ವಾಸ್ತು (Vastu) ಶಾಸ್ತ್ರ ಎಂಬುದು ಪುರಾತನ (Historical) ಭಾರತೀಯ ತಂತ್ರವಾಗಿದ್ದು ನೀವಿರುವ ಸ್ಥಳದಲ್ಲಿನ ದೋಷಗಳನ್ನು ನಿವಾರಿಸಿ ಅದನ್ನು ವಾಸಯೋಗ್ಯ ಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದೇ ವಾಸ್ತು ಶಾಸ್ತ್ರದಿಂದಲೇ ಚೀನೀಯರು ಫೆಂಗ್ ಶುಯಿ ತಂತ್ರಜ್ಞಾನವನ್ನು ಕಲಿತುಕೊಂಡರು ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕು ಪ್ರಧಾನ ಪಾತ್ರವಹಿಸುತ್ತದೆ. ನೀವು ಮನೆಯ ಪ್ರವೇಶದ್ವಾರ, ಪೂಜಾ ಕೊಠಡಿಯ (Room) ಸ್ಥಾನ, ಮಲಗುವ ಕೋಣೆಯ (Bed Room) ಸ್ಥಾನವನ್ನು ವಾಸ್ತುವಿನ ನೆರವಿನಿಂದ ನಿರ್ಧರಿಸಿದರೆ ಯಾವುದೇ ದೋಷವಿರುವುದಿಲ್ಲ ಎಂಬುದು ಜ್ಯೋತಿಷ್ಯಶಾಸ್ತ್ರದ ಹೇಳಿಕೆಯಾಗಿದೆ.
ವಾಸ್ತು ಸಲಹೆ ಏಕೆ ಮುಖ್ಯ
ಮನೆಯಲ್ಲಿರುವ ಪೀಠೋಪಕರಣಗಳು, ಕೊಠಡಿಗಳು, ಅಲಂಕಾರಿಕ ವಸ್ತುಗಳು ಹೀಗೆ ಪ್ರತಿಯೊಂದನ್ನು ವಾಸ್ತು ಸಲಹೆಗಳ ಮೂಲಕ ಜೋಡಿಸಿದರೆ ಮನೆಯಲ್ಲಿ ಉಂಟಾಗುವ ಯಾವುದೇ ಅಶಾಂತಿ, ಸಮಸ್ಯೆಗಳು ತನ್ನಿಂದ ತಾನಾಗಿಯೇ ದೂರಾಗುತ್ತವೆ ಎಂಬುದು ನಂಬಿಕೆಯಾಗಿದೆ.
ಇನ್ನು ಮನೆಯ ಉದ್ಯಾನವನದ ವಿಷಯದಲ್ಲಿ ಕೂಡ ವಾಸ್ತು ಸಲಹೆಯನ್ನು ಪಾಲಿಸಿದರೆ ಮುಂಬರುವ ಕೆಡುಕುಗಳನ್ನು ನಿವಾರಿಸಬಹುದು ಎಂಬುದು ಪರಿಣಿತರ ಸಲಹೆಯಾಗಿದೆ.
1. ನಿಮ್ಮ ಉದ್ಯಾನದಲ್ಲಿ ಯಾವ ಸಸ್ಯವನ್ನು ಎಲ್ಲಿ ಇರಿಸಬೇಕು? ಸಮೃದ್ಧಿಯ ಸಸ್ಯಗಳಾವುವು ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
2. ಮನೆಯ ಉದ್ಯಾನವನ್ನು ನಿರ್ಮಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕು. ಇದರಲ್ಲಿ ಸಸ್ಯಗಳ ಆಯ್ಕೆ ಕೂಡ ಪ್ರಮುಖವಾದುದು.
3. ವಾಸ್ತುವು ವಿವಿಧ ಸಸ್ಯಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೊಂದಿದೆ. ಮನಿ ಪ್ಲಾಂಟ್ ನೆಲವನ್ನು ಸ್ಪರ್ಶಿಸಬಾರದು ಎಂಬುದು ವಾಸ್ತು ನಿಯಮವಾಗಿದೆ.
4. ಮನೆಯೊಳಗೆ ಈ ಸಸ್ಯವನ್ನು ಇರಿಸಬೇಕು ಹಾಗೂ ಇದಕ್ಕೆ ಚೆನ್ನಾಗಿ ನೀರು ಎರೆಯಬೇಕು ಹಾಗೂ ಪೋಷಣೆಗಳನ್ನು ಮಾಡಬೇಕು.
ವಾಸ್ತುವಿನ ಪ್ರಕಾರ ಅದೃಷ್ಟವನ್ನು ತರುವ ಸಸ್ಯಗಳು
ಮನಿ ಪ್ಲಾಂಟ್
ಮನಿ ಪ್ಲಾಂಟ್ಸ್ ಅಥವಾ ಗೋಲ್ಡನ್ ಪೊಥೋಸ್ ಅನ್ನು ಮನೆಗೆ ಅದೃಷ್ಟ ತರುವ ಸಸ್ಯ ಎಂದು ನಂಬಲಾಗಿದೆ. ಇದು ಸಂಪತ್ತು ಹಾಗೂ ಸಮೃದ್ಧಿಯನ್ನು ಸಂಕೇತಿಸುತ್ತದೆ ಹಾಗೂ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಈ ಸಸ್ಯವನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು ಮತ್ತು ಇತರರಿಗೆ ಎಂದಿಗೂ ಉಡುಗೊರೆಯಾಗಿ ನೀಡಬಾರದು.
ಜೇಡ್ (ಕ್ರಸೂಲಾ ಒವಾಟಾ)
ಗಾಢ ಹಸಿರು ಬಣ್ಣದಲ್ಲಿರುವ ಈ ಸಸ್ಯ ನಯವಾದ ರಚನೆ ಹಾಗೂ ದುಂಡಗಿರುವ ಎಲೆಗಳನ್ನೊಳಗೊಂಡ ಸಮೃದ್ಧ ಸಸ್ಯವಾಗಿದೆ. ಡಾಲರ್ ಪ್ಲಾಂಟ್ ಎಂಬ ಹೆಸರೂ ಈ ಸಸ್ಯಕ್ಕಿದೆ. ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಸ್ನಾನಗೃಹದಲ್ಲಿ ಇರಿಸಬಾರದು.
ಅರೇಕಾ ಪಾಮ್
ನಿಮ್ಮ ಮನೆಯ ಯಾವ ಮೂಲೆಯಲ್ಲಾದರೂ ಈ ಸಸ್ಯವನ್ನು ಬೆಳೆಸಬಹುದು. ಇದಕ್ಕೆ ನೀರು ಹಾಗೂ ಸೂರ್ಯನ ಬೆಳಕು ಕಡಿಮೆ ಇದ್ದರೂ ಸಾಕು. ಗಾಳಿಯನ್ನು ಶುದ್ಧಗೊಳಿಸುವುದರ ಜೊತೆಗೆ ಮನೆಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ.
ತುಳಸಿ
ತುಳಸಿ ಹಿಂದೂ ಧರ್ಮದಲ್ಲಿ ಪವಿತ್ರತೆಗೆ ಹೆಸರುವಾಸಿಯಾಗಿದೆ. ಅಂತೆಯೇ ಧಾರ್ಮಿಕ ಹಾಗೂ ಪೌರಾಣಿಕ ಮಹತ್ವವನ್ನು ಪಡೆದುಕೊಂಡಿರುವ ಸಸ್ಯವಾಗಿದೆ. ಮನೆಯ ಪ್ರವೇಶದ್ವಾರದಲ್ಲಿ ತುಳಸಿಯನ್ನು ನೆಡುವುದರಿಂದ ಆರೋಗ್ಯ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ರಬ್ಬರ್ ಸಸ್ಯ
ಈ ಸಸ್ಯವನ್ನು ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಎರಡರಲ್ಲೂ ಸಮೃದ್ಧವೆಂದು ಪರಿಗಣಿಸಲಾಗಿದೆ. ನಯವಾದ ವಿನ್ಯಾಸವಿರುವ ಎಲೆಗಳು ನಾಣ್ಯಗಳ ಸಂಕೇತ ಎಂದು ನಂಬಲಾಗಿದೆ.
ಹೀಗಾಗಿ ಸ್ವತಃ ಸಸ್ಯವು ಹಣವನ್ನು ಪ್ರತಿನಿಧಿಸುತ್ತದೆ. ಮನೆಯ ಕೋಣೆ ಅಥವಾ ಪ್ರವೇಶದ್ವಾರದ ಆಗ್ನೇಯ ದಿಕ್ಕಿನಲ್ಲಿ ರಬ್ಬರ್ ಸಸ್ಯವನ್ನು ಇರಿಸಬೇಕು ಎಂದು ಶಾಸ್ತ್ರ ತಿಳಿಸುತ್ತದೆ.
ಸೇವಂತಿಗೆ
ಬೌದ್ಧ ಧರ್ಮದಲ್ಲಿ ಸೇವಂತಿಗೆಗೆ ಪವಿತ್ರತೆಯ ಸ್ಥಾನವಿದೆ. ಈ ಪೂಜ್ಯ ಸಸ್ಯಗಳನ್ನು ಬೌದ್ಧ ದೇವಾಲಯಗಳ ಬಲಿಪೀಠಗಳಲ್ಲಿ ಸಹ ನೀಡಲಾಗುತ್ತದೆ, ಏಕೆಂದರೆ ಅವುಗಳು ಧನಾತ್ಮಕ ಶಕ್ತಿ ಮತ್ತು ಹಣವನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಇದನ್ನು ಲಿವಿಂಗ್ ರೂಮ್ನಲ್ಲಿರಿಸಬೇಕು.
ಜಿನ್ಸೆಂಗ್ ಫಿಕಸ್ (ಫಿಕಸ್ ಮೈಕ್ರೋಕಾರ್ಪಾ)
ಬೋನ್ಸೈ ಕುಟುಂಬಕ್ಕೆ ಸೇರಿದ ಜಿನ್ಸೆಂಗ್ ಫಿಕಸ್, ಸುಂದರವಾದ ಸಸ್ಯವಾಗಿದೆ. ಕೆಲವು ವಾಸ್ತು ತಜ್ಞರು ಸಾಮಾನ್ಯವಾಗಿ ಮನೆಯ ಆವರಣದೊಳಗೆ ಬೋನ್ಸಾಯ್ ಗಿಡವನ್ನು ಇಡಲು ಶಿಫಾರಸು ಮಾಡುವುದಿಲ್ಲ.
ಏಕೆಂದರೆ ಇದು ಕುಂಠಿತ ಬೆಳವಣಿಗೆಯನ್ನು ಸೂಚಿಸುತ್ತದೆ ಎಂಬ ಇರಾದೆಯನ್ನು ಹೊಂದಿದ್ದಾರೆ. ಈ ಸಸ್ಯವನ್ನು ಮನೆಯ ವರಾಂಡಾ, ಅಂಗಳ ಉದ್ಯಾನವನದಲ್ಲಿ ಇರಿಸಬೇಕು.
ತಾವರೆ
ಹಿಂದೂ ಪುರಾಣಗಳ ಪ್ರಕಾರ ಕಮಲದ ಸಸ್ಯವು ಬಹಳಷ್ಟು ಧಾರ್ಮಿಕ ಮಹತ್ವವನ್ನು ಹೊಂದಿದೆ. ಲಕ್ಷ್ಮೀ ದೇವಿಯು ಕಮಲದ ಮಧ್ಯೆ ಕುಳಿತಿದ್ದಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಸಂಪತ್ತಿನ ಸಂಕೇತವಾಗಿದೆ. ಕಮಲವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.
ಬಿದಿರು
ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ ಇದು ಅತ್ಯಂತ ಆರಾಧನೆಯ ಸಸ್ಯಗಳಲ್ಲಿ ಒಂದಾಗಿದೆ. ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.
ಪ್ಲಮ್ ಹೂವುಗಳು (ಪ್ರುನಸ್ ಮ್ಯೂಮ್)
ಇದು ಸಾಮರಸ್ಯ ಹಾಗೂ ಸಂಪತ್ತಿನ ಸಂಕೇತವಾಗಿದೆ. ಈ ಸಸ್ಯವನ್ನು ಮನೆಯ ಉತ್ತರ ಭಾಗದಲ್ಲಿ, ಮೇಲಾಗಿ ಈಶಾನ್ಯ ದಿಕ್ಕಿನಲ್ಲಿ ಇಡುವುದು ಮುಖ್ಯವಾಗಿದೆ.
ಆರ್ಕಿಡ್ಗಳು (ಆರ್ಕಿಡೇಸಿ)
ಈ ಸಸ್ಯವನ್ನು ಉಡುಗೊರೆಯಾಗಿ ನೀಡುತ್ತಾರೆ. ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಈ ಸಸ್ಯ ಸಂಕೇತಿಸುತ್ತದೆ. ಅವುಗಳನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇರಿಸಬೇಕು ಎಂದು ಶಾಸ್ತ್ರ ತಿಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ