ಜನರು ಮನೆಯ ಸುತ್ತ ಹಸಿರು (Green) ಇದ್ದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಹಸಿರು ಮರಗಳು (Tree) ಮತ್ತು ಗಿಡ (Plant) ಎಂದರೆ ಬಹಳ ಇಷ್ಟ. ಅದಕ್ಕಾಗಿಯೇ ಮನೆ (home) ಕಟ್ಟುವಾಗ ಅದರ ಸುತ್ತಲೂ ವಿವಿಧ ಮರಗಳನ್ನು ನೆಡಲಾಗುತ್ತದೆ. ಈ ಮರ, ಗಿಡಗಳು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೇ ಸುತ್ತಮುತ್ತಲಿನ ಪರಿಸರವನ್ನು (Nature) ಸ್ವಚ್ಛವಾಗಿಡುತ್ತವೆ. ಮರಗಳು ಮತ್ತು ಗಿಡಗಳು ಪರಿಸರಕ್ಕೆ ಬಹಳ ಮುಖ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕೆಲವು ಮರಗಳು ಮತ್ತು ಸಸ್ಯಗಳು ಮನೆಯ ನೆಮ್ಮದ ನಾಶಕ್ಕೆ ಕಾರಣವಾಗಬಹುದು ಎಂಬ ವಿಚಾರ ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಹೌದು, ಕೆಲವು ಮರಗಳನ್ನು ಮನೆಯ ಸುತ್ತಲೂ ನೆಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಯಾವ ಮರವನ್ನು ಮನೆಯ ಸುತ್ತ ನೆಡಬಾರದು ಎಂಬುದು ಇಲ್ಲಿದೆ.
ಪ್ಲಮ್ ಮರ: ಪ್ಲಮ್ ಗಿಡವನ್ನು ಮನೆಯ ಸುತ್ತ-ಮುತ್ತ ನೆಡಬಾರದು ಎನ್ನಲಾಗುತ್ತದೆ. ಹಾಗೆಯೇ, ಪ್ಲಮ್ ಇರುವ ಕಡೆ ಮನೆಯನ್ನು ಕಟ್ಟಬಾರದು. ಈ ಮರಗಳನ್ನು ಅಶುಭ ಎನ್ನಲಾಗುತ್ತದೆ. ಹಾಗಾಗಿ ಇದನ್ನು ಮನೆಯಿಂದ ದೂರ ಇಡಿ.
ಬೇವಿನ ಮರ: ಮನೆಯ ಸುತ್ತ ಬೇವಿನ ಮರ ಯಾವುದೇ ಕಾರಣಕ್ಕೂ ಇರಬಾರದು ಎನ್ನಲಾಗುತ್ತದೆ. ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಉತ್ತರ ದಿಕ್ಕಿನಲ್ಲಿ ಈ ಮರ ಇದ್ದರೆ ಕಣ್ಣಿನ ರೋಗ ಬರುವ ಸಾಧ್ಯತೆ ಇದೆ. ಹಾಗಾಗಿ ಸಾಧ್ಯವಾದಷ್ಟು ಈ ಮರವನ್ನು ದೂರ ಇಟ್ಟರೆ ಉತ್ತಮ.
ಅರಳಿ ಮರ: ಅರಳಿ ಮರವನ್ನು ದೇವರು ಎಂದು ಪೂಜಿಸಲಾಗುತ್ತದೆ. ಇದಕ್ಕೆ ಪೂಜೆ ಮಾಡುವುದರಿಂದ ನಮ್ಮ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದೇ ಮರ ಮನೆಯ ಹತ್ತಿರ ಇದ್ದರೆ ದೊಡ್ಡ ಸಮಸ್ಯೆಗೆ ಕಾರಣ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಈ ಮರವನ್ನು ಆಮ್ಲಜನಕದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಆದರೆ ಮನೆ ಬಳಿ ಮರ ಇರಬಾರದು.
ಮನೆಯ ಸಮೀಪವಿರುವ ಅರಳಿ ಮರ ಎಂದಿಗೂ ಶುಭವಲ್ಲ, ಅದರ ನೆರಳು ಇರುವವರೆಗೂ ಅದು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ. ಅಲ್ಲದೇ, ಮನೆಯ ಪೂರ್ವ ದಿಕ್ಕಿನಲ್ಲಿ ಈ ಮರ ಇದ್ದರೆ ಬೆಂಕಿಯಿಂದ ಸಮಸ್ಯೆ ಆಗುತ್ತದೆ.
ಆಕಸ್ಮಿಕವಾಗಿ ಈ ಮರ ಮನೆಯ ಹತ್ತಿರ ಇದ್ದರೆ ಅದರಿಂದ ಪರಿಹಾರ ಪಡೆಯಲು ಆ ಮರದ ಸುತ್ತಲೂ ಗೋಡೆಯನ್ನು ಕಟ್ಟಿ. ಪ್ರತಿದಿನ ನೀರನ್ನು ನೀರಿನಿಂದ ಹಾಕಿ, ಹಾಗೆಯೇ ದೀಪವನ್ನು ಬೆಳಗಿಸಿ.
ಇದನ್ನೂ ಓದಿ: ಗಿಡ-ಮರಗಳನ್ನು ನೆಡುವಾಗ ಈ ವಾಸ್ತು ಸಲಹೆ ಪಾಲಿಸಿದ್ರೆ, ನಿಮ್ಮ ಮನೆ ತುಂಬಾ ಹಣವೇ ತುಂಬಿರುತ್ತೆ
ತರಕಾರಿ ಗಿಡಗಳು: ಮನೆಯ ದಕ್ಷಿಣ ಭಾಗದಲ್ಲಿ ಯಾವುದೇ ಕಾರಣಕ್ಕೂ ಅಡುಗೆಗೆ ಬಳಸುವ ತರಕಾರಿಗಳ ಗಿಡ ಅಥವಾ ಮರ ಇರಬಾರದು ಎನ್ನುತ್ತದೆ ವಾಸ್ತುಶಾಸ್ತ್ರ. ಈ ರೀತಿ ಗಿಡ-ಮರ ಬೆಳೆಸುವುದು ಜೀವಹಾನಿಗೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ಮನೆಯ ಸುತ್ತಲೂ ತರಕಾರಿ ಗಿಡ ಇದ್ದರೆ, ಬೇಲಿ ಹಾಕಿಸುವುದು ಉತ್ತಮ.
ಖರ್ಜೂರ: ಖರ್ಜೂರದ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಇದನ್ನು ಸಾಮಾನ್ಯವಾಗಿ ಮನೆಯ ಹತ್ತಿರ ಬೆಳೆಯುವುದಿಲ್ಲ. ಆದರೆ ಕೆಲವೊಮ್ಮೆ ಮನೆಯ ಸುತ್ತಲ ಅಂದ ಹೆಚ್ಚಿಸಲು ಇದನ್ನು ಬೆಳೆಸಲಾಗುತ್ತದೆ. ಆದರೆ ಈ ಮರ ದೊಡ್ಡ ಹಾನಿ ಮಾಡುತ್ತದೆ,
ಮನೆಯಲ್ಲಿ ಖರ್ಜೂರದ ಮರವಿದ್ದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎನ್ನಲಾಗುತ್ತದೆ. ಆದ್ದರಿಂದ, ನೀವು ಮನೆಯಲ್ಲಿ ಖರ್ಜೂರದ ಮರವನ್ನು ನೆಡಬಾರದು, ಆದರೂ ಬೇಕು ಎಂದರೆ ಅದನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ನೆಡಬೇಕು.
ಇದನ್ನೂ ಓದಿ: ಹೋಳಿ ಹಬ್ಬ ಬರುವ ಮೊದಲೇ ನಿಮ್ಮ ಮನೆಯಲ್ಲಿ ಈ ಬದಲಾವಣೆ ಮಾಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ
ತಾಳೆ ಗಿಡ: ತಾಳೆ ಗಿಡವನ್ನು ಅಪ್ಪಿ-ತಪ್ಪಿ ಮನೆಯ ಸಮೀಪದಲ್ಲಿ ನೆಡಬೇಡಿ ಅದನ್ನು ಮನೆಯಿಂದ ದೂರದಲ್ಲಿ ನೆಟ್ಟರೆ ಉತ್ತಮ. ಏಕೆಂದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ