Vastu Tips: ನೀವು ಮನೆಯ ಈ ಜಾಗದಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡ್ತಿದ್ರೆ ಕೂಡಲೇ ನಿಲ್ಲಿಸಿ..!
Vastu shastra: ಮನೆಯ ನಿವಾಸಿಗಳ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಾಥಮಿಕ ಕಾರಣವಾಗಿರುವ ಕೋಣೆ . ಕಿಚನ್. ಇದು ಮನೆಯ ಅತ್ಯಂತ ಪ್ರಭಾವಿತ ಪ್ರದೇಶವಾಗಿದ್ದು, ಅಲ್ಲಿಂದ ಎಲ್ಲಾ ರೀತಿಯ ಶಕ್ತಿಗಳು ಮೇಲುಗೈ ಸಾಧಿಸುತ್ತವೆ ಮತ್ತು ಆದ್ದರಿಂದ ಮನೆಯ ಈ ಪ್ರಮುಖ ಭಾಗವನ್ನು ಅದರ ಅನುಗುಣವಾದ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಇಡುವುದಕ್ಕೆ ಹಾಕಿಕೊಳ್ಳುವುದಕ್ಕೆ ಬಳಸಬೇಡಿ
ಮನೆಯಲ್ಲಿ(Home) ಸುಖ-ಸಮೃದ್ಧಿ ಮನೆ ಮಾಡಲು ವಾಸ್ತು ಶಾಸ್ತ್ರ(Vastu Shastra) ಅತ್ಯಂತ ಮುಖ್ಯವಾಗುತ್ತದೆ. ವಾಸ್ತು ಪ್ರಕಾರವಿಲ್ಲದಿದ್ದರೆ ಆ ಮನೆಯಲ್ಲಿ ಸಮಸ್ಯೆಗಳು(Problems) ಸರ್ವೇಸಾಮಾನ್ಯವಾಗಿಬಿಡುತ್ತದೆ. ಅಡುಗೆ ಮನೆ(Kitchen), ಬೆಡ್ ರೂಂ(Bed room), ಬಾತ್ ರೂಂ ಎಲ್ಲಿರಬೇಕು ಎಂಬುದನ್ನು ವಾಸ್ತು ಶಾಸ್ತ್ರ ಬದ್ಧವಾಗಿ ನೋಡಿ ಕಟ್ಟಿದರೆ ಮನೆಯಲ್ಲಿ ನೆಮ್ಮದಿ, ಶಾಂತಿ(Peace), ಸಂಪತ್ತು ನೆಲೆಸುತ್ತೆ. ಅಲ್ಲದೆ ಮನೆಯಲ್ಲಿ ಅಲಂಕಾರಕ್ಕೆ(Decoration) ಬಳಸುವ ಪ್ರತಿಯೊಂದು ವಸ್ತುಗಳು ವಾಸ್ತುವನ್ನು ನಿರ್ಧಾರ ಮಾಡುತ್ತದೆ.. ಹೀಗಾಗಿ ಮನೆಯಲ್ಲಿ ನಡೆದುಕೊಳ್ಳುವ ರೀತಿಯ ವಾಸ್ತುವನ್ನು ಅವಲಂಬಿಸಿರುತ್ತದೆ.. ಅದ್ರಲ್ಲೂ ಮನೆಯಲ್ಲಿ ಎಲ್ಲೆಂದರಲ್ಲಿ ಅಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದು ವಾಸ್ತುಶಾಸ್ತ್ರದ ಮೇಲೆ ಪರಿಣಾಮ ಬೀರಲಿದೆ.. ಹೀಗಾಗಿ ಮನೆಯಲ್ಲಿ ಯಾವ ಯಾವ ಜಾಗದಲ್ಲಿ ಚಪ್ಪಲಿ ಹಾಕಿಕೊಂಡು ಓಡಬಾರದು ಎನ್ನುವ ಮಾಹಿತಿ ಇಲ್ಲಿದೆ..
1)ಅಡುಗೆ ಮನೆ: ಅಡುಗೆಮನೆ ಮನೆಯ ಪ್ರಮುಖ ಭಾಗವಾಗಿರುವುದು ಯಾಕೆಂದರೆ ಮನೆಯ ನಿವಾಸಿಗಳ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಾಥಮಿಕ ಕಾರಣವಾಗಿರುವ ಕೋಣೆ . ಕಿಚನ್. ಇದು ಮನೆಯ ಅತ್ಯಂತ ಪ್ರಭಾವಿತ ಪ್ರದೇಶವಾಗಿದ್ದು, ಅಲ್ಲಿಂದ ಎಲ್ಲಾ ರೀತಿಯ ಶಕ್ತಿಗಳು ಮೇಲುಗೈ ಸಾಧಿಸುತ್ತವೆ ಮತ್ತು ಆದ್ದರಿಂದ ಮನೆಯ ಈ ಪ್ರಮುಖ ಭಾಗವನ್ನು ಅದರ ಅನುಗುಣವಾದ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಇಡುವುದಕ್ಕೆ ಹಾಕಿಕೊಳ್ಳುವುದಕ್ಕೆ ಬಳಸಬೇಡಿ. ಒಂದು ವೇಳೆ ನೀವಿಲ್ಲಿ ಚಪ್ಪಲಿ ಷೂ ಹಾಕಿಕೊಳ್ಳಲು ಶುರು ಮಾಡಿದರೆ ಅದರಿಂದ ತಾಪತ್ರಯಗಳು ಹಚ್ಚಾಗುವವು.
2)ತಿಜೋರಿಯ ಜಾಗ: ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಬೇಕು ಎಂದರೆ ವಾಸ್ತು ಸೂಕ್ತವಾಗಿ ಇರಬೇಕು. ವಾಸ್ತು ದೇವರಾದ ಕುಬೇರನ ಆಶೀರ್ವಾದ ಇದ್ದರೆ ಮನೆ ಮಂದಿಗಳ ನಡುವೆ ಉತ್ತಮ ಒಡನಾಟ, ಪ್ರೀತಿ-ಪ್ರೇಮ ಎಲ್ಲವೂ ಸುಖಕರವಾಗಿರುತ್ತವೆ.ಲಕ್ಷ್ಮಿ ದೇವಿಯ ಪ್ರತಿ ರೂಪವಾದ ಹಣ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ ವಿಶೇಷ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಎನ್ನುತ್ತಾರೆ.ಅಲ್ಲದೆ ಇದು ಧನ ದೇವತೆ ಲಕ್ಷ್ಮಿಯ ವಾಸ ಸ್ಥಳ ಇಲ್ಲಿ ಧನ ಲಕ್ಷ್ಮೀ ಸದಾ ತನ್ನ ಕೃಪೆ ತೋರುತ್ತಿರುತ್ತಾಳೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿ ಜಾಗದ ಆಸುಪಾಸಿನಲ್ಲಿ ಚಪ್ಪಲಿ ಬಿಡಬಾರದು ಅಥವಾ ಹಾಕಿಕೊಳ್ಳಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತಾಗುತ್ತದೆ.
3)ಸ್ಟೋರ್ ರೂಮ್: ಸ್ಟೋರ್ ರೂಂನಲ್ಲಿ ನಾವು ನಮ್ಮ ಅತ್ಯವಶ್ಯಕ, ಸಾಮಾನು ಸರಂಜಾಮುಗಳನ್ನು ಇಡುತ್ತೇವೆ. ಈ ಜಾಗ ಊಟ ಮಾಡುವ ಸ್ಥಳದಂತೆ ಶುಚಿಯಾಗಿಟ್ಟುಕೊಂಡಿರುತ್ತೇವೆ. ಅಡುಗೆ ಸಾಮಾನುಗಳನ್ನು ಅವಶ್ಯಕವಾಗಿ ಇಲ್ಲಿ ಇಟ್ಟುಕೊಂಡಿರುತೇವೆ. ಹಾಗಾಗಿ ಮನೆಯಲ್ಲಿ ಇದು ತುಂಬಾ ಶುಭ ಸ್ಥಾನವಾಗಿರುತ್ತದೆ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಹಾಕಿಕೊಳ್ಳಬಾರದು ಅಥವಾ ಇಡಬಾರದು.
4)ಪೂಜಾ ಮಂದಿರ: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಮನೆಯಲ್ಲಿ ದೇವರ ಕೋಣೆಗೆ ಹೆಚ್ಚಿನ ಮಹತ್ವವಿರುತ್ತದೆ. ಮನೆಯ ಒಳಿತು- ಕೆಡುಕುಗಳು ದೇವರ ಮನೆಯ ವಾಸ್ತುವಿನಲ್ಲಿ ಅಡಗಿರುತ್ತದೆ. ಸರಿಯಲ್ಲದ ದಿಕ್ಕಿನಲ್ಲಿ ದೇವರ ಕೋಣೆಯನ್ನು ನಿರ್ಮಿಸಿದಾಗ ಮನೆಯಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ದೇವರ ಕೋಣೆಯನ್ನು ನಿರ್ಮಿಸುವಾಗ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕಟ್ಟುವುದು ಅತೀ ಅವಶ್ಯಕವಾಗಿರುತ್ತದೆ. ಇದರಿಂದ ಮನೆಯ ವಾಸ್ತು ಕೂಡ ಸರಿಯಾಗಿರುತ್ತದೆ. ಇನ್ನು ಪವಿತ್ರ ಪೂಜಾ ಮಂದಿರವನ್ನ ಯಾರೂ ತಾನೆ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸುವುದಿಲ್ಲ. ಒಂದು ವೇಳೆ ನೀವು ಪೂಜಾ ಮಂದಿರದಲ್ಲಿ ಚಪ್ಪಲಿ ಹಾಕಿಕೊಳ್ಳುವುದಕ್ಕೆ ಶುರು ಮಾಡಿದರೆ ಅದರಿಂದ ದೇವರು ಕೋಪ ಮಾಡಿಕೊಳ್ಳುತ್ತಾರೆ. ಅದರಿಂದ ದೇವರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಅದರಿಂದ ಧನ ಹಾನಿ, ಆರೋಗ್ಯ ಹಾನಿ ಸೇರಿದಂತೆ ಜೀವನದಲ್ಲಿ ಇನ್ನೂ ಅನೇಕಾನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ