Vastu Tips: ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ, ಸಮೃದ್ದಿ ಹೆಚ್ಚತ್ತೆ

ಈ ಕೆಲ ವಸ್ತುಗಳನ್ನು ಹೊಸ ವರ್ಷದಂದು ತಂದರೆ ಮನೆಯ ಸುಖ ಸಮೃದ್ದಿ ಹೆಚ್ಚುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬರಲಿರುವ ಹೊಸ ವರ್ಷ (New Year) ಎಲ್ಲವೂ ಒಳಿತನ್ನು ಮಾಡಲಿ ಎಂಬುದಾಗಿ ಪ್ರತಿಯೊಬ್ಬರು ಬಯಸುತ್ತಾರೆ. ಕಳೆದ ವರ್ಷಗಳು ಸಂಕಷ್ಟ ಕಳೆದು ಹೊಸ ವರ್ಷ ಎಲ್ಲವೂ ಶುಭ ತರಲಿ ಎಂದು ಆಶಿಸುತ್ತೇವೆ. ಆ ರೀತಿ ಮಾಡಲು ಕೆಲವು ಮಾರ್ಪಡುಗಳನ್ನು ಮನೆ - ಮನದಲ್ಲಿ ಮಾಡುವುದು ಅವಶ್ಯ. ಅದರಲ್ಲೂ ವಾಸ್ತುಶಾಸ್ತ್ರವು (Vastu) ಮನೆ- ಮನಸ್ಸಿಗೆ ಸಾಕಷ್ಟು ಅಭಿವೃದ್ದಿಯನ್ನು ನೀಡುವುದರಿಂದ ಅವುಗಳನ್ನು ಅನುಸರಿಸುವುದು ಅವಶ್ಯ. ಇದೇ ಕಾರಣಕ್ಕೆ ಈ ಕೆಲ ವಸ್ತುಗಳನ್ನು ಹೊಸ ವರ್ಷದಂದು ತಂದರೆ ಮನೆಯ ಸುಖ ಸಮೃದ್ದಿ ಹೆಚ್ಚುತ್ತದೆ.

    ಆನೆಯ ಮೂರ್ತಿ: ಹೊಸ ವರ್ಷ ಪ್ರಾರಂಭವಾಗುವ ಮೊದಲು ಬೆಳ್ಳಿ ಬಣ್ಣದ ಲೋಹದ ಆನೆಯನ್ನು ಮನೆಯಲ್ಲಿ ತಂದು ಇರಿಸಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದು ಅದ್ಭುತ ಪರಿಣಾಮವನ್ನು ಹೊಂದಿದೆ. ರಾಹು ಮತ್ತು ಕೇತುಗಳ ಕೆಟ್ಟ ಪರಿಣಾಮ ಕೊನೆಗೊಳ್ಳುತ್ತದೆ, ಹಾಗೆಯೇ ವ್ಯಕ್ತಿಯ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಮುಂದುವರಿಯುತ್ತದೆ. ಆನೆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಮತ್ತು ಸಮೃದ್ಧಿ ಪ್ರತೀಕವಾಗಿದೆ

    ಲೋಹದ ಆಮೆ ತನ್ನಿ: ಲೋಹದ ಆಮೆಯನ್ನು ತನ್ನಿ. ಕೆಲವರು ಮಣ್ಣಿನ ಆಮೆ ಆಮೆ ಅಥವಾ ಮರದ ಆಮೆ ​​ತಂದು ಮನೆಯಲ್ಲಿ ಎಲ್ಲೆಂದರಲ್ಲಿ ಇಡುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನ ಲೋಹದಿಂದ ಮಾಡಿದ ಆಮೆ ​​ಮಂಗಳಕರ. ಇದನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ನಿವಾರಣೆಯಾಗುತ್ತದೆ.

    ನಗುವ ಬುದ್ಧ: ಹೊಸ ವರ್ಷದ ಶುಭ ಸಂದರ್ಭದಲ್ಲಿ ಮನೆ ಲಾಫಿಂಗ್ ಕೊಂಡು ತನ್ನಿ. ಅದನ್ನು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿಗೆ ಇರಿಸಿ. ಇದನ್ನು ಮನೆಯಲ್ಲಿ ಇರಿಸಿದರೆ ಹಣದ ಸಮಸ್ಯೆ ಎದುರಾಗುವುದಿಲ್ಲ

    ಸ್ವಸ್ತಿಕ್​ ಚಿತ್ರ: ಮನೆಯಲ್ಲಿ ಸ್ವಸ್ತಿಕ್ ಚಿತ್ರವನ್ನು ಇಟ್ಟುಕೊಳ್ಳುವುದು ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಪುರಾಣಗಳಲ್ಲಿ ಸ್ವಸ್ತಿಕವನ್ನು ಲಕ್ಷ್ಮಿ ಮತ್ತು ಗಣಪತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಸ್ವಸ್ತಿಕವು ಸಂಸ್ಕೃತದ 'ಸು' ಮತ್ತು 'ಅಸ್ತಿ' ಯಿಂದ ಬಂದಿದೆ, ಅಂದರೆ 'ಶುಭಕರ'. ಕುಟುಂಬ, ಸಂಪತ್ತು, ಆರೋಗ್ಯ ಸಂಬಂಧಿತ ಸಮಸ್ಯೆಗಳು ಸ್ವಸ್ತಿಕದೊಂದಿಗೆ ಕೊನೆಗೊಳ್ಳುತ್ತವೆ.

    ಇದನ್ನು ಓದಿ: ಜಾತಕದಲ್ಲಿನ ಈ ಐದು ದೋಷ ಭಾರೀ ಕೆಟ್ಟದು; ಏನಿದಕ್ಕೆ ಪರಿಹಾರ?

    ನವಿಲು ಗರಿ: ನವಿಲು ಗರಿಗಳನ್ನು ಸಹ ಬಹಳ ಮಂಗಳಕರ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಇವು ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ. ಆದರೆ ಮನೆಯಲ್ಲಿ ನವಿಲು ಗರಿಗಳ ಗುಚ್ಛವನ್ನು ಇಡಬಾರದು. ಇದರ ಬದಲಿಗೆ 1 ರಿಂದ 3 ನವಿಲು ಗರಿಗಳನ್ನು ಮಾತ್ರ ಇಡಬೇಕು.

    ಗೋಮತಿ ಚಕ್ರ: ಸಾಮಾನ್ಯ ಕಲ್ಲಿನಂತೆ ಕಾಣುವ ಗೋಮತಿ ಚಕ್ರವು ಅದ್ಭುತವಾಗಿ ಕಾಣುತ್ತದೆ.. ಗೋಮತಿ ನದಿಯಲ್ಲಿ ಕಾಣಸಿಗುವುದರಿಂದ ಇದನ್ನು ಗೋಮತಿ ಚಕ್ರ ಎಂದು ಕರೆಯುತ್ತಾರೆ. ಗೋಮತಿ ಚಕ್ರದ ಮನೆಯಲ್ಲಿರುವುದರಿಂದ ಯಾವುದೇ ರೀತಿಯ ಶತ್ರುಗಳ ಕಾಟ ಇರುವುದಿಲ್ಲ

    ಇದನ್ನು ಓದಿ: ಪ್ರತಿಯೊಬ್ಬರು ತಮ್ಮ ನಿಯಂತ್ರಣದಲ್ಲೇ ಇರಬೇಕು ಎಂದು ಬಯಸುವ ಡಾಮಿನೇಟ್​ ವ್ಯಕ್ತಿತ್ವ ಈ ರಾಶಿಯವರದು

    ಮೋತಿ ಶಂಖ: ಶಂಖವು ಹೆಚ್ಚಿನ ಜನರ ಮನೆಯಲ್ಲಿದ್ದರೂ, ದಕ್ಷಿಣದ ಶಂಖ ಮತ್ತು ಮುತ್ತಿನ ಶಂಖವು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಮೋತಿ ಶಂಖ ಸ್ವಲ್ಪ ಹೊಳೆಯುತ್ತದೆ. ಈ ಶಂಖವನ್ನು ಪೂಜಿಸಿ ಆರ್ಥಿಕ ಪರಿಸ್ಥಿತಿ ಅಭಿವೃದ್ದಿಯಾಗುತ್ತದೆ.

    ಗಿಳಿಯ ಚಿತ್ರ: ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ಗಿಳಿಯ ಚಿತ್ರವನ್ನು ಇಡುವುದರಿಂದ ಮಕ್ಕಳಲ್ಲಿ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ.ಇದರೊಂದಿಗೆ ಅವರ ನೆನಪಿನ ಶಕ್ತಿಯೂ ಹೆಚ್ಚುತ್ತದೆ. ಗಿಳಿ ಪ್ರೀತಿ, ನಿಷ್ಠೆ, ದೀರ್ಘಾಯುಷ್ಯ ಮತ್ತು ಅದೃಷ್ಟದ ಸಂಕೇತವಾಗಿದೆ. ಗಿಳಿ ಅದೃಷ್ಟದ ಸಂಕೇತವಾಗಿದೆ

    ಮನಿ ಪ್ಲಾಂಟ್​ ಅಥವಾ ತುಳಸಿ: ಹೊಸ ವರ್ಷದ ಸಂದರ್ಭದಲ್ಲಿ ಮನೆಯಲ್ಲಿ ಯಾವುದೇ ರೀತಿಯ ಒಳಾಂಗಣ ಸಸ್ಯವನ್ನು ನೆಟ್ಟರೆ ಅದು ಶುಭ. ಬೇಕಿದ್ದರೆ ತುಳಸಿ ಅಥವಾ ಮನಿ ಪ್ಲಾಂಟ್ ಕೂಡ ತರಬಹುದು. ಈ ಸಸ್ಯಗಳನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
    Published by:Seema R
    First published: