• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology: ಈ ರಾಶಿಯವರು ಏನೇ ಕಷ್ಟ ಬಂದ್ರೂ ಸ್ನೇಹಿತರ ಜೊತೆಗೇ ಇರ್ತಾರೆ! ನಿಮ್ದೂ ಇದೇ ರಾಶಿನಾ?

Astrology: ಈ ರಾಶಿಯವರು ಏನೇ ಕಷ್ಟ ಬಂದ್ರೂ ಸ್ನೇಹಿತರ ಜೊತೆಗೇ ಇರ್ತಾರೆ! ನಿಮ್ದೂ ಇದೇ ರಾಶಿನಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕೆಲಸದಲ್ಲಿ ಯಶಸ್ಸು ಪಡೆದಾಗ, ಹಣ ಗಳಿಸಿದಾಗ ಮತ್ತು ಸಂತೋಷವಾಗಿರುವಾಗ ಅನೇಕರು ನಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಆಪ್ತರು ಅಂತ ಹೇಳಿಕೊಂಡು ಬರುತ್ತಾರೆ. ನಂತರ ಅವರೆಲ್ಲಿ ಎಂದು ಹುಡುಕಿದರೂ ಸಿಗೋದಿಲ್ಲ ಆದರೆ ಈ ರಾಶಿಯವರು ಹಾಗಲ್ಲ.

  • Share this:

ಕೆಲವರು ಸ್ನೇಹ (Friends) ಮಾಡಿದರೆ ಅಥವಾ ಬಂಧವನ್ನು ಬೆಳೆಸಿಕೊಂಡರೆ ಒಳ್ಳೆಯ ಸಮಯದಲ್ಲಿ ಮಾತ್ರ ನಮ್ಮ ಜೊತೆ ಇರುತ್ತಾರೆ ಮತ್ತು ಸ್ವಲ್ಪ ಪರಿಸ್ಥಿತಿ ಹದಗೆಡಲು ಶುರುವಾದರೆ ಸಾಕು, ಹಾಗೆ ನಿಧಾನವಾಗಿ (Slow) ನಮ್ಮಿಂದ ದೂರ ಸರಿಯುತ್ತಾರೆ ಅಂತ ಹೇಳಬಹುದು. ಆದರೆ ಇನ್ನೂ ಕೆಲವರು ಒಮ್ಮೆ ಸ್ನೇಹ ಮಾಡಿದರೆ ಮುಗೀತು, ಅವರ ಜೊತೆಗಿರುವವರಿಗೆ ಎಂತಹದೇ ಸಂದರ್ಭ  ಬಂದರೂ ಸಹ ಅವರ ಜೊತೆಯಲ್ಲಿಯೇ ಇರುತ್ತಾರೆ ಮತ್ತು ಎಂತಹ ಕೆಟ್ಟ (Bad) ಪರಿಸ್ಥಿತಿಯಲ್ಲೂ ಅವರನ್ನು ಬಿಟ್ಟು ಒಂದಿಂಚು ಕದಲುವುದಿಲ್ಲ ಅಂತ ಹೇಳಬಹುದು.


ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕೆಲಸದಲ್ಲಿ ಯಶಸ್ಸು ಪಡೆದಾಗ, ಹಣ ಗಳಿಸಿದಾಗ ಮತ್ತು ಸಂತೋಷವಾಗಿರುವಾಗ ಅನೇಕರು ನಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಆಪ್ತರು ಅಂತ ಹೇಳಿಕೊಂಡು ಬರುತ್ತಾರೆ.


ಆದರೆ ಸೋಲನ್ನು ಅನುಭವಿಸಿದಾಗ, ಜೀವನದಲ್ಲಿ ಯಾವುದೋ ಒಂದು ಕಾರಣಕ್ಕೆ ಹತಾಶರಾದಾಗ ಮತ್ತು ಆತ್ಮವಿಶ್ವಾಸವನ್ನು ಮತ್ತು ಹಣವನ್ನು ಕಳೆದುಕೊಂಡು ನೋವಿನಲ್ಲಿ ಇರುವಾಗ ನಮ್ಮ ಬೆಂಬಲಕ್ಕೆ ಮತ್ತು ನಮ್ಮ ಜೊತೆ ನಿಲ್ಲುವಂತಹ ಜನರು ತುಂಬಾನೇ ಕಡಿಮೆ ಇರುತ್ತಾರೆ ಅಂತ ಹೇಳಬಹುದು. ಈ ಸಮಯದಲ್ಲಿ ನಮ್ಮೊಂದಿಗೆ ನಿಂತ ಜನರೇ ನಮ್ಮ ನಿಜವಾದ ಸ್ನೇಹಿತರು, ಆಪ್ತರು ಮತ್ತು ಹಿತೈಷಿಗಳು ಅಂತ ತಿಳಿದುಕೊಳ್ಳಬೇಕು.


ಇದನ್ನೂ ಓದಿ: Zodiac Sign: ಈ ಚಿಹ್ನೆಯ ರಾಶಿಯವರು ಸ್ವಭಾವ ಹೀಗಿರುತ್ತಂತೆ! ಪ್ರೀತಿಯ ಸಂಕೇತ ಈ ರಾಶಿಯವರು


ನಿಜವಾದ ನಿಷ್ಠಾವಂತ ಸ್ನೇಹದ ಸಾಮರ್ಥ್ಯದ ವಿಷಯಕ್ಕೆ ಬಂದಾಗ, ಕೆಲವು ಸೂರ್ಯ ಚಿಹ್ನೆಗಳು ಇತರರಿಗಿಂತ ಹೆಚ್ಚು ಅನುಕೂಲಕರವೆಂದು ತಿಳಿಸುತ್ತವೆ. ನಾವು ಸ್ನೇಹ ಮಾಡುವ ಜನರ ರಾಶಿಚಕ್ರ ಚಿಹ್ನೆಗೂ ಮತ್ತು ಅವರ ನಿಷ್ಠಾವಂತ ಮನೋಭಾವನೆ ಮತ್ತು ಬೆಂಬಲಕ್ಕೆ ನಿಲ್ಲುವ ಗುಣಕ್ಕೆ ಯಾವ ರೀತಿಯಲ್ಲಿ ಸಂಬಂಧವಿದೆ ಅಂತ ಅನೇಕರಿಗೆ ತಿಳಿದಿರುವುದಿಲ್ಲ.


ಈಗಾಗಲೇ ಯಾವ ಯಾವ ರಾಶಿಚಕ್ರ ಚಿಹ್ನೆಯ ಜನರು ಯಾರ ಜೊತೆಗೆ ಸರಿಯಾಗಿ ಹೊಂದಿಕೊಳ್ಳುತ್ತಾರೆ ಅಂತ ತಿಳಿದುಕೊಂಡಿದ್ದೇವೆ. ಈಗ ಆ ರಾಶಿಚಕ್ರ ಚಿಹ್ನೆಗಳಲ್ಲಿ ಯಾವ ರಾಶಿಯ ಜನರು ಕಷ್ಟದ ಸಮಯದಲ್ಲಿ ನಮ್ಮ ಜೊತೆ ಇರುತ್ತಾರೆ ಅಂತ ತಿಳಿದುಕೊಳ್ಳೋಣ ಬನ್ನಿ.


ಮಕರ ರಾಶಿಯವರು ಒಳ್ಳೆಯ ಸ್ನೇಹಿತರು


ನೀವು ಮಕರ ರಾಶಿಯ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಬಯಸಿದರೆ, ನೀವು ನಿಮ್ಮ ಜೀವನಕ್ಕಾಗಿ ತುಂಬಾನೇ ನಿಷ್ಠಾವಂತ ಸ್ನೇಹಿತನನ್ನು ಮತ್ತು ಸಂಗಾತಿಯನ್ನು ಪಡೆಯುತ್ತಿದ್ದೀರಿ ಎಂದು ಅರ್ಥ.


ನೀವು ಮಕರ ರಾಶಿಯವರೊಂದಿಗೆ ಸ್ನೇಹ ಬೆಳೆಸಲು ನಿರ್ಧರಿಸಿದರೆ, ಸ್ವಲ್ಪ ವ್ಯಂಗ್ಯ ಮತ್ತು ಕೆಲವು ಹಠಮಾರಿ ಪ್ರವೃತ್ತಿಗಳಿಗೆ ಸಿದ್ಧರಾಗಿರಿ. ಏನೇ ಇದ್ದರೂ ಅದನ್ನು ನಿಮಗೆ ನಿಮ್ಮ ಮುಖದ ಮೇಲೆ ನೇರವಾಗಿ ಹೇಳುವ ಸ್ನೇಹಿತನ ಬಗ್ಗೆಯೂ ನೀವು ಯೋಜಿಸಬಹುದು.
ಅವರು ನಿಮ್ಮೊಂದಿಗೆ ಪ್ರಾಮಾಣಿಕರಾಗಿದ್ದಾರೆಯೇ ಎಂದು ನೀವು ಎಂದಿಗೂ ಆಶ್ಚರ್ಯ ಪಡಬೇಕಾಗಿಲ್ಲ. ಅವರು ಆಗಾಗ ಸ್ವಲ್ಪ ಮೊಂಡು ಬುದ್ದಿಯವರು ಅಂತ ನಿಮಗೆ ಅನ್ನಿಸಿದರೂ ಸಹ ಅವರು ಯಾವಾಗಲೂ ನಿಮ್ಮ ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ.


ಸಿಂಹ ರಾಶಿಯ ಜನರು ನಿಷ್ಠೆ ಉಳ್ಳವರು


ನೀವು ಎಂತಹದೇ ಸಂದರ್ಭದಲ್ಲೂ ಸಹ ಸಿಂಹ ರಾಶಿಯ ಜನರ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನು ಇಡಬಹುದು. ಅವರು ನಿಮ್ಮ ಸ್ನೇಹಕ್ಕೆ ಯೋಗ್ಯವೆಂದು ನೀವು ಕಂಡುಕೊಳ್ಳಬಹುದು.


ಸಿಂಹ ರಾಶಿಯವರು ಸ್ನೇಹವನ್ನು ನಿಭಾಯಿಸುವಲ್ಲಿ ತುಂಬಾನೇ ನಿಷ್ಠಾವಂತರು ಅಂತ ಹೇಳಬಹುದು. ಅವರೊಡನೆ ನೀವು ಸ್ನೇಹ ಮಾಡಿದರೆ, ನೀವು ನಿಮ್ಮ ಸ್ವಂತ ನಿಷ್ಠೆಯನ್ನು ಅವರ ಎದುರು ಸಾಬೀತುಪಡಿಸಬೇಕಾಗುತ್ತದೆ. ಸಿಂಹ ರಾಶಿಯವರು ಅದನ್ನು ಸಾಂದರ್ಭಿಕವಾಗಿ ಪರೀಕ್ಷಿಸುತ್ತಾರೆ ಎಂದು ನೀವು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಸಿಂಹ ರಾಶಿಯವರೊಂದಿಗೆ ಸ್ನೇಹ ಮಾಡಲು ನಿಮ್ಮಲ್ಲಿ ಸಹ ಆ ನಿಷ್ಠೆ ಇರುವುದು ಮುಖ್ಯವಾಗುತ್ತದೆ. ಅಹಂ ಇರುವ ಜನರು ಇವರಿಗೆ ಸರಿ ಹೊಂದುವುದಿಲ್ಲ.


ಆದರೆ ಒಮ್ಮೆ ಇವರಿಗೆ ನೀವು ಇಷ್ಟವಾದರೆ, ಅವರು ನಿಮ್ಮನ್ನು ಕೊನೆಯ ತನಕ ಬಿಡುವುದಿಲ್ಲ ಅಂತ ಹೇಳಬಹುದು. ನೀವು ಇವರ ಮೇಲೆ ಪ್ರಭಾವ ಬೀರಲು ಬಯಸಿದರೆ, ನೀವು ಬೆಂಕಿಯೊಂದಿಗೆ ವ್ಯವಹರಿಸುತ್ತಿದ್ದೀರಿ ಅಂತ ಪರಿಗಣಿಸಿ, ಧೈರ್ಯವಾಗಿರಿ ಮತ್ತು ಅವರನ್ನು ಎದುರಿಸಲು ಸಿದ್ದರಾಗಿ ಅಂತ ಹೇಳಬಹುದು.


ಮೇಷ ರಾಶಿಯವರು ನಂಬಿಕಸ್ಥರು


ಮೇಷ ರಾಶಿಯ ಜನರು ಸಮರ್ಪಿತ ವಿಶ್ವಾಸಾರ್ಹಕ್ಕೆ ಮತ್ತೊಂದು ಉದಾಹರಣೆ ಅಂತ ಹೇಳಬಹುದು. ಈ ಜನರು ನಿಮ್ಮ ಮೇಲೆ ಆಗಾಗ್ಗೆ ಕೋಪದಿಂದ ವರ್ತಿಸಬಹುದು.


ಆದರೆ ಅದು ನಿಮ್ಮ ಪರವಾಗಿ ಬೇರೊಬ್ಬರ ಮೇಲೆ ಹೋಗುತ್ತದೆ. ಅವರ ಉತ್ಸಾಹವು ಯಾವಾಗಲೂ ಸಾಂಕ್ರಾಮಿಕವಾಗಿರುತ್ತದೆ ಮತ್ತು ಅವರ ಸಲಹೆ ಯಾವಾಗಲೂ ಪ್ರಾಮಾಣಿಕವಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮೇಷ ರಾಶಿಯವರ ನಿಷ್ಠೆಯನ್ನು ಯಾರೂ ಮೀರಿಸಲು ಸಾಧ್ಯವಾಗುವುದಿಲ್ಲ.


ನೀವು ನಿಜವಾಗಿ ಏನು ಮಾಡುತ್ತಿದ್ದೀರಿ ಎಂದು ಅವರಿಗೆ ತಿಳಿದಿಲ್ಲದಿದ್ದರೂ ಸಹ, ನಿಮ್ಮನ್ನು ಹುರಿದುಂಬಿಸಲು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ಇವರು. ನಂತರ, ಅವರು ನಿಮ್ಮನ್ನು ಹೊರ ಜಗತ್ತಿಗೆ ಪರಿಚಯ ಮಾಡಿಸುತ್ತಾರೆ, ಎಂದರೆ ನಿಮ್ಮನ್ನು ಹೊಸ ಹೊಸ ಸ್ನೇಹಿತರ ಗುಂಪಿಗೆ ಪರಿಚಯಿಸುತ್ತಾರೆ. ನೀವು ಮೇಷ ರಾಶಿಯವರೊಂದಿಗೆ ಸ್ನೇಹಿತರಾದರೆ, ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳ ಬಗ್ಗೆ ಉತ್ಸಾಹದಿಂದ ಇರಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ.


ರಹಸ್ಯವಾಗಿರ್ತಾರೆ ವೃಶ್ಚಿಕ ರಾಶಿಯವರು


ವೃಶ್ಚಿಕ ರಾಶಿಯವರು ಅವರ ರಾಶಿ ಚಿತ್ರದಲ್ಲಿ ತೋರಿಸುವಂತೆ ಕಪ್ಪು ಮತ್ತು ನಿಗೂಢ ಚೇಳು ಇದ್ದಂತೆ ಅಂತ ಹೇಳಬಹುದು. ವೃಶ್ಚಿಕ ರಾಶಿಯವರು ಅತ್ಯಂತ ಖಾಸಗಿ, ರಹಸ್ಯ, ಸ್ವತಂತ್ರ ಏಕಾಂಗಿಗಳಾಗಿರುವುದರಿಂದ ನೀವು ಸಂಪೂರ್ಣವಾಗಿ ನೆಲೆಯಿಂದ ಹೊರಗುಳಿಯುವುದಿಲ್ಲ.


ಅವರು ಗಂಭೀರ, ತೀವ್ರ ಮತ್ತು ನಾಟಕೀಯ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸ್ವಂತ ಜನರ ಸಾಂಗತ್ಯವನ್ನು ಗೌರವಿಸುತ್ತಾರೆ. ನಿಮ್ಮ ತ್ವರಿತ ಬುದ್ಧಿವಂತಿಕೆ ಅಥವಾ ನಿಮ್ಮ ಬುದ್ಧಿಶಕ್ತಿಯಿಂದ ನೀವು ಅವರ ಗಮನವನ್ನು ಸೆಳೆಯಲು ಸಾಧ್ಯವಾದರೆ, ನೀವು ಅವರ ಒಳ್ಳೆಯ ಸ್ನೇಹಿತರಾಗುವುದಂತೂ ನಿಜ.


ವೃಶ್ಚಿಕ ರಾಶಿಯವರು ಒಮ್ಮೆ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ನಿಮ್ಮ ರಹಸ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ ರಕ್ಷಿಸುತ್ತಾರೆ. ಇತರ ಸ್ನೇಹಿತರೊಂದಿಗೆ ನೀವು ಕಳೆದ ಸಮಯದ ಬಗ್ಗೆ ಅವರು ಸ್ವಲ್ಪ ಅಸೂಯೆಪಡಬಹುದು.


ಈ ರಾಶಿಯವರು ನಿಮ್ಮ ನಂಬಿಕೆಗೆ ದ್ರೋಹ ಬಗೆಯುವ ಬಗ್ಗೆ ನೀವು ಎಂದಿಗೂ ಕಿಂಚಿತ್ತೂ ಸಂಶಯ ಪಡಬೇಕಾಗಿಲ್ಲ. ಆದಾಗ್ಯೂ, ಅವರಿಗೆ ಎಂದಿಗೂ ದ್ರೋಹ ಮಾಡದಂತೆ ಜಾಗರೂಕರಾಗಿರಿ.


ಅವರು ಸ್ನೇಹದಷ್ಟೆ, ಸೇಡಿನ ಮನೋಭಾವವುಳ್ಳವರು ಮತ್ತು ನೀವು ಮಾಡಿದ್ದ ಕೆಲಸಕ್ಕೆ ನಿಮಗೆ ಪಶ್ಚಾತ್ತಾಪ ಆಗುವುದನ್ನು ನೋಡುವವರೆಗೆ ಅವರು ವಿಶ್ರಾಂತಿ ಪಡೆಯುವುದಿಲ್ಲ.


ನೋಡಲು ಕಠಿಣವಾಗಿ ಕಂಡರೂ ತುಂಬಾನೇ ಮೃದು ವೃಷಭ ರಾಶಿ ಜನರು


ವೃಷಭ ರಾಶಿಯ ಜನರು ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದು ಹಂತದಲ್ಲಿ ವಿಶ್ವಾಸಾರ್ಹ ಸಂಗಾತಿಗಾಗಿ ಹುಡುಕಾಟದಲ್ಲಿದ್ದರೆ, ಇವರು ನಿಮಗೆ ತುಂಬಾ ಒಳ್ಳೆಯ ಜೋಡಿ ಅಂತ ಹೇಳಬಹುದು.


ಗೂಳಿ ಚಿತ್ರವಿರುವ ಈ ರಾಶಿಯವರು ನೋಡಲು ಸ್ವಲ್ಪ ಕಠಿಣವಾಗಿ ಕಂಡರೂ ಸಹ ಮನಸ್ಸಿನಿಂದ ತುಂಬಾನೇ ಒಳ್ಳೆಯವರು. ಈ ಜನರು ಬೇರೆ ರಾಶಿಯ ಜನರ ಹಾಗೆ ಯಾವುದೇ ರೀತಿಯ ಉರಿಯುವ, ಕ್ರೂರ ಸ್ವಭಾವವನ್ನು ಹೊಂದಿರುವುದಿಲ್ಲ.


ಬದಲಾಗಿ, ಅವರು ಬಲವಾದ, ಸ್ಥಿರವಾದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಇದು ನೀವು ಹುಡುಕುತ್ತಿರುವ ತುಂಬಾನೇ ನಿಷ್ಠಾವಂತ ವ್ಯಕ್ತಿ ಈ ರಾಶಿಗೆ ಸೇರಿದವರಾಗಿರುತ್ತಾರೆ ಅಂತ ಹೇಳಬಹುದು.


ವೃಷಭ ರಾಶಿಯವರು ತಮ್ಮ ಸ್ವಂತ ಯೋಜನೆಗಳನ್ನು ರದ್ದುಗೊಳಿಸಿದರೂ ಸಹ, ಅಗತ್ಯವಿದ್ದಾಗ ನಿಮಗೆ ಸಹಾಯ ಮಾಡಲು ಯಾವಾಗಲೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯು ರಾಶಿಚಕ್ರದ ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಹೆಚ್ಚಿನ ಭಾವನಾತ್ಮಕ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.


ಇದು ಕೆಲವೊಮ್ಮೆ ಮಕರ ಅಥವಾ ಕನ್ಯಾ ರಾಶಿಯವರನ್ನು ಕಾಡುವ ಶೀತವನ್ನು ಬಿಟ್ಟು ಬೆಚ್ಚಗಿನ ಮತ್ತು ಸೌಮ್ಯ ಸ್ನೇಹಕ್ಕೆ ಧುಮುಕಲು ಅವರಿಗೆ ಅನುವು ಮಾಡಿಕೊಡುತ್ತದೆ.


ಏನಾದರೂ ಇದ್ದರೆ, ವೃಷಭ ರಾಶಿಯ ಜನರು ನಿಮ್ಮೊಂದಿಗೆ ನಿಜವಾದ ಬಂಧವನ್ನು ರೂಪಿಸಿಕೊಂಡಿದ್ದೆ ಆದರೆ ನೀವು ತುಂಬಾನೇ ನಿಷ್ಠಾವಂತ ವ್ಯಕ್ತಿ ಜೊತೆ ಸ್ನೇಹ ಮಾಡಿದ್ದೀರಿ ಎಂದರ್ಥ. ನಿಮ್ಮ ಈ ಸ್ನೇಹವು ನಿಕಟ ಮತ್ತು ಶಾಶ್ವತ ಎಂದು ನೀವು ಬಯಸಿದರೆ ಹಾಗೆಯೇ ಆ ಸ್ನೇಹವನ್ನು ಮುಂದುವರೆಸಿ.

First published: