• Home
  • »
  • News
  • »
  • astrology
  • »
  • Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 6 ಇದ್ರೆ ಹೊಸವರ್ಷ ಮಸ್ತ್ ಆಗಿರುತ್ತಂತೆ

Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 6 ಇದ್ರೆ ಹೊಸವರ್ಷ ಮಸ್ತ್ ಆಗಿರುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 6 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.

  • Share this:

ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope) ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 6 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.


ಸಂಖ್ಯೆ 6 ಎಂಬುದು 6, 15, 24 ರಂದು ಜನಿಸಿದ ಜನರ ಸಂಖ್ಯೆಯಾಗಿದ್ದು, ಇದು ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಈ ಜನರು ವೃತ್ತಿ ಜೀವನದಲ್ಲಿ ಯಶಸ್ಸನ್ನ ಗಳಿಸುತ್ತಾರೆ ಹಾಗೂ ಪ್ರೀತಿ ಮತ್ತು ಸಂಬಂಧದ ವಿಚಾರದಲ್ಲಿ ಸಹ ಸಮೃದ್ಧಿಯನ್ನು ಪಡೆಯುತ್ತಾರೆ. ಅಲ್ಲದೇ ವೈಯಕ್ತಿಕ ಬದುಕು ಹಾಗೂ ವೃತ್ತಿ ಜೀವನವನ್ನು ಸಮತೋಲನ ಮಾಡಿಕೊಂಡು ಹೋಗುವ ಗುಣ ಇವರಲ್ಲಿ ಇರುತ್ತದೆ.


ಹಾಗೆಯೇ, ತಮ್ಮ ಮನೆಯವರನ್ನು ಬಹಳ ಚೆನ್ನಾಗಿ, ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳುವ ಶಕ್ತಿ ಇವರಿಗೆ ಇರುತ್ತದೆ. ಇವರು ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿದ್ದರೆ, ಬಹಳ ನಂಬಿಕೆಯ ವ್ಯಕ್ತಿಗಳು ಎಂದು ಅನಿಸಿಕೊಳ್ಳುತ್ತಾರೆ. ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಲ್ಲದೇ, ಜೀವನಶೈಲಿಯ ವಿಚಾರದಲ್ಲಿ ಐಷಾರಾಮಿ ಜೀವನವನ್ನು ಬಹಳ ಇಷ್ಟಪಡುತ್ತಾರೆ. ಸಾಮಾಜಿಕ ಜೀವನದಲ್ಲಿ ಸಹ ಉತ್ತಮವಾದ ಹೆಸರನ್ನು ಗಳಿಸುತ್ತಾರೆ.


6 ನೇ ಸಂಖ್ಯೆಗೆ 2023 ವರ್ಷದಲ್ಲಿ ಬಹಳ ಒಳ್ಳೆಯದಾಗುತ್ತದೆ, ಜನವರಿ, ಫೆಬ್ರವರಿ, ಏಪ್ರಿಲ್, ಜುಲೈ, ಆಗಸ್ಟ್ ಮತ್ತು ಡಿಸೆಂಬರ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ವೃತ್ತಿ ಜೀವನ ಹೇಗಿರಲಿದೆ?


2023 ರಲ್ಲಿ  ಆರ್ಥಿಕವಾಗಿ ಬಹಳ ಬೆಳವಣಿಗೆಯಾಗಲಿದೆ. ವ್ಯವಹಾರದಲ್ಲಿ ನಿಮ್ಮ ಲಾಭಾಂಶ ಹೆಚ್ಚಾಗಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದು ಉತ್ತಮ, ಆದರೆ ಸಣ್ಣ-ಪುಟ್ಟ ತೊಂದರೆಗಳು ಉಂಟಾಗಬಹುದು. ಯಾವುದೇ ಯೋಜನೆಯಲ್ಲಿ ತೊಂದರೆಗಳು ಬಂದರೆ ಅದನ್ನು ನಿಲ್ಲಿಸುವುದು ಬಹಳ ಉತ್ತಮ.


ಇದನ್ನೂ ಓದಿ: ಹೊಸವರ್ಷದಲ್ಲಿ ಈ ರಾಶಿಗಳಿಗೆ ಶನಿ ಕಾಟ ತಪ್ಪಿದ್ದಲ್ಲ


ನೀವು ಬೇರೆಯವರ ಅಡಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ನಿಮ್ಮ ಕೆಲಸವನ್ನು ಪರೀಕ್ಷೆ ಮಾಡುವ ಹಲವಾರು ಸವಾಲುಗಳು ಎದುರಾಗುತ್ತವೆ. ಆದರೆ, ಅದರಲ್ಲಿ ನೀವು ಪಾಸ್​ ಆಗಿ ಗೆದ್ದು ಬರುವಿದರ ಜೊತೆಗೆ ಒಳ್ಳೆಯ ಹೆಸರು ಪಡೆಯುತ್ತೀರಿ. ಹೊಸ ಉದ್ಯೋಗದ ಅವಕಾಶ ಬಂದರೆ ಅದರಿಂದ ಲಾಭವಾಗಲಿದೆ. ದೇಶದೊಳಗಿನ ಉದ್ಯೋಗಕ್ಕಿಂತ ವಿದೇಶದಲ್ಲಿ ಹೆಚ್ಚಿನ ಬೆಳವಣಿಗೆ ಆಗುತ್ತದೆ. ಹಾಗೆಯೇ, ಇತರರ ಮೇಲಿನ ಕುರುಡು ನಂಬಿಕೆ ಕಡಿಮೆ ಆದರೆ ಯಶಸ್ಸಿನ ಬಾಗಿಲ ಕೀ ತೆರೆಯುತ್ತದೆ.


ವೈಯಕ್ತಿಕ ಬದುಕು ಹೇಗಿರಲಿದೆ?


ಈ ವರ್ಷ ಸಂಖ್ಯೆ 6ರಿನ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲವೊಮ್ಮೆ ತಪ್ಪು ನಿರ್ಧಾರ ಹಾಗೂ ಸರಿಯಾದ ಕಮ್ಯೂನಿಕೇಷನ್ ಆಗದ ಕಾರಣದಿಂದ ಕೆಲ ಸಂಬಂಧದಲ್ಲಿ ಸಮಸ್ಯೆಗಳು ಬರಬಹುದು. ಆದರೆ ಅವೆಲ್ಲವನ್ನು ಮೀರಿ ಈ ಸಮಯದಲ್ಲಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಒಳ್ಳೆಯ ಸಮಯ ಎನ್ನಬಹುದು. ನಿಮ್ಮ ಉದಾರ ಹೃದಯದ ಕಾರಣದಿಂದ ಎಲ್ಲಾ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹಾರವಾಗುತ್ತದೆ.


2023 ರಲ್ಲಿ, ನಿಮ್ಮ ಕುಟುಂಬವು ನಿಮಗೆ ಬೆಂಬಲ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾಜಿಕವಾಗಿ, ಜನರು ನಿಮ್ಮ ಬಗ್ಗೆ ಅಸೂಯೆಪಡುತ್ತಾರೆ. ಸಾಮಾಜಿಕ ಸ್ಥಾನಮಾನ ಹೆಚ್ಚಿಸುವ ಅನೇಕ ಅವಕಾಶಗಳು ನಿಮಗೆ ಸಿಗುತ್ತದೆ.


ಪರಿಹಾರ


ಶ್ರೀಕೃಷ್ಣ ಮತ್ತು ರಾಧೆಗೆ ತೆಂಗಿನಕಾಯಿಯನ್ನು ಅರ್ಪಿಸಿ


ಚರ್ಮದ ಉತ್ಪನ್ನಗಳ ಬದಲಿಗೆ ಬೆಳ್ಳಿ, ಗುಲಾಬಿ ಚಿನ್ನ ಮತ್ತು ವಜ್ರವನ್ನು ಧರಿಸಿ


ಯಾವಾಗಲೂ ಬಿಳಿ ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ


ಎಲ್ಲಾ ಶುಕ್ರವಾರಗಳಂದು ಲಕ್ಷ್ಮಿ ದೇವಿಯ ಆರಾಧನೆ ಮಾಡಿ


ನಾನ್ ವೆಜ್, ಮದ್ಯ, ತಂಬಾಕು ತಪ್ಪಿಸಿ


ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲಿ ಈ ಸಂಖ್ಯೆಗಳಿದ್ರೆ ನೀವೇ ಭವಿಷ್ಯ ಹೇಳ್ಬೋದು


ಅದೃಷ್ಟ ಬಣ್ಣ - ನೀಲಿ ಮತ್ತು ಗುಲಾಬಿ


ಅದೃಷ್ಟ ಸಂಖ್ಯೆ - 6 ಮತ್ತು 5


ಅದೃಷ್ಟದ ದಿಕ್ಕು - ಪೂರ್ವ ಮತ್ತು ಉತ್ತರ


ಅದೃಷ್ಟದ ದಿನ - ಶುಕ್ರವಾರ

Published by:Sandhya M
First published: