• Home
  • »
  • News
  • »
  • astrology
  • »
  • Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 3 ಇದ್ರೆ ಹೊಸ ವರ್ಷದಲ್ಲಿ ಅವಕಾಶಗಳ ಮಹಾಪೂರ

Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 3 ಇದ್ರೆ ಹೊಸ ವರ್ಷದಲ್ಲಿ ಅವಕಾಶಗಳ ಮಹಾಪೂರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 3 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.    

ಮುಂದೆ ಓದಿ ...
  • Share this:

ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope)  ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 3 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.    


ಸಂಖ್ಯೆ 3 ಎಂದರೆ 3, 12, 21, 30 ರಂದು ಜನಿಸಿದ ಜನರ ನಂಬರ್ ಆಗಿದ್ದು, ಇದು ಗುರುಗ್ರಹವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಜನ್ಮಸಂಖ್ಯೆಯಲ್ಲಿ 2 ಅನ್ನು ಹೊಮದಿರುವ ಜನರು ಬಹಳ ಸೃಜನ ಶೀಲರು ಎಂದು ಹೇಳಲಾಗುತ್ತದೆ. ಅಲ್ಲದೇ ಇತರರ ಜೊತೆ ಬಹಳ ಸುಲಭವಾಗಿ ಬೇರೆಯುವವರು, ಬುದ್ದಿವಂತರು ಹಾಗೂ ಹರ್ಷ ಚಿತ್ತರು ಎಂದು ಹೆಸರು ಪಡೆದಿದ್ದಾರೆ. ಈ ಜನರು ಸಂತೋಷವಾಗಿ ಇರುವುದರ ಜೊತೆಗೆ ಇತರರನ್ನು ಸಹ ಸಂತೋಷವಾಗಿ ಇಟ್ಟುಕೊಳ್ಳುವ ಗುಣವನ್ನು ಹೊಂದಿದ್ದಾರೆ.


ಈ ಜನರಿಗೆ ಮನರಂಜನೆ ಎಂದರೆ ಬಹಳ ಇಷ್ಟ. ಅಲ್ಲದೇ ತಮ್ಮ ವೃತ್ತಿ ಜೀವನದಲ್ಲಿ ತಾವು ಅಂದುಕೊಂಡ ಕೆಲಸ ಮಾಡಿ ಸಾಧಿಸುವುದರಲ್ಲಿ ಇವು ಎತ್ತಿದ ಕೈ ಎನ್ನಬಹುದು. ಕೇವಲ ಕೆಲಸ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿ ಸಹ ಆಸಕ್ತಿ ಹೊಂದಿರುವ ವ್ಯಕ್ತಿತ್ವ ಇವರದ್ದು.  ಈ ಸಂಖ್ಯೆಯ ಅಧಿಪತಿ ಗುರು ಆಗಿರುವುದರಿಂದ, ಅವರಿಗೆ ಆಧ್ಯಾತ್ಮದ ಮೇಲೆ ಬಹಳ ಒಲವು ಹೊಂದಿರುತ್ತಾರೆ. ಇವರು ಮಾರ್ಗದರ್ಶಕರು ಮತ್ತು ಗುರುಗಳ ಮಾತು ಕೇಳುವುದರಿಂದ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ.
ಈ ಜನರು ಹೋದ ಕಡೆ ಎಲ್ಲಾ ಗೆದ್ದು ಬರುತ್ತಾರೆ. ಉತ್ತಮ ಆಲಿಸುವ ಕೌಶಲ್ಯವನ್ನು ಹೊಂದಿರುವ ವ್ಯಕ್ತಿ ಇವರು. ಅಲ್ಲದೇ, ಇತರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದ್ದು, ಅವರ ಸಮಸ್ಯೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಕಾಲ್ಪನಿಕ ಕಲ್ಪನೆಯ ಕಾರಣದಿಂದ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲ ಸಮಯದ ನಂತರ ಅದನ್ನು ಅರಿತುಕೊಂಡು, ಸರಿಪಡಿಸಿಕೊಳ್ಳುತ್ತಾರೆ.


 2023ರಲ್ಲಿ ವೃತ್ತಿ ಜೀವನ ಹೇಗಿರಲಿದೆ?


2023ರಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ವಿದೇಶಿ ಬ್ರ್ಯಾಂಡ್​ ಕುರಿತಂತೆ ವ್ಯವಹಾರ ಮಾಡುತ್ತಿರುವವರಿಗೆ ಬಹಳ ಲಾಭವಿದೆ. ಅನೇಕ ಹೊಸ ಜನರ ಪರಿಚಯ ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ. ಹಲವಾರು ರೀತಿಯ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಇದರಿಂದ ಉತ್ತಮ ರೀತಿಯಲ್ಲಿ ಲಾಭಗಳಿಸುವಿರಿ.  ಈ ವರ್ಷ ನೀವು ಬೇರೆಯುವರು ನಿಮ್ಮ ವ್ಯಾಪಾರದಲ್ಲಿ ತಲೆ ಹಾಕಲು ಬಿಡಬೇಡಿ. ನಿಮಗೆ ಆರ್ಥಿಕವಾಗಿ ಉತ್ತಮವಾದ ಲಾಭವಿದ್ದು, ಆದರೂ ಸಹ ಹಲವು ಕಡೆ ನಿಮ್ಮ ಹಣ ಸಿಲುಕಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: ಹೊಸವರ್ಷದಲ್ಲಿ ವೃಷಭ ರಾಶಿಯವರ ಬದುಕಲ್ಲಿ ಭಾರೀ ಬದಲಾವಣೆ, ಇನ್ನೇನು ಹೇಳುತ್ತೆ ಭವಿಷ್ಯ?


 ವೈಯಕ್ತಿಕ ಬದುಕು ಹೇಗಿರಲಿದೆ?


ವೈಯಕ್ತಿಕ ಬದುಕಿನಲ್ಲಿ 2023 ಕೆಲ ಸಮಸ್ಯೆಗಳನ್ನು ಉಂಟುಮಾಡಬಹುದು. ದಂಪತಿಗಳು ಇನ್ನೊಬ್ಬರ ವೈಯಕ್ತಿಕ ಜಾಗವನ್ನು ಗೌರವಿಸಬೇಕು. ಎಲ್ಲಾ ವಿಚಾರದಲ್ಲಿ ಮೂಗು ತೋರಿಸಲು ಹೋಗಬಾರದು. ನೀವು ಪ್ರೇಮ ಸಂಬಂಧದಲ್ಲಿ ಇದ್ದರೆ ಕೆಲ ವಾದ-ವಿವಾದಗಳು ನಡೆಯುವ ಸಾಧ್ಯತೆ ಇದೆ. ಯಾರೇ ಆಗಲಿ ಹಿಂದಿನ ವಿಚಾರಗಳನ್ನು ತೆಗೆದು ಜಗಳ ಮಾಡುವ ಬದಲಾಗಿ, ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಉತ್ತಮ.


ತಪ್ಪು ತಿಳುವಳಿಕೆಗಳು ಎಲ್ಲಾ ಸಂಬಂಧದಲ್ಲಿ ಸಾಮಾನ್ಯವಾಗಿದೆ, ಆದರೆ ಅದನ್ನು ಬೇಗನೆ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಒಬ್ಬರನ್ನೊಬ್ಬರ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕಷ್ಟ ಬಂದಾಗ ಜೊತೆಯಾಗಿ ನಿಲ್ಲುವುದು, ಯಾವುದೇ ಸಮಸ್ಯೆಯನ್ನು ಎದುರಿಸುವ ಶಕ್ತಿ ನೀಡುತ್ತದೆ.


2023ರಲ್ಲಿ ನಿಮ್ಮ ಸಂಬಂಧವನ್ನು ಪರೀಕ್ಷೆ ಮಾಡುವ ಹಲವಾರು ಸವಾಲುಗಳು ಎದುರಾಗಬಹುದು. ಈ ಸವಾಲುಗಳನ್ನು ಎದುರಿದರೆ ನಿಮ್ಮ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ.


 2023ರಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.  


ವೃತ್ತಿ ಜೀವನದಲ್ಲಿ ಕಾಣಿಸುವ ಸಣ್ಣ ಪುಟ್ಟ ಸಮಸ್ಯೆಗಳಿಂದ ಹೊರಬರಲು ನೀವು ಪ್ರತಿದಿನ ಬೆಳಗ್ಗೆ ತುಳಸಿ ಎಲೆಯನ್ನು ತಿನ್ನುವುದು ಉತ್ತಮ.  ನಿಮ್ಮ ಜೀವನದಲ್ಲಿ ಅದೃಷ್ಟ ಹೆಚ್ಚಾಗಲು ಹಳದಿ ಅಕ್ಕಿಯನ್ನು ಪರ್ಸ್​ನಲ್ಲಿ ಇಟ್ಟುಕೊಳ್ಳಬೇಕು.


ಇದನ್ನೂ ಓದಿ: ಜನ್ಮ ದಿನಾಂಕದಲ್ಲಿ ಸಂಖ್ಯೆ 2 ಇದ್ರೆ ಮುಂದಿನ ನಿಮ್ಮ ವರ್ಷ ಲೈಫ್ ಜಿಂಗಲಾಲಾ


ಅದೃಷ್ಟದ ಬಣ್ಣ - ಹಳದಿ ಮತ್ತು ನೇರಳೆ


ಅದೃಷ್ಟ ಸಂಖ್ಯೆಗಳು - 1 ಮತ್ತು 3


ಅದೃಷ್ಟದ ದಿಕ್ಕು - ಈಶಾನ್ಯ ಮತ್ತು ಪೂರ್ವ


ಅದೃಷ್ಟದ ದಿನ - ಗುರುವಾರ

Published by:Sandhya M
First published: