• Home
  • »
  • News
  • »
  • astrology
  • »
  • Numerology Predictions 2023: ನಿಮ್ಮ ಸಂಖ್ಯೆಯಲ್ಲಿ 9 ಇದ್ದರೆ ಗಮ್ಮತ್ತು, ಹೊಸವರ್ಷದಲ್ಲಿ ಬದಲಾಗುತ್ತೆ ನಿಮ್ಮ ಗತ್ತು!

Numerology Predictions 2023: ನಿಮ್ಮ ಸಂಖ್ಯೆಯಲ್ಲಿ 9 ಇದ್ದರೆ ಗಮ್ಮತ್ತು, ಹೊಸವರ್ಷದಲ್ಲಿ ಬದಲಾಗುತ್ತೆ ನಿಮ್ಮ ಗತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 9 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.

  • Share this:

ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope) ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 9 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. 


ಸಂಖ್ಯೆ 9 ಎಂಬುದು 9, 18, 27 ರಂದು ಜನಿಸಿದ ಜನರ ನಂಬರ್ ಆಗಿದ್ದು, ಇದು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ. ಜನ್ಮ ದಿನಾಂಕದಲ್ಲಿ ಸಂಖ್ಯೆ 9 ಅನ್ನು ಹೊಂದಿರುವ ಜನರು ಪ್ರಭಾವಶಾಲಿ ಹಾಗೂ ಆಕರ್ಷಕ ವ್ಯಕ್ವಿತ್ವವನ್ನು ಹೊಂದಿರುವವರಾಗಿದ್ದು,  ತಿಳುವಳಿಕೆಯುಳ್ಳವರು ಎಂದು ಹೆಸರು ಪಡೆದಿರುತ್ತಾರೆ.  ಈ ಸಂಖ್ಯೆಯವರು ಇತರರಿಂದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿದಿರುತ್ತಾರೆ. ಇವರು ಸೃಜನಶೀಲ ಕಲೆಗಳು, ವಿಜ್ಞಾನ, ಕಾನೂನು, ಹಣಕಾಸು, ಶಿಕ್ಷಣ ಮತ್ತು ವಿಶ್ಲೇಷಣಾ ರೀತಿಯ ಉದ್ಯಮಗಳಲ್ಲಿ ಉತ್ತಮವಾದ ಸ್ಥಾನ-ಮಾನ ಗಳಿಸಿರುತ್ತಾರೆ.


ಅಲ್ಲದೇ ಈ ಸಂಖ್ಯೆಯ ತಮ್ಮ ಸುತ್ತಮುತ್ತಲಿನ ಜನರನ್ನು ಗಮನಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗೆಯೇ ಇವರು ಯಾರ ಜೊತೆಯೂ ಯಾವುದರ ಬಗ್ಗೆಯೂ ಹಂಚಿಕೊಳ್ಳುವುದಿಲ್ಲ. ತಮ್ಮ ರಹಸ್ಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.  2023 ರಲ್ಲಿ ಜನ್ಮ ದಿನಾಂಕದಲ್ಲಿ ಸಂಖ್ಯೆ 9 ಹೊಂದಿರುವ ಜನರಿಗೆ ಅದೃಷ್ಟ ಎನ್ನಬಹುದು. ನಟನೆ, ಜ್ಯೋತಿಷ್ಯ, ವಾಸ್ತು, ಚಿಕಿತ್ಸೆ, ಸಂಶೋಧನೆ, ಔಷಧ ಅಥವಾ ಶಸ್ತ್ರಚಿಕಿತ್ಸೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ನಿಮ್ಮ ಗುರಿಗಳ ಮೇಲೆ ಈ ಸಂಖ್ಯೆಯವರು ಗಮನಹರಿಸುವುದು ಮುಖ್ಯ. 2023, ಖ್ಯಾತಿ ಮತ್ತು ಹಣ ಎರಡನ್ನೂ ನೀಡುತ್ತದೆ ಎನ್ನಬಹುದು.


2023ರಲ್ಲಿ ವೃತ್ತಿ ಜೀವನ ಹೇಗಿರಲಿದೆ?


ಹಣದ ಸಮತೋಲನವನ್ನು ಕಾಪಾಡಿಕೊಳ್ಳಲು ಹೂಡಿಕೆಗಳನ್ನು ಮಾಡಲು ಒಂದು ಉತ್ತಮವಾದ ಸಮಯ ಎನ್ನಬಹುದು. ಈ ವರ್ಷ ಬಹಳಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಈ ಸಂಖ್ಯೆಯವರು ವರ್ಷಪೂರ್ತಿ ಉತ್ತಮ ಲಾಭಗಳನ್ನು ಪಡೆಯುತ್ತಾರೆ. ನಿಮ್ಮದು ಈ ಸಂಖ್ಯೆ ಆಗಿದ್ದರೆ  ವ್ಯವಹಾರದಲ್ಲಿ ದೀರ್ಘಕಾಲದವರೆಗೆ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ.


ಈ ಸಂಖ್ಯೆಯ ಜನರು ಹೆಚ್ಚು ಕಲಿಯಲು ಆಸಕ್ತಿ ಹೊಂದಿರುತ್ತಾರೆ.  ಹಾಗಾಗಿ ವ್ಯಾಪಾರದಲ್ಲಿರುವ ಜನರು ಎಲ್ಲಾ ಯಶಸ್ಸನ್ನು  ಕಾಣಬಹುದು. ಉದ್ಯೋಗ ವಲಯದಲ್ಲಿರುವವರಿಗೆ ಹೊಸ ಜವಾಬ್ದಾರಿ ಹೆಗಲೇರುವ ಸಾಧ್ಯತೆ ಇರುತ್ತದೆ.  2023 ರಲ್ಲಿ ಸಂಖ್ಯೆ 9 ರ ಜನರು ಉದ್ಯೋಗ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಫೆಬ್ರವರಿ, ಮಾರ್ಚ್, ಜುಲೈ ಮತ್ತು ನವೆಂಬರ್‌ನಲ್ಲಿ ಮಾತ್ರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಏಕೆಂದರೆ ಇದು ಎಲ್ಲಾ ಕ್ಷೇತ್ರಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುವ ತಿಂಗಳು ಎನ್ನಬಹುದು.


ಇದನ್ನೂ ಓದಿ: ಹೊಸವರ್ಷದಲ್ಲಿ ಕಷ್ಟಗಳು ಈ ರಾಶಿಯವರನ್ನೇ ಹುಡುಕಿ ಬರುತ್ತಂತೆ


ವೈಯಕ್ತಿಕ ಬದುಕು ಹೇಗಿರಲಿದೆ?


2023 ವರ್ಷವು ನಿಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಗೌರವವನ್ನು ಪಡೆಯುವ ವರ್ಷ ಎನ್ನಬಹುದು. ಯಾವುದೇ ರೀತಿಯ ತಪ್ಪು ತಿಳುವಳಿಗೆ ಆಗದಂತೆ ನೋಡಿಕೊಳ್ಳಿ. ಸಂಗಾತಿಯ ಜೊತೆ ಉತ್ತಮವಾದ ಸಮಯ ಕಳೆಯಿರಿ. ಪ್ರೇಮಿಗಳು ಪರಸ್ಪರ ಅರ್ಥ ಮಾಡಿಕೊಳ್ಳುವುದು ಈ ಸಮಯದಲ್ಲಿ ಬಹಳ ಮುಖ್ಯ. ವಿವಾಹಿತರು ಕುಟುಂಬ, ಹೊಸ ಮನೆ, ಐಷಾರಾಮಿ ಕಾರು ಖರೀದಿ ಹೀಗೆ ವಿವಿಧ ರೀತಿಯಲ್ಲಿ ಈ ವರ್ಷ ಸಂತಸದಿಂದ ಇರುತ್ತೀರಿ.


2023 ರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಎನ್ನಬಹುದು.  ನಿಮ್ಮ ಸಾಮಾಜಿಕ ಜೀವನವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಆಧ್ಯಾತ್ಮಿಕತೆಯನ್ನು ನೀವು ಕಾಪಾಡಿಕೊಂಡರೆ, ಎಲ್ಲ ಕೆಲಸವೂ ಸರಾಗವಾಗಿ ಆಗುತ್ತದೆ. ನಿಮ್ಮ ಪ್ರತಿಭೆಯನ್ನು ನೀವು ಎಷ್ಟು ಸಾಧ್ಯವೋ ಅಷ್ಟು ಪ್ರದರ್ಶಿಸಿ ಮತ್ತು 2023 ರ ವರ್ಷವನ್ನು ಉತ್ತಮವಾಗಿ ಬಳಸಿಕೊಳ್ಳಿ.


ಪರಿಹಾರ


ಸ್ತ್ರೀಯರು ಕುಂಕುಮವನ್ನು ಧರಿಸಬೇಕು. ಪುರುಷರು ಮಣಿಕಟ್ಟಿನ ಸುತ್ತ ಕೆಂಪು ದಾರವನ್ನು ಧರಿಸಬೇಕು.


ಹನುಮಂತನ ಪೂಜೆಯನ್ನು ಮಾಡಿ ಮತ್ತು ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸಿ


ಕೆಂಪು ಬಣ್ಣದ ಹಣ್ಣುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ


ಬೆಳಗ್ಗೆ ಗುರು ಮಂತ್ರ ಪಠಿಸಿ


ಇದನ್ನೂ ಓದಿ: ನಂಬರ್‌ 8 ನಿಮ್ಮದಾದ್ರೆ, ಈ ಹೊಸ ವರ್ಷ ಹೀಗೆಲ್ಲಾ ಇರಲಿದ್ಯಂತೆ!


ನಾನ್ ವೆಜ್, ಮದ್ಯ, ತಂಬಾಕು ಮತ್ತು ಚರ್ಮದ ಉತ್ಪನ್ನವನ್ನು ಬಳಕೆ ತಪ್ಪಿಸಿ


ಅದೃಷ್ಟ ಬಣ್ಣ - ಕೆಂಪು


ಅದೃಷ್ಟ ಸಂಖ್ಯೆಗಳು - 9


ಅದೃಷ್ಟದ ದಿಕ್ಕು - ದಕ್ಷಿಣ ಮತ್ತು ಪೂರ್ವ


ಅದೃಷ್ಟದ ದಿನ - ಮಂಗಳವಾರ

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು