Navaratri Special: ಕೂಷ್ಮಾಂಡ ದೇವಿಯನ್ನು ಈ ರೀತಿ ಆರಾಧನೆ ಮಾಡಿದರೆ ಜೀವನದಲ್ಲಿ ಶಾಂತಿ ನೆಲೆಸುತ್ತದೆ

Kushmanda Devi: ಅಲ್ಲದೇ ಈ ದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯೂ ಸಂತೋಷಗೊಂಡು, ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.  ಪೂಜಾ ವಿಧಿ- ವಿಧಾನ ಕೂಷ್ಮಾಂಡಾ ದೇವಿಯನ್ನು ಪೂಜಿಸುವ ಆಚರಣೆಯು ಬ್ರಹ್ಮಚಾರಿಣಿ ಮತ್ತು ಚಂದ್ರಘಂಟಾ ದೇವಿಯ ಪೂಜೆಯನ್ನು ಹೋಲುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿ(Navaratri) ಹಬ್ಬ ಅತ್ಯಂತ ಸಂಭ್ರಮ ಸಡಗರ ಹಬ್ಬ. ಪ್ರತಿ ದಿನ ಒಂದೆಲ್ಲ ಒಂದು ವಿಭಿನ್ನ ರೀತಿಯ ಪೂಜೆ, ನೈವೇದ್ಯಗಳನ್ನು ಮಾಡಿ ದೇವರಿಗೆ ಅರ್ಪಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ಹಾಗೆಯೇ ದೇವಿಯ ಅವತಾರಗಳಲ್ಲಿ ಕೂಷ್ಮಾಂಡ (Kushmanda)ದೇವಿಯ ಅವತಾರ ಸಹ ಒಂದು. ನವರಾತ್ರಿಯ ನಾಲ್ಕನೇ ದಿನ ಸಾಮಾನ್ಯವಾಗಿ ಈ ದೇವಿಯ ರೂಪವನ್ನು ಪೂಜೆ ಮಾಡಲಾಗುತ್ತದೆ.  ಆದರೆ ಇ ಬಾರಿ ಮೂರನೇ ದಿನದಿಂದಲೇ ಆರಂಭವಾಗಿದೆ.

ತಾಯಿಯ  ನಗು ಮತ್ತು ಬ್ರಹ್ಮಾಂಡದ ಸೃಷ್ಟಿಯಿಂದ ಅವಳನ್ನು ಕೂಷ್ಮಾಂಡ ದೇವಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಕುಷ್ಮಾಂಡವನ್ನು ಕೂಮ್ಹಡೆ ಎಂದು ಕರೆಯುತ್ತಾರೆ. ಯಾವುದೇ ಸೃಷ್ಟಿ ಇಲ್ಲದಿದ್ದಾಗ ಮತ್ತು ಸುತ್ತಲೂ ಕತ್ತಲೆ ಆವರಿಸಿದಾಗ, ಅವಳು ವಿಶ್ವವನ್ನು ದೈವಿಕ ಶಕ್ತಿಯಿಂದ ಸೃಷ್ಟಿಸಿದಳು ಎನ್ನುವ ನಂಬಿಕೆಯಿದೆ.  ಇಡೀ ಬ್ರಹ್ಮಾಂಡದ ಎಲ್ಲಾ ವಸ್ತುಗಳು ಮತ್ತು ಜೀವಿಗಳ ಹೊಳಪು ಕುಶ್ಮಾಂಡ ದೇವಿಯ ಉಡುಗೊರೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ತಾಯಿಯನ್ನು ಪೂಜಿಸುವುದು ಹೇಗೆ, ಪಠಿಸಬೇಕಾದ ಮಂತ್ರವೇನು ಎಂಬುದು ಇಲ್ಲಿದೆ.

ಇದನ್ನೂ ಓದಿ: ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..

ಕೂಷ್ಮಾಂಡ ದೇವಿಯ ರೂಪವು ಮಂದ ನಗುವಿನ ರೂಪವಾಗಿದೆ.  ತಾಯಿ ಸಿಂಹದ ಮೇಲೆ ಕುಳಿತಿದ್ದು, ಎಂಟು ಕೈಗಳನ್ನು ಹೊಂದಿದ್ದಾಳೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ, ಗದೆ, ಅಮೃತ ಕಳಶ, ಚಕ್ರ ಹಾಗೂ ಬಾಣವನ್ನು ಹಿಡಿದಿದ್ದಾಳೆ. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಭಕ್ತರ ಮನೆಯಲ್ಲಿ ಸುಖ , ಸಂತೋಷ ನೆಲೆಸುತ್ತದೆ ಹಾಗೂ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಅಲ್ಲದೇ ಈ ದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯೂ ಸಂತೋಷಗೊಂಡು, ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.  ಪೂಜಾ ವಿಧಿ- ವಿಧಾನ ಕೂಷ್ಮಾಂಡಾ ದೇವಿಯನ್ನು ಪೂಜಿಸುವ ಆಚರಣೆಯು ಬ್ರಹ್ಮಚಾರಿಣಿ ಮತ್ತು ಚಂದ್ರಘಂಟಾ ದೇವಿಯ ಪೂಜೆಯನ್ನು ಹೋಲುತ್ತದೆ. ಈ ದೇವಿಯನ್ನು ನೆನೆದು ಶುದ್ಧವಾದ ಮನಸ್ಸಿನಲ್ಲಿ ಪೂಜಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಹಾಗೆ ಮಾಡಿದರೆ ನಿಮ್ಮ ಬದುಕಿನಲ್ಲಿ  ನಡೆದಿರುವ ಕೆಟ್ಟ ದಿನಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂಬ ನಂಬಿಕೆ.

ಈ ದಿನ ಮುತ್ತೈದೆಯರನ್ನು ಕರೆದು ಊಟ ಹಾಕಬೇಕು. ಈ ದಿನ ತಾಯಿಗೆ ಮೊಸರು, ಹಲ್ವಾ, ಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನು ನೈವೇದ್ಯ ಮಾಡುವುದು ಉತ್ತಮ. ಪೂಜೆಯ ವಿಧಾನವನ್ನು ಪ್ರಾರಂಭಿಸುವ ಮೊದಲು, ಕೈಯಲ್ಲಿ ಹೂವುಗಳನ್ನು ಹಿಡಿದು ದೇವಿಯನ್ನು ಪೂಜಿಸಿ ಮತ್ತು ಈ ಮಂತ್ರವನ್ನು ಪಠಿಸಿ

'ಸುರಸಂಪೂರ್ಣಕಲಶಂ ರೂಧೀರಾಪ್ಲುತಮೇವ ಚ| ದಧಾನ ಹಸ್ತಪದ್ಮಾಭ್ಯಂ ಕೂಷ್ಮಾಂಡ ಶುಭದಾಸ್ತು ಮೇ||

ಇದರ ನಂತರ, ಸಪ್ತಶತಿ ಮಂತ್ರ, ಉಪಾಸನಾ ಮಂತ್ರ, ಕವಚ ಮತ್ತು ಅಂತಿಮವಾಗಿ ಆರತಿ ಮಾಡಿ. ಆರತಿ ಮಾಡಿದ ನಂತರ, ಕ್ಷಮೆಗಾಗಿ ಮಾತೃ ದೇವಿಯ ಪ್ರಾರ್ಥನೆ ಮಾಡುವುದನ್ನು ಮರೆಯದಿರಿ.

 ಕೂಷ್ಮಾಂಡ ದೇವಿಯ  ಮಂತ್ರ:

ಇದನ್ನೂ ಓದಿ: ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಪೂಜಾ ವಿಧಿ ವಿಧಾನ

ಓಂ ದೇವೀ ಕೂಷ್ಮಾಂಡೈ ನಮಃ

ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ
ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ

ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ದುರ್ಗತಿನಾಶಿನಿ ತ್ವಂಹೀ ದರಿದ್ರಾದಿ ವಿನಾಶನಿಂ
ಜಯಂದಾ ಧನದಾ ಕೂಷ್ಮಾಂಡಾ ಪ್ರಣಮಾಮ್ಯಹಂ
ಜಗತಮಾತಾ ಜಗತಕಾತ್ರಿ ಜಗದಾಧರ ರೂಪಾನಿಂ
ಚರಚರೇಶ್ವರಿ ಕೂಷ್ಮಾಂಡೇ ಪ್ರಣಮಾಮ್ಯಹಂ
ತ್ರೈಲೋಕ್ಯಸುಂದರೀ ತ್ವಂಹಿ ದುಖಃ ಶೋಕ ನಿವಾರಿಣಿಂ
ಪರಮಾನಂದಮಯಿ ಕೂಷ್ಮಾಂಡೇ ಪ್ರಣಮಾಮ್ಯಹಂ
Published by:Sandhya M
First published: