2022ರ ಹೊಸ ವರ್ಷದಲ್ಲಿ ಗಣೇಶ, ದಸರಾ-ದೀಪಾವಳಿ ಹಬ್ಬ ಯಾವಾಗ ಗೊತ್ತಾ; ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂದಿನ ಹೊಸ ವರ್ಷದಲ್ಲಿ ಯಾವ ಹಬ್ಬ ಯಾವಾಗ ಬರಲಿದೆ ಎಂಬ ಕುತೂಹಲ ಇರುತ್ತದೆ. ಆ ಕುರಿತ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೊಸ ವರ್ಷದ (New Year) ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂಗ್ಲೀಷ್​ ಕ್ಯಾಲೆಂಡರ್​ ಪ್ರಕಾರ ಡಿ. 31ಕ್ಕೆ ಹಳೆ ವರ್ಷ ಮುಗಿದು, ಜನವರಿ 1 ರಿಂದ ಹೊಸ ವರ್ಷ ಆರಂಭವಾಗಲಿದೆ. ಬಹುತೇಕವಾಗಿ ನಾವು ಇಂಗ್ಲೀಷ್​​ ಕ್ಯಾಲೆಂಡರ್​ ಅನುಸರಿಸುವ ಹಿನ್ನಲೆ ಮುಂದಿನ ಹೊಸ ವರ್ಷದಲ್ಲಿ ಯಾವ ಹಬ್ಬ (Festivals) ಯಾವಾಗ ಬರಲಿದೆ ಎಂಬ ಕುತೂಹಲ ಇರುತ್ತದೆ. ಹಿಂದೂಗಳಿಗೆ ಪ್ರಮುಖವಾದ ಹೋಳಿ, ಯುಗಾದಿ, ಗಣೇಶ, ದಸರಾ ದೀಪಾವಳಿ ಹಬ್ಬಗಳು ಯಾವಾಗ ಬರುತ್ತದೆ. ಪ್ರಮುಖ ಆಚರಣೆಗಳ ದಿನಾಂಕಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

  ಜನವರಿ ಮಾಸದ ಶುಭ ದಿನಗಳು
  ಜನವರಿ 02, ಭಾನುವಾರ: ಪುಷ್ಯ ಅಮವಾಸ್ಯೆ
  ಜನವರಿ 09, ಭಾನುವಾರ: ಗುರು ಗೋಬಿಂದ್ ಸಿಂಗ್ ಜಯಂತಿ
  ಜನವರಿ 12, ಬುಧವಾರ: ಸ್ವಾಮಿ ವಿವೇಕಾನಂದ ಜಯಂತಿ
  ಜನವರಿ 13, ಗುರುವಾರ: ವೈಕುಂಠ ಏಕಾದಶಿ
  ಜನವರಿ 14, ಶುಕ್ರವಾರ: ಮಕರ ಸಂಕ್ರಾಂತಿ, ಪೊಂಗಲ್, ಉತ್ತರಾಯಣ, ಲೋಹ್ರಿ,
  ಜನವರಿ 21, ಶುಕ್ರವಾರ: ಸಂಕಷ್ಟ ಚತುರ್ಥಿ

  ಫೆಬ್ರವರಿ ಮಾಸ ಶುಭ ದಿನಗಳು
  01 ಫೆಬ್ರವರಿ, ಮಂಗಳವಾರ: ಮಾಘ ಅಮವಾಸ್ಯೆ, ಮೌನಿ ಅಮವಾಸ್ಯೆ
  05 ಫೆಬ್ರವರಿ, ಶನಿವಾರ: ವಸಂತ ಪಂಚಮಿ
  07 ಫೆಬ್ರವರಿ, ಸೋಮವಾರ: ರಥ ಸಪ್ತಮಿ
  08 ಫೆಬ್ರವರಿ, ಸೋಮವಾರ: ಭೀಷ್ಮ ಅಷ್ಟಮಿ
  20 ಫೆಬ್ರವರಿ, ಭಾನುವಾರ: ಸಂಕಷ್ಟ ಚತುರ್ಥಿ

  ಮಾರ್ಚ್​ ಮಾಸದ ಶುಭ ದಿನಗಳು
  ಮಾರ್ಚ್ 01, ಮಂಗಳವಾರ: ಮಹಾಶಿವರಾತ್ರಿ
  18 ಮಾರ್ಚ್, ಶುಕ್ರವಾರ: ಹೋಳಿ, ಫಾಲ್ಗುಣ ಪೂರ್ಣಿಮಾ ಉಪವಾಸ
  ಮಾರ್ಚ್ 21, ಸೋಮವಾರ: ಸಂಕಷ್ಟ ಚತುರ್ಥಿ

  ಏಪ್ರಿಲ್​ ಮಾಸದ ಶುಭ ದಿನಗಳು
  ಏಪ್ರಿಲ್ 01, ಶುಕ್ರವಾರ: ಚೈತ್ರ ಅಮವಾಸ್ಯೆ
  ಏಪ್ರಿಲ್ 02, ಶನಿವಾರ: ಚೈತ್ರ ನವರಾತ್ರಿ, ಗುಡಿ ಪಾಡ್ವಾ
  ಏಪ್ರಿಲ್ 10, ಭಾನುವಾರ: ರಾಮ ನವಮಿ
  ಏಪ್ರಿಲ್ 14, ಗುರುವಾರ: ಪ್ರದೋಷ ವ್ರತ, ಮೇಷ ಸಂಕ್ರಾಂತಿ, ಹಿಂದೂ ಹೊಸ ವರ್ಷದ ಆರಂಭ
  ಏಪ್ರಿಲ್ 16, ಶನಿವಾರ: ಚೈತ್ರ ಪೂರ್ಣಿಮಾ, ಹನುಮ ಜಯಂತಿ
  ಏಪ್ರಿಲ್ 19, ಮಂಗಳವಾರ: ಸಂಕಷ್ಟ ಚತುರ್ಥಿ
  30 ಏಪ್ರಿಲ್, ಶನಿವಾರ: ವೈಶಾಖ ಅಮವಾಸ್ಯೆ

  ಮೇ ಮಾಸ ಶುಭ ದಿನ
  ಮೇ 01, ಭಾನುವಾರ: ಸೂರ್ಯಗ್ರಹಣ
  ಮೇ 03, ಮಂಗಳವಾರ: ಅಕ್ಷಯ ತೃತೀಯ, ಪರಶುರಾಮ ಜಯಂತಿ
  ಮೇ 16, ಸೋಮವಾರ: ಬುದ್ಧ ಪೂರ್ಣಿಮಾ, ಚಂದ್ರಗ್ರಹಣ
  ಮೇ 19, ಗುರುವಾರ: ಸಂಕಷ್ಟ ಚತುರ್ಥಿ

  ಜೂನ್​ ಮಾಸದ ಶುಭ ದಿನ
  ಜೂನ್ 10, ಶುಕ್ರವಾರ: ನಿರ್ಜಲ ಏಕಾದಶಿ
  ಜೂನ್ 12, ಭಾನುವಾರ: ಪ್ರದೋಷ ಉಪವಾಸ
  ಜೂನ್ 14, ಮಂಗಳವಾರ: ಜ್ಯೇಷ್ಠ ಪೂರ್ಣಿಮಾ ವ್ರತ,
  ಜೂನ್ 29, ಬುಧವಾರ: ಆಷಾಢ ಅಮವಾಸ್ಯೆ

  ಜುಲೈ ಮಾಸದ ಶುಭ ದಿನಗಳು
  ಜುಲೈ 01, ಶುಕ್ರವಾರ: ಜಗನ್ನಾಥ ರಥಯಾತ್ರೆ
  ಜುಲೈ 10, ಭಾನುವಾರ: ದೇವಶಯನಿ ಏಕಾದಶಿ
  13 ಜುಲೈ, ಬುಧವಾರ: ಗುರು ಪೂರ್ಣಿಮೆ, ಆಷಾಢ ಪೂರ್ಣಿಮೆ
  ಜುಲೈ 16, ಶನಿವಾರ: ಸಂಕಷ್ಟ ಚತುರ್ಥಿ, ಕರ್ಕ ಸಂಕ್ರಾಂತಿ

  ಆಗಸ್ಟ್​ ಮಾಸ ಶುಭ ದಿನಗಳು
  02 ಆಗಸ್ಟ್, ಮಂಗಳವಾರ: ನಾಗ ಪಂಚಮಿ
  11 ಆಗಸ್ಟ್, ಗುರುವಾರ: ರಕ್ಷಾ ಬಂಧನ, ರಾಖಿ ಹಬ್ಬ
  12 ಆಗಸ್ಟ್, ಶುಕ್ರವಾರ: ಶ್ರಾವಣ ಪೂರ್ಣಿಮಾ ವ್ರತ, ವರಲಕ್ಷ್ಮಿ ವ್ರತ, ಗಾಯತ್ರಿ ಜಯಂತಿ
  ಆಗಸ್ಟ್ 19, ಶುಕ್ರವಾರ: ಶ್ರೀ ಕೃಷ್ಣ ಜನ್ಮಾಷ್ಟಮಿ
  31 ಆಗಸ್ಟ್, ಬುಧವಾರ: ಗಣೇಶ ಚತುರ್ಥಿ

  ಇದನ್ನು ಓದಿ: ಪೂಜೆ ವೇಳೆ ಇದೇ ಕಾರಣಕ್ಕೆ ತಪ್ಪದೇ ಗಂಟೆ ಬಾರಿಸಬೇಕಂತೆ!

  ಸೆಪ್ಟೆಂಬರ್​ ಮಾಸ ಶುಭ ದಿನಗಳು
  08 ಸೆಪ್ಟೆಂಬರ್, ಗುರುವಾರ: ಪ್ರದೋಷ ವ್ರತ, ಓಣಂ
  09 ಸೆಪ್ಟೆಂಬರ್, ಶುಕ್ರವಾರ: ಅನಂತ ಚತುರ್ದಶಿ, ಗಣೇಶ ವಿಸರ್ಜನ್
  ಸೆಪ್ಟೆಂಬರ್ 10, ಶನಿವಾರ: ಭಾದ್ರಪದ ಪೂರ್ಣಿಮಾ ವ್ರತ, ಪಿತೃ ಪಕ್ಷ ಪ್ರಾರಂಭ
  ಸೆಪ್ಟೆಂಬರ್ 13, ಮಂಗಳವಾರ: ಸಂಕಷ್ಟಿ ಚತುರ್ಥಿ
  25 ಸೆಪ್ಟೆಂಬರ್, ಭಾನುವಾರ: ಮಹಾಲಯ ಅಮವಾಸ್ಯೆ, ಸರ್ವ ಪಿತೃ ಅಮವಾಸ್ಯೆ

  ಅಕ್ಟೋಬರ್ ಮಾಸದ ಶುಭ ದಿನಗಳು
  03 ಅಕ್ಟೋಬರ್, ಸೋಮವಾರ: ದುರ್ಗಾ ಅಷ್ಟಮಿ, ಮಹಾಷ್ಟಮಿ ಪೂಜೆ
  04 ಅಕ್ಟೋಬರ್, ಮಂಗಳವಾರ: ದುರ್ಗಾ ನವಮಿ, ನವರಾತ್ರಿ ಪಾರಣ
  05 ಅಕ್ಟೋಬರ್, ಬುಧವಾರ: ದಸರಾ, ವಿಜಯದಶಮಿ, ರಾವಣನ ಪ್ರತಿಕೃತಿ ದಹನ
  13 ಅಕ್ಟೋಬರ್, ಗುರುವಾರ: ಸಂಕಷ್ಟ ಚತುರ್ಥಿ ವ್ರತ, ಕರ್ವ ಚೌತ್
  17 ಅಕ್ಟೋಬರ್, ಸೋಮವಾರ: ತುಲಾ ಸಂಕ್ರಾಂತಿ, ಅಹೋಯಿ ಅಷ್ಟಮಿ ವ್ರತ
  23 ಅಕ್ಟೋಬರ್, ಭಾನುವಾರ: ಮಾಸಿಕ ಶಿವರಾತ್ರಿ, ಧನ್ತೇರಸ್
  24 ಅಕ್ಟೋಬರ್, ಸೋಮವಾರ: ದೀಪಾವಳಿ, ನರಕ ಚತುರ್ದಶಿ, ಲಕ್ಷ್ಮಿ ಪೂಜೆ
  ಅಕ್ಟೋಬರ್ 25, ಮಂಗಳವಾರ: ಕಾರ್ತಿಕ ಅಮವಾಸ್ಯೆ, ಸೂರ್ಯಗ್ರಹಣ
  26 ಅಕ್ಟೋಬರ್, ಬುಧವಾರ: ಭಾಯಿ ದೂಜ್, ಗೋವರ್ಧನ ಪೂಜೆ
  ಅಕ್ಟೋಬರ್ 30, ಭಾನುವಾರ: ಛತ್ ಪೂಜೆ

  ಇದನ್ನು ಓದಿ: ಹೊಸ ವರ್ಷಕ್ಕೆ ಈ ಐದು ನಿರ್ಣಯ ಕೈಗೊಳ್ಳಿ ಸಾಕು; ನಿಮ್ಮ ಜೀವನ ಹೇಗೆ ಬದಲಾಗತ್ತೆ ಗೊತ್ತಾ!

  ನವೆಂಬರ್​​ ಮಾಸ ಶುಭ ದಿನಗಳು
  ನವೆಂಬರ್ 04, ಶುಕ್ರವಾರ: ದೇವುತ್ಥಾನ ಏಕಾದಶಿ
  ನವೆಂಬರ್ 05, ಶನಿವಾರ: ಶನಿ ಪ್ರದೋಷ ವ್ರತ, ತುಳಸಿ ವಿವಾಹ
  08 ನವೆಂಬರ್, ಮಂಗಳವಾರ: ಕಾರ್ತಿಕ ಪೂರ್ಣಿಮಾ, ಚಂದ್ರಗ್ರಹಣ
  12 ನವೆಂಬರ್, ಶನಿವಾರ: ಸಂಕಷ್ಟ ಚತುರ್ಥಿ
  ನವೆಂಬರ್ 20, ಭಾನುವಾರ: ಉತ್ಥಾನ ಏಕಾದಶಿ
  ನವೆಂಬರ್ 28, ಸೋಮವಾರ: ವಿವಾಹ ಪಂಚಮಿ

  ಡಿಸೆಂಬರ್​ ಮಾಸದ ಶುಭ ದಿನಗಳು
  03 ಡಿಸೆಂಬರ್, ಶನಿವಾರ: ಮೋಕ್ಷದ ಏಕಾದಶಿ, ಗೀತಾ ಜಯಂತಿ
  11 ಡಿಸೆಂಬರ್, ಭಾನುವಾರ: ಸಂಕಷ್ಟಿ ಚತುರ್ಥಿ
  ಡಿಸೆಂಬರ್ 23, ಶುಕ್ರವಾರ: ಪುಷ್ಯ ಅಮವಾಸ್ಯೆ
  Published by:Seema R
  First published: