Zodiac Signs: ರಾಶಿಚಕ್ರದ ಪ್ರಕಾರ ಈ ಜನರಲ್ಲಿ ಜಿಪುಣತನ ಜಾಸ್ತಿ ಇರುತ್ತಂತೆ!

ಕೆಲವು ಜನರು ಎಲ್ಲಾದರೂ ಹೊಟೇಲ್ ನಲ್ಲಿ ಊಟಕ್ಕೆ ಅಂತ ಹೋದರೆ ಕೊನೆಯಲ್ಲಿ ಬಿಲ್ ಟೇಬಲ್ ಗೆ ಬಂದಾಗ ತಮ್ಮ ಪರ್ಸ್ ಅನ್ನು ಎಂದಿಗೂ ಹೊರ ತೆಗೆಯುವುದಿಲ್ಲ. ಸ್ನೇಹಿತರ ಜೊತೆಯಲ್ಲಿ ಹೋದಾಗಲೂ ಸಹ ಒಂದು ಕಾಸು ತೆಗೆಯುವುದಿಲ್ಲ. ಇಂತಹ ಜನರನ್ನು ನಾವು ಸಾಮಾನ್ಯವಾಗಿ ಸ್ವಲ್ಪವೂ ಉದಾರತೆ ತೋರದ ಜನರು ಅಥವಾ ದುಡ್ಡು ಖರ್ಚು ಮಾಡದ ಕಂಜೂಸ್ ಅಂತ ಕರೆಯುತ್ತೇವೆ. ಈ ಜನ ಏಕೆ ಹೀಗೆ ಅಂತ ನೀವು ಆಲೋಚನೆ ಮಾಡುತ್ತಿದ್ದರೆ, ಇಲ್ಲೊಂದು ನಿಮಗೆ ಮಾಹಿತಿ ಇದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲಜನರು ಎಲ್ಲಾದರೂ ಹೊಟೇಲ್‍ನಲ್ಲಿ (Hotel) ಊಟಕ್ಕೆ (Food) ಅಂತ ಹೋದರೆ ಕೊನೆಯಲ್ಲಿ ಬಿಲ್ ಟೇಬಲ್‍ಗೆ ಬಂದಾಗ ತಮ್ಮ ಪರ್ಸ್ ಅನ್ನು ಎಂದಿಗೂ ಹೊರ ತೆಗೆಯುವುದಿಲ್ಲ. ಸ್ನೇಹಿತರ (Friends) ಜೊತೆಯಲ್ಲಿ ಹೋದಾಗಲೂ ಸಹ ಒಂದು ಕಾಸು (Money) ತೆಗೆಯುವುದಿಲ್ಲ. ಇಂತಹ ಜನರನ್ನು ನಾವು ಸಾಮಾನ್ಯವಾಗಿ ಸ್ವಲ್ಪವೂ ಉದಾರತೆ ತೋರದ ಜನರು ಅಥವಾ ದುಡ್ಡು ಖರ್ಚು ಮಾಡದ ಕಂಜೂಸ್ ಅಂತ ಕರೆಯುತ್ತೇವೆ. ಈ ಜನ ಏಕೆ ಹೀಗೆ ಅಂತ ನೀವು ಆಲೋಚನೆ ಮಾಡುತ್ತಿದ್ದರೆ, ನಿಮಗೆ ಇಲ್ಲೊಂದು ಮಾಹಿತಿ ಇದೆ ನೋಡಿ. ಜ್ಯೋತಿಷಿಗಳ  (Astrologers) ಪ್ರಕಾರವಾಗಿ ಈ ರಾಶಿಚಕ್ರ ಚಿಹ್ನೆಯ (Zodiac Sign) ಜನರು ಏನಾದರೂ ಕೊಡುವ ವಿಷಯ ಬಂದರೆ ಸ್ವಲ್ಪವೂ ಉದಾರತೆ ತೋರಿಸುವುದಿಲ್ಲವಂತೆ ಎಂದು ಹೇಳಲಾಗುತ್ತದೆ ನೋಡಿ.

1. ಮಿಥುನ ರಾಶಿ
ಈ ರಾಶಿ ಜನರು ಕಥೆಗಳನ್ನು ಹೇಳಲು ಮತ್ತು ಬೇರೆಯವರಿಗೆ ಸಲಹೆ ನೀಡಲು ಇಷ್ಟಪಡುತ್ತಾರೆ. ಅವರು ಇತರರನ್ನು ಮನರಂಜಿಸುವಲ್ಲಿ ತುಂಬಾನೇ ನಿಪುಣರು, ಆದರೆ ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದ ದಿನವೂ ಸಹ ಯಾರಿಗಾದರೂ ಪಾರ್ಟಿ ಕೊಡಿಸುವ ವಿಷಯಕ್ಕೆ ಬಂದಾಗ ಇವರು ಒಲವು ತೋರಿಸುವುದಿಲ್ಲ.

"ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ, ಮಿಥುನ ರಾಶಿಯವರು ತುಂಬಾ ಅಹಂಕಾರಿ ಮತ್ತು ಸ್ವ-ಕೇಂದ್ರಿತರಾಗಬಹುದು" ಎಂದು ಫ್ಯೂಚರಿಯೊ ಅಪ್ಲಿಕೇಶನ್‍ನ ಜ್ಯೋತಿಷಿ ಆಲಿಸ್ ಆಲ್ಟಾ ಅವರು ಎಚ್ಚರಿಸಿದ್ದಾರೆ. ಅವರು ಪ್ರತಿಯಾಗಿ ಏನನ್ನೂ ಪಡೆಯದಿದ್ದರೆ, ತಮ್ಮ ಔದಾರ್ಯವನ್ನು ತೋರಿಸುವುದರಲ್ಲಿ ಏನು ಅರ್ಥವಿಲ್ಲ ಎಂದು ಕೊಳ್ಳುತ್ತಾರೆ. ಆದರೆ ಮಿಥುನ ರಾಶಿಯವರು ತಮ್ಮ ಸುತ್ತಮುತ್ತಲಿನ ಜನರು ಸ್ನೇಹ ಮತ್ತು ಗೌರವದಿಂದ ಇದ್ದರೆ, ಅವರು ತಮ್ಮ ಸ್ವಾರ್ಥ ಬುದ್ದಿಯನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.

2. ಕುಂಭ ರಾಶಿ
ಈ ರಾಶಿಯ ಜನರು ಆಗಾಗ್ಗೆ ಸಾಕಷ್ಟು ಜಿಪುಣರಾಗಿರಬಹುದು, ಏಕೆಂದರೆ ಅವರು ಉಡುಗೊರೆ ನೀಡುವ ಮೌಲ್ಯವನ್ನು ಮೆಚ್ಚುವುದಿಲ್ಲ. "ಅವರು ಹಣ ಮತ್ತು ಭೌತಿಕ ವಸ್ತುಗಳ ಮೇಲೆ ಗಮನ ಹರಿಸುವುದೇ ಇಲ್ಲ" ಎಂದು ಅಲ್ಟಾ ಹೇಳುತ್ತಾರೆ. ಈ ರಾಶಿಯವರು ಬೇರೆಯವರ ಹುಟ್ಟುಹಬ್ಬ ಮತ್ತು ಮದುವೆ ವಾರ್ಷಿಕೋತ್ಸವಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ಇಲ್ಲ.

ಇದನ್ನೂ ಓದಿ:  Super Moon 2022: ಸೂಪರ್‌ ಮೂನ್​ನಿಂದ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ?

ಆಲ್ಟಾ ಅವರು "ಕುಂಭ ರಾಶಿಯ ಜನರು ವಿಚಿತ್ರವಾದ ಮತ್ತು ಸಂಶಯಾಸ್ಪದವಾದ ಯೋಜನೆಗಳಲ್ಲಿ ಹೂಡಿಕೆ ಮಾಡಬಲ್ಲರು" ಎಂದು ಹೇಳುತ್ತಾರೆ, ಇದರಿಂದ ಅವರ ಬಳಿ ಇರುವಂತಹ ಹಣವು ಅವರ ಬೆರಳುಗಳ ಮೂಲಕ ಜಾರಲು ಕಾರಣವಾಗುತ್ತದೆ.

3. ಮಕರ ರಾಶಿ
ಈ ರಾಶಿಯ ಜನರು ತಮ್ಮ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಇಷ್ಟ ಪಡುತ್ತಾರೆ, ಇದರರ್ಥ ಸ್ನೇಹಿತರೊಂದಿಗೆ ಊಟ ಮಾಡುವ ಮತ್ತು ಪಾರ್ಟಿ ಮಾಡುವ ಅನಗತ್ಯ ಚಟುವಟಿಕೆಗಳನ್ನು ನಿರಾಕರಿಸುವುದು ಎಂದರ್ಥ. ಈ ರಾಶಿಯವರು ಹಣವನ್ನು ಖರ್ಚು ಮಾಡದೆ ಸಾಧ್ಯವಾದಷ್ಟು ಉಳಿತಾಯ ಮಾಡಲು ಬಯಸುತ್ತಾರೆ. "ಅವರ ಭಾವನಾತ್ಮಕವಾಗಿ ಸಂಬಂಧ ಚೆನ್ನಾಗಿರದೆ ಇದ್ದರೆ, ಇವರು ತಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರೊಂದಿಗೂ ಸಹ ದುರಾಸೆಯುಳ್ಳವರಾಗಿರಬಹುದು" ಎಂದು ಅಲ್ಟಾ ಹೇಳುತ್ತಾರೆ.

4. ಮೇಷ ರಾಶಿ
ಈ ರಾಶಿಯ ಜನರು ತಮ್ಮ ಹಣವನ್ನು ತುಂಬಾನೇ ಇಷ್ಟಪಡುತ್ತಾರೆ, ಅಲ್ಲಿ ಅವರು ಹಣವನ್ನು ಯಾರ ಮೇಲೂ ಖರ್ಚು ಮಾಡಲ್ಲ. ಮೇಷ ರಾಶಿಯವರು ತಮ್ಮ ನಾಯಕತ್ವವನ್ನು ಪ್ರದರ್ಶಿಸುವುದರ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದು ಆಲ್ಟಾ ವಿವರಿಸುತ್ತಾರೆ. ಆದಾಗ್ಯೂ, ಅವರು ಯಾರನ್ನಾದರೂ ನಿಜವಾಗಿಯೂ ಇಷ್ಟ ಪಡುತ್ತಿದ್ದರೆ ಅವರು ಅವರೊಂದಿಗೆ ಮಾತ್ರ ಸ್ವಲ್ಪ ದಯಾಪರರಾಗಿರಬಹುದು ಎಂದು ಹೇಳುತ್ತಾರೆ.

5. ವೃಷಭ ರಾಶಿ
ಇವರು ಭೌತಿಕ ಸರಕುಗಳನ್ನು ಕೊಳ್ಳುವುದರ ಬಗ್ಗೆ ತುಂಬಾನೇ ಜಾಗೃತಿಯನ್ನು ವಹಿಸುತ್ತಾರೆ ಎಂದು ಹೇಳಬಹುದು ಮತ್ತು ಇವರಿಗೆ ಉಪಯೋಗ ಅಂತ ಅನ್ನಿಸದೆ ಇರುವ ವಸ್ತುಗಳ ಖರೀದಿಯ ಮೇಲೆ ಸ್ವಲ್ಪವೂ ಹಣವನ್ನು ಖರ್ಚು ಮಾಡಲು ಇಷ್ಟ ಪಡುವುದಿಲ್ಲ ಎಂದು ಆಲ್ಟಾ ಹೇಳುತ್ತಾರೆ. ಅದೇ ಸಮಯದಲ್ಲಿ, ಈ ರಾಶಿಚಕ್ರ ಚಿಹ್ನೆಯ ಜನರು ನಿಖರವಾಗಿ ಜಿಪುಣರಲ್ಲ. "ಅವರು ಜೀವನದ ಸೌಂದರ್ಯ, ಐಷಾರಾಮಿ ವಸ್ತುಗಳು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಇಷ್ಟ ಪಡುತ್ತಾರೆ" ಎಂದು ಅಲ್ಟಾ ಹೇಳುತ್ತಾರೆ, ಆದ್ದರಿಂದ ಅವರು ವೈಯಕ್ತಿಕವಾಗಿ ಕಾಲಕಾಲಕ್ಕೆ ಜೀವನದಲ್ಲಿನ ಹಣವನ್ನು ಖರ್ಚು ಮಾಡುತ್ತಾರೆ ಎಂದು ಹೇಳುತ್ತಾರೆ.

ಇದನ್ನೂ ಓದಿ:  Brass: ದೇವರ ಪೂಜೆಗೆ ಹಿತ್ತಾಳೆ ಸಾಮಾಗ್ರಿಗಳೇ ಉತ್ತಮ; ಕಾರಣ ಇದು

6. ವೃಶ್ಚಿಕ ರಾಶಿ
ಈ ರಾಶಿಯವರು ತಮ್ಮ ಹಣಕಾಸಿನ ಬಗ್ಗೆ ತುಂಬಾನೇ ಸಂವೇದನಾಶೀಲರಾಗಿರುತ್ತಾರೆ. ಈ ರಾಶಿಯ ಜನರು ತಾವು ಎಷ್ಟು ಸಂಪಾದಿಸುತ್ತಾರೆ ಅಥವಾ ಎಷ್ಟು ಹಣವನ್ನು ಉಳಿತಾಯ ಮಾಡಿದ್ದಾರೆ ಎಂದು ಯಾರಿಗೂ ಹೇಳಲು ಬಯಸುವುದಿಲ್ಲ. ಆದ್ದರಿಂದ ಅವರು ಹೊರಗೆ ಹೋಗಿ ಸ್ನೇಹಿತರ ಜೊತೆಯಲ್ಲಿ ಹೊಟೇಲ್‍ಗಳಲ್ಲಿ ಊಟ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳುತ್ತಾರೆ. ವೃಶ್ಚಿಕ ರಾಶಿಯವರು ಕೆಲವೊಮ್ಮೆ ಬೇರೆ ಜನರ ಮೇಲೆ ಪ್ರಭಾವ ಬೀರಲು ಬಯಸಿದರೆ ಕೆಲವೊಮ್ಮೆ ದುಂದು ವೆಚ್ಚ ಮಾಡುತ್ತಾರೆ ಎಂದು ಅಲ್ಟಾ ಹೇಳುತ್ತಾರೆ.
Published by:Ashwini Prabhu
First published: