಾವದವರಾಗಿ ಸೂಕ್ಷ್ಮರಾಗಿರುತ್ತಾರೆ.


ಬಹಳಷ್ಟು ವಿಚಾರಗಳು ಈ ಇಬ್ಬರನ್ನೂ ಹತ್ತಿರಕ್ಕೆ ತರಬಹುದು. ಅದು ಇಬ್ಬರನ್ನೂ ಪ್ರೀತಿಯಿಂದ ಅದ್ಭುತವಾಗಿ ಹೊಂದಾಣಿಕೆ ಮಾಡುವ ಜೋಡಿಯಾಗಿಸುತ್ತದೆ.


ಸಿಂಹ ರಾಶಿಯವರು ಕೋಪದ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಮಿಥುನ ರಾಶಿಯವರು ತಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನೂ ನಿಭಾಯಿಸಬಹುದು.


ಉತ್ತಮ ದೈಹಿಕ ಬಂಧವು ಅವರ ಸಂಬಂಧವನ್ನು ಹೆಚ್ಚು ಬಲಗೊಳಿಸುತ್ತದೆ. ಈ ಎರಡೂ ರಾಶಿಯವರು ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು ಇವರ ಸಂಬಂಧವನ್ನು ದುರ್ಬಲಗೊಳಿಸಬಹುದು.


6) ಮಿಥುನ – ಕನ್ಯಾರಾಶಿ: ಕನ್ಯಾ ರಾಶಿಯವರು ವಿಷಯಗಳನ್ನು ಹೆಚ್ಚು ಕಾಲ ಮನಸ್ಸಿನಲ್ಲಿಟ್ಟುಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ವಿಷಯಗಳನ್ನು ಬಿಡುವುದು ಕಷ್ಟ. ಮಿಥುನ ಮತ್ತು ಕನ್ಯಾ ರಾಶಿಯವರು ಉತ್ತಮ ಜೋಡಿಯಾಗಬಹುದು.


ಆದರೆ ಅವರು 25 ವರ್ಷದ ನಂತರ ಮದುವೆಯಾದರೆ ಮಾತ್ರ ಇದು ಸಾಧ್ಯವಾಗುತ್ತದೆ. ಡೇಟಿಂಗ್‌ನ ಆರಂಭಿಕ ಹಂತದಲ್ಲಿ ಕೆಲವು ಘರ್ಷಣೆಗಳು ಅವರ ಸಂಬಂಧಕ್ಕೆ ನ್ಯೂನತೆಯಾಗಿ ಪರಿಣಮಿಸುತ್ತದೆ. ಮದುವೆಯ ವಿಷಯದಲ್ಲಿ ಹೊಂದಾಣಿಕೆಯ ಸಮಸ್ಯೆಗಳು ಹೆಚ್ಚು ಎದುರಾಗಬಹುದು.


7) ಮಿಥುನ – ತುಲಾ: ಮಿಥುನ ರಾಶಿಯವರು ಎಲ್ಲದಕ್ಕೂ ಪ್ರಾಯೋಗಿಕ ವಿಧಾನವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಮಿಥುನ ರಾಶಿಯು ತುಲಾ ರಾಶಿಯವರ ಭಾವನಾತ್ಮಕ ಹೊರೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.


ಸಂಗಾತಿಯಾಗಿ ಪರಸ್ಪರ ವಿಷಯಗಳನ್ನು ಪರಿಪೂರ್ಣವಾಗಿಸುವುದು ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಸಾಮಾಜಿಕ ಅಭಿಪ್ರಾಯಗಳನ್ನು ತಪ್ಪಿಸುವುದು ಅವರ ಸಂಬಂಧಕ್ಕೆ ಒಳ್ಳೆಯದು ಎನ್ನಬಹುದು.


8) ಮಿಥುನ - ವೃಶ್ಚಿಕ : ಮಿಥುನ ರಾಶಿಯವರು ಪ್ರತಿಕೂಲ ಪರಿಸ್ಥಿತಿಯಲ್ಲಿ ದೃಢವಾಗಿ ಉಳಿಯುವಂಥವರು. ಮಿಥುನ ರಾಶಿಯವರು ತಮ್ಮ ಪ್ರೀತಿಪಾತ್ರರ ಮಾನಸಿಕ ಹೊರೆಗಳನ್ನು ತಾವು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ.


ಅವರು ಸಾಮಾನ್ಯವಾಗಿ ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ಉತ್ಸುಕರಾಗಿರುತ್ತಾರೆ. ವೃಶ್ಚಿಕ ರಾಶಿಯ ಸ್ಥಳೀಯರು ಮಿಥುನ ರಾಶಿಯ ಮೇಲಿನ ಎಲ್ಲಾ ಗುಣಗಳನ್ನು ಪ್ರೀತಿಸುತ್ತಾರೆ. ಪ್ರಣಯದ ವಿಷಯದಲ್ಲಿ ಈ ಸಂಯೋಜನೆಯ ಹೊಂದಾಣಿಕೆಯು ಭಾವನೆಗಳೊಂದಿಗೆ ಹೆಚ್ಚು ಮಿಳಿತವಾಗಿರುತ್ತದೆ.


9) ಮಿಥುನ - ಧನು ರಾಶಿ: ಮಿಥುನ ಮತ್ತು ಧನು ರಾಶಿ ಉತ್ತಮ ಜೋಡಿಯಾಗುವುದಿಲ್ಲ ಅಂತಲೇ ಹೇಳಬಹುದು. ಇಬ್ಬರೂ ತಮ್ಮ ಸಂಬಂಧದಲ್ಲಿ ಸ್ವಲ್ಪ ಶ್ರದ್ಧೆ ಮತ್ತು ಮೊಂಡುತನವನ್ನು ಹೊಂದಿರುತ್ತಾರೆ.


ಪರಿಸ್ಥಿತಿಗಳನ್ನು ಪರಸ್ಪರ ನಿಭಾಯಿಸಲು ಕಷ್ಟಪಡುತ್ತಾರೆ. ಅವರು ತಮ್ಮ ಜೀವನದ ಆರಂಭಿಕ ಹಂತದಲ್ಲಿ ಈ ಸಂಬಂಧವನ್ನು ಪಡೆದರೆ, ಸಮಯದೊಂದಿಗೆ ಅವರು ಉತ್ತಮಗೊಳ್ಳುವ ಸಾಧ್ಯತೆಗಳು ಇರುತ್ತವೆ.


10) ಮಿಥುನ - ಮಕರ : ಮಿಥುನ ರಾಶಿಯವರು ಮಕರ ರಾಶಿಯವರೊಂದಿಗೆ ಸ್ವಾಭಾವಿಕವಾಗಿ ಮೃದುವಾಗಿರುತ್ತಾರೆ. ಮಿಥುನ ರಾಶಿಯು ಮಕರ ರಾಶಿಯವರೊಂದಿಗೆ ಹೆಚ್ಚು ಸ್ವಾಗತಾರ್ಹವಾಗಿ ಇರುತ್ತಾರೆ.


ಇದು ಇಬ್ಬರಲ್ಲಿಯೂ ಸಹಜವಾದ, ಉತ್ತಮವಾದ ನೈಜತೆಯನ್ನು ಹೊರತರುತ್ತದೆ. ಮಕರ ರಾಶಿ ಪ್ರಬಲ ಶುಕ್ರನೊಂದಿಗೆ ಅವರ ಸಂಬಂಧವು ಉತ್ತಮಗೊಳ್ಳಬಹುದು. ಈ ಎರಡೂ ರಾಶಿಯವರ ಮದುವೆ ಮತ್ತು ಪ್ರೀತಿಯ ವಿಷಯದಲ್ಲಿನ ಹೊಂದಾಣಿಕೆಯು ಮಧ್ಯಮಕ್ಕಿಂತ ಸ್ವಲ್ಪ ಹೆಚ್ಚು ಇರುತ್ತದೆ ಎನ್ನಬಹುದು.


11) ಮಿಥುನ – ಕುಂಭ: ಮಿಥುನ ಮತ್ತು ಕುಂಭ ರಾಶಿಯ ನಡುವೆ ಪರಸ್ಪರ ಕಡಿಮೆ ಹೊಂದಾಣಿಕೆ ಇರುತ್ತದೆ ಎನ್ನಬಹುದು. ಈ ಎರಡೂ ರಾಶಿಯವರು ಮಾಡಿದ ತಪ್ಪುಗಳನ್ನು ಬಿಡುವುದಿಲ್ಲ.


ಇದು ಅವರ ನಡುವೆ ಪದೇ ಪದೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಯಾವುದೇ ಒಂದು ರಾಶಿಯ ಏಳನೇ ಮನೆಯಲ್ಲಿ ಮಂಗಳನ ಸ್ಥಾನವು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.


ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಇತರರ ಮೇಲೆ ಹೆಚ್ಚು ಅವಲಂಭಿತರಾಗುವುದು ಅವರ ದೊಡ್ಡ ನ್ಯೂನತೆಯಾಗುತ್ತದೆ. ಈ ರಾಶಿಚಕ್ರದ ಇಬ್ಬರು ವ್ಯಕ್ತಿಗಳು ಈಗಾಗಲೇ ಪ್ರೀತಿಸುತ್ತಿದ್ದರೆ ಮತ್ತು ಮದುವೆಯಾಗಲು ಬಯಸಿದರೆ, ಅವರು ಮೊದಲೇ ಪರಸ್ಪರರ ನ್ಯೂನತೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು.


12) ಮಿಥುನ – ಮೀನ: ಮೀನ ರಾಶಿಯೊಂದಿಗಿನ ಸಂಬಂಧದಲ್ಲಿರುವ ಮಿಥುನ ರಾಶಿಯವರು ನಂಬಲರ್ಹ ಜೊತೆಗಾರರಾಗಿರುತ್ತಾರೆ. ಅವರು ಜೀವನದಲ್ಲಿ ಹೇಗೆ ಹೊಳಪನ್ನು ಸೇರಿಸಬೇಕೆಂದು ತಿಳಿದಿದ್ದಾರೆ.


ಅವರು ತಮ್ಮ ಆಕರ್ಷಣೆ ಮತ್ತು ಪ್ರೀತಿಯೊಂದಿಗೆ ಪ್ರಾಮಾಣಿಕರಾಗಿ ಇರುತ್ತಾರೆ. ಮೀನ ರಾಶಿ ನಿಜವಾಗಿಯೂ ತಮ್ಮ ಸಂಗಾತಿಗೆ ಅರ್ಹವಾದ ಪ್ರೀತಿಯನ್ನು ಮರಳಿ ನೀಡುವ ರಾಶಿಚಕ್ರವಾಗಿದೆ. ಈ ಎರಡು ಚಿಹ್ನೆಗಳ ನಡುವೆ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಎನ್ನಬಹುದು.
ಇವಿಷ್ಟು ಜ್ಯೋತಿಷ್ಯದ ಪ್ರಕಾರ ರಾಶಿ ಚಕ್ರಗಳ ನಡುವಿನ ಹೊಂದಾಣಿಕೆಯ ವಿವರಗಳಾಗಿವೆ. ಆದ್ರೆ ಜ್ಯೋತಿಷ್ಯವೆಂಬುದು ನಂಬಿಕೆಯ ಮೇಲೆ ನಿಂತಿದೆ. ಅನೇಕರ ವಿಚಾರಗಳಲ್ಲಿ ಇದು ಸ್ವಲ್ಪ ಬೇರೆಯಾಗಿರಬಹುದು.


ಆದ್ರೆ ಇಂದಿಗೂ ನಮಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಅನೇಕರಿದ್ದಾರೆ. ಅವರು ಅದನ್ನು ಶ್ರದ್ಧೆಯಿಂದ ಪಾಲಿಸುತ್ತಾರೆ. ಇದು ಬಹಳಷ್ಟು ಜನರ ಜೀವನದಲ್ಲಿ ಸತ್ಯವಾಗಿದ್ದೂ ಇದೆ. ಹಾಗಾಗಿ ನೀವು ಜ್ಯೋತಿಷ್ಯವನ್ನು ನಂಬುವವರಾಗಿದ್ದರೆ ಈ ವಿವರಗಳು ನಿಮಗೆ ಖಂಡಿತಾ ಸಹಾಯಕವಾಗುತ್ತವೆ.

First published: