• Home
  • »
  • News
  • »
  • astrology
  • »
  • Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 4 ಇದ್ರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ 100 ಬಾರಿ ಯೋಚ್ನೆ ಮಾಡಿ

Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 4 ಇದ್ರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ 100 ಬಾರಿ ಯೋಚ್ನೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 4 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.

ಮುಂದೆ ಓದಿ ...
  • Share this:

ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope) ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 4 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.


ಸಂಖ್ಯೆ 4 ಎಂದರೆ 4, 13, 22, 31 ರಂದು ಜನಿಸಿದ ಜನರು ಸಂಖ್ಯೆ ಆಗಿದ್ದು, ಈ ಸಂಖ್ಯೆ 4 ರಾಹುವನ್ನು ಪ್ರತಿನಿಧಿಸುತ್ತದೆ. ಜನ್ಮ ದಿನಾಂಕದಲ್ಲಿ ಸಂಖ್ಯೆ 4 ಹೊಂದಿರುವ ಜನರು ತಮ್ಮ ಗುರಿಯನ್ನು ತಲುಪಲು ಯಾವುದೇ ರೀತಿಯ ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡಲು ತಯಾರಿರುತ್ತಾರೆ. ಈ ಸಂಖ್ಯೆಯ ಜನರು ಬೇರೆ ವ್ಯಕ್ತಿಗಳಿಂತ ನೂರು ಹೆಜ್ಜೆ ಮುಂದೆ ಇರುತ್ತಾರೆ.


ಈ ಸಂಖ್ಯೆಯ ಜನರು ಯಾವಾಗಲೂ ಭವಿಷ್ಯದ ಬಗ್ಗೆ ನೋಡಿಕೊಳ್ಳುತ್ತಾರೆ. ಹಿಂದಿನ ಘಟನೆಗಳ ಬಗ್ಗೆ ಯಾವಾಗಲೂ ಚಿಂತೆ ಮಾಡುವುದಿಲ್ಲ.  ಅವರಿಗೆ ಎಂದಿಗೂ ಮುಂದಿನ ಜೀವನದ ಬಗ್ಗೆ ಮಾತ್ರ ಅವರು ಚಿಂತನೆ ಮಾಡುತ್ತಾರೆ.


2023ರಲ್ಲಿ ವೃತ್ತಿ ಜೀವನ ಹೇಗಿರಲಿದೆ? 


ಸಂಖ್ಯೆ 4 ಅನ್ನು ಹೊಂದಿರುವ ಜನರು  ವ್ಯಾಪರಲದಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಈ ಸಂಖ್ಯೆಯವರಿಗೆ 2023 ಸಮೃದ್ಧಿ ಮತ್ತು ಆರ್ಥಿಕ ಲಾಭದ ವರ್ಷ ಎಂದರೆ ತಪ್ಪಲ್ಲ.  ಆದರೂ ಸಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು 100 ಬಾರಿ ಯೋಚನೆ ಮಾಡಿ, ಆಮೇಲೆ ನಿರ್ಧಾರ ತೆಗೆದುಕೊಳ್ಳಿ. ವೈಜ್ಞಾನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷವಾಗಿ ಲಾಭವಾಗಲಿದೆ.


ಇನ್ನು ಉಕ್ಕು, ಸಿಮೆಂಟ್, ಕಲ್ಲಿದ್ದಲು, ಇಟ್ಟಿಗೆಗಳು ಮತ್ತು ಇತರ ಯಂತ್ರಗಳನ್ನು ತಯಾರಿಸುವ ವ್ಯಾಪಾರ, ಆಮದು ರಫ್ತುಗಳ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಸಮಸ್ಯೆಗಳು ಬರಬಹುದು.  ನೀವು ವಿದೇಶದಲ್ಲಿ ಕಚೇರಿಯನ್ನು ಆರಂಭಿಸಲು ಅಥವಾ ವಿದೇಶದಲ್ಲಿ ಉದ್ಯೋಗವನ್ನು ಮಾಡಲು ಪ್ಲ್ಯಾನ್ ಮಾಡುತ್ತಿದ್ದರೆ ಇದು ಒಳ್ಳೆಯ ಸಮಯ ಎನ್ನಬಹುದು.


ಒಟ್ಟಾರೆಯಾಗಿ, 2023 ನಿಮಗೆ ಹಣ ಮತ್ತು ವ್ಯಾಪಾರದ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ.ಆದರೆ, 2023 ರ ಅಂತ್ಯದ ವೇಳೆಗೆ ಉಳಿತಾಯ ಕಡಿಮೆಯಾಗಬಹುದು, ಈ ಬಗ್ಗೆ ಎಚ್ಚರ ಇರಲಿ.


ವೈಯಕ್ತಿಕ ಬದುಕು ಹೇಗಿರಲಿದೆ?


2023 ರ ವರ್ಷದಲ್ಲಿ ನೀವು ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುವುದು ಕಡಿಮೆ ಆಗುತ್ತದೆ. ಇದರಿಂದ ಕೆಲ ತಪ್ಪು ಗ್ರಹಿಕೆಗಳು ಉಂಟಾಗುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ವಿವಾಹಿತ ದಂಪತಿಗಳು ಹೆಚ್ಚಿನ ಸಮಯ ಕಳೆಯುವುದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಒಂದು ಟ್ರಿಪ್ ಪ್ಲ್ಯಾನ್ ಮಾಡುವುದು ನಿಮಗೆ ಸಹಾಯ ಮಾಡಬಹುದು.
ಇದು ನಿಮ್ಮ ಹಾಗೂ ಸಂಗಾತಿಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ನಿವಾರಣೆಯಾಗುತ್ತದೆ. ಹಿಂದಿನ ಹಲವು ಸಮಸ್ಯೆಗಳಿಗೆ ಈ ಸಮಯದಲ್ಲಿ ಪರಿಹಾರ ಸಿಗುತ್ತದೆ. ಅವಿವಾಹಿತರಿಗಿಂತ ವಿವಾಹಿತರಿಗೆ ಇದು ಉತ್ತಮವಾದ ವರ್ಷವಾಗಿದೆ. ಒಟ್ಟಾರೆಯಾಗಿ ಸಂಖ್ಯೆ 4ರ ಜನರಿಗೆ ವೈಯಕ್ತಿಕ ಜನರಿಗೆ 2023 ರಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ.


ಸಾಮಾಜಿಕ ಜೀವನ


ಅಲ್ಲದೇ ಜನರು ನಿಮ್ಮ ಹೊಸ ಸಂಶೋಧನೆಯನ್ನು ಮೆಚ್ಚುವ ಸಾಧ್ಯತೆ ಇದೆ.  ನಿಮ್ಮ ಹೊಸ ಆಲೋಚನೆಗಳನ್ನು ಇಷ್ಟಪಡುವ ಕಾರಣ ಸಾಮಾಜಿಕ ಜೀವನವು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ವೈಯಕ್ತಿಕ ಜೀವನ ಹಾಗೂ ಕೆಲಸ ನಡುವೆ ಸಿಲುಕಿಕೊಳ್ಳುತ್ತೀರಿ. ಇದು ಹತಾಶೆಗೆ ಕಾರಣವಾಗಬಹುದು ಮತ್ತು ನಿಮ್ಮ ಕುಟುಂಬದ ಮುಂದೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದಿರಬಹುದು.


ಇದನ್ನೂ ಓದಿ: ಕ್ರಿಸ್​ಮಸ್​ನಲ್ಲಿ ರಂಜಿಸಲು ಬರೋ ಸಾಂತಾ ಕ್ಲಾಸ್, ಮಕ್ಕಳ ಫೇವರಿಟ್​ ತಾತನ ಕಹಾನಿಯೂ ಬಹಳ ಇಂಟರೆಸ್ಟಿಂಗ್


2023ರಲ್ಲಿ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡಲು ಕುಟುಂಬ ಸಂಬಂಧಿತ ತೊಂದರೆಯನ್ನು ನಿರ್ವಹಿಸುವಾಹ ಶಾಂತವಾಗಿ ಮತ್ತು ತಾಳ್ಮೆಯಿಂದ ಇರುವುದು ಉತ್ತಮ. ಒಟ್ಟಾರೆಯಾಗಿ, 2023, ಹಣ ಸಂಪಾದಿಸುವ ಮತ್ತು ಸಾಮಾಜಿಕ ಸ್ಥಾನಮಾನವನ್ನು ಆನಂದಿಸುವ ವರ್ಷವಾಗಿದೆ ಎನ್ನಬಹುದು.


ಪರಿಹಾರ


ಪ್ರಾಣಿಗಳಿಗೆ ವಿಶೇಷವಾಗಿ ಶನಿವಾರ ಆಹಾರ ನೀಡಿ


ಬೆಳಗ್ಗೆ ಶಿವ ಮತ್ತು ಗಣೇಶ ಮಂತ್ರವನ್ನು ಪಠಿಸಿ.


ನಿಮ್ಮ ವ್ಯಾಲೆಟ್‌ನಲ್ಲಿ ಚೌಕ ಅಥವಾ ಆಯತಾಕಾರದ ಬೆಳ್ಳಿಯ ನಾಣ್ಯವನ್ನು ಇಟ್ಟುಕೊಳ್ಳಿ


ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯ


ಚರ್ಮದ ಉತ್ಪನ್ನಗಳನ್ನು ಬಳಕೆ ಮಾಡಬೇಡಿ


ದನಗಳಿಗೆ ಹಸಿರು ಎಲೆಗಳ ತರಕಾರಿಗಳನ್ನು ನೀಡಿ


ಇದನ್ನೂ ಓದಿ: ಜನ್ಮ ದಿನಾಂಕದಲ್ಲಿ ಸಂಖ್ಯೆ 3 ಇದ್ರೆ ಹೊಸ ವರ್ಷದಲ್ಲಿ ಅವಕಾಶಗಳ ಮಹಾಪೂರ


ಅದೃಷ್ಟ ಬಣ್ಣ - ನೀಲಿ ಮತ್ತು ಬೂದು


 ಅದೃಷ್ಟ ಸಂಖ್ಯೆಗಳು - 5 ಮತ್ತು 6 


ಅದೃಷ್ಟದ ದಿಕ್ಕು - ಉತ್ತರ ಮತ್ತು ನೈಋತ್ಯ 


ಅದೃಷ್ಟದ ದಿನ - ಬುಧವಾರ ಮತ್ತು ಶುಕ್ರವಾರ

Published by:Sandhya M
First published: