Astrology: ಬೆಸ್ಟ್​ ಅಪ್ಪನಾಗುವ ಲಕ್ಷಣ 5 ರಾಶಿಯವರಲ್ಲಿ ಇದೆಯಂತೆ!

Zodiac Sign: ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ ಕಷ್ಟ. ಅಪ್ಪ ಎಂದರೆ ಮಕ್ಕಳ ಪ್ರಕಾರ ತನ್ನ ಕೋರಿಕೆಗಳನ್ನು ಈಡೇರಿಸುವ ಒಬ್ಬ ವ್ಯಕ್ತಿ. ಸಣ್ಣ ಆಟಿಕೆ ಕಾರಿನಿಂದ ಹಿಡಿದು ದೊಡ್ಡ ಕಾರಿನವರೆಗೆ ಮಕ್ಕಳ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬುತ್ತಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಪ್ಪ(Appa) ಅಂದ್ರೆ ಆರಂಭ .ಅಪ್ಪ ಅಂದ್ರೆ ಅದ್ಭುತ. ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಶಕ್ತಿ. ಅಪ್ಪ ಅಪ್ಪ ಅಂದರೆ ಒಬ್ಬ ಶ್ರಮಜೀವಿ. ತಾನು ಹಗಲು ಇರುಳು(Day and Night) ದುಡಿದು ಬಂದ ಸಂಬಳದಲ್ಲಿ(Salary) ತನ್ನ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ. ಹಬ್ಬ ಹರಿದಿನಗಳಲ್ಲಿ  ತಾನು ಹರಿದ ಅಥವಾ ಹಳೆಯ ವಸ್ತ್ರ(Dress) ಧರಿಸಿ ತನ್ನ ಮಕ್ಕಳಿಗೆ ಹೊಸ ಉಡುಪುಗಳನ್ನು ಖರೀದಿಸಿ ಕೊಡುತ್ತಾನೆ. ಅವರ ಖುಷಿಯಲ್ಲಿ ತಾನು ಸಂತಸಪಡುತ್ತಾನೆ (Happiness). ಒಂದು ಕುಟುಂಬವನ್ನು(Family) ಮುನ್ನಡೆಸುವಲ್ಲಿ ಸಮರ್ಥ ನಾಯಕನ ಪಾತ್ರ ವಹಿಸುತ್ತಾನೆ. ತನ್ನ ನೋವನ್ನು ಎಲ್ಲೂ ತೋರ್ಪಡಿಸದೇ ತನ್ನಲ್ಲಿಯೇ ಅದುಮಿಕೊಂಡು ತನ್ನ ಸಂತಸವನ್ನು ಇತರರ ಬಳಿ ಹಂಚಿಕೊಂಡು ಎಲ್ಲರನ್ನೂ ಸಂತಸಪಡಿಸುತ್ತಾನೆ. ನೂರಾರು ಕಷ್ಟಗಳನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಿರುವವನು ಅಪ್ಪ.

  ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತರೂ, ತಾನು ಸಂತೋಷವಾಗಿಯೇ ಇದ್ದೇನೆಂದು ಮನೆಜನರನ್ನು ಸಂತೈಸುವವನು ಅಪ್ಪ. ಆದರೆ ಆತ ಯಾರಿಗೂ ತಿಳಿಯದ ಹಾಗೆ ಅಳುತ್ತಾನೆ.ಅಪ್ಪನಿಗೆ ತನ್ನ ಮಕ್ಕಳ ಮೇಲೆ ಪ್ರೀತಿ ಇದೆ. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ.  ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ ಕಷ್ಟ. ಅಪ್ಪ ಎಂದರೆ ಮಕ್ಕಳ ಪ್ರಕಾರ ತನ್ನ ಕೋರಿಕೆಗಳನ್ನು ಈಡೇರಿಸುವ ಒಬ್ಬ ವ್ಯಕ್ತಿ. ಸಣ್ಣ ಆಟಿಕೆ ಕಾರಿನಿಂದ ಹಿಡಿದು ದೊಡ್ಡ ಕಾರಿನವರೆಗೆ ಮಕ್ಕಳ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬುತ್ತಾನೆ. ಇಂತಹ ಅಪ್ಪನಾಗುವ ಗುಣ ಕೆಲವರಿಗೆ ಹುಟ್ಟಿನಿಂದಲೇ ಬಂದಿದ್ದರೆ ಇನ್ನೂ ಕೆಲವರು ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಕಲಿಯುತ್ತಾರೆ..ಅದರಲ್ಲೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಐದು ರಾಶಿಗಳಲ್ಲಿ ಜನಿಸಿದವರ ಉತ್ತಮ ತಂದೆಯಾಗಿ ಮಕ್ಕಳ ಲಾಲನೆ-ಪಾಲನೆ ಕರ್ತವ್ಯ ನಿಭಾಯಿಸಬಲ್ಲರಂತೆ.

  1)ಮೇಷ ರಾಶಿ: ರಾಶಿಚಕ್ರದಲ್ಲಿ ಮೊದಲನೆಯ ರಾಶಿಯಾಗಿರುವ ಮೇಷ ರಾಶಿಯಲ್ಲಿ ಜನಿಸಿದವರು ಹಲವು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. . ಪ್ರಾಮಾಣಿಕತೆ, ಸಮರ್ಥನೆ, ಮಹತ್ವಾಕಾಂಕ್ಷೆ, ಸಂಘಟನೆ, ಆಳವಾದ ಪ್ರೀತಿ ಮತ್ತು ರಕ್ಷಣೆಯ ಗುಣಗಳನ್ನು ಹೊಂದಿದೆ. ಆದ್ದರಿಂದ ಮೇಷ ರಾಶಿಯನ್ನು ಮಹಾನ್ ತಂದೆ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಇವರು ಜೀವನದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ.

  ಇದನ್ನೂ ಓದಿ: ಮೂಗಿನ ಆಕಾರ ನೋಡಿ ಕೂಡ ನಿಮ್ಮ ಸ್ವಭಾವ ಹೀಗೆ ಅಂತ ಹೇಳಬಹುದು!

  2)ಸಿಂಹ ರಾಶಿ: ಸಿಂಹ ರಾಶಿಯಲ್ಲಿ ಜನಿಸಿದ ಜನರು ಹುಟ್ಟಿನಿಂದಲೇ ಉತ್ತಮ ತಂದೆಯಾಗುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.. ಮಕ್ಕಳಿಗೆ ಮಾರ್ಗದರ್ಶಕರು ಆಗುವ ಗುಣಗಳನ್ನು ಅವರು ಬಾಲ್ಯದಿಂದಲೇ ಕಲಿಸುತ್ತಾರೆ. ಅಪ್ಪ ಅಂದರೆ ಹೀಗೆ ಇರಬೇಕು ಎನ್ನುವುದಕ್ಕೆ ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉದಾಹರಣೆಯಾಗಿ ಇರುತ್ತಾರೆ. ಸಿಂಹ ರಾಶಿಯ ಪುರುಷರು ಉದಾರತೆ, ಪ್ರಜ್ಞೆ, ಚಾಲನೆ ಮತ್ತು ಸ್ವಾಭಾವಿಕ ಪ್ರಜ್ಞೆಯ ಗುಣಗಳನ್ನು ಹೊಂದಿರುವವರಾಗಿರುತ್ತಾರೆ. ಇವರು ಕುಟುಂಬದಲ್ಲಿ ಮತ್ತು ಅವರ ಸುತ್ತಮುತ್ತಲಿನವರಲ್ಲಿ ಆರೋಗ್ಯಕರ ಸ್ವ-ಪ್ರೀತಿಯನ್ನು ಉತ್ತೇಜಿಸುತ್ತಾರೆ.

  3)ಕನ್ಯಾ ರಾಶಿ: ಕನ್ಯಾ  ಜನಿಸಿದವರು ಶ್ರೇಷ್ಠ ಚಿಂತಕರು.. ಇವರು ಪ್ರೀತಿಯಿಂದ ಕೂಡಿರುವ ಸೂಕ್ಷ್ಮ ವ್ಯಕ್ತಿಗಳು.. ತಾಳ್ಮೆಯ ಗುಣಗಳು ಕನ್ಯಾ ರಾಶಿಯಲ್ಲಿ ಜನಿಸಿದ ಪುರುಷರಲ್ಲಿ ಇರುತ್ತದೆ..ಯಾವುದೇ ಸಮಸ್ಯೆಗಳನ್ನು ಕೌಶಲ್ಯದಿಂದ ಪರಿಹಾರ ಮಾಡುವಲ್ಲಿ ಇವರು ಸಿದ್ಧಹಸ್ತರು. ಇವರು ಮಕ್ಕಳ ಲಾಲನೆ ಪಾಲನೆಯಲ್ಲಿಯು ಸಹ ಅಷ್ಟೇ ತಾಳ್ಮೆಯಿಂದ ಇರುತ್ತಾರೆ. ಆರ್ಥಿಕ ಸ್ವಾತಂತ್ರ್ಯವಾಗಿ ಮಕ್ಕಳನ್ನು ಇವರು ಬೆಳೆಸುತ್ತಾರೆ.. ಮಕ್ಕಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸುವ ಇವರು ತಮ್ಮ ಮಕ್ಕಳಿಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

  4)ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಪುರುಷರು ಅತ್ಯಂತ ರಕ್ಷಣಾತ್ಮಕ ಮತ್ತು ಪ್ರೀತಿ ಮತ್ತು ಹೆಚ್ಚಿನ ಕಾಳಜಿ ನೀಡುವವರು. ಅವರ ಜೀವನೋತ್ಸಾಹವು ಮಕ್ಕಳೊಂದಿಗೆ ಅವರ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಇವರು ಕುಟುಂಬ-ಆಧಾರಿತ ವ್ಯಕ್ತಿಗಳು.

  ಇದನ್ನೂ ಓದಿ: ಅಷ್ಟಲಕ್ಷ್ಮಿ ಸ್ವರೂಪ ಈ 8 ಗಿಡಗಳಂತೆ; ಮನೆಯಲ್ಲಿ ಇವು ಇದ್ದರೆ ಹಣದ ಸಮಸ್ಯೆ ಇಲ್ಲ

  5)ಮಕರ ರಾಶಿ: ಈ ರಾಶಿಚಕ್ರದ ತಂದೆ, ಜವಾಬ್ದಾರಿಯನ್ನು ಪ್ರೀತಿಸುವ ಸರ್ವೋತ್ಕೃಷ್ಟ ವ್ಯಕ್ತಿ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅವರಿಗೆ ಸಾಮಾನ್ಯವಾಗಿರುತ್ತದೆ ಮತ್ತು ಅವರು ತಮ್ಮ ಪ್ರೀತಿಪಾತ್ರರಲ್ಲಿ ಸಮಯವನ್ನು ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಮಕರ ರಾಶಿ ಪುರುಷರು ಪರಿಗಣಿಸುವ, ಪೋಷಿಸುವ, ನೈಸರ್ಗಿಕ ನಾಯಕರು ಮತ್ತು ಶಿಕ್ಷಕರು, ಮತ್ತು ಭಾವನೆಗಳೊಂದಿಗೆ ತಮ್ಮ ತರ್ಕಬದ್ಧತೆಯನ್ನು ಸಮತೋಲನಗೊಳಿಸಲು ಕಲಿಸುತ್ತಾರೆ. ಅತ್ಯಂತ ಭಾವನಾತ್ಮಕ ಮತ್ತು ಬುದ್ಧಿವಂತ ಚಿಹ್ನೆಗಳಲ್ಲಿ ಒಂದು. ಈ ಚಿಹ್ನೆಗೆ ಸೇರಿದ ಪುರುಷರು ಉತ್ತಮ ತಂದೆಯಾಗುತ್ತಾರೆ.
  Published by:ranjumbkgowda1 ranjumbkgowda1
  First published: