Vaastu Tips: ದೇವರ ಕೋಣೆ ಮತ್ತು ಮಲಗುವ ಕೋಣೆ ಒಂದೇ ಸ್ಥಳದಲ್ಲಿರಬಹುದೇ? ಇದರಿಂದ ಶುಭವೋ, ಅಶುಭವೋ?

ನಿಮ್ಮ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಮತ್ತು ನೀವು ಮನೆಯ ಮಲಗುವ ಕೋಣೆಯಲ್ಲಿ ದೇವರ ಕೋಣೆ ನಿರ್ಮಿಸುತ್ತಿದ್ದರೆ, ನೀವು ಕೆಲವು ವಿಶೇಷ ವಾಸ್ತು ನಿಯಮಗಳ ಬಗ್ಗೆ ತಿಳಿಯಬೇಕು ಮತ್ತು ಫಾಲೋ ಮಾಡ್ಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನೆ ಕಟ್ಟಿಸುವಾಗ (Building House) ಪ್ರತಿಯೊಬ್ಬರೂ ವಾಸ್ತು (Vaastu) ನೋಡುತ್ತಾರೆ. ಯಾವ ದಿಕ್ಕಿಗೆ (Direction) ಅಡುಗೆ ಮನೆ ಇರಬೇಕು? ಯಾವ ದಿಕ್ಕಿಗೆ ಪ್ರವೇಶ ಬಾಗಿಲು ಇರಬೇಕು? ಹಾಗೂ ಮನೆಯ ಮುಖ್ಯವಾದ ಕೋಣೆ ದೇವರ ಕೋಣೆ (Puja Room) ಯಾವ ದಿಕ್ಕಿಗೆ ಇರಬೇಕು? ಅದನ್ನು ಎಲ್ಲಿ ಮತ್ತು ಯಾವ ರೂಪುರೇಷೆಯಲ್ಲಿ ಕಟ್ಟಿಸಬೇಕು ಎಂದು ಸರಿಯಾಗಿ ನೋಡಬೇಕಾಗುತ್ತದೆ. ದೇವರ ಕೋಣೆ ಕಟ್ಟುವ ವಿಷಯಕ್ಕೆ ಬಂದ್ರೆ, ನಾವು ಯಾವಾಗಲೂ ಶಾಂತಿಯುತ ಮತ್ತು ಎಲ್ಲಾ ಕೋಣೆಗಳಿಂದ ಸ್ವಲ್ಪ ದೂರವಿರುವ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಮನೆಗಳಲ್ಲಿ ದೇವರ ಕೊಠಡಿಯನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ.

    ಮನೆಯಲ್ಲಿ ಪ್ರತ್ಯೇಕವಾಗಿರಲಿ ದೇವರ ಕೋಣೆ

    ಮತ್ತು ಮನೆಯ ದೇವರ ಕೋಣೆಯಲ್ಲಿ ಮನೆದೇವರನ್ನು ಇಟ್ಟು ಅಲ್ಲಿ ಮನೆಯ ಸದಸ್ಯರು ಒಟ್ಟಾಗಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ನಿರ್ಮಿತ ದೇವರ ಕೋಣೆಯು ನಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇವರ ಕೋಣೆ ಮನೆಯಲ್ಲಿ ಬೇರೆ ಜಾಗದಲ್ಲಿ ನಿರ್ಮಿಸಿದರೆ ಅಥವಾ ಪ್ರತ್ಯೇಕವಾಗಿದ್ರೆ ಜನರು ಅದರಲ್ಲಿ ಶಾಂತಿಯುತವಾಗಿ ಪೂಜೆ ಮಾಡಬಹುದು.

    ಮಲಗುವ ಕೋಣೆಯಲ್ಲಿ ದೇವರ ಕೋಣೆ ಇರಬಾರದು

    ಮನೆಯಲ್ಲಿ ಐಶ್ವರ್ಯ ಉಳಿಯಲು ದೇವರ ಕೋಣೆಯನ್ನು ವಾಸ್ತು ಪ್ರಕಾರ ನಿರ್ಮಿಸಬೇಕು ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಜನರು ದೇವರ ಕೋಣೆ ಸ್ಥಳವನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ. ನಿಮ್ಮ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಮತ್ತು ನೀವು ಮನೆಯ ಮಲಗುವ ಕೋಣೆಯಲ್ಲಿ ದೇವರ ಕೋಣೆ ನಿರ್ಮಿಸುತ್ತಿದ್ದರೆ, ನೀವು ಕೆಲವು ವಿಶೇಷ ವಾಸ್ತು ನಿಯಮಗಳ ಬಗ್ಗೆ ತಿಳಿಯಬೇಕು ಮತ್ತು ಫಾಲೋ ಮಾಡ್ಬೇಕು.

    ಇದನ್ನೂ ಓದಿ: ಹೇಗ್ ಹೇಗೋ ಈ ಉಂಗುರ ಹಾಕ್ಕೊಬೇಡಿ; ವಿಶೇಷ ಲಾಭ ನೀಡುವ ರಿಂಗ್ ಬಗ್ಗೆ ತಿಳಿದುಕೊಳ್ಳಿ

    ಹಾಗಾದ್ರೆ ಮಲಗುವ ಕೋಣೆಯಲ್ಲಿ ದೇವರ ಕೋಣೆ ಸ್ಥಳದ ನಿರ್ಮಾಣ ಮಾಡಿದ್ರೆ ನೀವು ಯಾವ ವಾಸ್ತು ನಿಯಮಗಳನ್ನು ಅನುಸರಿಸಬೇಕು ಎಂದು ಜ್ಯೋತಿಷಿ ಅನಿಲ್ ಜೈನ್ ಜಿ ಅವರಿಂದ ತಿಳಿಯೋಣ.

    ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇರಲಿ

    ಮನೆಯಲ್ಲಿ ದೇವರ ಕೋಣೆ ಸ್ಥಳವು ಈಶಾನ್ಯದಲ್ಲಿ ಇರಬೇಕು ಎಂದು ನಂಬಲಾಗಿದೆ. ಅಂದರೆ ದೇವರ ಕೋಣೆ ಈಶಾನ್ಯ ದಿಕ್ಕು. ಆದರೆ ನಿಮ್ಮ ಮನೆಯಲ್ಲಿ ದೇವರ ಕೋಣೆಗೆ ಪ್ರತ್ಯೇಕ ಸ್ಥಳ ಇಲ್ಲದಿದ್ದರೆ ಮತ್ತು ನೀವು ಮಲಗುವ ಕೋಣೆಯಲ್ಲಿಯೇ ದೇವರ ಕೋಣೆ ಮಾಡುತ್ತಿದ್ದರೆ, ನಿಮ್ಮ ಕೋಣೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ನಿರ್ಮಿಸಿ.

    ಪೂಜೆಯ ಮನೆ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿ ಶಕ್ತಿಯ ಸಂಗ್ರಹವಿದೆ. ಪೂಜೆಯ ಸ್ಥಳವು ಮಲಗುವ ಕೋಣೆಯೊಳಗೆ ಇರಬಾರದು. ಇದು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯದ ಕೊರತೆ ಉಂಟು ಮಾಡುತ್ತದೆ.

    ಸತ್ತವರ ಭಾವಚಿತ್ರಗಳನ್ನು ಮನೆಯ ದೇವರ ಕೋಣೆಯಲ್ಲಿಡಬಾರದು. ವಿಗ್ರಹಗಳನ್ನು ಎಂದಿಗೂ ನೆಲದ ಮೇಲೆ ಇಡಬಾರದು. ವಿಗ್ರಹವು 10 ಇಂಚುಗಳಿಗಿಂತ ಎತ್ತರವಾಗಿರಬಾರದು.

    ಮನೆ ಕಟ್ಟಿಸುವಾಗ ಸ್ನಾನ ಗೃಹ ಯಾವ ದಿಕ್ಕಿಗೆ ಇರಬೇಕು?

    ಬಾತ್ರೂಮ್ನಲ್ಲಿ ಖಾಲಿ ಬಕೆಟ್ ಇಡಬಾರದು

    ವಾಸ್ತು ಶಾಸ್ತ್ರದ ಪ್ರಕಾರ ವಾಶ್ ರೂಂನಲ್ಲಿ ಖಾಲಿ ಬಕೆಟ್ಗಳನ್ನು ಇಡುವುದರಿಂದ ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು ಶುರುವಾಗುತ್ತದೆ. ನೀರಿನಿಂದ ತುಂಬಿದ ನೀಲಿ ಬಣ್ಣದ ಬಕೆಟ್ ಇಡುವುದು ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ನೀಲಿ ಬಣ್ಣವು ಮಹತ್ವದ್ದಾಗಿದೆ.

    ನೀಲಿ ಬಣ್ಣವನ್ನು ಸಂತೋಷ ಮತ್ತು ಮಂಗಳಕರ ಸಂಕೇತ ಎಂದು ಪರಿಗಣಿಸಲಾಗುತ್ತದೆ ಎಂದು ವಾಸ್ತು ಸಲಹೆಗಾರ್ತಿ ಮತ್ತು ಜ್ಯೋತಿಷಿ ರೋಸಿ ಜಸ್ರೋಟಿಯಾ ಹೇಳಿದ್ದಾರೆ. ಹಾಗಾಗಿ ಬಾತ್ರೂಮ್ನಲ್ಲಿ ನೀಲಿ ಟೈಲ್ಸ್ ಬಳಸಿ ಮತ್ತು ನಿಮ್ಮ ಸಂಪತ್ತು ಹೆ್ಚಿಸಿ.

    ಮನೆಯಲ್ಲಿ ಅಡುಗೆ ಮನೆ ವಾಸ್ತು ಸಲಹೆ ಹೀಗಿದೆ

    ವಾಸ್ತು ಶಾಸ್ತ್ರದ ಪ್ರಕಾರ ಕಿತ್ತಳೆ, ಹಳದಿ ಮತ್ತು ಹಸಿರು ಮುಂತಾದ ಬಣ್ಣಗಳು ಅಡುಗೆ ಮನೆಗೆ ಸೂಕ್ತವಾಗಿವೆ. ಅಡುಗೆ ಮನೆಗೆ ಕಡು ಬೂದು, ಕಂದು ಮತ್ತು ಕಪ್ಪು ಬಣ್ಣಗಳ ಬಳಕೆ ತಪ್ಪಿಸಿ. ಏಕೆಂದರೆ ಅವು ಸಕಾರಾತ್ಮಕ ಕಂಪನಗಳನ್ನು ನಾಶ ಮಾಡುತ್ತವೆ ಎನ್ನುತ್ತಾರೆ ಶಾಸ್ತ್ರಜ್ಞರು.

    ಅಗ್ನಿಯ ಅಧಿಪತಿ ಅಗ್ನಿ ಮನೆಯ ಆಗ್ನೇಯ ದಿಕ್ಕಿನಲ್ಲಿ ಚಾಲ್ತಿಯಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಆಗ್ನೇಯ ದಿಕ್ಕಿಗೆ ಅಡುಗೆ ಮನೆ ಇರುವುದು ಸೂಕ್ತ. ಬೆಂಕಿ ಮತ್ತು ನೀರು ಪರಸ್ಪರ ವಿರುದ್ಧವಾಗಿರುವ ಅಂಶಗಳಾಗಿವೆ.

    ಇದನ್ನೂ ಓದಿ: ಈ 4 ರಾಶಿಯವರಿಗೆ ಮುಂದಿನ 4 ತಿಂಗಳು ಅಪಾರ ಹಣ, ಪ್ರತಿಷ್ಠೆ ಬರಲಿದೆ

    ಗ್ಯಾಸ್ ಸಿಲಿಂಡರ್ ಮತ್ತು ಓವನ್ ಅನ್ನು ಒಳಗೊಂಡಿರುವ ವಾಶ್‌ಬಾಸಿನ್‌ಗಳು ಮತ್ತು ಅಡುಗೆ ಶ್ರೇಣಿಗಳನ್ನು ಎಂದಿಗೂ ಒಂದೇ ವೇದಿಕೆಯಲ್ಲಿ ಅಥವಾ ಅಡುಗೆಮನೆಯಲ್ಲಿ ಪರಸ್ಪರ ಸಮಾನಾಂತರವಾಗಿ ಇರಿಸಬಾರದು.
    Published by:renukadariyannavar
    First published: