• Home
  • »
  • News
  • »
  • astrology
  • »
  • Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 2 ಇದ್ರೆ ಮುಂದಿನ ನಿಮ್ಮ ವರ್ಷ ಲೈಫ್ ಜಿಂಗಲಾಲಾ

Numerology Predictions 2023: ಜನ್ಮ ದಿನಾಂಕದಲ್ಲಿ ಸಂಖ್ಯೆ 2 ಇದ್ರೆ ಮುಂದಿನ ನಿಮ್ಮ ವರ್ಷ ಲೈಫ್ ಜಿಂಗಲಾಲಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numerology Analysis 2023: ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 2 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.    

  • Share this:

ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope)  ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಸಂಖ್ಯಾಶಾಸ್ತ್ರ ಕೂಡ ಒಂದು. ನಿಮ್ಮ ಜನ್ಮಸಂಖ್ಯೆಯ ಅನುಸಾರ ನಿಮ್ಮ ಹೊಸವರ್ಷ (New Year) ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು. ನೀವು ನಿಮ್ಮ ಜನ್ಮದಿನಾಂಕದಲ್ಲಿ (Birth date) ನೇರವಾಗಿ ಅಥವಾ ಪರೋಕ್ಷವಾಗಿ ಸಂಖ್ಯೆ 2 ಅನ್ನು ಹೊಂದಿದ್ದರೆ 2023 ಹೇಗಿರಲಿದೆ ಎಂಬುದು ಇಲ್ಲಿದೆ.    


ಸಂಖ್ಯೆ 2 ಎಂದರೆ ದಿನಾಂಕ 2, 11, 20, 29 ರಂದು ಜನಿಸಿದ ಜನರ ಸಂಖ್ಯೆಯಾಗಿದ್ದು, ಇದು ಚಂದ್ರನ ಪ್ರತಿನಿಧಿಸುವ ನಂಬರ್ ಎನ್ನಲಾಗುತ್ತದೆ. ಸಂಖ್ಯೆ 2 ರ ಜನರು ಭಾವನೆಗಳಿಗೆ ಬಹಳ ಬೆಲೆ ಕೊಡುತ್ತಾರೆ.  ಅವರು ಸಾಮಾನ್ಯವಾಗಿ ಜೀವನದಲ್ಲಿ ಉತ್ತಮ ಸೇವೆಗಳನ್ನು ಒದಗಿಸಲು ಪ್ರಸಿದ್ಧರಾಗಿದ್ದಾರೆ. ಆದರೆ, ಇತರರ ಟೀಕೆಗಳಿಗೆ ಹಾಗೂ ಕೆಟ್ಟ ಮಾತುಗಳಿಗೆ ಸುಲಭವಾಗಿ ಬಲಿಯಾಗುವುದು ಮಾತ್ರವಲ್ಲದೇ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ.


ಹಾಗಾಗಿ 2023ರಲ್ಲಿ ಜನರ ಟೀಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಭಾವನಾತ್ಮಕವಾಗಿ ಬುದ್ಧಿವಂತರಾಗಿ ವರ್ತಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ಗೊಂದಲ ಉಂಟಾಗಬಹುದು. ಈ ಸಂಖ್ಯೆಯ ಜನರಿಗೆ ಇರುವ ಹೆಚ್ಚು ತಾಳ್ಮೆ ಇತರ ಯಾವುದೇ ಸಂಖ್ಯೆಯ ಜನರಿಗೆ ಇಲ್ಲ ಎನ್ನಬಹುದು.


ಈ ವರ್ಷವೂ ನಿಮಗೆ ಸಾಮಾನ್ಯವಾಗಿ ಉತ್ತಮ ವರ್ಷವಾಗಿದ್ದರೂ, ಕೆಲವು ಅನಗತ್ಯ ಅಥವಾ ಅನಪೇಕ್ಷಿತ ಸಮಸ್ಯೆಗಳು ಉಂಟಾಗಬಹುದು. 2023 ರಲ್ಲಿ ಹೆಚ್ಚಿದ ಕೆಲಸದ ಹೊರೆಯಿಂದಾಗಿ, ನೀವು ಸ್ವಲ್ಪ ಮಾನಸಿಕ ಒತ್ತಡವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಬಹಳ ಮುಖ್ಯವಾಗುತ್ತದೆ. ಉತ್ತಮವಾದ ಕೌಶಲ್ಯ ನಿಮ್ಮನ್ನ ಸಮಸ್ಯೆಯಿಂದ ಪಾರು ಮಾಡುತ್ತದೆ.


 2023ರಲ್ಲಿ ವೃತ್ತಿ ಜೀವನ ಹೇಗಿರಲಿದೆ?


ಈ ವರ್ಷ ಹಣದ ವಿಚಾರವಾಗಿ ಹಾಗೂ ಕೆಲಸದ ವಿಚಾರದಲ್ಲಿ ಉತ್ತಮವಾದ ಬೆಳವಣಿಗೆ ಆಗುತ್ತದೆ. ಈ ವರ್ಷ ಬಹಳಷ್ಟು ಅವಕಾಶಗಳು ಸಿಗುತ್ತದೆ ಎಂದರೆ ತಪ್ಪಲ್ಲ. ನಿಮಗೆ ವಿದೇಶದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಈ ವರ್ಷ ವೀಸಾ ಪಡೆಯುವುದು ನಿಮಗೆ ಉತ್ತಮ. ಆರ್ಥಿಕವಾಗಿ ಹಾಗೂ ವೃತ್ತಿಯಲ್ಲಿ ಚೆನ್ನಾಗಿದೆ ಎಂದು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯದ ವಿಚಾರವಾಗಿ ಹೆಚ್ಚಿನ ಕಾಳಜಿಯನ್ನು ವಹಿಸುವುದು ಮುಖ್ಯ.   ಹೆಚ್ಚಿನ ಕೆಲಸದ ಒತ್ತಡವು ಮಾನಸಿಕ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆಹಾರ ಮತ್ತು ಜೀವನಶೈಲಿಯ ವಿಚಾರದಲ್ಲಿ ಬಹಳ ಜಾಗರೂಕರಾಗಿರುವುದು ನಿಮಗೆ ಬಹಳ ಅಗತ್ಯ ಎಂಬುದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.


ಕೆಲಸವನ್ನು ಹುಡುಕುತ್ತಿರುವವರಿಗೆ ಈ ವರ್ಷ ಒಳ್ಳೆಯ ಕೆಲಸ ಸಿಗುವ ನಿರೀಕ್ಷೆ ಇದೆ. ಅಲ್ಲದೇ ಕೆಲಸ ಮಾಡುತ್ತಿರುವವರಿಗೆ ಭಡ್ತಿ ಸಿಗುವ ಚಾನ್ಸ್ ಹೆಚ್ಚಿದೆ.  ಔಷಧಿಗಳ ರಫ್ತು ಮತ್ತು ಆಮದು, ವಜ್ರಗಳು, ಆಹಾರ ಮತ್ತು ರಾಸಾಯನಿಕ ಉದ್ಯಮಗಳ ಉದ್ಯಮಿಗಳಿಗೆ ಈ ವರ್ಷ ಲಾಭದಾಯಕವಾಗಿರಲಿದೆ.


ಇದನ್ನೂ ಓದಿ: 2023ರಲ್ಲಿ ಈ ಸಿಂಪಲ್ ಸಲಹೆ ಪಾಲಿಸಿ ಶನಿ ದೇವನ ಕೃಪೆ ಗಳಿಸಿ


ವೈಯಕ್ತಿಕ ಬದುಕು ಹೇಗಿರಲಿದೆ?


ಈ ವರ್ಷ ನಿಮ್ಮ  ಕುಟುಂಬದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರೂ ಸಹ, ಕೆಲವೇ ದಿನಗಳಲ್ಲಿ ಆ ತೊಂದರೆಗೆ ಪರಿಹಾರ ಸಿಗುತ್ತದೆ. ಪ್ರೇಮವಿವಾಹಕ್ಕೆ ಇದು ಸೂಕ್ತವಾದ ವರ್ಷ ಎನ್ನಬಹುದು. ಹಾಗೆಯೇ ವಿವಾಹಿತರಿಗೆ ಸಹ ಈ ವರ್ಷ ನೆಮ್ಮದಿಯನ್ನು ನೀಡುತ್ತದೆ ಎಂದರೆ ತಪ್ಪಿಲ್ಲ. ಒಟ್ಟಿಗೆ ಹೆಚ್ಚಿನ ಸಮಯ ಕಳೆಯುವುದು ನಿಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಧೈರ್ಯ ನೀಡುತ್ತದೆ.


ವಿದ್ಯಾರ್ಥಿಗಳಿಗೆ


ವಿದೇಶದಲ್ಲಿ ಓದಲು ಆಸಕ್ತಿ ಹೊಂದಿರುವವರು ಅಪ್ಲೈ ಮಾಡಲು ಇದು ಸೂಕ್ತವಾದ ವರ್ಷ ಎನ್ನಬಹುದು.  ಸರ್ಕಾರಿ ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಸಮಯ ತೆಗೆದುಕೊಂಡರೂ ಸಹ, ಒಳ್ಳೆಯ ಹುದ್ದೆ ಸಿಗುತ್ತದೆ.


ಪರಿಹಾರ


ಯಾವುದೇ ವ್ಯಕ್ತಿಯನ್ನು ಕಣ್ಣು ಮುಚ್ಚಿ ನಂಬಲು ಹೋಗಬೇಡಿ


ಪ್ರತಿ ಸೋಮವಾರ ಹಾಲು ಮತ್ತು ನೀರನ್ನು ಶಿವನಿಗೆ ಅಭಿಷೇಕ ಮಾಡಿ, ಮಹಾ ಮೃತ್ಯಂಜಯ ಜಪ ಮಾಡಿ.


ಇದನ್ನೂ ಓದಿ: ಹೊಸವರ್ಷದಲ್ಲಿ ಈ 4 ರಾಶಿಯವರಿಗೆ ಬಹಳ ಕಷ್ಟವಂತೆ, ಎಚ್ಚರಿಕೆ ಇರಲಿ


ಅದೃಷ್ಟದ ಬಣ್ಣ: ಬಿಳಿ ಮತ್ತು ಕಿತ್ತಳೆ


ಅದೃಷ್ಟದ ನಂಬರ್: 2 ಮತ್ತು 6


ಅದೃಷ್ಟದ ದಿಕ್ಕು: ವಾಯುವ್ಯ ಮತ್ತು ಈಶಾನ್ಯ


ಅದೃಷ್ಟದ ವಾರ: ಸೋಮವಾರ


ಡಾರ್ಕ್ ಬಣ್ಣವನ್ನು ಬಳಕೆ ಮಾಡದಿರುವುದು ಹಾಗೂ ಆ ಬಣ್ಣದ ಬಟ್ಟೆ ಧರಿಸದಿರುವುದು ಉತ್ತಮ.

Published by:Sandhya M
First published: