• Home
  • »
  • News
  • »
  • astrology
  • »
  • Om Shakti Temple: ಓಂ ಶಕ್ತಿ ದೇವಸ್ಥಾನಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ, 21 ಸಿದ್ದರು ಜೀವಂತ ಸಮಾಧಿಯಾದ ಸ್ಥಳ ಇದು

Om Shakti Temple: ಓಂ ಶಕ್ತಿ ದೇವಸ್ಥಾನಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ, 21 ಸಿದ್ದರು ಜೀವಂತ ಸಮಾಧಿಯಾದ ಸ್ಥಳ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Om Shakti: ಮೇಲ್ಮರುವತ್ತೂರಿನಲ್ಲಿರುವ ಪುಣ್ಯಕ್ಷೇತ್ರ ಅರುಲ್ಮಿಗು ಅಧಿಪರಾಶಕ್ತಿ ಸಿದ್ಧರ ಪೀಠ ಇದಾಗಿದ್ದು, ಇದಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸ (History) ಇದೆ. ಈ ಸ್ಥಳದ ಮಹತ್ವವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  

  • Share this:

ಮಕರ ಸಂಕ್ರಾಂತಿಯ (Makar Sankranthi) ಸಮಯದಲ್ಲಿ ಪುರುಷರು ಅಯ್ಯಪ್ಪ ಮಾಲೆಯನ್ನು ಹಾಕುವುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಮಹಿಳೆಯರು (Women) ಸಹ ಓಂ ಶಕ್ತಿ (Om Shakti) ಎನ್ನುವ ಮಾಲೆಯನ್ನು ಹಾಕುತ್ತಾರೆ ಹಾಗೂ ಶ್ರೀ ಕ್ಷೇತ್ರಕ್ಕೆ ಯಾತ್ರೆ ಸಹ  ಹೋಗುತ್ತಾರೆ. ತಮಿಳುನಾಡಿದ (Tamil Nadu)  ಮೇಲ್ಮರುವತ್ತೂರಿನಲ್ಲಿರುವ ಪುಣ್ಯಕ್ಷೇತ್ರ ಅರುಲ್ಮಿಗು ಅಧಿಪರಾಶಕ್ತಿ ಸಿದ್ಧರ ಪೀಠ ಇದಾಗಿದ್ದು, ಇದಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸ (History) ಇದೆ. ಈ ಸ್ಥಳದ ಮಹತ್ವವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  


21 ಸಿದ್ದರು ಜೀವಂತ ಸಮಾಧಿಯಾದ ಸ್ಥಳ ಇದು


ನಂಬಿಕೆಗಳ ಪ್ರಕಾರ ಈ ಸ್ಥಳದಲ್ಲಿ 21 ಸಿದ್ಧ ಪುರುಷರು ಮತ್ತು ಮಹಿಳೆಯರು ಜೀವಂತ ಸಮಾಧಿಯಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ನೆಲೆಸಿರುವ ಸಿದ್ಧರು ಹಲವಾರು ಸಮುದಾಯಕ್ಕೆ ಸೇರಿದವರಾಗಿದ್ದು ಎನ್ನಲಾಗುತ್ತದೆ.  ಆದರೆ ಇಲ್ಲಿ ಮಹಿಳೆ ಸಿದ್ದೆಯೊಬ್ಬರು ಶಾಶ್ವತವಾಗಿ ನೆಲೆಸಿದ್ದು, ಭಕ್ತ ಇಷ್ಟಾರ್ಥಗಳನ್ನು ಈಡೇರಿಸಿ, ಕಾಯುತ್ತಾಳೆ ಎನ್ನುವ ನಂಬಿಕೆ ಇದೆ.


ಇದನ್ನೂ ಓದಿ: ಒಂದು ತಿಂಗಳ ಮಟ್ಟಿಗೆ 3 ರಾಶಿಯವರು ಬಹಳ ಎಚ್ಚರದಿಂದಿರಿ, ಹಣ ಕಳೆದುಕೊಳ್ಳೋದು ಗ್ಯಾರಂಟಿ


ಅಲ್ಲದೇ ಇಲ್ಲಿ ಸಿದ್ದೆಯನ್ನು ಬಂಗಾರು ಆದಿಗಾಳರ್‌ರನ್ನು ಆದಿಶಕ್ತಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ, ಈ ದೇವಿ ಭಕ್ತರೊಂದಿಗೆ ಮಾತನಾಡುತ್ತಾಳೆ ಹಾಗೂ ಆಕೆಯ ಮಾತಿನಂತೆಯೇ ಭಕ್ತರು ನಡೆದುಕೊಳ್ಳುತ್ತಾರೆ.  ಸುಮಾರು 1960ರ ಸಮಯದಲ್ಲಿ ಈಗ ದೇವಾಲಯ ಇರುವ ಜಾಗದಲ್ಲಿ ದೊಡ್ಡ ಬೇವಿನ ಮರ ಇತ್ತಂತೆ. ಆ ಮರದಿಂದ ದ್ರವ ರೂಪದ ವಸ್ತು ಹೊರಬರುತ್ತಿತ್ತು. ಅದನ್ನು ಪರೀಕ್ಷಿಸಿದಾಗ ಕಹಿ ಇರಬೇಕಿದ್ದ ಬೇವಿನ ರಸ ಬಹಳ ಸಿಹಿಯಾಗಿತ್ತು. ಅಲ್ಲಿಗೆ ಬರುತ್ತಿದ್ದ ಜನ ಮರದ ಬಳಿ ಬಂದು ಅದರ ರುಚಿ ನೋಡುತ್ತಿದ್ದರು. ಇದನ್ನು ಸೇವಿಸಿದವರಿಗೆ ಅವರ ಆರೋಗ್ಯ ಸಮಸ್ಯೆಗಳೆಲ್ಲಾ ಗುಣವಾಗುತ್ತಿತ್ತು ಎನ್ನುವ ನಂಬಿಕೆ ಇದೆ.


ಪವಾಡ ಮಾಡಿತ್ತು ಆ ಬೇವಿನ ಮರ


ಕೇವಲ ಆ ಊರಿನ ಜನರು ಮಾತ್ರವಲ್ಲದೇ ಸುತ್ತ-ಮುತ್ತಲ ಊರಿನ ಜನರು ಸಹ ಈ ಮರದ ಬಳಿ ಬಂದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿದ್ದರು. ಜನರು ನಿಧಾನವಾಗಿ ಮರದ ದೈವಿಕ ಶಕ್ತಿ ಮತ್ತು ಅನುಗ್ರಹವನ್ನು ಅರಿತುಕೊಳ್ಳಲು ಪ್ರಾರಂಭಿಸಿದರು. ಇನ್ನು ಆ ಮರದ ಬಳಿ ಹಾವಿನ ಹುತ್ತವೊಂದು ಸಹ ಇತ್ತಂತೆ. ಇನ್ನು 1966 ರ ನವೆಂಬರ್ 28 ರಂದು ತಮಿಳುನಾಡಿನಲ್ಲಿ ಬಂದ ಚಂಡಮಾರುತದ ಕಾರಣದಿಂದ ಆ ಬೇವಿನ ಮರ ಬೇರು ಬಿಟ್ಟಿತ್ತು. ಈ ಸಮಯದಲ್ಲಿ ಬೇವಿನ ಮರದಲ್ಲಿದ್ದ ದ್ರವಗಳು ಸಹ ಊರಿನಾದ್ಯಂತ ಹರಿದು ಹೋಯಿತು ಎನ್ನಲಾಗುತ್ತದೆ. ಹಾಗಾಗಿ ಆ ಊರು ಸಹ ಬಹಳ ಪವಿತ್ರವಾಯಿತು ಎನ್ನಲಾಗುತ್ತದೆ.
ಇನ್ನು ಬೇವಿನ ಮರ ಬಿರುಕು ಬಿಟ್ಟ ಸಮಯದಲ್ಲಿ ಭೂಮಿಯಲ್ಲಿ ಅಂಡಾಕಾರದ ಸ್ವಯಂಭೂಲಿಂಗ ಪತ್ತೆಯಾಯಿತು, ಜನ ಅಲ್ಲಿಯೇ ಚಿಕ್ಕ ಗುಡಿಯನ್ನು ನಿರ್ಮಿಸಿ ಪೂಜಿಸಲು ಆರಂಭಿಸಿದರು. ನಂತರ 1977ರಲ್ಲಿ ಮೂರು ಅಡಿ ಉದ್ದದ, ಸಾವಿರ ದಳಗಳ ಕಮಲದ ಮೇಲೆ ಕುಳಿತ ಆದಿಪರಾಶಕ್ತಿ ದೇವಿಯನ್ನು ಸಹ ಇಲ್ಲಿ ಸ್ಥಾಪಿಸಲಾಯಿತು. ಪ್ರತಿವರ್ಷ ಲಕ್ಷಾಂತರ ಭಕ್ತರು ಮಾಲೆ ಧರಿಸಿ ಬಂದು ದೇವಿಯ ದರ್ಶನ ಪಡೆದು, ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳುತ್ತಾರೆ.


ಇದನ್ನೂ ಓದಿ: ಸಾಡೇಸಾತಿ ಕಾಟ ಇದ್ರೆ ಅಮಾವಾಸ್ಯೆ ದಿನ ಸಿಂಪಲ್ ಪರಿಹಾರ ಮಾಡಿ ಸಾಕು


ಇನ್ನು ಈ ಸ್ಥಳಕ್ಕೆ ಕೆಂಪು ಸಿರೆ ಉಟ್ಟು ಮಹಿಳೆಯರು ಡಿಸೆಂಬರ್‌ನಿಂದ ಫೆಬ್ರವರಿಯಲ್ಲಿ ಸಮಯದಲ್ಲಿ ದೇಶದ ಮೂಲೆ ಮೂಲೆಯಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.  ಈ ಮಾಲೆ ಧರಿಸಲು ಚಿಕ್ಕವರು, ದೊಡ್ಡವರು ಸೇರಿಸಂತೆ ಯಾವುದೇ ವಯಸ್ಸಿನ ಭೇದವಿಲ್ಲ. ಅಲ್ಲದೇ ಮೊದಲೇ ಹೇಳಿದಂತೆ ಓಂ ಶಕ್ತಿ ಮಾಲಾಧಾರಿಗಳು ಕೆಂಪು ಬಟ್ಟೆ ಧರಿಸುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಭಕ್ತರು ಸ್ವತಃ ಗರ್ಭಗುಡಿಯ ಒಳಗೆ ಹೋಗಿ ಪೂಜೆ ಮಾಡಬಹುದು. ಅಲ್ಲದೇ ಈ ದೇವಾಲಯದ ಹೆಸರಿನಲ್ಲಿ ಬೇರೆ ದೇಶಗಳಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ದೇವಸ್ಥಾನಗಳಿದೆ.

Published by:Sandhya M
First published: