ಸಾಮಾನ್ಯವಾಗಿ ನಮಗೆ ಜೀವನದಲ್ಲಿ ಮಾಡುತ್ತಿರುವ ಯಾವ ಕೆಲಸಗಳು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಇದ್ದಾಗ ನಾವು ಹತಾಶರಾಗುತ್ತೇವೆ. ಹೀಗೆ ಮಾಡುತ್ತಿರುವ ಕೆಲಸಗಳಲ್ಲಿ ನಿರೀಕ್ಷಿಸಿದ ಯಶಸ್ಸು ಸಿಗುತ್ತಿಲ್ಲ ಅಂತ ಹೇಳಿದರೆ ಮನೆಯಲ್ಲಿ ಹಿರಿಯರು ‘ಒಮ್ಮೆ ಶನಿ ದೋಷ ಪರಿಹಾರವಾಗುವ ಪೂಜೆ (Shani Dosh Puja) ಮಾಡಿಸಬೇಕು’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು, ಈ ಶನಿ ದೋಷ ಯಾರನ್ನು? ಯಾವಾಗ? ಯಾವ ರೀತಿಯಲ್ಲಿ ಕಾಡುತ್ತದೆ ಅಂತ ಹೇಳುವುದು ತುಂಬಾನೇ ಕಷ್ಟ ಎನ್ನಬಹುದು.
ಇಂತಹ ದೋಷಗಳು ಕೇವಲ ಪೂಜೆ ಮಾಡಿಸುವುದರಿಂದಲೇ ಬಗೆ ಹರಿಯಬಹುದು ಎಂದು ನೀವು ಅಂದುಕೊಂಡರೆ, ಅದು ತಪ್ಪೆಂದೇ ಹೇಳಬಹುದು ನೋಡಿ.
ನಮ್ಮಲ್ಲಿ ಕೆಲವೊಂದು ಮರಗಳಿಗೂ ಸಹ ಆ ದೈವಿಕ ಶಕ್ತಿ ಇದೆ ಅಂತ ಹೇಳಬಹುದು. ಹೌದು, ಧಾರ್ಮಿಕ ಗ್ರಂಥಗಳಲ್ಲಿ, ಮರಗಳು ಮತ್ತು ಸಸ್ಯಗಳು ಸೇರಿದಂತೆ ಪ್ರಕೃತಿಯ ಎಲ್ಲಾ ಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಧಾರ್ಮಿಕ ಗ್ರಂಥಗಳಲ್ಲಿ ಇದೇ ಬೇವಿನ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ
ಇವುಗಳಲ್ಲಿ ಬೇವಿನ ಮರವೂ ಒಂದು ಎಂದು ಹೇಳಬಹುದು. ಇದು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಜ್ಯೋತಿಷ್ಯದಲ್ಲಿಯೂ ಸಹ ಈ ಮರವನ್ನು ತುಂಬಾ ಕರುಣಾಮಯಿ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯದ ಪ್ರಕಾರ, ಬೇವಿನ ಮರವು ಶನಿ ಮತ್ತು ಕೇತುವಿಗೆ ಸಂಬಂಧಿಸಿದೆ. ಈ ಎರಡು ಗ್ರಹ ದೋಷಗಳಲ್ಲಿ ಯಾವುದಾದರೂ ಒಂದು ನಿಮ್ಮ ಮೇಲೆ ಇದ್ದರೆ, ಅಲ್ಲಿ ಬೇವಿನ ಮರವನ್ನು ನೆಟ್ಟು ಪೂಜಿಸುವುದು ಖಂಡಿತವಾಗಿಯೂ ನಿಮಗೆ ಪರಿಹಾರವನ್ನು ನೀಡುತ್ತದೆ.
ಅಲ್ಲದೇ, ಬೇವಿನ ಮರದಿಂದ ಹವನ ಮಾಡುವುದರಿಂದ, ಶನಿ ದೇವರ ಕೋಪ ಕಡಿಮೆಯಾಗುತ್ತದೆ. ಶನಿ ದೇವನು ಸಂತೋಷಪಡುತ್ತಾನೆ. ಭಕ್ತರಿಗೆ ವಿಶೇಷವಾದ ಆಶೀರ್ವಾದ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಇದಷ್ಟೆ ಅಲ್ಲದೇ, ಬೇವಿನ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಕೇತುವಿಗೆ ಸಂಬಂಧಿಸಿದ ದೋಷಗಳನ್ನು ತೊಡೆದು ಹಾಕಬಹುದು.
ಅಂತಹ ಪರಿಸ್ಥಿತಿಯಲ್ಲಿ, ಶನಿ ದೇವರ ಆಶೀರ್ವಾದವನ್ನು ಪಡೆಯಲು ಮತ್ತು ಪಿತೃ ದೋಷವನ್ನು ತೊಡೆದು ಹಾಕಲು ಸಹ ಬೇವನ್ನು ಹೇಗೆ ಬಳಸುವುದು ಎಂದು ತಿಳಿಯೋಣ ಬನ್ನಿ.
ಬೇವು ಪಿತೃ ದೋಷವನ್ನು ಸಹ ತೊಡೆದು ಹಾಕುತ್ತಂತೆ
ಬೇವಿನ ಮರವು ದೈವಿಕ ಶಕ್ತಿಗಳಿಗೆ ನೆಲೆಯಾಗಿದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬೇವಿನ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಿ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ ಮತ್ತು ಇದರೊಂದಿಗೆ, ಪೂರ್ವಜರ ಅನುಗ್ರಹವನ್ನು ಸಹ ನೀವು ಪಡೆಯಬಹುದು ಮತ್ತು ಇದು ಪಿತೃ ದೋಷವನ್ನು ಸಹ ತೊಡೆದು ಹಾಕುತ್ತದೆ.
ಬೇವಿನ ಎಲೆಗಳಿಂದ ಮಾಡಿದ ಹಾರವನ್ನು ಧರಿಸಿ
ಶನಿ ದೋಷದಿಂದ ಮುಕ್ತಿ ಪಡೆಯಲು ಮತ್ತು ಶನಿ ದೇವರ ಆಶೀರ್ವಾದವನ್ನು ಪಡೆಯಲು, ಬೇವಿನ ಮರದಿಂದ ಮಾಡಿದ ಹಾರವನ್ನು ಧರಿಸಬೇಕು. ಹೀಗೆ ಧರಿಸುವುದರಿಂದ ವ್ಯಕ್ತಿಯು ಶನಿ ದೋಷದಿಂದ ಪರಿಹಾರವನ್ನು ಪಡೆಯುತ್ತಾನೆ. ಶನಿಯ ಯಾವುದೇ ಅಶುಭ ಪರಿಣಾಮ ಅವರ ಮೇಲೆ ಇರುವುದಿಲ್ಲ.
ಭಾನುವಾರ ಬೇವಿನ ಮರಕ್ಕೆ ನೀರನ್ನು ಅರ್ಪಿಸಿ
ಭಾನುವಾರ ಸೂರ್ಯೋದಯದ ಸಮಯದಲ್ಲಿ ಬೇವಿನ ಮರಕ್ಕೆ ನೀರು ಅರ್ಪಿಸುವ ಮೂಲಕ ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುವ ಗ್ರಹಗಳನ್ನು ಶಾಂತಗೊಳಿಸಬಹುದು.
ಬೇವಿನ ಮರವನ್ನು ಮನೆಯ ಯಾವ ದಿಕ್ಕಿನಲ್ಲಿ ನೆಡಬೇಕು?
ಇಷ್ಟೆಲ್ಲಾ ಹೇಳಿದ ಮೇಲೆ ನಿಮಗೆ ಈ ಬೇವಿನ ಮರ ಮನೆಯ ಯಾವ ದಿಕ್ಕಿನಲ್ಲಿ ನೆಡಬೇಕು ಅಂತ ಅನೇಕರಿಗೆ ಗೊಂದಲವಿರುತ್ತದೆ. ಜ್ಯೋತಿಷ್ಯದಲ್ಲಿ, ಬೇವಿನ ಮರವನ್ನು ಮಂಗಳನ ರೂಪವೆಂದು ಪರಿಗಣಿಸಲಾಗುತ್ತದೆ. ಈ ಮರವನ್ನು ಯಾವಾಗಲೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ