ಮಹಾಭಾರತ (Mahabharata) ಒಂದು ಮಹಾಕಾವ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುವ ಈ ಮಹಾಭಾರತದಲ್ಲಿ ಒಂದೊಂದು ಘಟನೆಯೂ ಬಹಳ ಮುಖ್ಯ. ಈ ಮಹಾಭಾರತ ದೊಡ್ಡ ಸಾಗರ ಎನ್ನಬಹುದು. ಇದರಲ್ಲಿ ಕಥೆಯೊಳಗೆ (Story) ಕಥೆ ಇರುತ್ತದೆ. ಒಂದೊಂದು ನಮ್ಮ ಜೀವನಕ್ಕೆ ಪಾಠ (lesson) ಆಗುತ್ತದೆ. ಹಾಗೆಯೇ ಈ ಮಹಾಭಾರತದಲ್ಲಿ ಬರುವ ಒಂದು ಕಥೆ ಅರಗಿನ ಅರಮನೆಯದ್ದು. ಪಾಂಡವರ ವಿರುದ್ದ ಕೌರವರು ಮಾಡಿದ ಕೆಟ್ಟ ಕುತ್ರಂತದಿಂದ ಹೇಗೆ ಪಾರಾದರು ಎಂಬುದು ಬಹಳ ವಿಶೇಷ. ಇಷ್ಟಕ್ಕೂ ಏನಿದು ಅರಗಿನ ಅರಮನೆ, ಇದರ ಕಥೆಯೇನು ಎಂಬುದು ಇಲ್ಲಿದೆ.
ಅರಗಿನ ಅರಮನೆ ಕಥೆ
ಮೇಣದ ಅರಮನೆಯ ಕಥೆಯು ಮಹಾಭಾರತದ ಆದಿ ಪರ್ವದಲ್ಲಿ ಬರುತ್ತದೆ. ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರ ನಡುವಿನ ಸಂಬಂಧ ಹೇಗಿತ್ತು ಎಂಬುದಕ್ಕೆ ಇದು ಒಂದು ಉದಾಹರಣೆಯಷ್ಟೆ.
ಕೌರವ ಮತ್ತು ಪಾಂಡವರು ಹಸ್ತಿನಾಪುರದಲ್ಲಿ ವಾಸಿಸುತ್ತಿದ್ದರು. ಪಾಂಡವರು ತಮ್ಮ ನಡತೆ ಮತ್ತು ಉತ್ತಮ ಗುಣಗಳಿಂದ ಪ್ರಜೆಗಳಿಗೆ ಇಷ್ಟವಾಗಿದ್ದರು. ಇದು ದುರ್ಯೋಧನ ಮತ್ತು ಇತರ ಕೌರವ ಸಹೋದರರಲ್ಲಿ ಅಸೂಯೆಯನ್ನು ಹುಟ್ಟುಹಾಕಿತ್ತು. ಹಾಗಾಗಿ ಅವರನ್ನು ಇಲ್ಲಿಂದ ದೂರ ಕಳಿಸಬೇಕು ಎಂದು ಯೋಜನೆ ಮಾಡುತ್ತಿದ್ದರು. ಅದರಲ್ಲೂ ಅವರನ್ನು ಸಾಯಿಸಲು ಈ ಬಾರಿ ಹೊಸ ಪ್ಲ್ಯಾನ್ ಮಾಡಿದ್ದರು.
ಅದರಂತೆ ಹಸ್ತನಾವತಿಯಿಂದ ಅವರನ್ನು ದೂರ ಕಳುಹಿಸಲು ತನ್ನ ತಂದೆಯನ್ನು ಒಪ್ಪಿಸಿ ಶಿವ ಪೂಜೆಯ ನೆಪದಲ್ಲಿ ಪಾಂಡವರಿಗೆ ವಾರಣಾವತ ಎನ್ನುವ ಸ್ಥಳಕ್ಕೆ ಕಳುಹಿಸುತ್ತಾರೆ. ದೃತರಾಷ್ಟ್ರ ಪಾಂಡವರನ್ನು ಕರೆದು ಹೋಗಿ ದೇವರ ಪೂಜೆ ಮಾಡಿ ಬನ್ನಿ ಎಂದರೆ ಧರ್ಮರಾಯನಿಗೆ ಸಂಚಿನ ಅನುಮಾನ ಬಂದರೂ ಹೋಗಲು ಒಪ್ಪಿಗೆ ಸೂಚಿಸುತ್ತಾನೆ.
ಹಾಗೆಯೇ ಇತ್ತ ದುರ್ಯೋಧನ ಪುರೋಚನ ಎನ್ನುವ ಶಿಲ್ಪಿಯನ್ನು ಕರೆದು, ಮೇಣದಿಂದ ಅರಮನೆ ತಯಾರಿಸುವಂತೆ ಆದೇಶ ನೀಡುತ್ತಾನೆ. ಆ ಅರಮನೆಗೆ ಸ್ವಲ್ಪ ಬೆಂಕಿ ತಗುಲಿದರೂ ದೊಡ್ಡ ಅಪಾಯವಾಗುವ ರೀತಿ ನಿರ್ಮಿಸಲಾಗುತ್ತದೆ. ಧೃತರಾಷ್ಟ್ರ ಕೂಡ ಪಾಂಡವರಿಗೆ ಅದೇ ಅರಮನೆಯಲ್ಲಿ ವಾಸಿಸುವಂತೆ ಹೇಳುತ್ತಾನೆ. ಯಾವುದೇ ಸಂಚಿನ ಅರಿವಿಲ್ಲದ ಪಾಂಡವರು ವಾರಣಾವತಕ್ಕೆ ಹೋಗುತ್ತಾರೆ.
ಇದನ್ನೂ ಓದಿ: ಉಪಾಯ ಬಲ್ಲವನಿಗೆ ಅಪಾಯವಿಲ್ಲ, ಹುಲಿಯಿಂದ ಪಾರಾದ ಅಜ್ಜಿಯೊಬ್ಬಳ ಕಥೆ
ವಿಧುರದಿಂದ ಪಾರಾದ ಪಾಂಡವರು
ಆದರೆ ಈ ಎಲ್ಲದರ ಮಧ್ಯೆ ವಿಧುರನಿಗೆ ಮಾತ್ರ ಈ ಸಂಚಿನ ಬಗ್ಗೆ ಮಾಹಿತಿ ತಿಳಿದಿದ್ದು, ಹಾಗಾಗಿ ಹೇಗಾದರೂ ಮಾಡಿ ಪಾಂಡವರನ್ನು ರಕ್ಷಿಸಬೇಕು ಎಂದು ನಿರ್ಧಾರ ಮಾಡಿ, ತನಗೆ ಗೊತ್ತಿರುವ ಶಿಲ್ಪಿಯನ್ನು ಕಳುಹಿಸಿ, ಆ ಅರಮನೆಯಲ್ಲಿ ಯಾರಿಗೂ ತಿಳಿಯದ ರೀತಿ ಸುರಂಗ ನಿರ್ಮಾಣ ಮಾಡಿಸುತ್ತಾನೆ. ಹಾಗೆಯೇ ಈ ಸಂಚಿನ ಬಗ್ಗೆ ಪಾಂಡವರಿಗೆ ಮಾಹಿತಿ ನೀಡಿ, ತಪ್ಪಿಸಿಕೊಳ್ಳುವ ಮಾರ್ಗವನ್ನು ಸಹ ತಿಳಿಸುತ್ತಾನೆ.
ಇದನ್ನು ತಿಳಿದು ಪಾಂಡವರು ಗಾಭರಿಗೊಂಡರೂ ಸಹ ಏನೂ ಅರಿಯದವರಂತೆ ಹಸ್ತಿನಾವತಿಯಿಂದ ಹೊರಡುತ್ತಾರೆ. ದುರ್ಯೋಧನನ ಯೋಜೆ ಪ್ರಕಾರ ಪಾಂಡವರು ನಿದ್ರೆ ಮಾಡುವ ಸಮಯದಲ್ಲಿ ಅರಮನೆಗೆ ಬೆಂಕಿ ಹಚ್ಚಿ ಅವರನ್ನು ಸಾಯಿಸಲು ಎಲ್ಲಾ ಸಿದ್ಧತೆಗಳು ನಡೆದಿರುತ್ತದೆ. ಆದರೆ ಸ್ವಲ್ಪ ಹೊತ್ತು ನಿದ್ರೆ ಮಾಡಿದಂತೆ ನಟಿಸಿದ ಪಾಂಡವರು ಆ ರಹಸ್ಯ ಸುರಂಗದ ಮೂಲಕ ತಪ್ಪಿಸಿಕೊಳ್ಳುತ್ತಾರೆ.
ಈ ಸಮಯದಲ್ಲಿ ಆ ಊರಿನ ಕಾರ್ಯಕ್ರಮಕ್ಕೆ ಬಂದಿದ್ದ 5 ಮಕ್ಕಳು ಹಾಗೂ ತಾಯಂದಿರು ವಿಶ್ರಾಂತಿ ಪಡೆಯಲು ಈ ಸ್ಥಳಕ್ಕೆ ಬಂದು ಮಲಗುತ್ತಾರೆ. ದುರಾದೃಷ್ಟವಶಾತ್ ಕೌರವರು ಹಚ್ಚಿದ ಬೆಂಕಿಗೆ ಆ ಮಕ್ಕಳು ಹಾಗೂ ತಾಯಿ ಸಾವನ್ನಪುತ್ತಾರೆ. ಆದರೆ ಕೌರವರು ಮಾತ್ರ ಪಾಂಡವರು ತೀರಿಕೊಂಡು ಎಂದು ತಿಳಿದು ಸಂಭ್ರಮಿಸುತ್ತಾರೆ.
ಇದನ್ನೂ ಓದಿ: ಸೀತೆಯ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಜಟಾಯುವಿನ ಕಥೆ ಇದು
ಇದೇ ರೀತಿ ಹಲವಾರಿ ಬಾರಿ ಕೌರವರು ಕುತಂತ್ರದಿಂದ ಪಾಂಡವರನ್ನು ಸಾಯಿಸಲು ಪ್ರಯತ್ನಿಸಿದರೂ ಸಹ ಕೊನೆಗೆ ಯುದ್ಧದಲ್ಲಿ ಗೆದ್ದು ಬೀಗಿದ್ದು ಮಾತ್ರ ಕುಂತಿ ಪುತ್ರರೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ