ಇಂದಿನ ಕಾಲದಲ್ಲಿ ಎಲ್ಲರೂ ಹಣ ಮಾಡುವುದರ (Making Money) ಹಿಂದೆ ಓಡುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಲು ಸಿದ್ಧರಿರುವುದಕ್ಕೆ (Hard Working) ಮುಖ್ಯವಾದ ಒಂದು ಕಾರಣ ಎಂದರೆ ಅದು ಹಣ ಗಳಿಸುವುದು (Money Earning) ಆಗಿದೆ ಅಂತ ಹೇಳಬಹುದು. ಹೌದು, ಹಣ ಎಲ್ಲರಿಗೂ ಬೇಕಾದಂತಹ ಮುಖ್ಯವಾದ ಅಂಶವಾಗಿದೆ ಅಂತ ಹೇಳಬಹುದು, ಹಣವಿಲ್ಲದಿದ್ದರೆ ನಮ್ಮ ಬದುಕಿನ (Life) ಬಂಡಿ ನಡೆಯುವುದು ತುಂಬಾನೇ ಕಷ್ಟಕರವಾಗಿರುತ್ತದೆ ಅಂತ ಹೇಳಿದರೆ ಸುಳ್ಳಲ್ಲ.
ಹಣ ಗಳಿಸುವುದು ಬರೀ ಕಠಿಣ ಪರಿಶ್ರಮದಿಂದಲೇ ಅಂತ ತಿಳಿಯುವುದು ಅಷ್ಟೊಂದು ಸತ್ಯ ಅಂತ ಅನ್ನಿಸುವುದಿಲ್ಲ. ಕಠಿಣ ಪರಿಶ್ರಮದೊಂದಿಗೆ ಅದೃಷ್ಟ ಸಹ ಬೇಕಾಗುತ್ತದೆ.
ನಿಮಗೆ ಲಾಭವಾಗಲಿದೆ, ಹಣದ ಆಗಮನವಾಗಲಿದೆ ಅಂತ ನಿಮಗೆ ತಿಳಿಸಲು ಅನೇಕ ರೀತಿಯ ಲಕ್ಷಣಗಳು ಇವೆ. ಮೊದಲಿನಿಂದಲೂ ಎಂದರೆ ತುಂಬಾ ಹಳೆಯ ಒಂದು ನಂಬಿಕೆಯಲ್ಲಿ ಅಂಗೈಯಲ್ಲಿ ತುರಿಕೆ ಉಂಟಾದರೆ ಹಣ ಬರುವ ಸಾಧ್ಯತೆಗಳಿವೆ ಅಂತ ಹೇಳಲಾಗುತ್ತದೆ. ಈ ಕೆಲವು ಶುಭ ಶಕುನಗಳು ಯಾವುವು ಅಂತ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಅಂಗೈ ತುರಿಕೆ ಏನು ಅರ್ಥ ಕೊಡುತ್ತದೆ?
ಕೈಯಲ್ಲಿ ಎಂದರೆ ಅಂಗೈಯಲ್ಲಿ ಉಂಟಾಗುವ ತುರಿಕೆಯು ನೀವು ಹಣವನ್ನು ಗಳಿಸುತ್ತೀರಿ ಅಥವಾ ಕಳೆದು ಕೊಳ್ಳುತ್ತೀರಿ ಎಂಬುದರ ಸಂಕೇತವಾಗಿದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಮಹಿಳೆಯರ ಕೈಗಳು ಮತ್ತು ಪುರುಷರ ಕೈಗಳಿಗೆ ಇದು ವಿಭಿನ್ನವಾಗಿದೆ ಎಂದು ಹೇಳಬಹುದು.
ಶಕುನ ಶಾಸ್ತ್ರದಲ್ಲಿ ಕೈಗಳ ತುರಿಕೆಯ ಬಗ್ಗೆ ವಿವರವಾಗಿ ವಿವರಿಸಲಾಗಿದೆ. ಯಾವ ಕೈ ಶುಭವಾಗಿದೆ ಮತ್ತು ಯಾವ ಕೈ ಅಶುಭವಾಗಿದೆ ಎಂದು ಇದು ತುರಿಕೆಯನ್ನು ಬಹಿರಂಗಪಡಿಸುತ್ತದೆ. ನಿಮ್ಮ ಕೈಗಳಲ್ಲಿ ಪದೇ ಪದೇ ತುರಿಕೆ ನಿಮ್ಮ ಅದೃಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
ನಿಮ್ಮ ಎಡಗೈ ತುರಿಕೆಯಾದರೆ ಏನು ಅರ್ಥ?
ನಿಮ್ಮ ಎಡಗೈಯಲ್ಲಿ ತುರಿಕೆ ಇದ್ದರೆ, ನೀವು ಹಣವನ್ನು ಗಳಿಸಲಿದ್ದೀರಿ ಎಂದರ್ಥ. ಇದು ಅದೃಷ್ಟದ ಕಡೆಗೆ ಬೊಟ್ಟು ಮಾಡುತ್ತದೆ. ಹಣವು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನು ಬಂದು ತಲುಪುತ್ತದೆ.
ಮತ್ತೊಂದೆಡೆ, ಎಡಗೈಯನ್ನು ಕೆರೆದುಕೊಳ್ಳುವುದರಿಂದ ಹಣದ ನಷ್ಟಕ್ಕೂ ಸಹ ಇದು ಕಾರಣವಾಗುತ್ತದೆ ಎಂದು ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ನಂಬಲಾಗಿದೆ.
ಆದ್ದರಿಂದ, ನೀವು ನಿಮ್ಮ ಎಡಗೈಯನ್ನು ಕೆರೆದುಕೊಂಡರೆ, ನಿಮ್ಮ ಕೆಲಸದ ಬಗ್ಗೆ ಜಾಗರೂಕರಾಗಿರಿ. ಇದರರ್ಥ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ ಎಂದರ್ಥ.
ಇದನ್ನೂ ಓದಿ: Palmistry: ಈ ವಸ್ತುಗಳನ್ನು ಕೊಡುವಾಗ ಅಪ್ಪಿ-ತಪ್ಪಿಯೂ ಅಂಗೈ ಮೇಲಿಡಬೇಡಿ!
ನಿಮ್ಮ ಬಲಗೈ ತುರಿಕೆಯಾದರೆ ಅರ್ಥ ಏನು?
ಒಬ್ಬ ವ್ಯಕ್ತಿಯ ದೇಹದ ಬಲಭಾಗದಲ್ಲಿ ಅಥವಾ ಬಲಗೈಯಲ್ಲಿ ನಿರಂತರವಾಗಿ ತುರಿಕೆ ಆಗುತ್ತಿದ್ದರೆ, ಅದು ಭವಿಷ್ಯದ ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಆದ್ದರಿಂದ ತುರಿಕೆ ಇದ್ದಾಗ ಗೀಚಬೇಡಿ. ಅದೇ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಇದು ಸಂಪೂರ್ಣ ವ್ಯತಿರಿಕ್ತವಾಗಿದೆ. ಇದರ ಪ್ರಕಾರ, ಬಲಗೈಯಲ್ಲಿ ತುರಿಕೆಯು ಸಂಪತ್ತನ್ನು ನೀಡುತ್ತದೆ.
ಎಡ ಅಂಗೈ ತುರಿಕೆಯಾದಾಗ ಲಕ್ಷ್ಮಿ ದೇವಿ ದೂರ ಹೋಗ್ತಾಳೆ
ಹಿಂದೂ ಧರ್ಮದ ಪ್ರಕಾರ, ಲಕ್ಷ್ಮಿ ದೇವಿಯು ಸಂಪತ್ತು, ಫಲವತ್ತತೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತಾಳೆ. ಆದ್ದರಿಂದ, ಎಡ ಅಂಗೈ ತುರಿಕೆಯಾದಾಗ, ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಜನರು ನಂಬುತ್ತಾರೆ.
ಇದನ್ನೂ ಓದಿ: Palmistry: ಅಂಗೈಯಲ್ಲಿ ಈ ರೇಖೆ ಹೊಂದಿರುವ ಈ ರಾಶಿಯವರು ಅದೃಷ್ಟವಂತರು
ಆದ್ದರಿಂದ, ನೀವು ಹಣವನ್ನು ಕಳೆದು ಕೊಳ್ಳುವಿರಿ ಅಥವಾ ಅದನ್ನು ಖರ್ಚು ಮಾಡುತ್ತೀರಿ ಎಂದು ಅರ್ಥ ಬರುತ್ತದೆ. ಆದಾಗ್ಯೂ, ಎಡಗೈ ತುರಿಕೆಯ ಅರ್ಥವು ಹೆಣ್ಣು ಮಕ್ಕಳಿಗೆ ವಿಭಿನ್ನವಾದ ಅರ್ಥವನ್ನೇ ಕೊಡುತ್ತದೆ.
ಎಡ ಅಂಗೈ ತುರಿಕೆ ಮಹಿಳೆಯರಿಗೆ ಅದೃಷ್ಟ
ಎಡ ಅಂಗೈ ತುರಿಕೆ ಹೆಣ್ಣು ಮಕ್ಕಳಿಗೆ ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ, ಆದರೆ ಬಲಗೈ ತುರಿಕೆ ಎಂದರೆ ಹೆಣ್ಣು ಮಕ್ಕಳು ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ ಎಂಬ ಅರ್ಥ ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ