Puneeth Rajkumar: `ಕರುನಾಡ ರತ್ನ’ನಿಗೆ ಇದೆಂಥಾ ಅವಮಾನ: ಕಿಡಿಗೇಡಿಗಳು ಸಿಕ್ರೆ ಸುಮ್ಮನೆ ಬಿಡಲ್ಲ ಎಂದ ಕನ್ನಡಿಗರು!

ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಯವರು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಡಿಸೆಂಬರ್​ 23ರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ.

ಅಪ್ಪು ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳು

ಅಪ್ಪು ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳು

  • Share this:
ಅಪ್ಪು(Appu), ಪವರ್​ ಸ್ಟಾರ್​(Power Star), ನಟಸಾರ್ವಭೌಮ, ಸರಳತೆಯ ಸಾಮ್ರಾಟ್​, ಬೆಟ್ಟದ ಹೂ, ಹೀಗೆ ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ಕರೆಯಲು ಇರುವ ಹೆಸರು ಒಂದೇ..?ಎರಡೇ..? ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್​​ಕುಮಾರ್(Dr. Rajkumar)​ ಅವರ ತೃತೀಯ ಪುತ್ರ ಪವರ್​ ಸ್ಟಾರ್​ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ರಸ್ತೆಗಳಿಗೆ ಹಾಗೂ ಪಾರ್ಕ್​ಗೆ ಪುನೀತ್​ ಹೆಸರನ್ನು ಇಡುವ ಕೆಲಸ ನಡೆದಿದೆ. ಅದೇ ರೀತಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಯವರು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಡಿಸೆಂಬರ್​ 23ರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ.

ಅಪ್ಪು ಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳು!

ಊರಿನ ರಸ್ತೆಗೆ ಇಟ್ಟಿದ್ದ ಪುನೀತ್​ ರಾಜ್​ಕುಮಾರ್​ ಹೆಸರಿಗೆ ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ. ನಾಮಫಲಕದಲ್ಲಿ ಬರೆದಿರುವ ಪುನೀತ್ ರಾಜ್‍ಕುಮಾರ್ ರಸ್ತೆಯ ಹೆಸರನ್ನು ಅಳಸಿ ಅವಮಾನ ಎಸಗಿದ್ದಾರೆ. ನಾಮಫಲಕಕ್ಕೆ ಬಿಳಿ ಬಣ್ಣ ಹಚ್ಚಿ ಅವಮಾನ ಮಾಡಿರುವವರ ವಿರುದ್ಧ ಕನ್ನಡಪರ ಸಂಘಟನೆಗಳು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರ ಅಭಿಮಾನಿಗಳಂತೂ ಆ ಕಿಡಿಗೇಡಿಗಳು ನಮ್ಮ ಕೈಯಲ್ಲಿ ಸಿಕ್ಕರೆ ಕಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಅಪ್ಪು ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳು


ಇದನ್ನು ಓದಿ: ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ: ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

ಕಿಡಿಗೇಡಿಗಳ ಬಂಧನಕ್ಕೆ ಕನ್ನಡಿಗರ ಆಗ್ರಹ

ಒಬ್ಬ ಮನುಷ್ಯ ಭೂಮಿ ಮೇಲೆ ಮಾಡಬಹುದಾದ ಎಲ್ಲಾ ಒಳ್ಳೆಯ ಕಾರ್ಯಗಳನ್ನು  ಮಾಡಿದ್ದಾರೆ. ತಮ್ಮ ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಬಿಟ್ಟು ಹೋದ ಬಳಿಕವಷ್ಟೇ ಅವರು ಮಾಡುತ್ತಿದ್ದ ಕೆಲಸಗಳು ಏನು ಎಂದು ಎಲ್ಲರಿಗೂ ಗೊತ್ತಾಗಿದೆ. ಈಗಿನ ಕಾಲದಲ್ಲಿ 10 ರೂಪಾಯಿ ಸಹಾಯ ಮಾಡಿದರೆ ಫೇಸ್​​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ ಸ್ಟೇಟಸ್​​ಗಳಲ್ಲಿ ಹಾಕಿ ಬಿಲ್ಡ್​​ಅಪ್​ ತೆಗೆದುಕೊಳ್ಳುತ್ತಾರೆ. ಇಂಥವರ ನಡುವೆ  ಅಪ್ಪು ನಿಜಕ್ಕೂ ಗ್ರೇಟ್​. ಇಂತಹ ಮಹಾನ್​ ವ್ಯಕ್ತಿಯ ನಾಪ ಫಲಕಕ್ಕೆ ಬಣ್ಣ ಹಚ್ಚಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: ಬಾಲಯ್ಯನ ಎದುರು ತೊಡೆ ತಟ್ಟಲಿರುವ ಸ್ಯಾಂಡಲ್​ವುಡ್​ `ಸಲಗ’: ವಿಲನ್​ ಲುಕ್​ ರಿವೀಲ್​!

ಅಪ್ಪು ಫೋಟೋ ಬಳಸಿ ಆಸ್ಪತ್ರೆಗಳ ಜಾಹೀರಾತು!

ಇನ್ನೂ ಅಪ್ಪು ನಿಧನದ ಬಳಿಕ ಯುವಪೀಳಿಗೆಗೆ ತಮ್ಮ ಆರೋಗ್ಯದ ಬಗ್ಗೆ ಭಯ ಶುರುವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಡಯೋಗ್ನಾಸ್ಟಿಕ್​ ಸೆಂಟರ್​​ಗಳು ಅಪ್ಪು ಫೋಟೋಗಳನ್ನು ಬಳಸಿ ಫುಲ್​ ಬಾಡಿ ಚೆಕೆಪ್​ ಮಾಡಿಸುವಂತೆ ಜಾಹೀರಾತು ನೀಡುತ್ತಿದ್ದಾರೆ. ಅಪ್ಪು ವಿಚಾರದಲ್ಲೂ ದುಡ್ಡು ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
Published by:Vasudeva M
First published: