Navaratri Special: ಕಾಲರಾತ್ರಿಯ ಆರಾಧನೆ ಮಾಡುವುದರಿಂದ ಜೀವನದಲ್ಲಿ ಭಯ ನಿವಾರಣೆಯಾಗುತ್ತದೆ, ತಾಯಿಯ ಪೂಜಾ ವಿಧಿ-ವಿಧಾನ ಇಲ್ಲಿದೆ

Kala Ratri Pooja Vidhi Vidhan: ಪೂಜೆ ಆರಂಭ ಮಾಡುವ  ಮೊದಲು ತಾಯಿಯ ವಿಗ್ರಹವನ್ನು ಚೆನ್ನಾಗಿ ತೊಳೆದು, ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಬೇಕು. ನಂತರ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಹಚ್ಚಿ ಕೊನೆಯಲ್ಲಿ ಎಲೆ ಅಡಿಕೆಯನ್ನು ತಾಯಿಗೆ  ಅರ್ಪಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿಯ (Navaratri)ಒಂಬತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷತೆ ಇದೆ ಹಾಗೂ ಪೂಜಾ ವಿಧಿ(Pooja Vidhi Vidhan) ವಿಧಾನವಿದೆ. ಹಾಗೆಯೇ ಇಂದು 7ನೇ ದಿನ ಕಾಲರಾತ್ರಿಯ(Kala Ratri) ಆರಾಧನೆ ಮಾಡಲಾಗುತ್ತದೆ. ಇದು ತುಂಬಾ ವಿಚಿತ್ರ ರೂಪ ಎಂದರೆ ತಪ್ಪಾಗಲಾರದು. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ,  ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ರೂಪ. ಕಾಲರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ.

ಕಾಲರಾತ್ರಿಯ ಮಹತ್ವ

ತಾಯಿ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸರು ತಾಯಿಯ ಸ್ಮರಣೆಯಿಂದ ಭಯಭೀತರಾಗಿ ಓಡಿ ಹೋಗುತ್ತಾರೆ.ತಾಯಿಯನ್ನು ಪೂಜಿಸುವವರಿಗೆ ಅಗ್ನಿಯ, ಜಲ, ಶತು, ಮತ್ತು ರಾತ್ರಿಯ ಭಯ ಇರುವುದಿಲ್ಲ.

ಕಾಲರಾತ್ರಿ ಪೂಜಾ ವಿಧಿ –ವಿಧಾನ

ಈ ದಿನ  ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಪೂಜೆ ಆರಂಭ ಮಾಡುವ  ಮೊದಲು ತಾಯಿಯ ವಿಗ್ರಹವನ್ನು ಚೆನ್ನಾಗಿ ತೊಳೆದು, ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಬೇಕು. ನಂತರ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಹಚ್ಚಿ ಕೊನೆಯಲ್ಲಿ ಎಲೆ ಅಡಿಕೆಯನ್ನು ತಾಯಿಗೆ  ಅರ್ಪಿಸಬೇಕು.

ಇದನ್ನೂ ಓದಿ: ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..

ಇದರ ನಂತರ ತಾಯಿಗೆ ಪುಷ್ಪಾರ್ಚನೆ ಮಾಡಿ, ಕುಂಕುಮ, ಅಕ್ಷತೆ ಮತ್ತು ಗಂಧವನ್ನು ಅರ್ಪಿಸಿ, ಪೂಜೆ ಮಾಡಬೇಕು. ಇಂದು ಸಹ ಕಳಶ ಪೂಜೆ ಮಾಡುವುದು ಬಹಳ ಮುಖ್ಯ. ನಂತರ ದೇವರಿಗೆ ಕುಂಕುಮ ಅರ್ಪಿಸಿ ಭಕ್ತಿಯಿಂದ ಬೇಡಿದಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ.

ತಾಯಿಗೆ ನೈವೇದ್ಯ

ಈ ದಿನ ತಾಯಿಗೆ ಪಾಯಸ ಮತ್ತು ಜೇನುತುಪ್ಪ ಬಹಳ ಶ್ರೇಷ್ಠ ಎಂದು ನಂಬಲಾಗುತ್ತದೆ. ಹಾಗಾಗಿ ಇಂದು ಪಾಯಸ ಮಾಡಿ ನೈವೇದ್ಯ ಮಾಡುವುದು ಒಳ್ಳೆಯದಾಗುತ್ತದೆ.

ಕಾಲರಾತ್ರಿಯ ಮಂತ್ರ:
ಓಂ ದೇವೀ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಕಾಲರಾತ್ರಿ ಪ್ರಾರ್ಥನೆ:
ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ಕಾಲರಾತ್ರಿ ಸುತ್ತಿ

ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಕಾಲರಾತ್ರಿ ಧ್ಯಾನ:
ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ
ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ
ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ
ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ
ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ
ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ
ಇವಾಂ ಸಚಿಯಂತಾಯೆತ್‌ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ

ಕಾಲರಾತ್ರಿ ಸ್ತೋತ್ರ:
ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ
ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರೂಪಿಣಿ

ಇದನ್ನೂ ಓದಿ: ಎರಡನೇ ದಿನ ದೇವಿ ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಹಾಗೂ ಪೂಜಾ ವಿಧಿ-ವಿಧಾನದ ಸಂಪೂರ್ಣ ಇಲ್ಲಿದೆ..

ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ
ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ
ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ
Published by:Sandhya M
First published: