Ramadan 2022: ಪ್ರಪಂಚದಾದ್ಯಂತ ಪವಿತ್ರ ತಿಂಗಳು ರಂಜಾನ್ ಅನ್ನು ಹೇಗೆಲ್ಲಾ ಆಚರಿಸುತ್ತಾರೆ ನೋಡಿ..

ದುಬೈನಿಂದ ಇಂಡೋನೇಷ್ಯಾವರೆಗೆ ವಿವಿಧ ದೇಶಗಳು ರಂಜಾನ್ ಪವಿತ್ರ ತಿಂಗಳನ್ನು ಆಚರಿಸುತ್ತವೆ. ಉಪವಾಸ ಮತ್ತು ಪ್ರಾರ್ಥನೆಗಳ ತಿಂಗಳು ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳು ಬಹಳ ಸಂಭ್ರಮ ಮತ್ತು ಧಾರ್ಮಿಕ ಶಿಸ್ತಿನಿಂದ ಆಚರಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ (Ramadan Festival) ಅನೇಕ ವಿಶೇಷತೆಗಳನ್ನು ಹೊಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ (Islamic Calendar) ಪ್ರಕಾರ 9ನೇ ತಿಂಗಳು ರಂಜಾನ್ ಪ್ರಾರಂಭವಾಗುತ್ತದೆ. ಉಪವಾಸದ ಆಚರಣೆಯೊಂದಿಗೆ ಶುರುವಾಗುವ ರಂಜಾನ್ ಉಪವಾಸವನ್ನು ಇಸ್ಲಾಂ (ISLAM ) ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ-ನೀರು ಸೇವಿಸದೆ ಉಪವಾಸ ಇರುತ್ತಾರೆ, ಮತ್ತು ಇಫ್ತಾರ್ ಆಚರಣೆಯ ಭಾಗವಾಗಿ ಸಂಜೆ ಉಪವಾಸವನ್ನು ಮುರಿಯುತ್ತಾರೆ. ಒಂದು ತಿಂಗಳ ಅವಧಿಯನ್ನು ವಿಶ್ವಾದ್ಯಂತ ಮುಸ್ಲಿಮರು ಅಲ್ಲಾನನ್ನು ಮೆಚ್ಚಿಸಲು ಪವಿತ್ರ ಕುರಾನ್ ಪಠಣೆ ಮಾಡುವುದು ಹಾಗೂ ಪ್ರಾರ್ಥನೆಗಳನ್ನು ಮಾಡುವ ಮೂಲಕ ದೇವರಿಗೆ ಹತ್ತಿರವಾಗಲೆಂದು ಮೀಸಲಿಡುತ್ತಾರೆ. ಈ ವೇಳೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವ ಮೂಲಕ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

    ತನ್ನದೇ ಆದ ಸಂಪ್ರದಾಯ ಇದೆ 

    ದುಬೈನಿಂದ ಇಂಡೋನೇಷ್ಯಾವರೆಗೆ  ವಿವಿಧ ದೇಶಗಳು ರಂಜಾನ್ ಪವಿತ್ರ ತಿಂಗಳನ್ನು ಆಚರಿಸುತ್ತವೆ. ಉಪವಾಸ ಮತ್ತು ಪ್ರಾರ್ಥನೆಗಳ ತಿಂಗಳು ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳು ಬಹಳ ಸಂಭ್ರಮ ಮತ್ತು ಧಾರ್ಮಿಕ ಶಿಸ್ತಿನಿಂದ ಆಚರಿಸಲಾಗುತ್ತದೆ. ಆದರೆ, ಪ್ರತಿ ದೇಶವೂ ಪವಿತ್ರ ಮಾಸವನ್ನು ಆಚರಿಸಲು ತನ್ನದೇ ಆದ ಸಂಪ್ರದಾಯವನ್ನು ಹೊಂದಿದೆ. ಈ ಕೆಲವು ರಂಜಾನ್ ಆಚರಣೆಗಳನ್ನು ತಲೆಮಾರುಗಳಿಂದ ಜೀವಂತವಾಗಿ ಇರಿಸಲಾಗಿದ್ದು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನಿಸಲಾಗಿದೆ.

    ಇದನ್ನೂ ಓದಿ: Ramadan 2022: ರಂಜಾನ್ ಉಪವಾಸದ ವೇಳೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

    ರಂಜಾನ್‌ನ ದಿನಾಂಕ ಮತ್ತು ಸಮಯವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಇದಲ್ಲದೆ, ರಂಜಾನ್ ಅನ್ನು ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ಆಚರಿಸಲಾಗುತ್ತದೆ. ಹಾಗಾದರೆ ಈ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಧವರು ಎಲ್ಲೆಲ್ಲಿ, ಯಾವ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ಆಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

    ರಂಜಾನ್ ಆಚರಣೆ ಎಲ್ಲೆಲ್ಲಿ..? ಹೇಗೆ..?

    1) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)
    ಯುಎಇಯಲ್ಲಿ, 15ನೇ ಶಾಬಾನ್ ಅನ್ನು ರಂಜಾನ್ ಎಂದು ಆಚರಿಸಲಾಗುತ್ತದೆ, ಇದನ್ನು ಹಕ್ ಅಲ್ ಲೈಲಾ ಎಂದು ಕರೆಯಲಾಗುತ್ತದೆ. ಹಕ್ ಅಲ್ ಲೈಲಾ ಅತ್ಯಂತ ಧಾರ್ಮಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಯುಎಇಯಲ್ಲಿ ರಂಜಾನ್ ಸಂಪ್ರದಾಯಗಳನ್ನು ಅಭ್ಯಾಸ ಮಾಡಿಸಿದರು. ಏಕೆಂದರೆ ಇದು ಎಮಿರಾಟಿ ರಾಷ್ಟ್ರೀಯ ಗುರುತಿಗೆ ಅವಿಭಾಜ್ಯವೆಂದು ಪರಿಗಣಿಸಲಾಗಿದೆ.

    2) ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ

    ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತವು ಸಿಹಿತಿಂಡಿಗಳ ವಿನಿಮಯದೊಂದಿಗೆ ಚಾಂದ್ ರಾತ್ ಅನ್ನು ಆಚರಿಸುವ ಮೂಲಕ ಪವಿತ್ರ ರಂಜಾನ್ ತಿಂಗಳನ್ನು ಆಚರಿಸುತ್ತದೆ. ಮಹಿಳೆಯರು ತಮ್ಮ ಕೈಗಳನ್ನು ಗೋರಂಟಿ ಮತ್ತು ಮೆಹಂದಿ ವಿನ್ಯಾಸದೊಂದಿಗೆ ಆರಾಧಿಸುತ್ತಾರೆ ಮತ್ತು ಮಕ್ಕಳು, ಮನೆಮಂದಿ ಎಲ್ಲಾ ಹೊಸ ಬಟ್ಟೆಯೊಂದಿಗೆ ಸಂಭ್ರಮಿಸುತ್ತಾರೆ. ದೀಪಗಳು ಮತ್ತು ವರ್ಣರಂಜಿತ ಕಾಗದಗಳಿಂದ ಮನೆ, ಅಂಗಡಿಗಳನ್ನು ಅಲಂಕರಿಸುತ್ತಾರೆ.

    3) ಟರ್ಕಿ
    ಟರ್ಕಿಯಲ್ಲಿ, ಡ್ರಮ್ಮರ್‌ಗಳು ಸಾಂಪ್ರದಾಯಿಕ ಒಟ್ಟೋಮನ್ ವೇಷಭೂಷಣಗಳನ್ನು ಧರಿಸುತ್ತಾರೆ. ಎಲ್ಲಾ ಮುಸ್ಲಿಮರನ್ನು ಸುಹೂರ್ ಎಂದು ಕರೆಯಲಾಗುವ ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೇವಿಸಲು ಎಬ್ಬಿಸಲು ಬೀದಿಗಳಲ್ಲಿ ಡ್ರಮ್ ಬಾರಿಸುತ್ತಾ ತಿರುಗುತ್ತಾರೆ.

    ಇದನ್ನೂ ಓದಿ: Ramadan Month: ರಂಜಾನ್ ತಿಂಗಳಲ್ಲಿ ದುಂದುವೆಚ್ಚ ಆಗದಂತೆ ಬಜೆಟ್ ಈ ರೀತಿ ಇರಲಿ..

    4) ಇಂಡೋನೇಷ್ಯಾ
    ಇಂಡೋನೇಷ್ಯಾದಲ್ಲಿ, ಮುಸ್ಲಿಮರು ನೀರಿನಲ್ಲಿ ತಮ್ಮನ್ನು ಶುದ್ಧೀಕರಿಸುತ್ತಾರೆ, ತಮ್ಮ ದೇಹವನ್ನು ತಲೆಯಿಂದ ಕಾಲ ಬೆರಳಿನವರೆಗೆ ನೆನೆಸುತ್ತಾರೆ. ಈ ಸಂಪ್ರದಾಯವನ್ನು ಇಲ್ಲಿ ಪಡುಸನ್ ಎಂದು ಕರೆಯಲಾಗುತ್ತದೆ. ಇದು ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಸಂಶ್ಲೇಷಣೆಗೆ ಸಾಕ್ಷಿಯಾಗಿದೆ.

    5) ಕುವೈತ್
    ಕುವೈತ್‌ನಲ್ಲಿ ರಂಜಾನ್ ಅನ್ನು ಕರ್ಕಿಯಾನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಣ್ಣ ಮಕ್ಕಳು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ ಮತ್ತು ಹಾಡುಗಳನ್ನು ಹಾಡುತ್ತಾರೆ ಹಾಗೂ ಉಪವಾಸದ ಬಗ್ಗೆ ತಿಳಿಯುತ್ತಾರೆ.

    ಇದಲ್ಲದೆ, ಮಂಗಳಕರವಾದ ಮುಸ್ಲಿಂ ತಿಂಗಳನ್ನು ಸಿಂಗಾಪುರದಲ್ಲಿ ಹರಿ ರಾಯ ಎಂದು ಕರೆಯಲಾಗುತ್ತದೆ. ಹಾಗೂ, ಮೊರೊಕ್ಕೋದ ನೆರೆಹೊರೆಗಳಲ್ಲಿ ಗೊಂಡೊಲಾ, ಚಪ್ಪಲಿಗಳು ಮತ್ತು ಟೋಪಿಯ ಸುಂದರವಾದ ಸಾಂಪ್ರದಾಯಿಕ ಉಡುಪಿನಲ್ಲಿ ನಫರ್ ಎಂದು ಕರೆಯಲ್ಪಡುವ ವ್ಯಕ್ತಿ ಸುತ್ತುತ್ತಾರೆ.
    Published by:Kavya V
    First published: