ರಾಮಾಯಣ (Ramayana) ಒಂದು ಮಹಾಕಾವ್ಯ. ಅದರಲ್ಲಿನ ಒಂದೊಂದು ಕಥೆಗಳು (Story) ಸಹ ಹಲವಾರು ಅರ್ಥವನ್ನು ಸಾರುತ್ತದೆ. ಹಾಗೆಯೇ ಈ ರಾಮಾಯಣವನ್ನು ಮಕ್ಕಳಿಗೆ (Children) ಸುಲಭವಾಗಿ ತಿಳಿ ಹೇಳಲು ಸಾಧ್ಯವಿಲ್ಲ. ಒಟ್ಟಿಗೆ ಹೇಳಿದರೆ ಅರ್ಥ ಸಹ ಆಗುವುದಿಲ್ಲ. ಆದರೆ ಒಂದೊಂದೇ ಎಳೆಯಲ್ಲಿ ಕಥೆ ಹೇಳಿದರೆ ಅವರಿಗೆ ಅರ್ಥವಾಗುತ್ತದೆ. ರಾಮಾಯಣದಲ್ಲಿ ಹೇಳಲು ಹೋದರೆ ಬಹಳಷ್ಟು ಕಥೆಗಳಿಗೆ. ಅದರಲ್ಲಿ ಒಂದು ಜಟಾಯು ಪಕ್ಷಿಯ ಹೋರಾಟದ ಕಥೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದಾಗ ಕಾಪಾಡಲು ಪ್ರಯತ್ನಿಸಿದ ಜಟಾಯು ಪಕ್ಷಿಯ ಕಥೆ ಇಲ್ಲಿದ್ದು, ನೀವು ಸಹ ಮಕ್ಕಳಿಗೆ ಹೇಳಬಹುದು.
ಬಿಕ್ಷುಕನ ವೇಷದಲ್ಲಿ ಬಂದ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುತ್ತಾನೆ. ದಾರಿಯಲ್ಲಿ ಸೀತೆ ತನ್ನನ್ನ ಕಾಪಾಡುವಂತೆ ಗೋಗರೆಯುತ್ತಿರುತ್ತಾಳೆ. ಹೀಗಿರುವಾಗ ಒಂದು ಪರ್ವತದ ಬಳಿ ಕುಳಿತಿದ್ದ ಜಟಾಯು ಪಕ್ಷಿಗೆ ಹೆಣ್ಣಿನ ಆಕ್ರಂದನ ಕೇಳಿಸುತ್ತದೆ. ಮೊದಲು ಯಾರು ಎನ್ನುವುದು ಸರಿಯಾಗಿ ತಿಳಿಯುವುದಿಲ್ಲ. ಹೆಣ್ಣೊಬ್ಬಳನ್ನು ಯಾರೋ ಪೀಡಿಸುತ್ತಿದ್ದಾರೆ ಎಂದು ಜಟಾಯು ಸುಮ್ಮನಾಗುತ್ತದೆ. ಆದರೆ ಯಾವಾಗ ಸೀತೆ ರಾಮ-ಲಕ್ಷ್ಮಣರ ಹೆಸರನ್ನು ಕೂಗುತ್ತಾಳೋ ಆಗ ಜಟಾಯು ಎಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಸೂತ್ತಲೂ ನೋಡುತ್ತದೆ.
ಸೀತೆಗಾಗಿ ಹೋರಾಡಿದ ಜಟಾಯು ಕಥೆ
ಆಗ ಸ್ವಲ್ಪ ದೂರದಲ್ಲಿ ರಥದ ರೀತಿಯ ವಿಮಾನವೊಂದು ಆಕಾಶದಲ್ಲಿ ಹಾರತ್ತಾ ಆ ಕಡೆ ಬರುತ್ತಿರುವುದು ಕಾಣುತ್ತದೆ. ಅದರಲ್ಲಿ ಆಭರಣ ಧರಿಸಿರುವ ಸೀತೆಯನ್ನು ರಾವಣ ಬಲಾತ್ಕಾರದಿಂದ ಎಳೆದೊಯ್ಯುತ್ತಿರುವುದು ಕಾಣುತ್ತದೆ. ಆ ರಥ ಜಟಾಯು ಬಳಿ ಬರುತ್ತಿದ್ದ ಹಾಗೆ ಸೀತೆ ಸಹ ಜಟಾಯುವನ್ನು ಗುರುತಿಸಿ, ಈ ರಾಕ್ಷಸನಿಂದ ನನ್ನನ್ನು ಕಾಪಾಡು ಎಂದು ಕೇಳುತ್ತಾಳೆ.
ಈ ದುಷ್ಟನಾದ ರಾವಣ ತನ್ನ ಕುತಂತ್ರ ಬುದ್ದಿಯನ್ನು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದಾನೆ. ನನಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಮ - ಲಕ್ಷ್ಮಣರಿಗೆ ನನ್ನನ್ನು ರಾವಣ ಅಪಹರಿಸಿದ್ದಾನೆ ಎನ್ನುವ ವಿಚಾರ ತಿಳಿಸು ಎಂದು ಸೀತೆ ಹೇಳುತ್ತಾಳೆ.
ಸೀತೆಯ ಈ ಕಷ್ಟವನ್ನು ನೋಡಲಾಗದೇ ಜಟಾಯು ಮೊದಲು ರಾವಣ ಬಳಿ ಮಾತನಾಡಿ ಬೇಡಿಕೊಳ್ಳುತ್ತದೆ. ಸೀತೆಯನ್ನು ಬಿಟ್ಟು ಬಿಡು. ರಾಮ-ಲಕ್ಷ್ಮಣ ರಿಗೆ ತಿಳಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು. ಆದರೆ ರಾವಣ ಜಟಾಯುವಿನ ಮಾತಿಗೆ ಸೊಪ್ಪು ಹಾಕುವುದಿಲ್ಲ.
ಇದನ್ನೂ ಓದಿ: ಮಾತನಾಡುವಾಗ ಜಾಣ್ಮೆ ಮುಖ್ಯ, ಈ ಕೋಗಿಲೆಯ ಕಥೆಯೇ ಒಂದು ಪಾಠ
ಇದರಿಂದ ಕೋಪಗೊಂಡ ಜಟಾಯು, ನಾನು ನಿನಗೆ ಹೋಗಲು ಬಿಡುವುದಿಲ್ಲ. ಸೀತೆಯನ್ನು ಇಲ್ಲಿಯೇ ಬಿಟ್ಟುಬಿಡು ಅಥವಾ ನನ್ನನ್ನು ಎದುರಿಸು ಎಂದು ಹೇಳುತ್ತದೆ. ರಾವಣ ಸಹ ಯುದ್ಧ ಮಾಡಲು ಸಿದ್ಧನಾಗುತ್ತಾನೆ. ಜಟಾಯುವಿನ ಮೇಲೆ ಬಾಣಗಳ ಪ್ರಹಾರ ನಡೆಸುತ್ತಾನೆ. ಆದರೆ ಹೆಚ್ಚು ರೆಕ್ಕೆಗಳು ಇದ್ದ ಕಾರಣ ಬಾಣಗಳು ತಾಗುವುದಿಲ್ಲ.
ಜಟಾಯುವಿಗೆ ಹೇಳಿಕೊಳ್ಳುವಷ್ಟು ಶಕ್ತಿ ಇರಲಿಲ್ಲ, ವಯೋಸಹಜವಾಗಿ ಶಕ್ತಿ ಕಡಿಮೆ ಆಗಿತ್ತು. ಆದರೂ ಜಗ್ಗದೇ ಸೀತೆಯನ್ನು ಕಾಪಾಡುವ ಕಾರಣದಿಂದ ಬಹಳ ಹೋರಾಟ ನಡೆಸುತ್ತದೆ.
ರಾಮ-ಲಕ್ಷ್ಮಣರಿಗೆ ದಾರಿ ತೋರಿಸಿದ ಪಕ್ಷಿ
ಹೀಗೆ ಕೆಲ ಸಮಯ ಯುದ್ಧ ಆಗುತ್ತದೆ. ಜಟಾಯು ಹಾಗೂ ರಾವಣ ನೆಲದ ಮೇಲೆ ಯುದ್ದ ಮಾಡಲು ಆರಂಭಿಸುತ್ತಾರೆ. ಆದರೆ ಜಟಾಯುವಿಗೆ ಆಯಾಸವಾಗಲು ಆರಂಭಿಸಿತು. ಅಈ ಸಮಯಕ್ಕಾಗಿ ಕಾದಿದ್ದ ರಾವಣ ಖಡ್ಗದಿಂದ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಬಿಡುತ್ತಾನೆ. ಇದರಿಂದ ಜಟಾಯು ಕುಸಿದು ಬೀಳುತ್ತದೆ. ರಾವಣ ಗೆದ್ದೆ ಎಂಬ ಸಂತೋಷದಲ್ಲಿ ಅಲ್ಲಿಂದ ಹೊರಡುತ್ತಾನೆ.
ಇದನ್ನೂ ಓದಿ:ಸ್ವಾರ್ಥ ಬಿಟ್ಟು ಆಲೋಚನೆ ಮಾಡೋದು ಬಹಳ ಮುಖ್ಯ, ಮಕ್ಕಳಿಗೆ ಹೇಳಿ ಈ ವಿಭಿನ್ನ ಕಥೆ
ಆದರೆ ಜಟಾಯುವಿನ ಪ್ರಾಣ ಹಾಗೆಯೇ ಇರುತ್ತದೆ. ಅಲ್ಲಿಯೇ ಒದ್ದಾಡುತ್ತಾ ಮಲಗಿರುತ್ತದೆ. ಯಾವಾಗ ಸೀತೆ ನಾಪತ್ತೆ ಆಗಿರುವುದು ತಿಳಿದು ರಾಮ-ಲಕ್ಷ್ಮಣ ಹುಡುಕುತ್ತಾ ಆ ಕಡೆ ಬರುತ್ತಾರೋ, ಆಗ ಅವರಿಗೆ ಆದ ಕಥೆಯನ್ನು ಹೇಳಿ. ರಾವಣ ಹೋದ ದಾರಿ ತೋರಿಸಿ, ಕೊನೆಯುಸಿರೆಳೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ