• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology Tips: ಈ ಅಭ್ಯಾಸಗಳನ್ನು ಪ್ರತಿಯೊಂದು ರಾಶಿಯವರು ಬದಲಾಯಿಸಿಕೊಂಡರೆ ಒಳ್ಳೆಯದಂತೆ!

Astrology Tips: ಈ ಅಭ್ಯಾಸಗಳನ್ನು ಪ್ರತಿಯೊಂದು ರಾಶಿಯವರು ಬದಲಾಯಿಸಿಕೊಂಡರೆ ಒಳ್ಳೆಯದಂತೆ!

ಜ್ಯೋತಿಷ್ಯ ಸಲಹೆಗಳು

ಜ್ಯೋತಿಷ್ಯ ಸಲಹೆಗಳು

ಯಾವೆಲ್ಲ ರಾಶಿಯವರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅಂತ ತಿಳಿಯಿರಿ. ಜೀವನ ಫುಲ್​ ಖುಷಿಯಾಗಿರುತ್ತೀರ.

  • Share this:

ಜೀವನ (Life) ಅನೇಕ ರೀತಿಯ ಪಾಠಗಳನ್ನು ಕಲಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಮತ್ತು ಮನುಷ್ಯ ಹುಟ್ಟಿನಿಂದ ಸಾಯೋತನಕ ಪ್ರತಿದಿನ ಒಂದು ಹೊಸದನ್ನು ಕಲಿಯುತ್ತಲೇ ಇರುತ್ತಾನೆ ಅಂತ ಹೇಳಬಹುದು. ಕೆಲವು ಗುಣಗಳು ನಮಗೆ ಹುಟ್ಟಿನಿಂದಲೇ ಬಂದಿದ್ದರೆ, ಇನ್ನೂ ಕೆಲವು ಗುಣಗಳನ್ನು ಇಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವ ಜನರನ್ನು ನೋಡಿ ಕಲಿತಿರುತ್ತೇವೆ ಅಂತ ಹೇಳಬಹುದು. ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು(Problems) ಬಗೆಹರಿಸಲು ಅನೇಕ ಗುಣಗಳನ್ನು ನಾವು ಕಲಿತಿರುತ್ತೇವೆ. ಇಲ್ನೋಡಿ. ರಾಶಿಗೆ ಅನುಗುಣವಾಗಿಯೇ ಯಾವ ಒಂದು ಗುಣವನ್ನು ಅವರು ರೂಢಿಸಿಕೊಳ್ಳಬೇಕೆಂಬುದನ್ನು ಇಲ್ಲಿ ತಿಳಿಸಲಾಗಿದೆ.


ಮೇಷ ರಾಶಿ: ಜೀವನದಲ್ಲಿ ಸ್ನೇಹ ಮತ್ತು ಸ್ನೇಹಿತರು ತುಂಬಾನೇ ಮುಖ್ಯವಾಗುತ್ತಾರೆ. ಹಾಗಾಗಿ ಮೇಷ ರಾಶಿಯವರು ಕೇವಲ ಸಮಯ ಬಂದಾಗ ಸ್ನೇಹಿತರನ್ನು ಹುಡುಕುವ ಬದಲು, ಅವರೊಂದಿಗೆ ಒಂದು ನಿರಂತರವಾದ ಒಡನಾಟವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಅಗತ್ಯವಿರುವ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಇದ್ದೀರಿ ಎಂದು ಅವರಿಗೆ ಅನ್ನಿಸಲಿ.


ವೃಷಭ ರಾಶಿ: ನೀವು ಮಾನಸಿಕವಾಗಿ ತುಂಬಾನೇ ಸದೃಡರಾಗಿದ್ದರೂ ಸಹ ಕೆಲವೊಮ್ಮೆ ನಿಮ್ಮನ್ನು ನೀವು ಗೌರವಿಸಿಕೊಳ್ಳುವುದನ್ನು ನೀವು ನಿರ್ಲಕ್ಷಿಸುತ್ತೀರಿ.


ನಿಮ್ಮ ಬಗ್ಗೆ ಕಾಳಜಿ ವಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ನೆಚ್ಚಿನ ಚಲನಚಿತ್ರವನ್ನು ನೋಡಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡಿ.


ಮಿಥುನ ರಾಶಿ: ಈ ರಾಶಿಯವರು ಇತರರನ್ನು ನಂಬುವುದು ಕಷ್ಟ, ಆದರೆ ಕೆಲವೊಮ್ಮೆ ಅವರನ್ನು ನಂಬದೇ ಅವರಿಗೆ ನೋವುಂಟು ಮಾಡಿರುತ್ತೀರಿ. ಮಿಥುನ ರಾಶಿಯವರು ತಮ್ಮ ಅನುಭವಗಳಿಂದ ಕಲಿಯುತ್ತಾರೆ, ಆದರೆ ನಿಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬರ ಬಗ್ಗೆಯೂ ಅದೇ ರೀತಿಯಾಗಿ ಯೋಚಿಸುವುದು ಸರಿಯಲ್ಲ. ಹೊಸ ಜನರಿಗೆ ಒಂದು ಅವಕಾಶ ನೀಡಿ, ಬಹುಶಃ ಅವರು ತುಂಬಾನೇ ಒಳ್ಳೆಯವರಾಗಿರಬಹುದು.


ಕರ್ಕ ರಾಶಿ: ಕರ್ಕಾಟಕ ರಾಶಿಯವರು ಸ್ವಲ್ಪ ಯೋಗಾಭ್ಯಾಸ ಮಾಡುವುದು ಒಳ್ಳೆಯದು, ಏಕೆಂದರೆ ಇವರ ಭಾವನೆಗಳು ಯಾವಾಗಲೂ ಉತ್ತುಂಗದಲ್ಲಿರುತ್ತವೆ ಅಂತ ಹೇಳಬಹುದು.


ನೀವು ನಿಮ್ಮನ್ನು ಶಾಂತಗೊಳಿಸಬೇಕು ಮತ್ತು ಈ ಆಧುನಿಕ ಜಗತ್ತಿನಲ್ಲಿ ಸ್ವಲ್ಪ ಪ್ರಾಯೋಗಿಕವಾಗಿರಬೇಕು. ಪ್ರತಿದಿನ ಬೆಳಿಗ್ಗೆ ಸ್ವಲ್ಪ ಧ್ಯಾನ ಮಾಡಿ ಮತ್ತು ಇಂಪಾದ ಸಂಗೀತವನ್ನು ಕೇಳುತ್ತಾ ಸ್ವಲ್ಪ ವಿಶ್ರಾಂತಿ ಪಡೆಯಿರಿ.


ಸಿಂಹ ರಾಶಿ: ಸಿಂಹರಾಶಿಯವರು ಕೆಲಸಗಳನ್ನು ಮುಂದೂಡುವುದು ಜಾಸ್ತಿ ಅಂತ ಹೇಳಬಹುದು. ಹೀಗೆ ಆಮೇಲೆ ಮಾಡುತ್ತೇನೆ, ಮಾಡಿದರಾಯ್ತು ಅನ್ನೋ ನಡುವಳಿಕೆ ನಿಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ.


ಕೆಲಸಗಳನ್ನು ಮುಂದೂಡುವ ಬದಲಿಗೆ ಸಿಂಹ ರಾಶಿಯವರು ಮಾಡಬೇಕಾದ ಕೆಲಸಗಳನ್ನು ಸಣ್ಣದಾಗಿ ಶುರು ಮಾಡಿಕೊಳ್ಳುವುದು ಒಳ್ಳೆಯದು.


ಕನ್ಯಾ ರಾಶಿ: ಇವರು ತಮ್ಮ ಜೀವನಕ್ಕಿಂತಲೂ ಹೆಚ್ಚಾಗಿ ಬೇರೆಯವರ ಜೀವನದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ನಿಮ್ಮ ಬಗ್ಗೆ ನೀವು ಸ್ವಲ್ಪ ಯೋಚಿಸಿಕೊಳ್ಳಿ ಅಂತ ಕನ್ಯಾ ರಾಶಿಯವರಿಗೆ ಹೇಳಬಹುದು.


ಇದನ್ನೂ ಓದಿ: ಬೇಸಿಗೆಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿದರೆ ಧನ ಯೋಗ ಪ್ರಾಪ್ತಿ ಫಿಕ್ಸ್


ನಿಮ್ಮಿಂದ ಏನನ್ನು ನಿಯಂತ್ರಿಸಲು ಸಾಧ್ಯವಿಲ್ಲವೊ, ಅಂತಹದರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಯಾವ ಸಂದರ್ಭದಲ್ಲಿ ಬೇರೆಯವರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿ, ನಿಮ್ಮ ಬಗ್ಗೆ ಯೋಚಿಸಬೇಕು ಎಂಬುದನ್ನು ಈ ರಾಶಿಯವರು ತಿಳಿದುಕೊಳ್ಳುವುದು ಉತ್ತಮ.


ತುಲಾ ರಾಶಿ: ಈ ರಾಶಿಯವರು ಕರಕುಶಲತೆಯನ್ನು ತುಂಬಾನೇ ಇಷ್ಟಪಡುತ್ತಾರೆ, ಆದರೆ ಇದರಲ್ಲಿ ತಮ್ಮ ಸಾಮರ್ಥ್ಯವನ್ನು ಎಂದಿಗೂ ಹಾಕಿರುವುದಿಲ್ಲ. ನಿಮ್ಮ ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಕಲು ಕಲಾತ್ಮಕವಾದದನ್ನು ನೀವು ಪ್ರಯತ್ನಿಸುವುದು ಒಳ್ಳೆಯದು ಅಂತ ಹೇಳಬಹುದು.


ವೃಶ್ಚಿಕ ರಾಶಿ: ಈ ರಾಶಿಯವರು ಬೇರೆಯವರ ಜೊತೆ ಸ್ಪರ್ಧಿಸುವ ಭರದಲ್ಲಿ ಅವರ ಜೀವನದ ಗುರಿಗಳನ್ನು ಮರೆತು ಬಿಡುತ್ತಾರೆ. ನಿಮಗಾಗಿ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಅವುಗಳನ್ನು ಹಿಂಬಾಲಿಸಿ.


ಇತರರೊಂದಿಗೆ ಸ್ಪರ್ಧಿಸುವ ಭರದಲ್ಲಿ ನೀವು ಯಾವ ಮಾರ್ಗದಲ್ಲಿ ಹೋಗುತ್ತಿರುವಿರಿ ಎಂದು ನಿಮಗೆ ಕೆಲವೊಮ್ಮೆ ತಿಳಿದಿಲ್ಲದಿರಬಹುದು. ಹೀಗಾಗಿ, ನಿಮ್ಮ ಜೀವನದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿ.


ಧನು ರಾಶಿ: ವಿಷಯಗಳನ್ನು ಪ್ರಾಯೋಗಿಕವಾಗಿ ಯೋಚನೆ ಮಾಡುವುದು ನೀವು ಕಲಿತರೆ ಒಳ್ಳೆಯದು. ಧನು ರಾಶಿಯವರು ಆಶಾವಾದಿಗಳಾಗಿರುತ್ತಾರೆ ಮತ್ತು ಹೆಚ್ಚು ವಿಶ್ವಾಸಾರ್ಹ ಸ್ವಭಾವದವರಾಗಿರುತ್ತಾರೆ, ಇದು ಅವರನ್ನು ಅವರಿಗೆ ಅರಿವಿಲ್ಲದಂತೆಯೇ ಆಗಾಗ್ಗೆ ತೊಂದರೆಗೆ ಸಿಲುಕಿಸುತ್ತದೆ.


ಮಕರ ರಾಶಿ: ನೀವು ನಿಮ್ಮ ಕೆಲಸವನ್ನು ಯೋಜಿಸಿದಂತೆ, ನಿಮ್ಮ ಮೋಜಿನ ಸಮಯವನ್ನು ಸಹ ಯೋಜಿಸಲು ಪ್ರಯತ್ನಿಸಿ. ಜೀವನವನ್ನು ಆನಂದಿಸಲು ಮತ್ತು ಅದರಿಂದ ಬೇಸರವಾಗದಂತೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಮೋಜಿನ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ.




ಕುಂಭ ರಾಶಿ: ಕೆಲವೊಮ್ಮೆ ನೀವು ಬೇರೆ ಜನರಿಗಾಗಿ ಇರಲು ಕಲಿಯಿರಿ, ಏಕೆಂದರೆ ನೀವು ಅವರಿಂದ ಅದನ್ನೇ ನಿರೀಕ್ಷಿಸುತ್ತೀರಿ. ನಿಮ್ಮ ಜೀವನವನ್ನು ಆನಂದಿಸಿ ಆದರೆ ನೀವು ಸಂಬಂಧಗಳನ್ನು ರೂಪಿಸಿದಾಗ, ನೀವು ಅವರೊಡನೆ ಸದಾ ಇರುತ್ತಿರಿ ಅಂತ ಅವರಿಗೆ ತೋರಿಸಿ.


ಮೀನ ರಾಶಿ: ಸಂದರ್ಭದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಿರಿ, ಬಹಳಷ್ಟು ಬಾರಿ ನೀವು ನಿಮ್ಮ ದೃಷ್ಟಿಕೊನವೇ ಸರಿ ಅಂತ ಅಂದುಕೊಳ್ಳುತ್ತೀರಿ. ನೀವು ಕೆಲವೊಮ್ಮೆ ಸರಿಯಾಗಿದ್ದರೂ, ಕೆಲವೊಮ್ಮೆ ಬೇರೊಬ್ಬರ ದೃಷ್ಟಿಕೋನವನ್ನು ಸಹ ಯೋಚಿಸಿ ನೋಡಬೇಕಾಗುತ್ತದೆ.

First published: