Ramadan 2022: ಈ ದಿನದಿಂದ ರಂಜಾನ್​ ಉಪವಾಸ ಶುರು; ಚಂದ್ರ ದರ್ಶನದ ಸಮಯವಿದು

ರಂಜಾನ್

ರಂಜಾನ್

2022 ರ ರಂಜಾನ್‌ನ ಮೊದಲ ದಿನವು ಭಾರತದಲ್ಲಿ ಏಪ್ರಿಲ್ 2, 2022ರಂದು ಆರಂಭ ಆಗುವ ಸಾಧ್ಯತೆ ಇದೆ. ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ 1-Ramadan-1443 ಸಂಜೆಯಿಂದ ಪ್ರಾರಂಭವಾಗಬಹುದು.

  • Share this:

ಮುಸ್ಲಿಂ ಸಮಾಜದ (Muslim Community) ಬಾಂಧವರ ಪವಿತ್ರ ರಂಜಾನ್ (Ramadan) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಚಂದ್ರನ ಗೋಚರಿಸುವಿಕೆಯ ಆಧಾರದ ಮೇಲೆ ರಂಜಾನ್ ಆಚರಣೆ ನಡೆಯುತ್ತದೆ. ಇಸ್ಲಾಂ ಸಂಪ್ರದಾಯದ ಪ್ರಕಾರ ಚಂದ್ರನ ದರ್ಶನವಾಗದೆ ರಂಜಾನ್ ಹಬ್ಬ ಆಚರಣೆ ಮಾಡುವಂತಿಲ್ಲ. ಜೊತೆಗೆ ಈ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು (Month) ಅವಧಿಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ (Quran) ಅನ್ನು ಪ್ರವಾದಿ ಮೊಹ್ಮದ್ ಅವರಿಗೆ ಬೋಧಿಸಲಾಯಿತೆಂಬ ನಂಬಿಕೆಯಿದೆ. ಹಾಗಾಗಿ, ಈ ಒಂದು ತಿಂಗಳ ಕಾಲ ಉತ್ತಮ ಆರೋಗ್ಯ ಸ್ಥಿತಿಯಲ್ಲಿರುವ ಎಲ್ಲ ಮುಸ್ಲಿಮರು ಉಪವಾಸ ಮಾಡಬೇಕಾಗಿರುವುದು ಒಂದು ಕಡ್ಡಾಯ ಸಂಪ್ರದಾಯವಾಗಿದೆ. ಇನ್ನು, 2022 ರ ರಂಜಾನ್‌ನ ಮೊದಲ ದಿನವು ಭಾರತದಲ್ಲಿ ಏಪ್ರಿಲ್ 2, 2022ರಂದು ಆರಂಭ ಆಗುವ ಸಾಧ್ಯತೆ ಇದೆ. ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ 1-Ramadan-1443 ಸಂಜೆಯಿಂದ ಪ್ರಾರಂಭವಾಗಬಹುದು.


ಭಾರತದಲ್ಲಿ ಪವಿತ್ರ ತಿಂಗಳು ಆರಂಭ ಯಾವಾಗ?:


2022 ರ ರಂಜಾನ್‌ನ ಮೊದಲ ದಿನವು ಏಪ್ರಿಲ್ 2, 2022ರಂದು ಆರಂಭ ಆಗುವ ಸಾಧ್ಯತೆ ಇದೆ. ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ 1-Ramadan-1443 ಸಂಜೆಯಿಂದ ಪ್ರಾರಂಭವಾಗಬಹುದು. ಮೊದಲ ಉಪವಾಸವನ್ನು ಏಪ್ರಿಲ್ 3, 2022 ರಂದು ಆಚರಿಸಲಾಗುತ್ತದೆ. ಅರ್ಧಚಂದ್ರನನ್ನು ನೋಡಿದ ಬಳಿಕ ರಂಜಾನ್‌ ತಿಂಗಳ ಉಪವಾಸ ಆರಂಭವಾಗುತ್ತದೆ.


ಅದರಂತೆ ಭಾರತ ಸೇರಿದಂತೆ ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ರಂಜಾನ್‌ನ ಅರ್ಧಚಂದ್ರಾಕಾರವು ಮೊದಲು ಕಂಡುಬರುತ್ತದೆ. ತದನಂತರದಲ್ಲಿ ಪ್ರಪಂಚದ ಉಳಿದ ಭಾಗಗಳಲ್ಲಿ ಅರ್ಧಚಂದ್ರಾಕಾರವು ಕಂಡುಬರುತ್ತದೆ. ಅಂದರೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಒಂದು ದಿನದ ನಂತರ ಕಂಡುಬರುತ್ತದೆ.


ಇದನ್ನೂ ಓದಿ: Ramadan 2022: ರಂಜಾನ್ ಸಂದರ್ಭದಲ್ಲಿ ಅರ್ಧಚಂದ್ರದ ಮಹತ್ವ ಹಾಗೂ ಪವಿತ್ರ ತಿಂಗಳಿನ ಆರಂಭ ಹೇಗೆ ಗುರುತಿಸುತ್ತಾರೆ..?


ರಂಜಾನ್ ಆಚರಣೆ ಹೇಗಿರುತ್ತದೆ:


ಪವಿತ್ರ ರಂಜಾನ್ ತಿಂಗಳಲ್ಲಿ ಇಸ್ಲಾಂ ಬಾಂಧವರು ಇಡಈ ದಿನ ಉಪವಾಸ ಇರುತ್ತಾರೆ. ಸೂರ್ಯಾಸ್ತದ ತನಕ ಯಾವುದೇ ರೀತಿಯ ಆಹಾರ ಸೇವಿಸುವುದಿಲ್ಲ. ಮುಂಜಾನೆ, ಸೂರ್ಯ ಉದಯಿಸುವ ಮೊದಲು, ಸೆಹ್ರಿ ಸೇವಿಸುತ್ತಾರೆ. ಇನ್ನು, ರಂಜಾನ್‌ನಲ್ಲಿ ಉಪವಾಸ ಮಾಡುವುದು ಎಲ್ಲಾ ವಯಸ್ಕ ಮುಸ್ಲಿಮರಿಗೆ ಕಡ್ಡಾಯವಾಗಿದ್ದು, ಮಹಿಳೆಯರು ತಿಂಗಳ ಮುಟ್ಟನ್ನು ಹೊಂದಿದ್ದರೆ, ಗರ್ಭಿಣಿ, ವಯಸ್ಸಾದವರಾಗಿದ್ದರೆ ಉಪವಾಸ ಮಾಡದಿರಲು ವಿನಾಯಿತಿ ಇದೆ. ಉಪವಾಸವನ್ನು ಪ್ರಾರಂಭಿಸುವ ಮೊದಲು ಸೇವಿಸುವ ಭೋಜನವನ್ನು ಸೆಹ್ರಿ ಅಥವಾ ಸುಹೂರ್ ಎಂದರೆ ಸಂಜೆಯ ಪ್ರಾರ್ಥನೆಯ ಬಳಿಕ ಉಪವಾಸವನ್ನು ಕೊನೆ ಮಾಡುವ ಭೋಜನವನ್ನು ಇಫ್ತಾರ್ ಎಂದು ಕರೆಯುತ್ತಾರೆ.


ಅರ್ಧಚಂದ್ರನ  ಮಹತ್ವ:


ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ 9ನೇ ತಿಂಗಳಿನಲ್ಲಿ ಅರ್ಧ ಚಂದ್ರನ ಗೋಚರ ಉಪವಾಸದ ಅವಧಿಯ ಪ್ರಾರಂಭ ಹಾಗೂ ಮುಕ್ತಾಯವನ್ನು ಸೂಚಿಸುತ್ತದೆ ಎನ್ನಲಾಗಿದೆ. ರಂಜಾನ್ ಬರುವ ಸಂದರ್ಭದಲ್ಲಿ ಮುಂಚಿತವಾಗಿಯೇ ಇಸ್ಲಾಂ ಧರ್ಮದ ಮಹತ್ವದ ಸ್ಥಾನಗಳಾದ ಮಧ್ಯ ಪ್ರಾಚ್ಯ ರಾಷ್ಟ್ರ ಹಾಗೂ ಇತರೆ ದೇಶಗಳಲ್ಲಿರುವ ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡರು ಅರ್ಧ ಚಂದ್ರ ಕಾಣಿಸುವುದನ್ನು ಖಚಿತಪಡಿಸಿಕೊಳ್ಳಲು ರಾತ್ರಿಯಲ್ಲಿ ಆಗಸವನ್ನು ಗಮನಿಸಲು ಪ್ರಾರಂಭಿಸುತ್ತಾರೆ.


ಇದನ್ನೂ ಓದಿ: ಪವಿತ್ರ Ramadan ತಿಂಗಳಲ್ಲಿ ಈ ಕೆಲಸ ಮಾಡಬಾರದಂತೆ


ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ, ರಂಜಾನ್ ತಿಂಗಳಿನ ಮುಂಚೆ ಸಂಭವಿಸುವ ತಿಂಗಳು ಶಬಾನ್ ಆಗಿದ್ದು ಇದರ ಅಂತ್ಯದ ವೇಳೆಗೆ ಅರ್ಧಚಂದ್ರದ ಪ್ರಥಮ ಗೋಚರಿಕೆಯನ್ನು ಗಮನಿಸುವ ಅಧಿಕೃತ ಧಾರ್ಮಿಕ ಸಮಿತಿಗಳು ಆ ಬಗ್ಗೆ ದಿನವನ್ನು ಗೊತ್ತುಪಡಿಸಿ ಜನರಿಗೆ ಉಪವಾಸ ಆರಂಭಿಸುವ ದಿನದ ಬಗ್ಗೆ ತಿಳಿಸುತ್ತವೆ ಹಾಗೂ ಆ ನಿಗದಿತ ದಿನದಿಂದ ಮುಸ್ಲಿಮರು ತಮ್ಮ ಪವಿತ್ರ ಉಪವಾಸ ಆಚರಣೆಯನ್ನು ಪ್ರಾರಂಭಿಸುತ್ತಾರೆ.


ಸೆಹ್ರಿ ಹಾಗೂ ಇಫ್ತಾರ್‌‌ ಸಮಯ:


ಬೆಂಗಳೂರು ಬೆಳಗ್ಗೆ 05:07ರಿಂದ ಸಂಜೆ 06:32
ಪುಣೆ ಬೆಳಗ್ಗೆ 05:19ರಿಂದ ಸಂಜೆ 06:48
ಹೈದರಾಬಾದ್ ಬೆಳಗ್ಗೆ 05:01ರಿಂದ ಸಂಜೆ 06:30
ಸೂರತ್ ಬೆಳಗ್ಗೆ 05:21ರಿಂದ ಸಂಜೆ 06:53
ಮುಂಬೈ ಬೆಳಗ್ಗೆ 05:22ರಿಂದ ಸಂಜೆ 06:52
ದೆಹಲಿ ಬೆಳಗ್ಗೆ 04:56ರಿಂದ ಸಂಜೆ 06:38


ಆದರೆ ಸೂರ್ಯನ ಸ್ಥಾನದಿಂದಾಗಿ ಸೆಹ್ರಿ ಮತ್ತು ಇಫ್ತಾರ್ ಸಮಯ ಬದಲಾವಣೆ ಮಾಡಲಾಗುತ್ತದೆ.

top videos
    First published: