Zodiac Signs: ಈ 5 ರಾಶಿಚಕ್ರ ಚಿಹ್ನೆಯ ಜನರು ಎಲ್ಲರಿಗಿಂತಲೂ ಹೆಚ್ಚು ಖಿನ್ನತೆಗೆ ಒಳಗಾಗ್ತರಂತೆ!

ನಿಮ್ಮೆಲ್ಲಾ ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕತೆಯ ನಂತರವೂ ಸಹ ನೀವು ದುಃಖ ಮತ್ತು ಅಸಹಾಯಕತೆಯನ್ನು ಅನುಭವಿಸುತ್ತೀರಿ ಎಂದರೆ ಅದಕ್ಕೆ ಕಾರಣ ನಿಮ್ಮ ಸೂರ್ಯ ಚಿಹ್ನೆ ಯಾಗಿರಬಹುದೇ? ಬನ್ನಿ ಹಾಗಾದರೆ ಈ 5 ರಾಶಿಚಕ್ರ ಚಿಹ್ನೆಯುಳ್ಳ ಜನರು ಇತರ ರಾಶಿಯವರಿಗಿಂತಲೂ ಹೆಚ್ಚು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜ್ಯೋತಿಷ್ಯವನ್ನು (Astrology) ನಂಬುವವರು ನಿಮ್ಮ ಸೂರ್ಯ ಚಿಹ್ನೆಯು ನಿಮ್ಮ ಎಲ್ಲಾ ವ್ಯಕ್ತಿತ್ವದ ಗುಣಲಕ್ಷಣಗಳು ಮತ್ತು ಜೀವನದ ಘಟನೆಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ತಿಳಿದಿರಬೇಕು. ಇದು ನಿಮ್ಮ ವೃತ್ತಿಜೀವನದ ಆಯ್ಕೆ, ಸಂತೋಷ, ಅನಾರೋಗ್ಯ ಅಥವಾ ಸೋಮಾರಿತನವಾಗಿರಲಿ ಹೀಗೆ ನಿಮ್ಮ ಸೂರ್ಯ ಚಿಹ್ನೆಯು ಅದೆಲ್ಲದರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಜೀವನದಲ್ಲಿ (Life) ಈ ಸಂತೋಷ ಎನ್ನುವುದು ಬೇರೆಯವರಿಂದ ಸಿಗುವುದಲ್ಲ, ನಮ್ಮ ಮನಸ್ಥಿತಿಯಿಂದಲೇ ಸಿಗುವಂತದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅನೇಕರು ತಮ್ಮ ಸಂತೋಷವನ್ನು (Happy) ಬೇರೆಯವರ ಮೇಲೆ ಅವಲಂಬಿತ ಮಾಡಿಕೊಂಡು ಹತಾಶೆಗೆ ಮತ್ತು ಖಿನ್ನತೆಗೆ (Depression) ಒಳಗಾಗ್ತಾ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ನಿಮ್ಮೆಲ್ಲಾ ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕತೆಯ ನಂತರವೂ ಸಹ ನೀವು ದುಃಖ ಮತ್ತು ಅಸಹಾಯಕತೆಯನ್ನು ಅನುಭವಿಸುತ್ತೀರಿ ಎಂದರೆ ಅದಕ್ಕೆ ಕಾರಣ ನಿಮ್ಮ ಸೂರ್ಯ ಚಿಹ್ನೆ ಯಾಗಿರಬಹುದೇ? ಬನ್ನಿ ಹಾಗಾದರೆ ಈ 5 ರಾಶಿಚಕ್ರ ಚಿಹ್ನೆಯುಳ್ಳ ಜನರು ಇತರ ರಾಶಿಯವರಿಗಿಂತಲೂ ಹೆಚ್ಚು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

1. ಮಕರ ರಾಶಿ
ಮಕರ ರಾಶಿಯವರು ಮಂಕು ಮತ್ತು ನಿಕಟ ಮನಸ್ಸಿನ ವ್ಯಕ್ತಿಗಳು. ಏಕೆಂದರೆ ಮಕರ ರಾಶಿಯವರು ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ ಮತ್ತು ಹಾಗೆ ಮಾಡದಿರುವುದು ದೊಡ್ಡ ಖಿನ್ನತೆಗೆ ಕಾರಣವಾಗಬಹುದು. ಅವರು ಸಾಮಾನ್ಯವಾಗಿ ಪ್ರತಿಯೊಂದಕ್ಕೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ನಿರಂತರವಾಗಿ ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೆ. ಈ ರೀತಿ ಮಾಡಿಕೊಳ್ಳುವುದರಿಂದ ಅವರು ಆಗಾಗ್ಗೆ ಖಿನ್ನತೆಗೆ ಒಳಗಾಗುತ್ತಾರೆ.

ಆಘಾತಕಾರಿ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರು ತುಂಬಾನೇ ಶಾಂತವಾಗಿರುತ್ತಾರೆ, ಇದು ಅವರ ಭಾವನೆಗಳನ್ನು ಹಾಗೆ ಮನಸ್ಸಿನಲ್ಲಿರಿಸಿಕೊಳ್ಳಲು ಕಾರಣವಾಗುತ್ತದೆ, ಇದು ಅವರನ್ನು ಹೆಚ್ಚು ಒತ್ತಡಕ್ಕೆ ಗುರಿ ಮಾಡುತ್ತದೆ. ತಮ್ಮನ್ನು ತಾವು ಹೆಚ್ಚು ನಂಬಲು ಮತ್ತು ಹೆಚ್ಚು ಮುಕ್ತ ಮನಸ್ಸಿನ ಮನೋಭಾವವನ್ನು ಹೊಂದಲು ಕಲಿಯುವುದು ಅವರ ಜೀವನವನ್ನು ಬದಲಾಯಿಸಬಹುದು.

2. ವೃಷಭ ರಾಶಿ
ಈ ರಾಶಿಯವರು ಹೆಚ್ಚಾಗಿ ಅಂತರ್ಮುಖಿಗಳು, ವೃಷಭ ರಾಶಿಯವರು ತಮ್ಮ ಆರಾಮ ವಲಯದಲ್ಲಿರಲು ಇಷ್ಟಪಡುತ್ತಾರೆ. ಅವರು ಯಾವಾಗಲೂ ನಿರ್ದಿಷ್ಟವಾದ ದಿನಚರಿಯನ್ನು ಅನುಸರಿಸುತ್ತಾರೆ ಮತ್ತು ಅವರ ದೈನಂದಿನ ಜೀವನದಲ್ಲಿ ಯಾವುದೇ ಬದಲಾವಣೆಗಳನ್ನು ಅವರು ದ್ವೇಷಿಸುತ್ತಾರೆ. ಈ ರಾಶಿಚಕ್ರದಲ್ಲಿ ಖಿನ್ನತೆಗೆ ಮುಖ್ಯ ಕಾರಣವೆಂದರೆ ಅವರು ದೈನಂದಿನ ದಿನಚರಿಗಳಲ್ಲಿ ಎದುರಿಸುವ ಬದಲಾವಣೆಗಳು ಮತ್ತು ಅವರ ಆರಾಮದಿಂದ ಹೊರಗುಳಿಯುವುದು ಅವರಲ್ಲಿ ಆತಂಕವನ್ನು ಉಂಟು ಮಾಡುತ್ತದೆ.

3. ವೃಶ್ಚಿಕ ರಾಶಿ
ಈ ರಾಶಿಯವರು ಹೆಚ್ಚು ಖಿನ್ನತೆಯಿಂದ ಬಳಲುತ್ತಾ ಇರುತ್ತಾರೆ. ಅವರು ತಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಹೆಚ್ಚು ಒಲವು ಹೊಂದಿದ್ದು, ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಹ ಅವರು ಅದರಿಂದ ಬೇಸರ ಮಾಡಿಕೊಂಡು ಖಿನ್ನತೆಗೆ ಒಳಗಾಗುತ್ತಾರೆ. ಒಂಟಿತನ, ವ್ಯವಹಾರದಲ್ಲಿ ನಷ್ಟ ಮತ್ತು ಪ್ರೀತಿ ಪಾತ್ರರಿಂದ ಪ್ರತ್ಯೇಕತೆಯು ಇವರನ್ನು ಖಿನ್ನತೆಗೆ ದೂಡುತ್ತದೆ.

ಇದನ್ನೂ ಓದಿ: Sleepless Night: ಈ 4 ರಾಶಿಯವರಿಗೆ ರಾತ್ರಿ ನಿದ್ದೆಗೆಡುವುದೆಂದರೆ ದೊಡ್ಡ ವಿಷಯವೇ ಅಲ್ಲವಂತೆ

ಇವರು ಆಗಾಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ ಏಕೆಂದರೆ ಯಾರಾದರೂ ತಮ್ಮನ್ನು ಶೋಷಿಸಬಹುದು ಎಂದು ಅವರು ಭಾವಿಸುತ್ತಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಭಾವನಾತ್ಮಕ ಸಂಬಂಧಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸದಂತೆ ಸಲಹೆ ನೀಡಲಾಗಿದೆ.

4. ಕರ್ಕಾಟಕ ರಾಶಿ
ಅವರು ತಮ್ಮ ಪ್ರೀತಿ ಪಾತ್ರರ ಬಗ್ಗೆ ತುಂಬಾನೇ ಕಾಳಜಿ ವಹಿಸುವ ಮತ್ತು ಧೈರ್ಯಶಾಲಿ ಜನರು ಎಂದು ಹೇಳಬಹುದು. ತುಂಬಾ ಕಾಳಜಿಯೂ ಇವರಿಗೆ ಅನೇಕ ಬಾರಿ ಸುಲಭವಾಗಿ ನೋವು ನೀಡುತ್ತದೆ. ಅವರು ಯಾವುದೇ ಕೆಲಸದಲ್ಲಿ ತಮ್ಮ ಎಲ್ಲವನ್ನೂ ನೀಡಿದ ನಂತರವೂ, ಅವರು ಪಡೆಯುವುದೆಲ್ಲವೂ ಇತರರಿಂದ ನಿರಾಶೆಯಾಗಿದೆ. ಅವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಮರೆ ಮಾಚುವಲ್ಲಿ ತುಂಬಾ ಕೆಟ್ಟವರಾಗಿರುತ್ತಾರೆ ಮತ್ತು ಅವರ ಎಲ್ಲಾ ಭಾವನೆಗಳನ್ನು ಹಾಗೆಯೇ ತೆರೆದಿಡುತ್ತಾರೆ.

5. ಮೀನ ರಾಶಿ
ಮೀನ ರಾಶಿಯವರು ಸಾಮಾನ್ಯವಾಗಿ ದಯಾಪರರು ಮತ್ತು ಪ್ರೀತಿಯ ವ್ಯಕ್ತಿಗಳು, ಅವರು ತ್ಯಾಗ ಮತ್ತು ಸ್ವಯಂ-ತ್ಯಾಗದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಜೀವನದ ಬಗ್ಗೆ ಈ ಸ್ವಯಂ-ವಿನಾಶಕಾರಿ ಮತ್ತು ಕನಸಿನ ದೃಷ್ಟಿಕೋನವೇ ಅವರನ್ನು ಭ್ರಮನಿರಸನ ಮತ್ತು ಕತ್ತಲೆಗೆ ದೂಡುತ್ತದೆ. ಅವರು ಸಾಮಾನ್ಯವಾಗಿ ತಮ್ಮ ಜೀವನವನ್ನು ತಮಗೆ ಬೇಕಾದಷ್ಟು ನಿಯಂತ್ರಿಸಲು ಬಯಸುತ್ತಾರೆ, ಅದು ವಿಫಲವಾದರೆ, ಅವರು ಯಾವಾಗಲೂ ಮೌನವಾಗಿ ನರಳಲು ಆಯ್ಕೆ ಮಾಡುತ್ತಾರೆ.

ಇದನ್ನೂ ಓದಿ: Zodiac Sign: ಈ ಎರಡು ರಾಶಿಯವ್ರು ಜೊತೆಯಾಗಿ ಪ್ರವಾಸ ಹೋದ್ರೆ ಇಬ್ರಿಗೂ ಒಳ್ಳೆಯದಂತೆ ನೋಡಿ

ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸಂತೋಷವಾಗಿಡಲು ಹೊರಗೆ ನಗಲು ಪ್ರಯತ್ನಿಸುತ್ತಾರೆ. ಮೀನ ರಾಶಿಯವರು ವಾಸ್ತವದೊಂದಿಗೆ ಸಂಪರ್ಕದಲ್ಲಿರುವುದು ಮತ್ತು ತ್ಯಾಗ ಮಾಡುವುದನ್ನು ಬಿಟ್ಟು ತಮ್ಮ ಸುತ್ತಮುತ್ತಲಿನ ಜನರನ್ನು ಮೆಚ್ಚಿಸಲು ಪ್ರಯತ್ನಿಸುವುದನ್ನು ನಿಲ್ಲಿಸುವುದು ಉತ್ತಮ.
Published by:Ashwini Prabhu
First published: