• Home
  • »
  • News
  • »
  • astrology
  • »
  • Numerology Predictions 2023: ನಿಮ್ಮ ಜನ್ಮ ದಿನಾಂಕದಲ್ಲಿ ನಂಬರ್ 7 ಇದ್ರೆ ಹೊಸವರ್ಷದಲ್ಲಿ ನಿಮ್ಮದೇ ಹವಾ

Numerology Predictions 2023: ನಿಮ್ಮ ಜನ್ಮ ದಿನಾಂಕದಲ್ಲಿ ನಂಬರ್ 7 ಇದ್ರೆ ಹೊಸವರ್ಷದಲ್ಲಿ ನಿಮ್ಮದೇ ಹವಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 7 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.

  • Share this:

 ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope) ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 7 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. 


ಸಂಖ್ಯೆ 7 ಎಂಬುದು 7, 16 ಹಾಗೂ 25ನೇ ದಿನಾಂಕದಲ್ಲಿ ಜನಿಸಿದವರ ಸಂಖ್ಯೆಯಾಗಿದ್ದು, ಇದು ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ. ಈ ಸಂಖ್ಯೆಯ ಜನರು ಸಂಶೋಧಕರು ಹಾಗೂ ತೀಕ್ಷ್ಣವಾದ ಬುದ್ದಿಯನ್ನ ಹೊಂದಿರುವವರು ಎಂದು ಹೆಸರುಪಡೆದಿದ್ದಾರೆ. ಹಾಗೆಯೇ ಈ ಸಂಖ್ಯೆಯ ಜನ ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡಿ, ಅದರಲ್ಲಿಂದ ಲಾಭ ಪಡೆದ ಮೇಲೆಯೇ ಇತರರಿಗೆ ಹೇಳುತ್ತಾರೆ.


ಅಲ್ಲಿಯವರೆಗೆ ರಹಸ್ಯವನ್ನು ಕಾಪಾಡಿಕೊಂಡು ಬರುತ್ತಾರೆ. ಈ ಸಂಖ್ಯೆಯವರು ಬಹಳ ಸೂಕ್ಷ್ಮ ಜನರಾಗಿದ್ದು ಎಲ್ಲವನ್ನೂ ಗಮನಿಸಿ, ಮೌನವಾಗಿರುತ್ತಾರೆ. ಹಾಗೆಯೇ ಇವರಿಗೆ ಹೆಚ್ಚಿನ ಸ್ನೇಹಿತರು ಸಹ ಇರುವುದಿಲ್ಲ. ಈ ಸಂಖ್ಯೆಯವರು ಜನರ ಜೊತೆ ಹೆಚ್ಚು ಬೆರೆಯಲು ಎಂದಿಗೂ ಇಷ್ಟಪಡುವುದಿಲ್ಲ.


2023 ರಲ್ಲಿ ಈ ಸಂಖ್ಯೆಯ ವಿಶೇಷವಾಗಿ ವಿಜ್ಞಾನ, ನಟನೆ, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಉತತಮವಾದ ಅವಕಾಶವಿದೆ. ಯಶಸ್ಸಿನ ಉತ್ತಂಗಕ್ಕೆ ಏರುವ ಸಾಧ್ಯತೆ ಇದೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ವರ್ಷ ಕನಸು ನನಸಾಗುವ ಕಾಲ ಎನ್ನಬಹುದು.


ವೃತ್ತಿ ಜೀವನ ಹೇಗಿರಲಿದೆ?


ಆರ್ಥಿಕವಾಗಿ ಈ ವರ್ಷ ಹಲವಾರು ರೀತಿಯಲ್ಲಿ ಲಾಭಗಳಿಸಿಬಹುದು. ಔಷಧಗಳು, ವೈದ್ಯಕೀಯ ವಿಜ್ಞಾನ ಅಥವಾ ಶಸ್ತ್ರಚಿಕಿತ್ಸೆ, ಸಂಶೋಧನಾ ಕ್ಷೇತ್ರಗಳು, ಐಟಿ, ರಕ್ಷಣೆ, ರಾಜಕೀಯ, ಕ್ರೀಡೆ, ದಿನಸಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಜಾಸ್ತಿ ಎನ್ನಬಹುದು.  ಈ ವರ್ಷವು ನಿಮಗೆ ಬಹಳಷ್ಟು ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ. ಆದರೂ ಸ್ವಲ್ಪ ಎಚ್ಚರಿಕೆ ಹಾಗೂ ತಾಳ್ಮೆ ಅಗತ್ಯ.


ಇದನ್ನೂ ಓದಿ: ಕನಸಿನಲ್ಲಿ ಹಳೆಯ ಮನೆ ಪದೇ ಪದೇ ಕಾಡ್ತಿದ್ರೆ ಅದರ ಹಿಂದಿದೆ ಈ ಅರ್ಥ


ವೈಯಕ್ತಿಕ ಬದುಕು ಹೇಗಿರಲಿದೆ?


ನಂಬಿಕೆಯನ್ನು ಗಳಿಸುವುದು ಈ ವರ್ಷ ನಿಮಗೆ ಹಾಗೂ ನಿಮ್ಮ ಸಂಗಾತಿ ಇಬ್ಬರಿಗೂ ಸವಾಲಾಗಿರುತ್ತದೆ. ವಿಶೇಷವಾಗಿ ಪ್ರೀತಿಯ ಜೀವನದಲ್ಲಿ ಬಹಳ ಎಚ್ಚರಿಕೆ ಅಗತ್ಯ. ನೀವು ನಿಮ್ಮ ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ವೃತ್ತಿ ಹಾಗೈ ವೈಯಕ್ತಿಕ ಬದುಕಿನ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
ಏಕೆಂದರೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಅಸಮರ್ಪಕ ಸಮತೋಲನದಿಂದ ನಿಮ್ಮ ಮನೆಯ ಜೀವನದಲ್ಲಿ ಸಮಸ್ಯೆಗಳು ಅಥವಾ ಗೊಂದಲಗಳು ಉಂಟಾಗಬಹುದು. ಹಾಗೆಯೇ ಅತಿಯಾದ ಮೌನ ಸಹ ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ಅಲ್ಲದೇ, ನಿಮ್ಮ ಸಂಗಾತಿಯ ಪ್ರೀತಿ ಮತ್ತು ಕಾಳಜಿಯನ್ನು ಗುರುತಿಸಿ.


ಹೆಚ್ಚು ಪ್ರಯಾಣ, ಬಿಡುವಿಲ್ಲದ ಕೆಲಸದ ಜೀವನದ ಕಾರಣದಿಂದ  ಕುಟುಂಬದೊಂದಿಗೆ ಕಡಿಮೆ ಸಮಯ ಕಳೆಯಬೇಕಾಗುತ್ತದೆ. ನಿಮ್ಮ ಬ್ಯುಜಿ ಕೆಲಸದ ಜೀವನದ ಬಗ್ಗೆ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು.


ಪರಿಹಾರ


ಪ್ರತಿ ಸೋಮವಾರ ಶಿವನಿಗೆ ಹಾಲು ಮತ್ತು ಮೊಸರು ಅಭಿಷೇಕವನ್ನು ಅರ್ಪಿಸಿ


ಬಾಳೆ ಅಥವಾ ಆಲದ ಮರಕ್ಕೆ ಹಾಲನ್ನು ಅರ್ಪಿಸಿ


ನಿಮ್ಮ ಚೀಲದಲ್ಲಿ ಯಾವಾಗಲೂ ರುದ್ರಾಕ್ಷಿಯನ್ನು ಇಟ್ಟುಕೊಳ್ಳಿ


ತಾಮ್ರ ಅಥವಾ ಕಂಚಿನ ಮೇಲೆ ಅಂಕೆ "7" ಬರೆದುಕೊಂಡು ಇಟ್ಟುಕೊಳ್ಳಿ


ಮಹಾಮೃತ್ಯುಂಜಯ ಮಂತ್ರವನ್ನು ಬಳಿಗ್ಗೆ ಕನಿಷ್ಠ 11 ಬಾರಿ ಜಪಿಸಿ


ಇದನ್ನೂ ಓದಿ: ಜನ್ಮ ದಿನಾಂಕದಲ್ಲಿ ಸಂಖ್ಯೆ 6 ಇದ್ರೆ ಹೊಸವರ್ಷ ಮಸ್ತ್ ಆಗಿರುತ್ತಂತೆ


ಮಾಂಸಾಹಾರ, ಮದ್ಯ, ತಂಬಾಕು, ಬೆಟ್ಟಿಂಗ್ ಮತ್ತು ಪ್ರಾಣಿಗಳ ಚರ್ಮದ ಉತ್ಪನ್ನಗಳ ಬಳಕೆ ತಪ್ಪಿಸಿ


ಅದೃಷ್ಟ ಬಣ್ಣ - ಹಳದಿ ಮತ್ತು ಕಂದು


ಅದೃಷ್ಟ ಸಂಖ್ಯೆಗಳು - 7


ಅದೃಷ್ಟದ ದಿಕ್ಕು - ದಕ್ಷಿಣ ಮತ್ತು ನೈಋತ್ಯ


ಅದೃಷ್ಟದ ದಿನ - ಸೋಮವಾರ ಮತ್ತು ಮಂಗಳವಾರ

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು